PUC Admission 2026: ಎಸ್‌ಎಸ್‌ಎಲ್‌ಸಿ ಬಳಿಕ ಮುಂದೇನು? ವಿದ್ಯಾರ್ಥಿಗಳೇ ಗಮನಿಸಿ
ವಿದ್ಯಾರ್ಥಿಗಳು ಮುಂಬರಲಿರುವ ಎಸ್‌ಎಸ್‌ಎಲ್‌ಸಿ, ಪಿಯುಸಿ ವಾರ್ಷಿಕ ಪರೀಕ್ಷೆಗಳಿಗೆ 2026 ತಯಾರಿ ನಡೆಸುತ್ತಿದ್ದಾರೆ. ಕೆಲವೇ ವಾರಗಳಲ್ಲಿ ಪರೀಕ್ಷಾ ಚಟುವಟಿಕೆಗಳು ಆರಂಭವಾಗಲಿವೆ. ಈ ಮಧ್ಯೆ 10ನೇ ತರಗತಿಗಳು ಉತ್ತೀರ್ಣವಾದ ಬಳಿಕ ಮುಂದೇನು? ಎಂಬ ಗೊಂದಲ ಹಲವರಿಗೆ ಉಂಟಾಗುತ್ತದೆ. ಯಾವ ಕೋರ್ಸ್ ತೆಗೆದುಕೊಳ್ಳಬೇಕು? ಮುಂದಿನ ಹಂತ, ಯಾವೆಲ್ಲ ವಿಷಯಗಳು ಇರುತ್ತವೆ, ವೃತ್ತಿ ಬದುಕಿಗೆ ಇಂದಿ ಆಯ್ಕೆ ಹೇಗೆಲ್ಲ ಮಹತ್ವ ಪಡೆಯುತ್ತದೆ ಎಂಬ ವಿವರ ಇಲ್ಲಿದೆ.
ಕರ್ನಾಟಕದ ಪಿಯು ಕಾಲೇಜುಗಳಿಗೆ ಸೇರಲು ಯೋಜಿಸುವ ಎಸ್‌ಎಸ್‌ಎಲ್‌ಸಿ ಉತ್ತೀರ್ಣ ಅಭ್ಯರ್ಥಿಗಳಿಗೆ ಇಲ್ಲೊಂದು ಸೂಕ್ತ ಮಾರ್ಗದರ್ಶನ ಇದೆ. ವಿದ್ಯಾರ್ಥಿಗಳು 10ನೇ ತರಗತಿಯ ಬೋರ್ಡ್ ಪರೀಕ್ಷೆ 2026 (SSLC Exam 2026) ಉತ್ತೀರ್ಣವಾಗುತ್ತಿದ್ದಂತೆ ಮುಂದಿನ ಹಂತವೇನು? ಎಂಬುದರ ಬಗ್ಗೆ ಗೊಂದಲ ಬೇಡ. ನೀವು 'ಪ್ರಿ ಯೂನಿವರ್ಸಿಟಿ ಕಾಲೇಜು' ಅಥವಾ ಪಿಯು ಕಾಲೇಜು ಸೇರಿಕೊಳ್ಳಬಹುದು. ಇದು 2 ವರ್ಷಗಳ ಕೋರ್ಸ್ ಆಗಿರುತ್ತದೆ. ನಂತರ ಪದವಿ ಕಾಲೇಜುಗಳಿಗೆ ಪ್ರವೇಶ ಪಡೆಯುತ್ತೀರಿ.

ಎಸ್‌ಎಸ್‌ಎಲ್‌ಸಿ ಬಳಿಕ ಮುಂದೇನು?
ಯಾವುದೇ ಇತರ ವೃತ್ತಿಪರ ಕೋರ್ಸ್ ಅಥವಾ ಪದವಿ ಕೋರ್ಸ್ ಪಡೆಯುವಾಗ ಮೊದಲು ವಿದ್ಯಾರ್ಥಿಗಳು ಪಿಯುಸಿ ಎರಡು ವರ್ಷ ಪೂರೈಸಿರಬೇಕಾಗುತ್ತದೆ. ಅಲ್ಲಿ ಸಹ ಬೋರ್ಡ್ ಪರೀಕ್ಷೆ ಇರುತ್ತದೆ. ಎಸ್‌ಎಸ್‌ಎಲ್‌ಸಿ ನಂತರ ಪಿಯು ಕಾಲೇಜಿಗೆ ದಾಖಲಾಗುವ ವಿದ್ಯಾರ್ಥಿಗಳು ಮೂರು ವಿಭಾಗಗಳಲ್ಲಿ ಆಯ್ಕೆ ಮಾಡಿಕೊಳ್ಳಬೇಕು. ಕಲೆ ಅಥವಾ ಮಾನವಶಾಸ್ತ್ರ, ವಾಣಿಜ್ಯ ಮತ್ತು ವಿಜ್ಞಾನ ಪೈಕಿ ಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು. ಇದೇ ಒಂದು ಮುಖ್ಯ ವಿಷಯವಾಗಿರುತ್ತದೆ. ನಂತರ ಪ್ರಥಮ ಭಾಷೆ ಜೊತೆಗೆ ಒಟ್ಟು ಇತರ ನಾಲ್ಕು ಕೋರ್ ವಿಷಯಗಳನ್ನು (ರಾಜಕೀಯ, ಸಮಾಜಶಾಸ್ತ್ರ, ಅರ್ಥಶಾಸ್ತ್ರ, ಕನ್ನಡ ಇಲ್ಲವೇ ಇಂಗ್ಲೀಷ್) ಆಯ್ಕೆ ಮಾಡಬೇಕಾಗುತ್ತದೆ.
