ಕೋಮುಗಲಭೆ ಆಕಸ್ಮಿಕ ಎಂದ ಗೃಹಸಚಿವರೇ ಈ ಪ್ರಶ್ನೆಗಳಿಗೆ ಉತ್ತರ ಕೊಡಿ! ವ್ಯಾಪಕ ಜನಾಕ್ರೋಶ
ನಾಗಮಂಗಲ ಕೋಮುಗಲಭೆ ವಿಚಾರದಲ್ಲಿ ಇದೀಗ ಗೃಹಸಚಿವ ಜಿ. ಪರಮೇಶ್ವರ್ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. 10ಕ್ಕೂ ಹೆಚ್ಚು ಬೈಕ್ ಸುಟ್ಟು, 13ಕ್ಕೂ ಹೆಚ್ಚು ಬಟ್ಟೆ ಅಂಗಡಿಗಳಿಗೆ ಬೆಂಕಿ ಹಚ್ಚಿ, ಕಲ್ಲು ತೂರಾಟ ಮಾಡಿ, ಸಾರ್ವಜನಿಕವಾಗಿ ಮಚ್ಚು, ಲಾಂಗ್ ಹಿಡಿದು ದಾಂಧಲೆ ಮಾಡಿದ್ದರೂ, ಇದೊಂದು ಆಕಸ್ಮಿಕ ಸಣ್ಣ ಘಟನೆ ಎಂದು ಪರಮೇಶ್ವರ್ ನೀಡಿರುವ ಹೇಳಿಕೆಗೆ ಜನಾಕ್ರೋಶ ವ್ಯಕ್ತವಾಗುತ್ತಿದೆ.
ನಾಗಮಂಗಲ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಗೃಹಸಚಿವ ಜಿ. ಪರಮೇಶ್ವರ್, ಇದನ್ನು ಕೋಮುಗಲಭೆ ಎನ್ನಲು ಆಗಲ್ಲ, ಒಬ್ಬರಿಗೊಬ್ಬರು ಹೊಡೆದಾಂಡಿಕೊಂಡಿದ್ದಾರೆ. ಇದೊಂದು ಆಕಸ್ಮಿಕ ಘಟನೆ ಎಂದಿರುವ ಗೃಹಸಚಿವರು, ಘರ್ಷಣೆ ಬಳಿಕ ಎಡಿಜಿಪಿ ಸೇರಿದಂತೆ ಹಲವು ಅಧಿಕಾರಿಗಳು ಸ್ಥಳದಲ್ಲಿದ್ದು ಪರಿಸ್ಥಿತಿ ನಿಯಂತ್ರಿಸಿದ್ದಾರೆ ಎಂದಿದ್ದರು.

ಇಂತಹ ಸಣ್ಣ ಘಟನೆಗಳಿಗೆ ಹೆಚ್ಚಿನ ಪ್ರಚಾರ ಕೊಡಬೇಡಿ. ಪರಿಸ್ಥಿತಿ ಈಗಾಗಲೇ ನಿಯಂತ್ರಣದಲ್ಲಿದೆ. ಪೊಲೀಸರು ಎಲ್ಲಾ ರೀತಿಯ ಭದ್ರತೆ ತೆಗೆದುಕೊಂಡಿದ್ದರು. ಘಟನೆಗೆ ಸಂಬಂಧಿಸಿದಂತೆ 52 ಜನರನ್ನು ಬಂಧಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡುತ್ತಿದ್ದು ಇನ್ನಷ್ಟು ಜನರನ್ನು ಬಂಧಿಸಲಾಗುವುದು. ಮೇಲ್ನೋಟಕ್ಕೆ ಇದು ರಾಜಕೀಯ ಪ್ರೇರಿತ ಘಟನೆ ಎನಿಸುತ್ತಿಲ್ಲ, ರಾಜಕೀಯ ಟೀಕೆಗಳಿಗೆ ನಾನು ಉತ್ತರ ಕೊಡುವುದಿಲ್ಲ ಎಂದು ಹೇಳಿದರು.
