ಅರಮನೆ ಮೈದಾನದಲ್ಲಿ 'ಪುನೀತ ಪರ್ವ': ಚಿತ್ರರಂಗದ ಗಣ್ಯರ ಸಮಾಗಮ

ಬೆಂಗಳೂರು, ಅಕ್ಟೋಬರ್‌ 21: ಸ್ಯಾಂಡಲ್‌ವುಡ್‌ನ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅವರ ಸವಿ ನೆನಪಿನಲ್ಲಿ ಇಂದು(ಅಕ್ಟೋಬರ್‌ 21) ಬೆಂಗಳೂರಿನ ಅರಮನೆ ಮೈದಾನದಲ್ಲಿ 'ಪುನೀತ ಪರ್ವ' ಎನ್ನುವ ವಿನೂತನ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.

ಪುನೀತ್‌ ರಾಜ್‌ಕುಮಾರ್‌ ಅಭಿನಯದ ಕೊನೆಯ ಚಿತ್ರ ಗಂಧದ ಗುಡಿ ಡಾಕ್ಯುಮೆಂಟರಿ ಸಿನಿಮಾದ ಪ್ರೀ-ರಿಲೀಸ್ ಇವೆಂಟ್ ಕಾರ್ಯಕ್ರಮಕ್ಕೆ 'ಪುನೀತ ಪರ್ವ' ಎಂದು ಹೆಸರಿಡಲಾಗಿದೆ. ಇಂದು ಸಂಜೆ ಅದ್ಧೂರಿಯಾಗಿ ಕಾರ್ಯಕ್ರಮ ನಡೆಯಲಿದೆ.

'ಪುನೀತ ಪರ್ವ' ಕಾರ್ಯಕ್ರಮಕ್ಕೆ ಭಾರತೀಯ ಚಿತ್ರರಂಗದ ಗಣ್ಯರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ರಾಜಕೀಯ ಗಣ್ಯರು ಹಾಗೂ ವಿಶಾಲವಾದ ಅರಮನೆ ಮೈದಾನದಲ್ಲಿ 40 ಸಾವಿರಕ್ಕೂ ಅಧಿಕ ಅಭಿಮಾನಿಗಳು ಭಾಗಿಯಾಗುವ ನಿರೀಕ್ಷೆ ಇದೆ.

'ಗಂಧದ ಗುಡಿ' ಮೇಕಿಂಗ್ ವೇಳೆ ದನದ ಕೊಟ್ಟಿಗೆಯಲ್ಲಿ ಸೊಂಪಾಗಿ ನಿದ್ದೆ ಮಾಡಿದ್ದ ಅಪ್ಪು!

ಭಾರತೀಯ ಚಿತ್ರರಂಗದ ಗಣ್ಯರ ಸಮಾಗಮ

ಭಾರತೀಯ ಚಿತ್ರರಂಗದ ಗಣ್ಯರ ಸಮಾಗಮ

ಪುನೀತ್‌ ರಾಜ್‌ಕುಮಾರ್ ಕಾಣಿಸಿಕೊಂಡಿರುವ ಕಡೆಯ ಸಿನಿಮಾ 'ಗಂಧದ ಗುಡಿ' ಡಾಕ್ಯೂಮೆಂಟರಿ ಸಿನಿಮಾ ಅಕ್ಟೋಬರ್‌ 28ರಂದು ಬೆಳ್ಳಿ ತೆರೆ ಮೇಲೆ ಪ್ರದರ್ಶನಗೊಳ್ಳಲಿದೆ. ಅದಕ್ಕೂ ಮುನ್ನ ಇಂದು ಅಕ್ಟೋಬರ್ 21 ರಂದು ಅರಮನೆ ಮೈದಾನದ ಕೃಷ್ಣ ವಿಹಾರದಲ್ಲಿ ಸಂಜೆ 6 ಗಂಟೆಗೆ 'ಪುನೀತ ಪರ್ವ' ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಕಾರ್ಯಕ್ರಮದ ಸಕಲ ಸಿದ್ಧತೆ ನಡೆದಿದೆ. 'ಪುನೀತ ಪರ್ವ' ಕಾರ್ಯಕ್ರಮದಲ್ಲಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌, ಶಿವರಾಜ್‌ ಕುಮಾರ್‌ ರಾಘವೇಂದ್ರ ರಾಜ್‌ಕುಮಾರ ಹಾಗೂ ಡಾ. ರಾಜ್‌ಕುಮಾರ್ ಕುಟುಂಬಸ್ಥರು ಭಾಗಿಯಾಗಲಿದ್ದಾರೆ. ಜೊತೆಗೆ ಕನ್ನಡ ಚಿತ್ರರಂಗದ ಮಾತ್ರವಲ್ಲದೇ ಭಾರತೀಯ ಚಿತ್ರರಂಗದ ಅನೇಕ ಗಣ್ಯರು 'ಗಂಧದ ಗುಡಿ' ಪ್ರೀ-ರಿಲೀಸ್‌ ಇವೆಂಟ್‌ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

