Rain Alert: ಮಳೆ ಅಬ್ಬರ ಶುರು, ಕರ್ನಾಟಕದ ಈ ಜಿಲ್ಲೆಗಳಿಗೆ ಭರ್ಜರಿ ಮಳೆ!
ಮಳೆ ಮೋಡಗಳು ಮರೆಯಾಗಿ ಹೋದವು, ಇನ್ನೇನು ಮಳೆ ನಿಂತು ಹೋಗಲಿದೆ ಅಂತಾನೇ ಚಿಂತೆಯಲ್ಲಿ ಮುಳುಗಿದ್ದ ಕನ್ನಡಿಗರಿಗೆ ಭರ್ಜರಿ ಸುದ್ದಿ ಸಿಕ್ಕಂತಾಗಿದೆ. ಅದರಲ್ಲೂ ಇನ್ನೇನು ಮಳೆಗಾಲ ಮುಗಿದು ಹೋಗುವ ಹಂತದಲ್ಲೇ ಭರ್ಜರಿ ಸುದ್ದಿಯು ಸಿಗುತ್ತಿದೆ. ಇದೀಗ ಕರ್ನಾಟಕ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭರ್ಜರಿ ಮಳೆ ಸುರಿಯುವ ಬಗ್ಗೆ ಮುನ್ನೆಚ್ಚರಿಕೆ ನೀಡಲಾಗಿದೆ. ಹಾಗಾದ್ರೆ ಯಾವೆಲ್ಲಾ ಭಾಗದಲ್ಲಿ ಭಾರಿ ಭರ್ಜರಿ ಮಳೆ ಬೀಳಲಿದೆ? ಇದೀಗ ಮಳೆ ಅಬ್ಬರಿಸುವ ಜಿಲ್ಲೆಗಳು ಯಾವುವು? ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.
ಮಳೆ ಬರದ ಕಾರಣ ಬೇಸಿಗೆ ಸಮಯದಲ್ಲಿ ಕರ್ನಾಟಕದ ಡ್ಯಾಂಗಳ ನೀರು ಬತ್ತಿ ಹೋಗಿ ಭಾರಿ ಸಂಕಷ್ಟ ಎದುರಾಗಿತ್ತು. ಹೀಗಿದ್ದಾಗ ಜೂನ್ ಕೊನೆಯ ವಾರ & ಜುಲೈ ಮೊದಲನೇ ವಾರದಲ್ಲಿ ಮುಂಗಾರು ಮಳೆ ತನ್ನ ಅಸಲಿ ಮುಖ ತೋರಿಸಿತ್ತು, ಭರ್ಜರಿ ಮಳೆಗೆ ಕರ್ನಾಟಕ ರಾಜ್ಯ ಕೂಲ್ ಕೂಲ್ ಆಗಿತ್ತು. ನಂತರ ಆಗಸ್ಟ್ ತಿಂಗಳಲ್ಲಿ ಕೂಡ ಉತ್ತಮವಾಗಿ ಮಳೆ ಬಂದಿತ್ತು. ಹೀಗಾಗಿ ಕರ್ನಾಟಕದ ರೈತರು ಸಿಕ್ಕಾಪಟ್ಟೆ ಖುಷಿಯಾಗಿದ್ದರು. ಇಂತಹ ಸಮಯದಲ್ಲೇ ಇನ್ನೇನು ಮಳೆ ನಿಂತೇ ಹೋಗಿದೆ ಅಂತಾ ಕನ್ನಡಿಗರು ಬೇಸರ ಮಾಡಿಕೊಳ್ಳುವ ಸಮಯದಲ್ಲೇ ಇದೀಗ ಮಳೆ ಮತ್ತೆ ಅಬ್ಬರಿಸಲು ಶುರು ಮಾಡಿದೆ. ಹಾಗಾದ್ರೆ ಯಾವೆಲ್ಲಾ ಜಿಲ್ಲೆಗಳಲ್ಲಿ ಭರ್ಜರಿ ಮಳೆಯು ಬೀಳಲಿದೆ? ಮುಂದೆ ಓದಿ.

ಮಳೆ.. ಮಳೆ.. ಎಲ್ಲೆಲ್ಲಿ ಮಳೆ?
ಈಗಿರುವ ಮಾಹಿತಿ ಪ್ರಕಾರ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಹಾಸನ, ಮಂಡ್ಯ, ಮೈಸೂರು & ತುಮಕೂರು ಜಿಲ್ಲೆಗಳಿಗೆ ಹವಾಮಾನ ಇಲಾಖೆ ಮಳೆ ಮುನ್ಸೂಚನೆ ನೀಡಿದೆ. ಈ ಮೂಲಕ ಮತ್ತೆ ಮಳೆಯಾಗುವ ಭರವಸೆ ಮೂಡಿದೆ. ಹಾಗೇ ಇದರ ಜೊತೆಗೆ ಚಿಕ್ಕಮಗಳೂರು ಜಿಲ್ಲೆ ಸೇರಿದಂತೆ ಮಲೆನಾಡು ಭಾಗದಲ್ಲಿ ಮತ್ತೆ ಮಳೆ ಚುರುಕಾಗುವ ಸಾಧ್ಯತೆ ದಟ್ಟವಾಗಿದೆ. ಹಾಗೇ ಶಿವಮೊಗ್ಗ, ದಾವಣಗೆರೆ ಜಿಲ್ಲೆಗಳಲ್ಲೂ ಮಳೆಯ ಮುನ್ನೆಚ್ಚರಿಕೆ ನೀಡಲಾಗಿದೆ. ಇನ್ನು ವಿಜಯಪುರ, ರಾಯಚೂರು, ಕೊಪ್ಪಳ, ಕಲಬುರಗಿ, ಹಾವೇರಿ, ಧಾರವಾಡ, ಬೀದರ್ & ಬೆಳಗಾವಿ ಸೇರಿದಂತೆ ಬಾಗಲಕೋಟೆ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ದಟ್ಟವಾಗಿದೆ.
ದಕ್ಷಿಣ ಭಾಗದಲ್ಲಿ ರಾಮನಗರ, ಕೋಲಾರ, ಕೊಡಗು, ಚಿಕ್ಕಬಳ್ಳಾಪುರ & ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರದಲ್ಲೂ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಹೀಗಾಗಿ ಮತ್ತಷ್ಟು ಮಳೆ ಬೀಳುವ ನಿರೀಕ್ಷೆಯಲ್ಲಿ ಕನ್ನಡಿಗರು ಇದ್ದಾರೆ. ಅತ್ತ ಮುಂಗಾರು ಮಳೆಯ ಅವಧಿ ಮುಕ್ತಾಯವಾಗಿದೆ ಆದರೂ, ಹಿಂಗಾರು ಮಳೆ ಕೈಹಿಡಿಯುತ್ತಾ? ಅನ್ನೋದನ್ನ ಕಾದು ನೋಡಬೇಕಿದೆ.












Click it and Unblock the Notifications