• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೈತ್ರಿ ಸರ್ಕಾರದ ತೀರ್ಮಾನವನ್ನು ರದ್ದುಗೊಳಿಸಿದ ಬಿಜೆಪಿ ಸರ್ಕಾರ

|
   ಸೇಡಿನ ರಾಜಕಾರಣಕ್ಕೆ ಮುಂದಾದ ಯಡಿಯೂರಪ್ಪ ಸರ್ಕಾರ | YEDIYURAPPA | BJP | PWD | CONGRESS | JDS | GOVT

   ಬೆಂಗಳೂರು, ಡಿಸೆಂಬರ್ 16 : ಲೋಕೋಪಯೋಗಿ ಇಲಾಖೆಯಲ್ಲಿನ 870 ಇಂಜಿನಿಯರ್‌ಗಳ ನೇಮಕಾತಿಯನ್ನು ಕರ್ನಾಟಕ ಸರ್ಕಾರ ರದ್ದುಗೊಳಿಸಿದೆ. ಎಚ್. ಡಿ. ರೇವಣ್ಣ ಸಚಿವರಾಗಿದ್ದಾಗ ನೇಮಕಾತಿಗೆ ಚಾಲನೆ ನೀಡಲಾಗಿತ್ತು.

   ಕರ್ನಾಟಕ ಲೋಕಸೇವಾ ಆಯೋಗದ ಮೂಲಕ 870 ಇಂಜಿನಿಯರ್ ಸೇರಿದಂತೆ ಒಟ್ಟು 1 ಸಾವಿರ ಹುದ್ದೆಗಳ ನೇಮಕಕ್ಕೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಚಾಲನೆ ನೀಡಿತ್ತು. ಸರ್ಕಾರ ಈ ನೇಮಕಾತಿ ಪ್ರಕ್ರಿಯೆಯನ್ನು ರದ್ದುಗೊಳಿಸಿದೆ.

   ವಾಣಿಜ್ಯ ತೆರಿಗೆ ಇಲಾಖೆ ನೇಮಕಾತಿ; ಅರ್ಜಿ ಹಾಕಲು ಸಿದ್ಧರಾಗಿ

   ಕೆಪಿಎಸ್ ಮೂಲಕ ನೇಮಕ ಮಾಡಿಕೊಂಡರೆ ವಿಳಂಬವಾಗಲಿದೆ ಎಂದು ಸರ್ಕಾರ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ನೇಮಕ ಮಾಡಿಕೊಳ್ಳಲು ಮುಂದಾಗಿತ್ತು. ಎಚ್. ಡಿ. ರೇವಣ್ಣ ತಮಗೆ ಬೇಕಾದವರನ್ನು ಇಲಾಖೆಯಲ್ಲಿ ತುಂಬಿಸುತ್ತಿದ್ದಾರೆ ಎಂಬ ಆರೋಪವೂ ಇತ್ತು.

   1998ರ ನೇಮಕಾತಿ ವಿವಾದ; ಯಥಾಸ್ಥಿತಿಗೆ ಕೆಎಟಿ ಆದೇಶ

   570 ಸಹಾಯಕ ಇಂಜಿನಿಯರ್, 300 ಕಿರಿಯ ಇಂಜಿನಿಯರ್ ಹುದ್ದೆಗಳ ಭರ್ತಿಗೆ 2019ರ ಮಾರ್ಚ್‌ನಲ್ಲಿ ಅರ್ಜಿ ಕರೆಯಲಾಗಿತ್ತು. ಜೂನ್‌ನಲ್ಲಿ ಸ್ಮರ್ಧಾತ್ಮಕ ಪರೀಕ್ಷೆ ನಡೆಸಲಾಗಿತ್ತು. ಬಳಿಕ ಮೈತ್ರಿ ಸರ್ಕಾರ ಪತನಗೊಂಡಿತ್ತು.