ಪ್ರಥಮ ಭಾಷಾ ವಿಷಯ ಆಯ್ಕೆಗಳಲ್ಲಿ ಕನ್ನಡ, ಹಿಂದಿ, ಉರ್ದು, ಮಲಯಾಳಂ, ತೆಲುಗು, ಮರಾಠಿ, ಸಂಸ್ಕೃತ, ತಮಿಳು, ಜರ್ಮನ್, ಫ್ರೆಂಚ್ ಮತ್ತು ಅರೇಬಿಕ್ ವಿಷಯಗಳು ಸೇರಿವೆ. ಇಂದು ನೀವು SSLC ಪರೀಕ್ಷೆಯಲ್ಲಿ ತೆಗೆದುಕೊಳ್ಳುವ ಉತ್ತಮ ಅಂಕಗಳು ಸಹ ಮುಂದಿನ ಕೋರ್ಸ್ ಆಯ್ಕೆ ಮೇಲೆ ಪ್ರಭಾವ ಬೀರುತ್ತವೆ. ಹೆಚ್ಚಿನ ಅಂಕ ಪಡೆದರೆ ವಿಜ್ಞಾನ ವಿಷಯ ಆಯ್ಕೆಗೆ ಪೂರಕ ಅವಕಾಶ ಸಿಗುತ್ತದೆ. ಏಕೆಂದರೆ ಅದಕ್ಕೆ ಕಟ್ ಆಫ್ ಅಂಕ ಹೆಚ್ಚಿರುತ್ತದೆ. ತಕ್ಕ ಮಟ್ಟಿಗೆ ಅಂಕ ಗಳಿಸಿದರೆ ಕಲಾ ವಿಭಾಗ ಪಡೆಯಲು ತೊಂದರೆ ಇಲ್ಲ. ಏಕೆಂದರೆ ಅದಕ್ಕೆ ಕಟ್ ಆಫ್ ಮಾಕ್ಸ್ ಕಡಿಮೆ ಇರುತ್ತದೆ. ಇದೆಲ್ಲವನ್ನು ಯೋಚಿಸಿ ಮುಂದಿನ ಹೆಜ್ಜೆ ಇಡುವುದು ಸೂಕ್ತ.
ಕಲಾ ವಿಭಾಗ/ಮಾನವಶಾಸ್ತ್ರ ವಿಷಯಗಳು
ಇತಿಹಾಸ
ರಾಜಕೀಯ ವಿಜ್ಞಾನ
ಸಮಾಜಶಾಸ್ತ್ರ
ಮನೋವಿಜ್ಞಾನ
ಭೂಗೋಳ
ಶಿಕ್ಷಣ ಶಾಸ್ತ್ರ
ತರ್ಕಶಾಸ್ತ್ರ
ಗೃಹ ವಿಜ್ಞಾನ
ಐಚ್ಛಿಕ ಕನ್ನಡ ವಿಷಯ ಆಯ್ಕೆ ಮಾಡಿಕೊಳ್ಳಬಹುದು. ಇದರಲ್ಲಿ ಉತ್ತೀರ್ಣವಾದ (ಪಿಯುಸಿ) ಬಳಿಕ ನೀವು ಪದವಿ ಹಂತದಲ್ಲಿ ಕಾನೂನು, ಸಮಾಜ ಸೇವೆಗಳು, ಪತ್ರಿಕೋದ್ಯಮ, ವಿನ್ಯಾಸ ಮತ್ತು ನೀತಿ ನಿರೂಪಣೆ ವಿಷಯಗಳ ಮೇಲೆ ವೃತ್ತಿಪರ ಕೋರ್ಸ್ ಆಯ್ಕೆ ಮಾಡಿಕೊಳ್ಳಬಹುದಾಗಿದೆ.