ಒಂದು ಪೂರ್ವನಿಯೋಜಿತ cold-blooded ಕೋಮುಗಲಭೆಯನ್ನ 'ಆಕಸ್ಮಿಕ' ಎನ್ನುತ್ತೀರಲ್ಲ ಗೃಹ ಸಚಿವ @DrParameshwara ಅವರೇ, ನಿಮ್ಮ ಸರ್ಕಾರಕ್ಕೆ ಮುಸ್ಲಿಂ ಮತಾಂಧರ ಮೇಲೆ ಯಾಕಿಷ್ಟು ವ್ಯಾಮೋಹ?
— R. Ashoka (@RAshokaBJP) September 12, 2024
ಮತಾಂಧರು ಆಕಸ್ಮಿಕವಾಗಿ ಕಲ್ಲು ಎಸೆದರಾ?
ಮತಾಂಧರು ಆಕಸ್ಮಿಕವಾಗಿ ಚಪ್ಪಲಿ ಎಸೆದಾರಾ?
ಮತಾಂಧರು ಆಕಸ್ಮಿಕವಾಗಿ ವಾಹನಗಳಿಗೆ ಬೆಂಕಿ ಹಚ್ಚಿದರಾ?
ಮತಾಂಧರು… pic.twitter.com/Fxr436EbEo
ಸಚಿವರ ವಿರುದ್ಧ ಭಾರಿ ಜನಾಕ್ರೋಶ
ಇನ್ನು ಗೃಹ ಸಚಿವ ಪರಮೇಶ್ವರ್ ಅವರ ಹೇಳಿಕೆ ವಿಪಕ್ಷಗಳನ್ನು ಮಾತ್ರವಲ್ಲ ಜನರಿಗೂ ಕೂಡ ಸಿಟ್ಟು ತರಿಸಿದೆ. ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಗೃಹ ಸಚಿವರ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗುತ್ತಿದ್ದು, ಕರ್ನಾಟಕ ಕಂಡ ಅತ್ಯಂತ ದುರ್ಬಲ ಗೃಹಸಚಿವ ಎಂದು ಟೀಕಿಸುತ್ತಿದ್ದಾರೆ. ನಾಗಮಂಗಲ ಘಟನೆಯನ್ನು ಆಕಸ್ಮಿಕ ಎಂದು ಕರೆದಿದ್ದಕ್ಕೆ, ಇದೀಗ ಪರಮೇಶ್ವರ್ ಅವರನ್ನು ಕೂಡ ಜನ ಆಕಸ್ಮಿಕ ಗೃಹಸಚಿವ ಎಂದು ಕರೆಯುತ್ತಿದ್ದಾರೆ.
ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಅಸಮರ್ಥ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ರಿಪೋರ್ಟ್ ಕಾರ್ಡ್.#HinduVirodhiCongress #karnataka #Mandya #nagamangala #nagamangalaincident #GaneshaProcession pic.twitter.com/GYNjrdQuFv
— BJP Karnataka (@BJP4Karnataka) September 12, 2024
ವಿಪಕ್ಷ ನಾಯಕ ಆರ್. ಅಶೋಕ್ ಕೂಡ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಗೃಹ ಸಚಿವರಿಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಒಂದು ಪೂರ್ವ ನಿಯೋಜಿತ ಕೋಮುಗಲಭೆಯನ್ನು ಆಕಸ್ಮಿಕ ಎನ್ನತ್ತೀರಲ್ಲ ಗೃಹಸಚಿವರೇ, ನಿಮ್ಮ ಸರ್ಕಾರಕ್ಕೆ ಮುಸ್ಲಿಂ ಮತಾಂಧರ ಮೇಲೆ ಯಾಕಿಷ್ಟು ವ್ಯಾಮೋಹ? ಎಂದು ಪ್ರಶ್ನೆ ಮಾಡಿದ್ದಾರೆ.
