ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈಲ್ವೆ ಬಜೆಟ್ : 9 ಕನ್ನಡ ಪತ್ರಿಕೆಗಳ ಹಣೆಬರಹ

|
Google Oneindia Kannada News

ಬೆಂಗಳೂರು, ಫೆ. 27 : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಮೊದಲ ಪರಿಪೂರ್ಣ ರೈಲ್ವೆ ಬಜೆಟ್‌ ಗುರುವಾರ ಮಂಡನೆಯಾಗಿದೆ. ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಹೊಸ ರೈಲನ್ನು ಘೋಷಣೆ ಮಾಡದೆ, ಪ್ರಯಾಣ ದರವನ್ನು ಹೆಚ್ಚು-ಕಡಿಮೆ ಮಾಡದೆ ಬಜೆಟ್ ಮಂಡಿಸಿದ್ದಾರೆ.

ರೈಲ್ವೆ ಬಜೆಟ್‌ನಲ್ಲಿ ಹೊಸ, ಜನಪ್ರಿಯ ಯೋಜನೆ ಘೋಷಣೆಯ ಸಂಪ್ರದಾಯಕ್ಕೆ ಸಚಿವರು ವಿದಾಯ ಹೇಳಿದ್ದಾರೆ. ಹೊಸ ಘೋಷಣೆಗಳ ಬದಲು ಪ್ರಯಾಣಿಕರಿಗೆ ಸೌಲಭ್ಯ ಕಲ್ಪಿಸಲು ಆದ್ಯತೆ ನೀಡಿದ್ದಾರೆ. ಇಲಾಖೆಯ ಅಭಿವೃದ್ಧಿಗಾಗಿ ಖಾಸಗಿ ಬಂಡವಾಳ ಹೂಡಿಕೆ ಮಂತ್ರ ಜಪಿಸಿದ್ದಾರೆ. [ರೈಲ್ವೆ ಬಜೆಟ್‌ ಮುಖ್ಯಾಂಶಗಳು ಇಲ್ಲಿವೆ]

ಕನ್ನಡದ ದಿನ ಪ್ರತಿಕೆಗಳು ರೈಲ್ವೆ ಬಜೆಟ್ ಸುದ್ದಿಯನ್ನು ವಿಶ್ಲೇಷಣಾತ್ಮಕವಾಗಿ ಪ್ರಕಟಿಸಿವೆ. ವಿಶಿಷ್ಟವಾದ ಹೆಡ್‌ಲೈನ್‌, ವಿನ್ಯಾಸಗಳ ಮೂಲಕ ಓದುಗರನ್ನು ಆಕರ್ಷಿಸಿವೆ. ಉದಯವಾಣಿ ದಿನ ಪತ್ರಿಕೆ ಮಂಗಳೂರು ಮತ್ತು ಬೆಂಗಳೂರು ಆವೃತ್ತಿಗೆ ಬೇರೆ-ಬೇರೆ ಹೆಡ್‌ಲೈನ್ ನೀಡಿದೆ. [ರೈಲ್ವೆ ಬಜೆಟ್ ಯಾರು, ಏನು ಹೇಳಿದರು]

ವಿಜಯ ಕರ್ನಾಟಕ ದಿನಪತ್ರಿಕೆ 'ಹಳಿ ಇದೆ, ರೈಲಿಲ್ಲ' ಎಂಬ ಶೀರ್ಷಿಕೆಯನ್ನು ನೀಡಿದ್ದರೆ, ಕನ್ನಡ ಪ್ರಭ 'ಅಭಿವೃದ್ಧಿಯೇ ಪ್ರಭು ಬಂಡಿವಾಳ' ಎಂಬ ಶೀರ್ಪಿಕೆ ಕೊಟ್ಟಿದೆ. ಕನ್ನಡದ ದಿನಪತ್ರಿಕೆಗಳ ಹೆಡ್‌ಲೈನ್ ನೋಡೋಣ ಬನ್ನಿ.

