Rain Alert: ಮಳೆ.. ಮಳೆ.. ಇಂದು ಕೂಡ ರಣಮಳೆ.. ಮುಂದಿನ 5 ದಿನ ನೆಮ್ಮದಿ ಸಿಗೋದೆ ಡೌಟ್!

ಮಳೆರಾಯ ತನ್ನ ಆರ್ಭಟ ಮುಂದುವರಿಸಿದ್ದಾನೆ, ಅಲ್ಲದೆ ಇಂದು ಕೂಡ ಭಾರಿ ಮಳೆಯು ಬೀಳಲಿದ್ದು ನೆಮ್ಮದಿ ಸಿಗೋದೆ ಅನುಮಾನವಾಗಿದೆ. ಹೀಗಿದ್ದಾಗ ಮುಂದಿನ 5 ದಿನಗಳ ಕಾಲ ಮುಂಗಾರು ಮಳೆ ಆರ್ಭಟ ಮತ್ತಷ್ಟು ಹೆಚ್ಚಾಗಲಿದ್ದು, ಭಾರಿ ಮುನ್ನೆಚ್ಚರಿಕೆ ವಹಿಸಲಾಗಿದೆ. ಹಾಗಾದ್ರೆ ಭಾರಿ ಮಳೆ ಬೀಳಲಿರುವ ಕರ್ನಾಟಕದ ಜಿಲ್ಲೆಗಳು & ಪ್ರದೇಶಗಳು ಯಾವುವು ಗೊತ್ತೆ? ಬನ್ನಿ ಭರ್ಜರಿ ಮಳೆ ಬೀಳಲಿರುವ ಜಿಲ್ಲೆ & ಪ್ರದೇಶಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯೋಣ.

ಆಧುನಿಕ ಕಾಲದಲ್ಲಿ ಮನುಷ್ಯರ ಸ್ಥಿತಿ ಹೇಗಾಗಿದೆ ಅಂದ್ರೆ, ಹೆಚ್ಚಾಗಿ ಮಳೆ ಬಂದರೂ ಕಷ್ಟ. ಮಳೆ ಬರದೇ ಇದ್ದರಂತೂ ಇನ್ನಷ್ಟು ಕಷ್ಟ ಕಷ್ಟ. ಹೀಗೆ ಮನುಷ್ಯ ನರಳಿ ಹೋಗುತ್ತಿದ್ದಾನೆ ಎನ್ನಬಹುದು. ಯಾಕಂದ್ರೆ ಕೇವಲ 5 ತಿಂಗಳ ಹಿಂದೆ ಕರ್ನಾಟಕ & ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲೂ ಬರದ ಛಾಯೆ ಆವರಿಸಿತ್ತು. ಮಳೆ ಬೀಳದೇ ಇದ್ದರೆ ಕಥೆ ಕ್ಲೋಸ್ ಎನ್ನುವಷ್ಟರ ಹಂತಕ್ಕೆ ಪರಿಸ್ಥಿತಿ ನಿಂತಿತ್ತು. ಆದರೆ ಕೇವಲ 4 ತಿಂಗಳ ಹಿಂದೆ ಶುರುವಾದ ನಿರಂತರ ಮಳೆ ಕರ್ನಾಟಕದ ಜನರನ್ನು ಬೆಚ್ಚಿಬೀಳಿಸಿದೆ. ಅದರಲ್ಲೂ ಈಗ ಇರುವ ಪರಿಸ್ಥಿತಿ ನೋಡಿದರೆ ಕನ್ನಡಿಗರು ಮಳೆ ಅಂದ್ರೆ ಬೆಚ್ಚಿಬೀಳುತ್ತಿದ್ದಾರೆ. ಮುಂದಿನ 5 ಗಂಟೆಗಳಲ್ಲಿ ಭರ್ಜರಿ ಮಳೆ ಬೀಳಲಿದ್ದು, ಹಾಗೇ 5 ದಿನಗಳ ಕಾಲ ಮಳೆ ಮುಂದುವರಿಯಲಿದೆ.

Rain Alert Given To Karnataka And Bengaluru For Next 5 Days

ಮಳೆ.. ಮಳೆ.. ಎಲ್ಲೆಲ್ಲಿ ಮಳೆ?

ಮುಂಗಾರು ಮಳೆಯ ಅಬ್ಬರ ಒಂದು ಸ್ವಲ್ಪವೂ ಕಡಿಮೆ ಆಗಿಲ್ಲ, ಯಾಕಂದ್ರೆ ಇನ್ನೂ ಕೆಲ ದಿನಗಳ ಕಾಲ ಮುಂಗಾರು ಮಳೆ ಅಬ್ಬರಿಸಲಿದೆ. ಇದೇ ಕಾರಣಕ್ಕೆ ಜನರು ಕೂಡ ಮುಂಗಾರು ಮಳೆ ಅಬ್ಬರ ಕಂಡು ಶಾಕ್ ಆಗಿದ್ದಾರೆ. ಅದರಲ್ಲೂ ಈಗ ಇರುವ ಮಾಹಿತಿ ಪ್ರಕಾರ ಇನ್ನು ಕೆಲವೇ ಗಂಟೆಗಳಲ್ಲಿ ಬೆಂಗಳೂರು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳು & ಮಲೆನಾಡು ಜಿಲ್ಲೆಗಳಲ್ಲಿ ರಣಮಳೆ ಸುರಿಯಲಿದೆ. ಇಂದು ಮಧ್ಯಾಹ್ನ 2 ರಿಂದ 3 ಗಂಟೆ ಸಮಯಕ್ಕೆ ಈ ರೀತಿ ಭಾರಿ ಮಳೆಯು ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಶುರುವಾಗಲಿದೆ.

ಮಳೆರಾಯ ಬ್ರೇಕ್ ಪಡೆಯುವುದೇ ಇಲ್ಲ!

ಹೀಗೆ ಇಂದು ಮಧ್ಯಾಹ್ನ 2 ರಿಂದ 3 ಗಂಟೆಗೆ ಕರಾವಳಿಯ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮೊದಲಿಗೆ ಭಾರಿ ಭರ್ಜರಿ ಮಳೆ ಆರಂಭ ಆಗಲಿದೆ. ಆ ನಂತರ ಕನ್ನಡ ನಾಡಿನ ಮಲೆನಾಡು ಜಿಲ್ಲೆಗಳಾದ ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಸೇರಿ, ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲೂ ಭಾರಿ ಭರ್ಜರಿ ಮಳೆ ಬೀಳಲಿದೆ. ಹಾಗೇ, ಉತ್ತರ ಕರ್ನಾಟಕದ ಬೆಳಗಾವಿ ಜಿಲ್ಲೆ ಸೇರಿದಂತೆ ಹುಬ್ಬಳ್ಳಿ & ಧಾರವಾಡ ಸುತ್ತಮುತ್ತಲ ಭಾಗದಲ್ಲಿ ಭಾರಿ ಭರ್ಜರಿ ಮಳೆಯ ಎಂಟ್ರಿ ಆಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+