Rain Alert: ಮಳೆ.. ಮಳೆ.. ನವೆಂಬರ್ 5 ಬುಧವಾರ ನಂತರ ಭರ್ಜರಿ ಮಳೆ...
ಮಳೆ ಆರ್ಭಟಕ್ಕೆ ಬೆಚ್ಚಿಬಿದ್ದಿರುವ ಕನ್ನಡಿಗರು ಈ ವರ್ಷ ಮತ್ತೆ ಮಳೆ ಬರಬಾರದು, ಮುಂದಿನ ವರ್ಷ ಮಳೆಗಾಲದಲ್ಲಿ ಮಳೆ ಬಂದರೆ ಸಾಕು ಅಂತಾ ಪ್ರಾರ್ಥನೆ ಮಾಡುವಂತೆ ಆಗಿದೆ. ಯಾಕಂದ್ರೆ ಅಷ್ಟು ಪ್ರಮಾಣದಲ್ಲಿ ಮಳೆ ಈಗಾಗಲೇ ಸುರಿದು, ಸಿಕ್ಕಾಪಟ್ಟೆ ಸಮಸ್ಯೆ ಮಾಡಿದೆ. ಆದರೆ ಮಳೆ ಈಗಲೂ ಸೈಲೆಂಟ್ ಆಗುವ ಲಕ್ಷಣ ಕಾಣುತ್ತಿಲ್ಲ, ಯಾಕಂದ್ರೆ ಮಳೆರಾಯ ಮತ್ತೆ ಅಲರ್ಟ್ ಆಗಿದ್ದು ಈಗ ಇನ್ನೊಮ್ಮೆ ಧೋ ಅಂತಾ ಸುರಿಯಲು ಸನ್ನದ್ಧವಾಗಿದೆ. ಅದರಲ್ಲೂ, ನವೆಂಬರ್ 5 ಬುಧವಾರ ನಂತರ ಭರ್ಜರಿ ಮಳೆ...
ಮಳೆ ನೋಡ ನೋಡುತ್ತಲೇ ತನ್ನ ಅರ್ಭಟ ಹೆಚ್ಚು ಮಾಡುತ್ತಿದ್ದು, ಮಳೆಯ ಅಬ್ಬರಕ್ಕೆ ಈಗ ದಿಕ್ಕೇ ತೋಚದಂತೆ ರೈತರು ಕೂರುವ ಪರಿಸ್ಥಿತಿ ಎದುರಾಗಿದೆ. ರೈತರ ಜೊತೆಗೆ ಸಾಮಾನ್ಯ ಜನ ಕೂಡ ಈಗ ದಿಕ್ಕೇ ತೋಚದಂತೆ ಕೂತಿದ್ದಾರೆ. ಅಕಾಲಿಕ ಮಳೆ ಪರಿಣಾಮ ಈಗಾಗಲೇ ಕೃಷಿಕರಿಗೆ ಬೆಳೆ ನಷ್ಟವಾಗಿ ಹೋಗಿದ್ದರೆ, ಇನ್ನೊಂದು ಕಡೆ ಸಾಮಾನ್ಯ ಜನರಿಗೆ ಕೂಡ ಮಳೆ ಪರಿಣಾಮ ಹಲವು ಸಮಸ್ಯೆ ಈಗ ಎದುರಾಗಿದೆ. ನಗರ ಪ್ರದೇಶದಲ್ಲಿ ಕೂಡ ನಿರಂತರ ಮಳೆ ಕಾರಣಕ್ಕೆ ನೂರಾರು ಸಮಸ್ಯೆ ಎದುರಾಗಿ ಹೋಗಿದೆ. ಇಂತಹ ಪರಿಸ್ಥಿತಿ ಇದ್ದರೂ ಮತ್ತೆ ಭಾರಿ ಮಳೆ ಎಚ್ಚರಿಕೆ ನೀಡಲಾಗಿದೆ...

ನವೆಂಬರ್ 5 ಬುಧವಾರ ನಂತರ ಮಳೆ...
ಹೌದು, ಮಳೆ ಆರ್ಭಟ ಮತ್ತೆ ಶುರುವಾಗುವ ಬಗ್ಗೆ ಇದೀಗ ಮುನ್ನೆಚ್ಚರಿಕೆ ನೀಡಲಾಗಿದೆ. ಇನ್ನೇನು ಮೆಲ್ಲಗೆ ಚಳಿಗಾಲ ಆರಂಭ ಆಗುತ್ತಿರುವ ಸಮಯದಲ್ಲೂ ಕೂಡ ಮತ್ತೆ ಮಳೆಯ ಮೋಡಗಳು ಈ ನಮ್ಮ ಕನ್ನಡ ನಾಡಿನ ಕಡೆಗೆ ಓಡೋಡಿ ಬರುತ್ತಿವೆ. ಪರಿಣಾಮ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮತ್ತೆ ಮಳೆ ಕಾಟ ಕೊಡುವುದು ಗ್ಯಾರಂಟಿ ಆಗಿದೆ. ಹಾಗಾದ್ರೆ ಯಾವೆಲ್ಲಾ ಜಿಲ್ಲೆಗಳಲ್ಲಿ ಮಳೆಯು ಅಬ್ಬರಸಲಿದೆ?












Click it and Unblock the Notifications