ಕಾಂಗ್ರೆಸ್‌ಗೆ ಇಂದು ದುಃಖದ ದಿನ ರಾಹುಲ್ ವಿಷಾದ

ನವದೆಹಲಿ, ನವೆಂಬರ್ 25: ದೇಶದ ಇಬ್ಬರು ಪ್ರಮುಖ ನಾಯಕರಾದ ರೆಬಲ್ ಸ್ಟಾರ್ ಅಂಬರೀಶ್ ಹಾಗೂ ಕೇಂದ್ರ ಮಾಜಿ ಸಚಿವ ಜಾಫರ್ ನಿಧನದಿಂದ ಕಾಂಗ್ರೆಸ್ ಪಾಲಿಗೆ ಇಂದು ದುಃಖದ ದಿನ ಎಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ವಿಷಾದ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವಿಟ್ಟರ್‌ನಲ್ಲಿ ಭಾವನೆ ವ್ಯಕ್ತಪಡಿಸಿರುವ ಅವರು ಕಾಂಗ್ರೆಸ್ ನ ಇಬ್ಬರು ಹಿರಿಯ ನಾಯಕರು ಒಂದೇ ದಿನ ನಿಧನರಾಗಿರುವುದು ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ. ಕರ್ನಾಟಕದ ಕಾಂಗ್ರೆಸ್‌ನಲ್ಲಿ ಆಧಾರ ಸ್ತಂಭದಂತಿದ್ದ ಇಬ್ಬರು ನಾಯಕರ ಅಗಲುವಿಕೆಯಿಂದ ಆದ ನೋವನ್ನು ಮರೆಯಲಾಗದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

Rahul Gandhi condoles demise of ambareesh and Jaffer Sharief

'ಅಂಬರೀಶ್ ಅವರು ನಟನೆ ಮತ್ತು ರಾಜಕೀಯ ಕೆಲಸದಿಂದಾಗಿ ಕರ್ನಾಟಕ ಮತ್ತು ಇಡೀ ದೇಶದಲ್ಲಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದರು' ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷ ಒಬ್ಬ ಕುಟುಂಬ ಸದಸ್ಯನನ್ನು ಕಳೆದುಕೊಂಡಿದೆ. ಅಂಬರೀಶ್ ಅವರ ಕುಟುಂಬ ಸದಸ್ಯರಿಗೆ ನೋವು ಭರಿಸುವ ಶಕ್ತಿಯನ್ನು ನೀಡಲಿ' ಎಂದು ರಾಹುಲ್ ಗಾಂಧಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+