   NWKRTC ನೇಮಕಾತಿ, 2814 ಹುದ್ದೆಗಳಿಗೆ ಅರ್ಜಿ ಹಾಕಿ

   ಲೋಕೋಪಯೋಗಿ ಇಲಾಖೆ ನೇಮಕಾತಿ

   ಲೋಕೋಪಯೋಗಿ ಇಲಾಖೆ ನೇಮಕಾತಿ

   ಲೋಕೋಪಯೋಗಿ ಇಲಾಖೆಯ ಸೇವಾ ನಿಯಮಗಳು 2019 (ವಿಶೇಷ ನೇಮಕಾತಿ) ಸಿದ್ಧಪಡಿಸಿ 570 ಸಹಾಯಕ ಇಂಜಿನಿಯರ್, 300 ಕಿರಿಯ ಇಂಜಿನಿಯರ್‌ಗಳ ಹುದ್ದೆಗಳ ಭರ್ತಿಗೆ ಈ ವರ್ಷದ ಮಾರ್ಚ್‌ನಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಲೋಕೋಪಯೋಗಿ ಇಲಾಖೆಯಲ್ಲಿ ಇದಕ್ಕಾಗಿ ವಿಶೇಷ ಆಯ್ಕೆ ಸಮಿತಿ ರಚನೆ ಮಾಡಲಾಗಿತ್ತು.

   ಫಲಿತಾಂಶ ತಡೆ ಹಿಡಿಯಲಾಗಿತ್ತು

   ಫಲಿತಾಂಶ ತಡೆ ಹಿಡಿಯಲಾಗಿತ್ತು

   ಜೂನ್‌ನಲ್ಲಿ ಅರ್ಜಿಗಳನ್ನು ಸಲ್ಲಿಸಿದ ಅಭ್ಯರ್ಥಿಗಳಿಗೆ ಸ್ಮರ್ಧಾತ್ಮಕ ಪರೀಕ್ಷೆ ನಡೆಸಲಾಗಿತ್ತು. ಬಳಿಕ ಸಮ್ಮಿಶ್ರ ಸರ್ಕಾರ ಪತನಗೊಂಡಿತ್ತು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತಲೇ ಫಲಿತಾಂಶ ಪ್ರಕಟಣೆಯನ್ನು ತಡೆ ಹಿಡಿಯಲಾಗಿತ್ತು. ಫಲಿತಾಂಶದ ನಿರೀಕ್ಷೆಯಲ್ಲಿದ್ದ ಸಾವಿರಾರು ಅಭ್ಯರ್ಥಿಗಳು ಆತಂಕಕ್ಕೆ ಒಳಗಾಗಿದ್ದರು.

   ನೇಮಕಾತಿ ಆದೇಶ ರದ್ದು

   ನೇಮಕಾತಿ ಆದೇಶ ರದ್ದು

   ಬಿಜೆಪಿ ಸರ್ಕಾರ ಇಂಜಿನಿಯರ್‌ಗಳ ನೇಮಕಾತಿ ಆದೇಶವನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ. ಈಗ ಅಭ್ಯರ್ಥಿಗಳು ಹೊಸದಾಗಿ ಅರ್ಜಿಗಳನ್ನು ಸಲ್ಲಿಸಬೇಕು. ಒಂದು ವೇಳೆ ಅಭ್ಯರ್ಥಿಗಳ ವಯೋಮಿತಿ ಮೀರಿದ್ದರೆ ಅಧಿಸೂಚನೆಗೆ ಅನ್ವಯವಾಗುವಂತೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ ಎಂದು ಇಲಾಖೆಯ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಈ ಬಗ್ಗೆ ಅಧಿಕೃತ ಆದೇಶ ಇನ್ನೂ ಪ್ರಕಟವಾಗಿಲ್ಲ.

   ಕೆಪಿಎಸ್‌ಸಿಗೆ ಇಲಾಖೆಯ ಪತ್ರ

   ಕೆಪಿಎಸ್‌ಸಿಗೆ ಇಲಾಖೆಯ ಪತ್ರ

   ಕರ್ನಾಟಕ ಲೋಕಸೇವಾ ಆಯೋಗಕ್ಕೆ ಲೋಕೋಪಯೋಗಿ ಇಲಾಖೆ ಈಗಾಗಲೇ ಪತ್ರ ಬರೆದಿದೆ. 600 ಸಹಾಯಕ ಇಂಜಿನಿಯರ್, 325 ಕಿರಿಯ ಇಂಜಿನಿಯರ್ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಖಾಲಿ ಹುದ್ದೆಗಳ ನೇಮಕಾತಿಗಾಗಿ ಕೆಪಿಎಸ್‌ಸಿ ಪರೀಕ್ಷೆಗಳನ್ನು ನಡೆಸಲಿದೆ ಎಂದು ತಿಳಿದುಬಂದಿದೆ.

   English summary
   Karnataka government cancelled the appointment of 870 engineer recruitment of PWD department. Recruitment process began in the time of Congress-JD(S) alliance government.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X