ಫೆ.24ರಿಂದ ರಾಹುಲ್ ರಾಜ್ಯ ಪ್ರವಾಸ, ಕಾರ್ಯಕ್ರಮಗಳು

ಬೆಂಗಳೂರು, ಫೆಬ್ರವರಿ 22 : ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ 2ನೇ ಹಂತದ ಕರ್ನಾಟಕ ಪ್ರವಾಸದ ವೇಳಾಪಟ್ಟಿ ಅಂತಿಮವಾಗಿದೆ. ಫೆ.24 ರಿಂದ 26ರ ತನಕ ರಾಹುಲ್ ಗಾಂಧಿ ಮುಂಬೈ-ಕರ್ನಾಟಕ ಭಾಗದಲ್ಲಿ ಪ್ರವಾಸ ಮಾಡಲಿದ್ದಾರೆ, ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರು ಈ ಕುರಿತು ಮಾಹಿತಿ ನೀಡಿದರು. ಬೆಳಗಾವಿ, ವಿಜಯಪುರ, ಬಾಗಲಕೋಟೆ, ಹುಬ್ಬಳ್ಳಿ-ಧಾರವಾಡ ಜಿಲ್ಲೆಗಳಲ್ಲಿ ರಾಹುಲ್ ಗಾಂಧಿ ಪ್ರವಾಸ ನಡೆಸಲಿದ್ದಾರೆ.

ಎಐಸಿಸಿ ಅಧ್ಯಕ್ಷರಾದ ಬಳಿಕ ರಾಹುಲ್ ಗಾಂಧಿ 2ನೇ ಬಾರಿ ಕರ್ನಾಟಕಕ್ಕೆ ಆಗಮಿಸುತ್ತಾರೆ. ಫೆ.10ರಿಂದ 13ರ ತನಕ ಅವರು ಮೊದಲ ಹಂತದ ರಾಜ್ಯ ಪ್ರವಾಸ ಮಾಡಿದ್ದರು. ಪುನಃ ಫೆಬ್ರವರಿ ತಿಂಗಳಿನಲ್ಲಿಯೇ ಎರಡನೇ ಹಂತದ ಪ್ರವಾಸವನ್ನು ಕೈಗೊಂಡಿದ್ದಾರೆ.

ಚಿತ್ರಗಳನ್ನು ನೋಡಿ : ರಾಹುಲ್ ಗಾಂಧಿ ರಾಜ್ಯ ಪ್ರವಾಸ

ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರುವ ದೊಡ್ಡ ರಾಜ್ಯ ಕರ್ನಾಟಕ. ರಾಹುಲ್ ಗಾಂಧಿ ಅವರು ಸಹ ಕರ್ನಾಟಕದ ಚುನಾವಣೆಯನ್ನು ಪ್ರತಿಷ್ಠೆಯ ಪ್ರಶ್ನೆಯಾಗಿ ತೆಗೆದುಕೊಂಡಿದ್ದಾರೆ. ಆದ್ದರಿಂದ, ರಾಜ್ಯದಲ್ಲಿ ಬಿರುಸಿನ ಪ್ರಚಾರವನ್ನು ನಡೆಸಲಿದ್ದಾರೆ. ರಾಹುಲ್ ಗಾಂಧಿ ಕಾರ್ಯಕ್ರಮಗಳು..

ಫೆ.24ರಂದು ಆಗಮನ

ಫೆ.24ರಂದು ಆಗಮನ

ಫೆ.24ರ ಶನಿವಾರ ಬೆಳಗ್ಗೆ 11.30ಕ್ಕೆ ರಾಹುಲ್ ಗಾಂಧಿ ಬೆಳಗಾವಿಗೆ ಆಗಮಿಸಲಿದ್ದಾರೆ. ಹೆಲಿಕಾಪ್ಟರ್ ಮೂಲಕ ಅಥಣಿ ಮತ್ತು ಚಿಕ್ಕೋಡಿಗೆ ಭೇಟಿ ನೀಡಲಿದ್ದಾರೆ.
* 1 ಗಂಟೆಗೆ ಅಥಣಿಯಲ್ಲಿ ಸಾರ್ವಜನಿಕ ಸಭೆ
* 3 ಗಂಟೆಗೆ ವಿಜಯಪುರದ ಟಿಕೋಟದಲ್ಲಿ ಸ್ತ್ರೀ ಶಕ್ತಿ ಸಮಾವೇಶ
* 6.30 ಕ್ಕೆ ವಿಜಯಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಸದಸ್ಯರ ಜೊತೆ ಸಭೆ
* ವಿಜಯಪುರದಲ್ಲಿ ವಾಸ್ತವ್ಯ

