ಪಿಎಸ್ಐ ನೇಮಕಾತಿ ಅಕ್ರಮ: ಬಂಧಿತ 38 ಆರೋಪಿಗಳ ಹಿನ್ನೆಲೆ ಏನು ಗೊತ್ತಾ?

ಬೆಂಗಳೂರು, ಮೇ. 02: ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಕಲಬುರಗಿ ವಿಭಾಗದಲ್ಲಿ ಕಿಂಗ್‌ಪಿನ್ ಗಳು ಮತ್ತು ಅಭ್ಯರ್ಥಿಗಳು ಸೇರಿದಂತೆ 26 ಆರೋಪಿಗಳನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಇನ್ನು ಬೆಂಗಳೂರು ಭಾಗದಲ್ಲಿ ನಡೆದಿರುವ ಅಕ್ರಮಕ್ಕೆ ಸಂಬಂಧಿಸಿದಂತೆ ಈವರೆಗೂ 12 ಮಂದಿಯನ್ನು ಬಂಧಿಸಿದ್ದಾರೆ. ಮೇ. 2 ಕ್ಕೆ ಬಂಧಿತರ ಸಂಖ್ಯೆ 38ಕ್ಕೇರಿದೆ.

ಬೆಂಗಳೂರಿನ ಪರೀಕ್ಷಾ ಕೇಂದ್ರಗಳಲ್ಲಿ ನಡೆದಿರುವ ಅಕ್ರಮಕ್ಕೆ ಸಂಬಂಧಿಸಿದಂತೆ ಇನ್ನೂ 10 ಅಭ್ಯರ್ಥಿಗಳು ಶೀಘ್ರದಲ್ಲಿ ಬಂಧನಕ್ಕೆ ಒಳಗಾಗಿದ್ದು, ಬಂಧಿತರ ಸಂಖ್ಯೆ ಕೆಲವೇ ದಿನದಲ್ಲಿ ಐವತ್ತು ಮುಟ್ಟಲಿದೆ.

ಪಿಎಸ್ಐ ಹುದ್ದೆ ವಂಚಿತ ವ್ಯಕ್ತಿಯೊಬ್ಬ ನೀಡಿದ ದೂರಿನ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ 545 ಪಿಎಸ್ಐ ಹುದ್ದೆಗಳ ನೇಮಕಾತಿ ಅಕ್ರಮವನ್ನು ಸಿಐಡಿ ತನಿಖೆಗೆ ವಹಿಸಿತ್ತು. ಈ ಕುರಿತು ಕಲಬುರಗಿಯಲ್ಲಿ ಮೊದಲ ಎಫ್ಐಆರ್ ದಾಖಲಿಸಿ ಅದನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿತ್ತು. ಸಿಐಡಿ ಎಸ್ಪಿ ರಾಘವೇಂದ್ರ ಹೆಗಡೆ ಅವರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.

ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ನಾನಾ ರೀತಿಯ ಅಕ್ರಮ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದ್ದಂತೆ ನೇಮಕಾತಿ ಪರೀಕ್ಷೆಯನ್ನು ಸರ್ಕಾರ ರದ್ದು ಪಡಿಸಿತ್ತು. ಇದರ ಬೆನ್ನಲ್ಲೇ ಪೊಲೀಸ್ ನೇಮಕಾತಿ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರನ್ನು ಬದಲಿಸಿತ್ತು. ಅಮೃತ್ ಪೌಲ್ ಅವರನ್ನು ವರ್ಗಾವಣೆ ಮಾಡಿದ್ದ ಸರ್ಕಾರ ಆ ಜಾಗಕ್ಕೆ ಸಿಬಿಐ ಹಿನ್ನೆಲೆಯುಳ್ಳ ಖಡಕ್ ಅಧಿಕಾರಿ ಹಿತೇಂದ್ರ ಅವರನ್ನು ವರ್ಗಾವಣೆ ಮಾಡಿತ್ತು. ಹಿತೇಂದ್ರ ಅವರು ವರ್ಗಾವಣೆಗೊಂಡ ಎರಡೇ ದಿನದಲ್ಲಿ ಪಿಎಸ್ಐ ನೇಮಕಾತಿ ಅಕ್ರಮ ಕುರಿತು ವರದಿ ನೀಡಿದ್ದು, ಪರೀಕ್ಷೆಯನ್ನು ಸರ್ಕಾರ ರದ್ದು ಪಡಿಸಿದ್ದು ಗಮನಾರ್ಹ.