'ಪುನೀತ ಪರ್ವ': 'ಗಂಧದ ಗುಡಿ' ಪ್ರೀ ರಿಲೀಸ್ ಇವೆಂಟ್ ಲೈವ್ ಎಲ್ಲಿ ನೋಡಬಹುದು?

ಪುನೀತ ಪರ್ವ ಕಾರ್ಯಕ್ರಮಕ್ಕೆ ಡ್ರೆಸ್‌ ಕೋಡ್‌ ಏನು..?

ಪುನೀತ ಪರ್ವ ಕಾರ್ಯಕ್ರಮಕ್ಕೆ ಡ್ರೆಸ್‌ ಕೋಡ್‌ ಏನು..?

'ಪುನೀತ ಪರ್ವ' ಕಾರ್ಯಕ್ರಮದಲ್ಲಿ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌, ಕಿಚ್ಚ ಸುದೀಪ್‌, ರಾಕಿಂಗ್ ಸ್ಟಾರ್ ಯಶ್, ಮೋಹಕ ತಾರೆ ರಮ್ಯಾ ಭಾಗಿಯಾಗುವ ಸಾಧ್ಯತೆಯಿದ್ದು, ಇತರ ಚಿತ್ರರಂಗದ ಕಮಲ್‌ ಹಾಸನ್‌, ನಟ ಸೂರ್ಯ, ಬಾಲಯ್ಯ, ರಾಣಾ ದಗ್ಗುಬಾಟಿ, ಪ್ರಭುದೇವಾ ಸೇರಿದಂತೆ ಅನೇಕ ನಟ-ನಟಿಯರು ಭಾಗಿಯಾಗಲಿದ್ದಾರೆ. ಗಾಯಕರಾದ ಅರ್ಮಾನ್ ಮಲಿಕ್, ವಿಜಯ್‌ ಪ್ರಕಾಶ್‌, ಟಿಪ್ಪು ಕಾರ್ಯಕ್ರಮ ನೀಡಲಿದ್ದಾರೆ. ಇನ್ನು ಅಪ್ಪು ಪತ್ನಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಬಹಳ ಮುತುವರ್ಜಿ ವಹಿಸಿ ಈ ಕಾರ್ಯಕ್ರಮ ಆಯೋಜಿಸಿದ್ದಾರೆ. ಪುನೀತ್ ಪರ್ವ' ಕಾರ್ಯಕ್ರಮದಲ್ಲಿ ಭಾಗಿಯಾಗುವವರಿಗೆ ಈಗಾಗಲೇ ಡ್ರೆಸ್‌ ಕೋಡ್‌ ಬಗ್ಗೆ ಮಾಹಿತಿ ನೀಡಲಾಗಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸುವವರು ಬಿಳಿ ಬಟ್ಟೆ ಧರಿಸಿ ಬರಬೇಕು ಎಂದು ತಿಳಿಸಿದ್ದಾರೆ.