ಅಭಿವೃದ್ಧಿಯೇ ಪ್ರಭು ಬಂಡಿವಾಳ

ಅಭಿವೃದ್ಧಿಯೇ ಪ್ರಭು ಬಂಡಿವಾಳ

ಕನ್ನಡ ಪ್ರಭ 'ಅಭಿವೃದ್ಧಿಯೇ ಪ್ರಭು ಬಂಡಿವಾಳ' ಎಂಬ ಶೀರ್ಷಿಕೆ ನೀಡಿದೆ. ಮುಖಪುಟದಲ್ಲಿ ರೈಲ್ವೆ ನಿಲ್ದಾಣದಲ್ಲಿ ಬಜೆಟ್ ಹೈಲೈಟ್ಸ್ ಹಾಕಿರುವಂತೆ ವಿಸ್ಯಾನ ಮಾಡಿ ಗಮನ ಸೆಳೆದಿದೆ.

ಹಳಿ ಇದೆ, ರೈಲಿಲ್ಲ : ವಿಜಯಕರ್ನಾಟಕ

ಹಳಿ ಇದೆ, ರೈಲಿಲ್ಲ : ವಿಜಯಕರ್ನಾಟಕ

ವಿಜಯ ಕರ್ನಾಟಕ 'ಹಳಿ ಇದೆ, ರೈಲಿಲ್ಲ' ಎಂಬ ಶೀರ್ಷಿಕೆ ನೀಡಿದ್ದು, ಸಚಿವ ಸುರೇಶ್ ಪ್ರಭು ಹಳಿ ಮೇಲೆ ಹೋಗುತ್ತಿರುವ ವಿನ್ಯಾಸವನ್ನು ಮಾಡಿ ಬಜೆಟ್‌ ಸುದ್ದಿಯನ್ನು ಪ್ರಕಟಿಸಿದೆ.

ರೈಲ್ವೆ ಹಿತಾಯ, ಜನ ಸುಖಾಯ

ರೈಲ್ವೆ ಹಿತಾಯ, ಜನ ಸುಖಾಯ

ವಿಜಯವಾಣಿ 'ರೈಲ್ವೆ ಹಿತಾಯ, ಜನ ಸುಖಾಯ' ಎಂಬ ಶೀರ್ಷಿಕೆ ನೀಡಿದ್ದು, ಸಚಿವರು ಮಂಡಿಸಿದ ಅಭಿವೃದ್ಧಿ ಮಂತ್ರವನ್ನು ಮುಖಪುಟದ ಶೀರ್ಷಿಕೆಯಾಗಿ ನೀಡಿದೆ.

ಪ್ರಯಾಣ ದರ ಹೆಚ್ಚಿಸದ ಪ್ರಭು

ಪ್ರಯಾಣ ದರ ಹೆಚ್ಚಿಸದ ಪ್ರಭು

ರೈಲ್ವೆ ಸಚಿವ ಸುರೇಶ್ ಪ್ರಭು ಪ್ರಯಾಣ ದರವನ್ನು ಹೆಚ್ಚಳ ಮಾಡದಿರುವ ಅಂಶವನ್ನೇ ವಾರ್ತಾಭಾರತಿ ಪ್ರಮುಖವಾದ ಶೀರ್ಷಿಕೆಯಾಗಿ ಮಾಡಿದೆ. 'ಪ್ರಯಾಣ ದರ ಹೆಚ್ಚಿಸದ ಪ್ರಭು' ಎಂಬ ಶೀರ್ಷಿಕೆ ನೀಡಿದೆ.

ರೈಲು ಬರುತ್ತೆ ಕಾಯ್ತಾ ಇರಿ!

ರೈಲು ಬರುತ್ತೆ ಕಾಯ್ತಾ ಇರಿ!