ಇನ್ನು ಪಿಎಸ್ಐ ನೇಮಕಾತಿಗೆ ಸಂಬಂಧಿಸಿದಂತೆ ಸಿಐಡಿ ವಿವಿಧ ತನಿಖಾ ತಂಡಗಳು ತನಿಖೆ ನಡೆಸುತ್ತಿವೆ. ಕಲಬುರಗಿಯಲ್ಲಿ ದಾಖಲಾಗಿರುವ ಒಂದು ಎಫ್ಐಆರ್ ಸಂಬಂಧಿಸಿದಂತೆ ಹಲವು ತಂಡ ತನಿಖೆ ನಡೆಸುತ್ತಿವೆ. ಬೆಂಗಳೂರಿನಲ್ಲಿ ಭಾನುವಾರ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಮತ್ತೊಂದು ದೂರು ದಾಖಲಾಗಿದ್ದು, ಈ ಕುರಿತು ಪ್ರತ್ಯೇಕ ತಂಡಗಳು ತನಿಖೆ ನಡೆಸುತ್ತಿವೆ. ಒಂದೇ ದಿನ 12 ಮಂದಿಯನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಉಳಿದವರನ್ನು ಸೋಮವಾರ ವಿಚಾರಣೆಗೆ ಕರೆಯಲಾಗಿದೆ.

PSI Recruitment scam: CID officials arrested 38 Persons in Connection with PSI Scam till Date

ಬಂಧನಕ್ಕೆ ಒಳಗಾಗಿರುವ ಅರೋಪಿಗಳ ವಿವರ:

1 ಆರ್ ಡಿ ಪಾಟೀಲ್, ಕಿಂಗ್‌ಪಿನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ , ಅಫಜಲಪುರ,