ಶ್ರೀಗಂಧದ ತುಂಡಿನ ಮೇಲೆ ಪುನೀತ್ ರಾಜ್​ಕುಮಾರ್​ ಹಸ್ತಾಕ್ಷರ

ಶ್ರೀಗಂಧದ ತುಂಡಿನ ಮೇಲೆ ಪುನೀತ್ ರಾಜ್​ಕುಮಾರ್​ ಹಸ್ತಾಕ್ಷರ

'ಗಂಧದ ಗುಡಿ' ಪ್ರೀ-ರಿಲೀಸ್‌ ಇವೆಂಟ್‌ಗಾಗಿ 'ಪುನೀತ ಪರ್ವ' ಕಾರ್ಯಕ್ರಮಕ್ಕೆ ವಿಶೇಷವಾದ ಆಹ್ವಾನ ಪತ್ರಿಕೆ ಸಿದ್ಧಪಡಿಸಲಾಗಿತ್ತು. ಈ ಆಹ್ವಾನ ಪತ್ರಿಕೆಯನ್ನು ಸಂಪೂರ್ಣ ಮರದಿಂದ ಮಾಡಲಾಗಿದ್ದು, ಪತ್ರಿಕೆ ಜೊತೆಗೆ ಪುನೀತ್​ ರಾಜ್​ಕುಮಾರ್​ ಅವರ ಪುತ್ಥಳಿಯನ್ನು ಸಹ ಇರಿಸಲಾಗಿದೆ. ಜೊತೆಗೆ ಶ್ರೀಗಂಧದ ತುಂಡಿನ ಮೇಲೆ ಪುನೀತ್ ರಾಜ್​ಕುಮಾರ್​ ಎಂದು ಬರೆದಿರುವ ಹಸ್ತಾಕ್ಷರ ಕೂಡ ಮುದ್ರಣ ಮಾಡಲಾಗಿದೆ. ಈ ವಿಶೇಷವಾದ ಆಹ್ವಾನ ಪತ್ರಿಕೆ ಎಲ್ಲರ ಕೈಸೇರಿದ್ದು, ಇಂದಿನ ಕಾರ್ಯಕ್ರಮದ ಅದ್ಧೂರಿತನಕ್ಕೆ ಈ ಆಹ್ವಾನ ಪತ್ರಿಕೆ ಮೊದಲ ಸಾಕ್ಷಿಯಾಗಿದೆ.

ಪುನೀತ ಪರ್ವ: ಅಭಿಮಾನಿಗಳಿಗೆ ಪ್ರತ್ಯೇಕ ಪಾಸ್

ಪುನೀತ ಪರ್ವ: ಅಭಿಮಾನಿಗಳಿಗೆ ಪ್ರತ್ಯೇಕ ಪಾಸ್

ಇನ್ನು 'ಪುನೀತ ಪರ್ವ' ಕಾರ್ಯಕ್ರಮದಲ್ಲಿ ಚಿತ್ರರಂಗದ ಗಣ್ಯರು, ರಾಜಕೀಯ ಗಣ್ಯರು ಹಾಗೂ ಸಾವಿರಾರು ಅಭಿಮಾನಿಗಳು ಭಾಗಿಯಾಗುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್‌ ಬಿಗಿ ಬಂದೋಬಸ್ತ್‌ ಮಾಡಲಾಗಿದೆ. ಪುನೀತ ಪರ್ವ ಕಾರ್ಯಕ್ರಮದ ಭದ್ರತೆಗಾಗಿ 1400 ಪೊಲೀಸರ್, 180 ಪಿಎಸ್.ಐ, 60 ಇನ್ಸ್‌ಪೆಕ್ಟರ್, 14 ಎಸಿಪಿ ಹಾಗೂ 3 ಮಂದಿ ಡಿಸಿಪಿಗಳನ್ನು ನಿಯೋಜಿಸಲಾಗಿದ್ದು, 20 ಕೆಎಸ್‌ ಆರ್‌ಪಿ ತುಕಡಿಗಳನ್ನು ಭದ್ರತೆಗೆ ಬಳಸಿಕೊಳ್ಳಲಾಗುತ್ತಿದೆ. ಇನ್ನು ಕಾರ್ಯಕ್ರಮವನ್ನು ವೀಕ್ಷಿಸಲು ಬರುವ ಅಭಿಮಾನಿಗಳಿಗೆ ಪ್ರತ್ಯೇಕ ಪಾಸ್ ವ್ಯವಸ್ಥೆ ಕೂಡ ಮಾಡಲಾಗಿದ್ದು, ಪಾಸ್ ಇದ್ದವರಿಗೆ ಪ್ರವೇಶವನ್ನು ನೀಡಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+