Karnataka Rain: ಮಳೆ.. ಮಳೆ.. ಸೆಪ್ಟೆಂಬರ್ 8 ಸೋಮವಾರದ ನಂತರ ಭಾರಿ ಮಳೆ...
ಮಳೆ ತನ್ನ ಆರ್ಭಟ ಕಡಿಮೆ ಮಾಡಬಹುದು ಎಂಬ ನಿರೀಕ್ಷೆ ಸುಳ್ಳಾಗಿದೆ, ಭಾರಿ ಮಳೆ ತನ್ನ ಅಬ್ಬರವನ್ನ ಮುಂದುವರಿಸಿ ರೈತರು & ಸಾಮಾನ್ಯ ಜನರ ಎದೆಯಲ್ಲಿ ನಡುಕ ಹುಟ್ಟಿಸಿದೆ. ಒಂದು ಕಡೆ ಈಗಾಗಲೇ ನಮ್ಮ ರಾಜ್ಯದ ಎಲ್ಲಾ ಡ್ಯಾಂಗಳು ತುಂಬಿ ತುಳುಕುತ್ತಿವೆ, ಮತ್ತೊಂದು ಕಡೆ ನದಿಗಳು ಕೂಡ ತುಂಬಿ ಹರಿಯುತ್ತಿವೆ. ಇಷ್ಟಾದರೂ ಕರ್ನಾಟಕದ ಮೇಲೆ ಮಳೆರಾಯನ ಪ್ರೀತಿ ಮಾತ್ರ ಕಡಿಮೆ ಆಗುತ್ತಿಲ್ಲ. ಇಂತಹ ಸಮಯದಲ್ಲೇ ಮತ್ತೆ ಸೆಪ್ಟೆಂಬರ್ 8 ಸೋಮವಾರದ ನಂತರ ಭಾರಿ ಮಳೆ...
ಹೌದು, ಇಷ್ಟುದಿನ ಮಳೆ ಬರಲಿ, ಮಳೆ ಬರಲಿ... ಅಂತಾ ಹೇಳುತ್ತಿದ್ದ ಕರ್ನಾಟಕದ ರೈತರು ಈಗ ದಿಢೀರ್ ಮಳೆ ನಿಲ್ಲುವುದಕ್ಕೆ ಏನು ಮಾಡಬೇಕು? ಅಂತಾ ಚಿಂತೆ ಮಾಡುವಂತೆ ಆಗಿದೆ. ಯಾಕಂದ್ರೆ ಭರ್ಜರಿ ಮಳೆ ಕಾರಣಕ್ಕೆ ಈಗಾಗಲೇ ಕರ್ನಾಟಕ ಹಲವು ಭಾಗಗಳಲ್ಲಿ ದೊಡ್ಡ ದೊಡ್ಡ ಅವಾಂತರಗಳು ಆಗಿವೆ. ಅಕಾಲಿಕ ಮಳೆ ಕಂಡು ರೈತರು ಕೂಡ ಚಿಂತೆ ಮಾಡುತ್ತಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ ಆಗಿದ್ದು, ಇದೇ ಪರಿಸ್ಥಿತಿ ಮುಂದುವರಿದರೆ ಬೆಳೆದ ಬೆಳೆ ಕೈಗೆ ಸಿಗದೇ ಹೋಗುವ ಭಯ ಕೂಡ ಕಾಡ್ತಿದೆ. ಆದರೂ ಈಗ ಮತ್ತೆ ಸೆಪ್ಟೆಂಬರ್ 8 ಸೋಮವಾರದ ನಂತರ ಈ ಜಿಲ್ಲೆಗಳಿಗೆ ಭಾರಿ ಮಳೆ ಮುನ್ನೆಚ್ಚರಿಕೆ ನೀಡಲಾಗಿದೆ.

ಯಾವ ಯಾವ ಜಿಲ್ಲೆಗಳಲ್ಲಿ ಮಳೆ?