ಫೆ.25ರ ಭಾನುವಾರ

ಫೆ.25ರ ಭಾನುವಾರ

* 7.30ಕ್ಕೆ ವಿಜಯಪುರದಲ್ಲಿ ವೃಕ್ಷಥಾನ್ ಹಾಫ್ ಮ್ಯಾರಥಾನ್‌ನಲ್ಲಿ ಭಾಗಿ
* ಜಮಖಂಡಿಗೆ ಭೇಟಿ, ಚಿಕ್ಕಪಡಸಲಗಿ ಗ್ರಾಮದ ಬ್ಯಾರೇಜ್ ವೀಕ್ಷಣೆ
* 11.30 ಜಮಖಂಡಿ, ಮಲ್ವಾಡ್‌ಗೆ ಭೇಟಿ
* 1.30 ಬೀಳಗಿ, 3 ಗಂಟೆಗೆ ಮುಂಡೋಲಿಯಲ್ಲಿ ಸಭೆ
* 6 ಗಂಟೆಗೆ ಬಾಗಲಕೋಟೆಯ ಲೋಕಾಪುರಕ್ಕೆ ಭೇಟಿ
* ಬಾಗಲಕೋಟೆಯಲ್ಲಿ ವಾಸ್ತವ್ಯ

ಫೆ.26 ರಂದು ಬಾಗಲಕೋಟೆ

ಫೆ.26 ರಂದು ಬಾಗಲಕೋಟೆ

* 9.30 ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಸಭೆ
* 10.30 ಸ್ಥಳೀಯ ನಾಯಕರ ಜೊತೆ ಸಭೆ
* 11 ಗಂಟೆಗೆ ರಾಮದುರ್ಗದಲ್ಲಿ ಸಾರ್ವಜನಿಕ ಸಭೆ
* 1 ಗಂಟೆಗೆ ಸವದತ್ತಿಗೆ ಭೇಟಿ
* 5.30 ಹುಬ್ಬಳ್ಳಿಯಲ್ಲಿ ಸಾರ್ವಜನಿಕ ಸಭೆ
* 7 ಗಂಟೆ ಧಾರವಾಡ, ಗದಗ, ಹಾವೇರಿ ಭಾಗದ ನಾಯಕರ ಸಭೆ
* ದೆಹಲಿಗೆ ವಾಪಸ್

ದೇವಾಲಯ, ಮಠಕ್ಕೆ ಭೇಟಿ?

ದೇವಾಲಯ, ಮಠಕ್ಕೆ ಭೇಟಿ?

ಈ ಬಾರಿಯ ಪ್ರವಾಸದಲ್ಲಿ ರಾಹುಲ್ ಗಾಂಧಿ ಮಠ, ದೇವಾಲಯಗಳಿಗೆ ಭೇಟಿ ನೀಡುವುದಿಲ್ಲವೇ?. ಕಾಂಗ್ರೆಸ್ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಈ ಕುರಿತು ಯಾವುದೇ ಕಾರ್ಯಕ್ರಮಗಳು ಇಲ್ಲ.

ಡಾ.ಜಿ.ಪರಮೇಶ್ವರ ಟ್ವಿಟ್

ಡಾ.ಜಿ.ಪರಮೇಶ್ವರ ಅವರು ರಾಹುಲ್ ಗಾಂಧಿ ಕಾರ್ಯಕ್ರಮದ ಬಗ್ಗೆ ಟ್ವಿಟ್ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+