ಪೌರ ಕಾರ್ಮಿಕರ ಸಮಸ್ಯೆ ಆಲಿಸಿದ ರಾಹುಲ್ ಗಾಂಧಿ

Posted By: Gururaj
Subscribe to Oneindia Kannada

ಬೆಂಗಳೂರು, ಏಪ್ರಿಲ್ 08 : ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪೌರ ಕಾರ್ಮಿಕರ ಜೊತೆ ಬೆಂಗಳೂರಿನಲ್ಲಿ ಭಾನುವಾರ ಸಂವಾದ ನಡೆಸಿದರು. ಎರಡು ದಿನಗಳ ಪ್ರವಾಸಕ್ಕಾಗಿ ರಾಹುಲ್ ಗಾಂಧಿ ರಾಜ್ಯಕ್ಕೆ ಆಗಮಿಸಿದ್ದಾರೆ.

ಭಾನುವಾರ ಬೆಳಗ್ಗೆ ಜಕ್ಕರಾಯನ ಕೆರೆ ಮೈದಾನದಲ್ಲಿ ಪೌರ ಕಾರ್ಮಿಕರ ಜೊತೆ ರಾಹುಲ್ ಗಾಂಧಿ ಸಂವಾದ ನಡೆಸಿದರು. ಸಂವಾದ ಕಾರ್ಯಕ್ರಮಕ್ಕೆ ವೇದಿಕೆ ನಿರ್ಮಾಣ ಮಾಡಲಾಗಿತ್ತು. ಆದರೆ, ವೇದಿಕೆ ಮೇಲೆ ಕೂರಲು ನಿರಾಕರಿಸಿದ ರಾಹುಲ್, ಬಿಸಿಲಿನಲ್ಲಿಯೇ ಖುರ್ಚಿ ಹಾಕಿಕೊಂಡು ಕುಳಿತರು.

In Pics: ಶ್ರೀ ನಿರ್ಮಲಾನಂದನಾಥ ಸ್ವಾಮಿಯವರ ಆಶೀರ್ವಾದ ಪಡೆದ ರಾಹುಲ್ ಗಾಂಧಿ

ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಮುಂತಾದವರು ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರ ಜೊತೆಗಿದ್ದರು.

Rahul Gandhi interacts with Pourakarmikas in Bengaluru

ಸಂವಾದ ಕಾರ್ಯಕ್ರಮದಲ್ಲಿ ಮೊದಲು ಮಾತನಾಡಿದ ರಾಹುಲ್ ಗಾಂಧಿ, 'ನಿಮ್ಮೊಂದಿಗೆ ಮಾತನಾಡಲು ಇಲ್ಲಿಗೆ ಆಗಮಿಸಿದ್ದೇನೆ. ನಮ್ಮ ಸರ್ಕಾರದಿಂದ ನಿಮಗೆ ಯಾವ ರೀತಿಯ ಸೌಲಭ್ಯಗಳು ಬೇಕು? ಎಂಬುದನ್ನು ತಿಳಿದುಕೊಳ್ಳಲು ಬಂದಿದ್ದೇನೆ' ಎಂದರು.

* ಮೊದಲು ಮಾತನಾಡಿದ ಜಯಮ್ಮ ಅವರು, 'ಸಿದ್ದರಾಮಯ್ಯ ಅವರ ಸರ್ಕಾರ ಬಂದ ಮೇಲೆ ಗುತ್ತಿಗೆ ನೌಕರರಿಗೆ ಬಿಬಿಎಂಪಿಯಿಂದ ವೇತನ ಸಿಗುತ್ತದೆ ಎಂದು ಹೇಳಿದ್ದರು. ಅದು ಈಗ ಸಾಕಾರಗೊಂಡಿದೆ' ಎಂದು ಸಂತಸ ಹಂಚಿಕೊಂಡರು. 'ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ' ಎಂದು ರಾಹುಲ್ ಹೇಳಿದರು.

* 'ಮುಂದಿನ ಐದು ವರ್ಷಗಳಲ್ಲಿ ಏನು ಬೇಕು?' ಎಂದು ರಾಹುಲ್ ಗಾಂಧಿ ಪ್ರಶ್ನಿಸಿದರು. ಜಯಮ್ಮ ಅವರು ಮಾತನಾಡಿ, 'ನಮ್ಮ ಕೆಲಸವನ್ನು ಖಾಯಂಗೊಳಿಸಿ, ನಮ್ಮ ಮಕ್ಕಳು ವಿದ್ಯಾಭ್ಯಾಸ ಮಾಡಲು ಉತ್ತಮ ಶಾಲೆಗಳ ವ್ಯವಸ್ಥೆ ಬೇಕು' ಎಂದರು.

*ಇಂದ್ರಾಣಿ ಅವರು ಮಾತನಾಡಿ, 'ಸಿದ್ದರಾಮಯ್ಯ ಅವರ ಸರ್ಕಾರ ಬಂದ ಮೇಲೆ ಹಲವಾರು ಸೌಲಭ್ಯಗಳನ್ನು ನಮಗೆ ನೀಡಿದ್ದಾರೆ. ನಾವು 25 ವರ್ಷದಿಂದ ಕೆಲಸ ಮಾಡುತ್ತಿದ್ದೇವೆ. ನಮ್ಮನ್ನು ಖಾಯಂಗೊಳಿಸಿ' ಎಂದು ಮನವಿ ಮಾಡಿದರು.

* ಸಂವಾದದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, 'ಗುತ್ತಿಗೆ ಪದ್ಧತಿಯನ್ನು ಈಗ ರದ್ದುಗೊಳಿಸಲಾಗಿದೆ. ಪೌರ ಕಾರ್ಮಿಕರ ಅಭಿವೃದ್ಧಿ ನಿಗಮನವನ್ನು ಸ್ಥಾಪನೆ ಮಾಡಲಾಗಿದೆ.

* ಮುತ್ತಣ್ಣ ಅವರು ಮಾತನಾಡಿ, 'ನಮಗೆ ಬಿಸಿಯೂಟ ಸಿಗುತ್ತಿದೆ. ಸಿದ್ದರಾಮಯ್ಯ ಸರ್ಕಾರ ನಮಗೆ ಒಳ್ಳೆಯ ಕೆಲಸಗಳನ್ನು ಮಾಡಿಕೊಟ್ಟಿದೆ' ಎಂದರು. 'ಇಂದಿರಾ ಕ್ಯಾಂಟೀನ್‌ನಿಂದ ಲಾಭವಾಗುತ್ತಿದೆಯೇ?' ಎಂದು ರಾಹುಲ್ ಗಾಂಧಿ ಪ್ರಶ್ನಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
AICC president Rahul Gandhi interacts with Pourakarmikas in Bengaluru, Karnataka on April 8, 2018. Rahul Gandhi in Karnataka for two days of visit for Karnataka assembly elections 2018 campaign.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