ರಾಜ್ಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಾಗಲೂ ಇದೊಂದು ಸಣ್ಣ ಘಟನೆ, ಇದು ಆಕಸ್ಮಿಕ ಘಟನೆ ಎನ್ನುವ ಗೃಹ ಸಚಿವ @DrParameshwara ಅವರೇ ಉತ್ತರಿಸಿ.@siddaramaiah@INCKarnataka@DKShivakumar@NCheluvarayaS pic.twitter.com/YMBaafIN9c
— Janata Dal Secular (@JanataDal_S) September 12, 2024
ಮತಾಂಧರು ಆಕಸ್ಮಿಕವಾಗಿ ಕಲ್ಲು ಎಸೆದರಾ? ಮತಾಂಧರು ಆಕಸ್ಮಿಕವಾಗಿ ಚಪ್ಪಲಿ ಎಸೆದಾರಾ? ಮತಾಂಧರು ಆಕಸ್ಮಿಕವಾಗಿ ವಾಹನಗಳಿಗೆ ಬೆಂಕಿ ಹಚ್ಚಿದರಾ? ಮತಾಂಧರು ಆಕಸ್ಮಿಕವಾಗಿ ಹಿಂದೂಗಳ ಮೇಲೆ ಹಲ್ಲೆ ಮಾಡಿದರಾ? ಎಂದಿರುವ ಅವರು ಹಿಂದೂಗಳು ಯಾವುದೋ ಕೆಟ್ಟ ಘಳಿಗೆಯಲ್ಲಿ ಆಕಸ್ಮಿಕವಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ ಆಕಸ್ಮಿಕವಾಗಿ ಈ ಲಜ್ಜೆಗೆಟ್ಟ ಸರ್ಕಾರವನ್ನು ಅಧಿಕಾರಕ್ಕೆ ತಂದು ಬಿಟ್ಟಿದ್ದಾರೆ. ಗಣೇಶನ ವಿಸರ್ಜನೆಗೆ ಅಡ್ಡಿಪಡಿಸಿದ ಈ ಹಿಂದೂ ವಿರೋಧಿ ಸರ್ಕಾರವನ್ನ ಕನ್ನಡಿಗರು ಶಾಶ್ವತವಾಗಿ ವಿಸರ್ಜನೆ ಮಾಡುವ ದಿನ ದೂರವಿಲ್ಲ. ನೋಡುತ್ತಿರಿ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪರಮೇಶ್ವರ್ ಅವರಿಗೆ ಜೆಡಿಎಸ್ ಪ್ರಶ್ನೆ
ಪರಮೇಶ್ವರ್ ಅವರ ಹೇಳಿಕೆಗೆ ಜೆಡಿಎಸ್ ಕೂಡ ವಿರೋಧ ವ್ಯಕ್ತಪಡಿಸಿದ್ದು ಹಲವು ಪ್ರಶ್ನೆಗಳಿಗೆ ಉತ್ತರ ಕೊಡಿ ಎಂದು ಕೇಳಿದೆ. ಗುಂಪು ಸೇರಿ ಪೊಲೀಸರ ಮೇಲೆಯೇ ಕಲ್ಲು ತೂರಾಟ ಮಾಡಿದ್ದು ಆಕಸ್ಮಿಕ ಘಟನೆಯೇ? ಪುಂಡರು ಕತ್ತಿ, ತಲ್ವಾರ್ ಹಿಡಿದು ಮೆರವಣಿಗೆ ವೇಳೆ ಭಯ ಹುಟ್ಟಿಸುವುದು ಆಕಸ್ಮಿಕ ಘಟನೆಯೇ? ಬಂಧಿಸಿರುವ ಅಮಾಯಕ ಹಿಂದೂಗಳನ್ನು ತಕ್ಷಣವೇ ಬಿಡುಗಡೆ ಮಾಡಿ, ಒಂದು ಸಮುದಾಯದ ತುಷ್ಟೀಕರಣವನ್ನು ಮೊದಲು ಬಿಡಿ ಎಂದು ಹೇಳಿದೆ.












Click it and Unblock the Notifications