ಕುಷ್ಟಗಿಯಿಂದ ಕರಟಗಿಯತ್ತ ಹೊರಟ ರಾಹುಲ್ ಗಾಂಧಿ ರೋಡ್ ಶೋ

Subscribe to Oneindia Kannada

ಕೊಪ್ಪಳ, ಫೆಬ್ರವರಿ 11: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇಂದು ತಮ್ಮ ಎರಡನೇ ದಿನದ 'ಜನಾಶಿರ್ವಾದ ಯಾತ್ರೆ' ಆರಂಭಿಸಿದ್ದಾರೆ. ಯಾತ್ರೆಯ ಅಂಗವಾಗಿ ರಾಹುಲ್ ಇಂದು ಮೊದಲಿಗೆ ರೋಡ್ ಶೋದಲ್ಲಿ ಪಾಲ್ಗೊಂಡಿದ್ದಾರೆ.

ಹುಲಿಗೆಮ್ಮನ ದರ್ಶನ ಪಡೆದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ

ಬೆಳಿಗ್ಗೆ 10.30ಕ್ಕೆ ಕೊಪ್ಪಳದ ಕುಷ್ಟಗಿಯಿಂದ ರಾಹುಲ್ ಗಾಂಧಿ ರೋಡ್ ಶೋ ಆರಂಭಿಸಿದರು. ಕಾಂಗ್ರೆಸ್ ಅಧ್ಯಕ್ಷರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಸಾಥ್ ನೀಡಿದ್ದಾರೆ.

ಚಿತ್ರಗಳು : ಕರ್ನಾಟಕದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ

ಯಾತ್ರೆ ಆರಂಭದಲ್ಲಿ ಕುಷ್ಟಗಿಯಲ್ಲಿ ರಾಣಿ ಚೆನ್ನಮ್ಮ ಪ್ರತಿಮೆಗೆ ರಾಹುಲ್ ಗಾಂಧಿ ಮಾಲಾರ್ಪಣೆ ಮಾಡಿದರು. ನಂತರ ತಾಗರಗೇರಾದತ್ತ ತೆರಳಿದರು.

ಇದೀಗ ತಾಗರಗೇರಾದಿಂದ ಕನಕಗಿರಿಯತ್ತ ರೋಡ್ ಶೋದಲ್ಲಿ ತೆರಳುತ್ತಿದ್ದು ಇಲ್ಲಿನ ಕನಕಾಚಲಪತಿ ದೇಗುಲಕ್ಕೆ ರಾಹುಲ್ ಭೇಟಿ ನೀಡಲಿದ್ದಾರೆ. ನಂತರ ರೋಡ್ ಶೋ ಮೂಲಕ ರಾಹುಲ್ ಗಾಂಧಿ ಕರಟಗಿಗೆ ತೆರಳಲಿದ್ದಾರೆ.

Rahul Gandhi starts his roadshow from Kushtagi to Karatagi in Koppal

ಕೊಪ್ಪಳದ ಕರಟಗಿಯಲ್ಲಿ ಮಧ್ಯಾಹ್ನ 2.45ಕ್ಕೆ ಸಾರ್ವಜನಿಕ ಸಮಾರಂಭ ಉದ್ದೇಶಿಸಿ ರಾಹುಲ್ ಗಾಂಧಿ ಭಾಷಣ ಮಾಡಲಿದ್ದಾರೆ. ನಂತರ ಸಂಜೆ 5.15ಕ್ಕೆ ಸಿಂಧನೂರಿನಲ್ಲಿ ರೈತ ಸಂಘಟನಗಳ ಪ್ರತಿನಿಧಿಗಳ ಜತೆ ರಾಹುಲ್ ಗಾಂಧಿ ಸಂವಾದ ನಡೆಸಲಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Rahul Gandhi started his second day Karnataka tour from Kushtagi of Koppal district. In road show he will reach Karatagi and participate in massive rally organised at Karatagi. At the end of the day he will interact with farmers in Sindhanur.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