Rain Alert: ಮಳೆ ಭರ್ಜರಿ ಮಳೆ.. ಈ ಜಿಲ್ಲೆಗಳಿಗೆ ರಣಮಳೆ ಎಚ್ಚರಿಕೆ!
ಮುಂಗಾರು ಮಳೆಯ ಅಬ್ಬರ ಮತ್ತೆ ಮುಂದುವರಿದಿದೆ, ಕಳೆದ ಮೂರು ತಿಂಗಳಿಂದ ಕೂಡ ಇದೇ ರೀತಿ ಮುಂಗಾರು ಮಳೆ ಆರ್ಭಟ ಜೋರಾಗಿದೆ. ಅದರಲ್ಲೂ ಜುಲೈ ತಿಂಗಳು ಪೂರ್ತಿ ಮುಂಗಾರು ಮಳೆ ಅಬ್ಬರ ಕಂಡು ಕನ್ನಡಿಗರು ಬೆಚ್ಚಿದ್ದಾರೆ. ಪರಿಸ್ಥಿತಿ ಭಯಾನಕವಾಗಿರುವ ಸಮಯದಲ್ಲೇ, ಕರ್ನಾಟಕದ ಡ್ಯಾಂಗಳು ತುಂಬಿ ತುಳುಕುತ್ತಿವೆ. ಹೀಗಿದ್ದರೂ ಮುಂಗಾರು ಮಳೆ ಅಬ್ಬರ ಮಾತ್ರ ಕಡಿಮೆ ಆಗಿಲ್ಲ. ಇದೀಗ ಮತ್ತೆ ಕರ್ನಾಟಕದ ಹಲವು ಜಿಲ್ಲೆಗಳಿಗೆ ಭಾರಿ ಮಳೆ ಮುನ್ನೆಚ್ಚರಿಕೆ ನೀಡಲಾಗಿದೆ.
ಮಳೆ ಬರಲಿ ಮಂಜು ಇರಲಿ.. ಅಂತಿದ್ದ ಕನ್ನಡಿಗರಿಗೆ ಇದೀಗ ಮಳೆ ಬೇಡವಾಗಿ ಹೋಗಿದೆ. ಕೇವಲ 5 ತಿಂಗಳ ಹಿಂದೆ, ಕರ್ನಾಟಕ & ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿ ಎಲ್ಲಾ ಜಿಲ್ಲೆಗಳಲ್ಲೂ ಬರದ ಛಾಯೆ ಆವರಿಸಿತ್ತು. ಮಳೆ ಬೀಳದೇ ಇದ್ದರೆ ಕಥೆ ಕ್ಲೋಸ್ ಎನ್ನುವಷ್ಟರ ಹಂತಕ್ಕೆ ಪರಿಸ್ಥಿತಿ ಬಂದಿತ್ತು. ಆದ್ರೆ 4 ತಿಂಗಳ ಹಿಂದೆ ಶುರುವಾದ ನಿರಂತರ ಮಳೆ ಕರ್ನಾಟಕದ ಜನರನ್ನ ಬೆಚ್ಚಿಬೀಳಿಸಿದೆ. ಅದ್ರಲ್ಲೂ ಈಗ ಇರುವ ಸ್ಥಿತಿ ನೋಡಿದರೆ ಕನ್ನಡಿಗರು ಮಳೆ ಅಂದ್ರೆ ಬೆಚ್ಚಿ ಬೀಳುತ್ತಿದ್ದಾರೆ. ಹೀಗಿದ್ದಾಗ ಮತ್ತೆ ಮುಂದಿನ 3 ದಿನ ಭರ್ಜರಿ ಮಳೆ ಆಗುವ ಮುನ್ನೆಚ್ಚರಿಕೆ ನೀಡಲಾಗಿದೆ.

ಮಳೆ.. ಮಳೆ.. ಭರ್ಜರಿ ಮಳೆ!