ಉದಯವಾಣಿ ಬೆಂಗಳೂರು ಆವೃತ್ತಿಯಲ್ಲಿ 'ರೈಲು ಬರುತ್ತೆ ಕಾಯ್ತಾ ಇರಿ!' ಎಂಬ ಶೀರ್ಷಿಕೆ ನೀಡಿದೆ. ಮಂಗಳೂರು ಆವೃತ್ತಿಗೆ ಮತ್ತೊಂದು ಹೆಡ್‌ ಲೈನ್‌ ಕೊಟ್ಟು ಗಮನಸೆಳೆದಿದೆ.

ಹೊಸ ರೈಲು ಬಿಡದ ಮೊದಲ ಬಜೆಟ್

ಹೊಸ ರೈಲು ಬಿಡದ ಮೊದಲ ಬಜೆಟ್

'ಹೊಸ ರೈಲು ಬಿಡದ ಮೊದಲ ಬಜೆಟ್' ಎಂದು ಪ್ರಜಾವಾಣಿ ಶೀರ್ಷಿಕೆ ಕೊಟ್ಟಿದ್ದು, ಹೊಸ ರೈಲುಗಳನ್ನು ಘೋಷಣೆ ಮಾಡದ ಬಜೆಟ್‌ನ ಪ್ರಮುಖ ಅಂಶವನ್ನು ಹೆಡ್‌ಲೈನ್‌ನಲ್ಲಿಯೇ ಹೇಳಿದೆ.

ರೈಲ್ವೆ ಅಭಿವೃದ್ಧಿ ಮಂತ್ರ

ರೈಲ್ವೆ ಅಭಿವೃದ್ಧಿ ಮಂತ್ರ

ಉದಯವಾಣಿ ಮಣಿಪಾಲ್ ಆವೃತ್ತಿಗೆ 'ರೈಲ್ವೆ ಅಭಿವೃದ್ಧಿ ಮಂತ್ರ' ಎಂಬ ಶೀರ್ಷಿಕೆ ನೀಡಿದೆ. ಇಲಾಖೆಯ ಅಭಿವೃದ್ಧಿ ಬಗ್ಗೆ ಸುರೇಶ್ ಪ್ರಭು ಮಂಡಿಸಿದ ಬಜೆಟ್‌ಅನ್ನು ಒಂದೇ ವಾಕ್ಯದಲ್ಲಿ ಹೇಳಿದೆ.

ಸ್ವಚ್ಛತೆ, ಸುರಕ್ಷತೆಗೆ ಅಕ್ಷತೆ

ಸ್ವಚ್ಛತೆ, ಸುರಕ್ಷತೆಗೆ ಅಕ್ಷತೆ

ಸಂಯುಕ್ತ ಕರ್ನಾಟಕ 'ಸ್ವಚ್ಛತೆ, ಸುರಕ್ಷತೆಗೆ ಅಕ್ಷತೆ' ಎಂಬ ಶೀರ್ಷಿಕೆ ನೀಡಿ ಬಜೆಟ್ ಸುದ್ದಿಗಳನ್ನು ಪ್ರಕಟಿಸಿದೆ. ಮುಖಪುಟದ ತುಂಬಾ ರೈಲ್ವೆ ಹಳಿಗಳ ವಿನ್ಯಾಸ ಮಾಡಿ ಅದರಲ್ಲಿ ವಿವರಗಳನ್ನು ನೀಡಿದೆ.

ಇದೆಂಥ ಮ್ಯಾಜಿಕ್ ಪ್ರಭು!

ಇದೆಂಥ ಮ್ಯಾಜಿಕ್ ಪ್ರಭು!

ಹೊಸದಿಗಂತ ಪತ್ರಿಕೆ 'ಇದೆಂಥ ಮ್ಯಾಜಿಕ್ ಪ್ರಭು!' ಎಂದು ಶೀರ್ಷಿಕೆ ನೀಡಿ ಬಜೆಟ್ ಸುದ್ದಿಗಳನ್ನು ಪ್ರಕಟಿಸಿದೆ.

English summary
Union Railways Minister Suresh Prabhu presented Rail Budget 2015-16 in the parliament on Feb 26. Here is Kannada news papers headlines for Budget.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X