ವಾಣಿಜ್ಯ ವಿಷಯಗಳು
ಅರ್ಥಶಾಸ್ತ್ರ
ವ್ಯಾಪಾರ ಅಧ್ಯಯನ
ಕಂಪ್ಯೂಟರ್ ವಿಜ್ಞಾನ
ಅಂಕಿಅಂಶಗಳು
ಲೆಕ್ಕಶಾಸ್ತ್ರ
ಇತಿಹಾಸ
ಮೂಲ ಗಣಿತ
ಭೂಗೋಳ
ಹಣಕಾಸು ವಿಷಯ ಆಯ್ಕೆ ಮಾಡಿಕೊಳ್ಳಬಹುದು. ಮುಂದೆ ಪದವಿ ಹಂತದಲ್ಲಿ ಕಾಮರ್ಸ್ ವಿದ್ಯಾರ್ಥಿಗಳು ಲೆಕ್ಕಶಾಸ್ತ್ರ, ಕಂಪನಿ ಕಾರ್ಯದರ್ಶಿ, ಹಣಕಾಸು ಯೋಜನೆ, ಚಾರ್ಟರ್ಡ್ ವಿಶ್ಲೇಷಕರು, ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದ ಇತರ ಪದವಿ ಕೋರ್ಸ್ ಮಾಡಿಕೊಳ್ಳಬಹುದು.
ವಿಜ್ಞಾನ ವಿಷಯಗಳು
ಭೌತಶಾಸ್ತ್ರ
ಜೀವಶಾಸ್ತ್ರ
ಗಣಿತಶಾಸ್ತ್ರ
ಭೂವಿಜ್ಞಾನ
ಕಂಪ್ಯೂಟರ್ ವಿಜ್ಞಾನ
ಎಲೆಕ್ಟ್ರಾನಿಕ್ಸ್
ರಸಾಯನಶಾಸ್ತ್ರ
ಗೃಹ ವಿಜ್ಞಾನ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ವಿದ್ಯಾರ್ಥಿಗಳು ಔಷಧ, ಎಂಜಿನಿಯರಿಂಗ್, ಸಂಶೋಧನೆ, ಸಾಫ್ಟ್‌ವೇರ್ ಅಭಿವೃದ್ಧಿ ಮತ್ತು ಮಾನವಶಾಸ್ತ್ರದಲ್ಲಿ ಪದವಿ ಪೂರ್ಣಗೊಳಿಸಬಹುದು. ಆದ್ದರಿಂದ ಪಿಯುಸಿ ಪ್ರವೇಶಿಸುವಾಗ ಭವಿಷ್ಯದ ಪದವಿ ವೃತ್ತಿ ಕೋರ್ಸ್‌ಗಳನ್ನು ಗಮನದಲ್ಲಿಟ್ಟುಕೊಂಡು ಆಯ್ಕೆ ಮಾಡಿಕೊಳ್ಳಬೇಕು.
ಇಂದಿನ ಆಯ್ಕೆ ವೃತ್ತಿ ಬದುಕಿಗೆ ಅಡಿಪಾಯ
10ನೇ ತರಗತಿವರೆಗೆ ಎಲ್ಲ ಮಕ್ಕಳ ಒಂದೇ ವಿಧದ ವಿಷಯ ಕಳಿಯುತ್ತಾರೆ. ಪಿಯುಸಿಯಿಂದ ವಿಷಯ ಮತ್ತು ಕೋರ್ಸ್‌ಗಳ ಆಯ್ಕೆಯ ಹಂತ ಶುರುವಾಗುತ್ತದೆ. ಆಗ ಮಕ್ಕಳು ಭವಿಷ್ಯದಲ್ಲಿ ತಾವೇನಾಗಬೇಕೆಂದು ಅರಿತು ಆಯ್ಕೆ ಮಾಡಿಕೊಳ್ಳಬೇಕು. ಅಂದಿನ ಆಯ್ಕೆ ವೃತ್ತಿ ಜೀವನಕ್ಕೆ ಅಡಿಪಾಯವಾಗಿರುತ್ತದೆ. ಯಾರ ಒತ್ತಡಕ್ಕೆ ಮಣಿಯದೇ ಸೂಕ್ತ ವಿಷಯ, ಕೋರ್ಸ್ ಆಯ್ಕೆ ಮಾಡಿಕೊಳ್ಳಿ. ಅದಕ್ಕು ಮೊದಲು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕದಿಂದ ಉತ್ತೀರ್ಣರಾಗಲು ಪ್ರಾಮಾಣಿಕ ಪ್ರಯತ್ನದಿಂದ ಅಭ್ಯಾಸ ನಡೆಸಬೇಕು. ಎಸ್‌ಎಸ್‌ಎಲ್‌ಸಿ ಅಂಕಗಳು ಭವಿಷ್ಯದಲ್ಲಿ ಉದ್ಯೋಗದ ಹಂತದವರೆಗೂ ಪರಿಣಾಮ ಭೀರುತ್ತವೆ.












Click it and Unblock the Notifications