ಹೌದು ಬೆಳಗಾವಿ ಜಿಲ್ಲೆ, ಹುಬ್ಬಳ್ಳಿ, ಹಾವೇರಿ ಜಿಲ್ಲೆಗಳು ಸೇರಿದಂತೆ ಕೊಡಗು, ಚಿಕ್ಕಮಗಳೂರು ಮತ್ತು ಉತ್ತರ ಕನ್ನಡ, ಹಾಸನ ಜಿಲ್ಲೆಯಲ್ಲಿ ಭಾರಿ ಮಳೆ ಮುನ್ನೆಚ್ಚರಿಕೆ ಇದೆ. ಜೊತೆಗೆ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ & ಉಡುಪಿ ಜಿಲ್ಲೆಗಳಲ್ಲೂ ಮಳೆರಾಯ ಅಬ್ಬರಿಸುವ ಆತಂಕ ಮನೆ ಮಾಡಿದೆ. ಮುಂದಿನ ಕೆಲ ದಿನಗಳು ಇದೇ ರೀತಿ ಭಾರಿ ಮಳೆ ಸುರಿಯುವ ಆತಂಕ ಇದ್ದು, ಹೀಗಾಗಿ ಮಳೆ ಬಗ್ಗೆ ಮತ್ತಷ್ಟು ಟೆನ್ಷನ್ ಹೆಚ್ಚಾಗಿದೆ. ಈಗಾಗಲೇ ಸಾಕು ಸಾಕು ಎನ್ನುವಷ್ಟು ಮಳೆ ಬಿದ್ದಿರುವ ಕಾರಣಕ್ಕೆ ರೈತರು & ಜನ ಸಾಮಾನ್ಯರು ಸುಸ್ತಾಗಿ ಹೋಗಿದ್ದಾರೆ. ಹೀಗಿದ್ದರೂ ಮಳೆ ಮಾತ್ರ ನಿಲ್ಲದೆ ಸುರಿಯುತ್ತಲೇ ಇದೆ. ಬೆಂಗಳೂರು ಸೇರಿದಂತೆ ಹಳೇ ಮೈಸೂರು ಭಾಗ ಕೂಡ ಭಾರಿ ಮಳೆ ಪಡೆಯುವ ಸಾಧ್ಯತೆ ದಟ್ಟವಾಗಿದೆ.
ತುಂಬಿ ಹೋಗಿವೆ ಎಲ್ಲಾ ಜಲಾಶಯಗಳು
ಹೌದು, ಕರ್ನಾಟಕ ರಾಜ್ಯದಲ್ಲಿ ಭಾರಿ ಭರ್ಜರಿ ಮಳೆ ಸುರಿಯುತ್ತಿರುವ ಕಾರಣಕ್ಕೆ ಜೂನ್ ತಿಂಗಳಲ್ಲೇ ಈ ಬಾರಿ ಜಲಾಶಯಗಳು ಅಂದ್ರೆ ಡ್ಯಾಂಗಳು ತುಂಬಿ ತುಳುಕಲು ಶುರು ಮಾಡಿದ್ದವು. ಇದೇ ಕಾರಣಕ್ಕೆ ರೈತರು ಹಾಗೂ ಕನ್ನಡ ನಾಡಿನ ಜನರೂ ಈ ವಿಚಾರದಲ್ಲಿ ಸಿಕ್ಕಾಪಟ್ಟೆ ಖುಷಿ ಖುಷಿಯಾಗಿದ್ದಾರೆ. ಅದರಲ್ಲೂ ಬೆಂಗಳೂರಿಗೆ ಕುಡಿವ ನೀರು ಪೂರೈಕೆ ಮಾಡುವ ಕೆಆರ್‌ಎಸ್ ಅಂದ್ರೆ ಕೃಷ್ಣರಾಜ ಸಾಗರ ಕೂಡ ಫುಲ್ ತುಂಬಿ ತುಳುಕುತ್ತಿದೆ. ಗರಿಷ್ಠ 124.80 ಅಡಿ ಇರುವ ಜಲಾಶಯ ಪೂರ್ಣವಾಗಿದೆ. ಹಾಗೇ ಆಲಮಟ್ಟಿ ಡ್ಯಾಂ ಕೂಡ ಇದೀಗ ತುಂಬಿ ತುಳುಕುತ್ತಿದ್ದು, ತುಂಗಭದ್ರಾ ಡ್ಯಾಂ ಸೇರಿ ಇದೀಗ ಕರ್ನಾಟಕದ ಬಹುತೇಕ ಎಲ್ಲಾ ದೊಡ್ಡ ದೊಡ್ಡ ಡ್ಯಾಂಗಳು ತುಂಬಿ ಹೋಗಿವೆ.












Click it and Unblock the Notifications