ಕರಾವಳಿ ಕರ್ನಾಟಕ & ಮಲೆನಾಡು ಭಾಗದಲ್ಲಿ ಭರ್ಜರಿಯಾಗಿ ಸುರಿದಿದ್ದ ಮಳೆ ಈಗ ನಮ್ಮ ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಿಗೂ ವ್ಯಾಪಿಸುತ್ತಿದೆ. ಮುಂಗಾರು ಮಳೆಯ ಅಬ್ಬರ ಒಂದು ಸ್ವಲ್ಪವೂ ಕಮ್ಮಿ ಆಗಿಲ್ಲ ಯಾಕಂದ್ರೆ ಇನ್ನ ಕೆಲ ದಿನಗಳ ಕಾಲ ಮುಂಗಾರು ಮಳೆ ಅಬ್ಬರಿಸಲಿದೆ. ಇದೇ ಕಾರಣಕ್ಕೆ ಜನರು ಕೂಡ ಮುಂಗಾರು ಮಳೆ ಅಬ್ಬರ ಕಂಡು ಶಾಕ್ ಆಗಿದ್ದಾರೆ. ಅದರಲ್ಲೂ ಈಗ ಇರುವ ಮಾಹಿತಿ ಪ್ರಕಾರ ಇನ್ನು ಕೆಲ ಗಂಟೆಗಳಲ್ಲಿ ಕರ್ನಾಟಕದ ಹಲವು ಜಿಲ್ಲೆಗಳಿಗೆ ಇದೇ ರೀತಿ ಮಳೆ ಆಘಾತ ಎದುರಾಗಲಿದೆ.
ಭಾರಿ ಮಳೆ ಬಗ್ಗೆ ಹವಾಮಾನ ಇಲಾಖೆ ಇದೀಗ ಮುನ್ನೆಚ್ಚರಿಕೆ ನೀಡಿದೆ. ಆ ಪ್ರಕಾರ ಆಗಸ್ಟ್ 17 ಮತ್ತು 18 ಹಾಗೂ 19 ರಂದು ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಬೀಳುವ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಅದರಲ್ಲೂ ಇಂದು ಮತ್ತು ನಾಳೆ ಹಲವು ಜಿಲ್ಲೆಗಳಲ್ಲಿ ಮಳೆ ಆರ್ಭಟ ಗ್ಯಾರಂಟಿ ಆಗಿದೆ. ಬೆಂಗಳೂರಲ್ಲಿ ಕೂಡ ಇಂದು ಮತ್ತು ನಾಳೆ ಭಾರಿ ಮಳೆಯಾಗುವ ಸೂಚನೆ ಇದೆ. ಬೆಂಗಳೂರು ಸೇರಿದಂತೆ ಶಿವಮೊಗ್ಗ, ದಾವಣಗೆರೆ, ಬಳ್ಳಾರಿ ಹಾಗೂ ಇನ್ನೂ 9 ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಮುನ್ನೆಚ್ಚರಿಕೆ ನೀಡಲಾಗಿದೆ.
ಯೆಲ್ಲೋ ಅಲರ್ಟ್ ಕೂಡ ಘೋಷಣೆ
ಇದರ ಜತೆ ಉತ್ತರ ಒಳನಾಡಿನ 6 ಜಿಲ್ಲೆ ಅಂದ್ರೆ ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು ಮತ್ತು ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಹೆಚ್ಚು ಮಳೆ ಸುರಿಯುವ ಎಚ್ಚರಿಕೆ ನೀಡಿದ್ದಾರೆ. ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ ಜಿಲ್ಲೆಗಳಲ್ಲಿ ಕೂಡ ಭಾರಿ ಮಳೆಯ ಮುನ್ಸೂಚನೆ ಸಿಕ್ಕಿದೆ. ಹಾಗೇ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಕಾರಣಕ್ಕೆ ಯೆಲ್ಲೋ ಅಲರ್ಟ್ ಘೋಷಣೆ ಆಗಿದೆ.
ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ ಮತ್ತು ರಾಮನಗರ ಹಾಗೂ ಚಿತ್ರದುರ್ಗ, ವಿಜಯನಗರ, ಮೈಸೂರು, ಮಂಡ್ಯ, ತುಮಕೂರು ಜಿಲ್ಲೆಗಳಲ್ಲೂ ಭಾರಿ ಮಳೆ ಬೀಳಲಿದೆ. ಈಗ ಬಳ್ಳಾರಿ, ದಾವಣಗೆರೆ, ಶಿವಮೊಗ್ಗ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಭಾರಿ ಮಳೆಯ ಕಾರಣಕ್ಕೆ 'ಯೆಲ್ಲೋ' ಅಲರ್ಟ್ ಘೋಷಣೆ ಮಾಡಲಾಗಿದೆ.












Click it and Unblock the Notifications