ಅಪಘಾತಕ್ಕೀಡಾದ ರೈಲ್ವೆ ಸಚಿವರ ಬೆಂಗಾವಲು ಪಡೆ

ಅಹಮದಾಬಾದ್‌, ಸೆ. 30 : ಕೇಂದ್ರ ರೈಲ್ವೆ ಸಚಿವ ಡಿ.ವಿ.ಸದಾನಂದ ಗೌಡ ಬೆಂಗಾವಲು ಪಡೆ ವಾಹನಗಳು ಅಪಘಾತಕ್ಕೆ ಒಳಗಾಗಿವೆ. ಸಬರಮತಿ ರೈಲು ನಿಲ್ದಾಣದ ಪರಿಶೀಲನೆಗೆ ತೆರಳುತ್ತಿದ್ದ ಗೌಡರ ಬೆಂಗಾವಲು ಪಡೆಯ ವಾಹನವೊಂದರ ಹೆಚ್ಚುವರಿ ಟೈರ್‌ (ಸ್ಟೇಪ್ನಿ) ಕಳಚಿಬಿದ್ದ ಪರಿಣಾಮ ಏಕಕಾಲದಲ್ಲಿ ಎಲ್ಲ ವಾಹನಗಳು ಬ್ರೇಕ್‌ ಹಾಕಿದ್ದರಿಂದ ಒಂದಕ್ಕೊಂದು ಗುದ್ದಿಕೊಂಡಿವೆ. ಹಿಂದೆ ಬರುತ್ತಿದ್ದ ಕೆಲ ದ್ವಿಚಕ್ರ ವಾಹನಗಳು ನಿಯಂತ್ರಣ ತಪ್ಪಿ ಬಿದ್ದಿವೆ. [ರೈಲ್ವೆ ಪ್ರಯಾಣಿಕರಿಗೆ ಎಸ್ಎಂಎಸ್ ಅಲರ್ಟ್‌]

sadanda gowda

ಸದಾನಂದ ಗೌಡರಿದ್ದ ವಾಹನ ಮುಂದೆ ಚಲಿಸಿದ್ದರಿಂದ ಅವರಿಗೆ ಅವರಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ಘಟನೆಯಲ್ಲಿ ಯಾರಿಗೂ ಪ್ರಾಣಾಪಾಯವಾಗಿಲ್ಲ. ಚಿಕ್ಕ ಪುಟ್ಟ ಗಾಯಗಳಾಗಿದ್ದ ಬೆಂಗಾವಲು ಪಡೆ ಸಿಬ್ಬಂದಿಗೆ ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.[ರೈಲಿನಲ್ಲಿ ಎಸ್ಸೆಂಎಸ್ ಮಾಡಿ ಊಟ ಪಡೆಯಿರಿ!]

ಸಬರಮತಿ ರೈಲು ನಿಲ್ದಾಣದ ಪರಿಶೀಲನೆಗೆ ಮಂಗಳವಾರ ತೆರಳುತ್ತಿದ್ದ ಸದಾನಂದ ಗೌಡರ ಹಿಂದೆ ಬೆಂಗಾವಲು ಪಡೆಯ ಆರೇಳು ವಾಹನಗಳು ತೆರಳುತ್ತಿದ್ದವು. ಈ ವೇಳೆ ಚಿಮುನಾಬಾಯಿ ಸೇತುವೆ ಬಳಿ ಸಚಿವರ ಬೆಂಗಾವಲು ಪಡೆ ವಾಹನವೊಂದರ ಸ್ಟೇಪ್ನಿ ಕಳಚಿ ಬಿದ್ದಿದೆ. ಹಿಂದಿನಿಂದ ಬರುತ್ತಿದ್ದ ವಾಹನಗಳು ಒಮ್ಮೆಲೇ ಬ್ರೇಕ್ ಹಾಕಿದ್ದರಿಂದ ಒಂದಕ್ಕೊಂದು ತಾಗಿಕೊಂಡಿವೆ.

ನಂತರ ಸಬರಮತಿ ರೈಲು ನಿಲ್ದಾಣಕ್ಕೆ ತೆರಳಿದ ಗೌಡರು ಪರಿಶೀಲನೆ ನಡೆಸಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+