2 ಮಹಾಂತೇಶ್ ಪಾಟೀಲ್ ಕಿಂಗ್‌ಪಿನ್, ಕಿಂಗ್‌ಪಿನ್ ಸಹೋದರ, ಅಫಜಲಪುರ

3 ದಿವ್ಯಾ ಹಾಗರಗಿ, ಕಿಂಗ್‌ಪಿನ್, ಜ್ಞಾನಜ್ಯೋತಿ ಶಾಲೆಯ ಒಡತಿ & ಬಿಜೆಪಿ ನಾಯಕಿ,

4 ರಾಜೇಶ್ ಹಾಗರಗಿ, ದಿವ್ಯಾ ಪತಿ ಹಾಗೂ ಜ್ಞಾನಜ್ಯೋತಿ ಶಾಲೆ ಅಧ್ಯಕ್ಷ

5 ಮಂಜುನಾಥ್ ಮೇಳಕುಂದಿ , ಕಿಂಗ್‌ ಪಿನ್, ನೀರಾವರಿ ಇಲಾಖೆ ಇಂಜಿನಿಯರ್,

6 ವೀರೇಶ್, ಅಭ್ಯರ್ಥಿ

7 ಹಯ್ಯಾಳಿ ದೇಸಾಯಿ, ಬ್ಲೂಟೂತ್ ಅಭ್ಯರ್ಥಿ

8 ವಿಶಾಲ್, ಬ್ಲೂಟೂತ್ ಅಭ್ಯರ್ಥಿ

9 ಎನ್. ವಿ ಸುನೀಲ್, ಅಭ್ಯರ್ಥಿ

10 ಪ್ರವೀಣ್, ಅಭ್ಯರ್ಥಿ

11 ಅರುಣ್, ಅಭ್ಯರ್ಥಿ

12 ಚೇತನ್ ನಂದಗಾಂವ್, ಅಭ್ಯರ್ಥಿ

13 ಅರ್ಚನಾ, ಜ್ಞಾನಜ್ಯೋತಿ ಶಾಲೆ ಶಿಕ್ಷಕಿ

14 ಸುನೀತಾ, ಜ್ಞಾನಜ್ಯೋತಿ ಶಾಲೆ ಶಿಕ್ಷಕಿ

15 ಮಲ್ಲಿಕಾರ್ಜುನ ಪಾಟೀಲ್ , ಸಹಾಯ ಮಾಡಿದವನು

16 ರುದ್ರಗೌಡ ಪಾಟೀಲ್ ಸಿ.ಆರ್ ಪೇದೆ ಹಾಗೂ ಮಧ್ಯವರ್ತಿ

17 ಶರಣಬಸಪ್ಪ, ಅಭ್ಯರ್ಥಿಗಳಿಗೆ ಸಹಾಯ ಮಾಡಿದವ

18 ಜ್ಯೋತಿ ಪಾಟೀಲ್, ಮಧ್ಯವರ್ತಿ

19 ಸುಮಾ, ಪರೀಕ್ಷಾ ಮೇಲ್ವಿಚಾರಕಿ

20 ಸಿದ್ದಮ್ಮ, ಪರೀಕ್ಷಾ ಮೇಲ್ವಿಚಾರಕಿ

21 ಸಾವಿತ್ರಿ, ಪರಿಕ್ಷಾ ಮೇಲ್ವಿಚಾರಕಿ

22 ಸುರೇಶ್ ಕಾಟೇಗಾಂವ್, ಮಹಾರಾಷ್ಟ್ರ ಉದ್ಯಮಿ, ದಿವ್ಯಾ ಹಾಗರಗಿಗೆ ರಕ್ಷಣೆ ನೀಡಿದವ

23 ಕಾಳಿದಾಸ ಸುರೇಶ್ ಕಾಟೇಗಾಂವ್, ಸಹಚರ ದಿವ್ಯಾಗೆ ಸಹಾಯ ಮಾಡಿದವ

24 ಸದ್ದಾಂ ಹುಸೇನ್, ದಿವ್ಯಾ ಹಾಗರಗಿ ಕಾರು ಚಾಲಕ,

25 ಶ್ರೀಧರ್ ಪವಾರ್ , ಹಣ ಕೊಡದೆ ಇರೋದಕ್ಕೆ ನೇಮಕಾತಿ ಅಕ್ರಮವನ್ನ ಬಯಲಿಗೆ ತಂದಿದ್ದ ಆರೋಪಿ

26 ಕಾಶಿನಾಥ್ ಚಿಲ್ , ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಹೆಡ್ ಮಾಸ್ಟರ್

ಬೆಂಗಳೂರಿನಲ್ಲಿ ಬಂಧನಕ್ಕೆ ಒಳಗಾಗಿರುವ ಅಭ್ಯರ್ಥಿಗಳು:

27)ರಘುವೀರ್ ಹೆಚ್ ಯು ಅಭ್ಯರ್ಥಿ,

28)ಚೇತನ್ ಕುಮಾರ್.ಎಂ ಸಿ . ಅಭ್ಯರ್ಥಿ,

29)ವೆಂಕಟೇಶ್ ಗೌಡ ಸಿ, ಅಭ್ಯರ್ಥಿ,

30) ಮಮತೇಸ್ ಗೌಡ, ಅಭ್ಯರ್ಥಿ,

31) ಮಧು ಆರ್, ಅಭ್ಯರ್ಥಿ,

32)ದಿಲೀಪ್ ಕುಮಾರ್ ಸಿಕೆ. ಅಭ್ಯರ್ಥಿ,

33)ಪ್ರವೀಣ್ ಕುಮಾರ್‌ ಹೆಚ್‌ ಆರ್, ಅಭ್ಯರ್ಥಿ,

34)ಸೂರ್ಯನಾರಾಯಣ,ಅಭ್ಯರ್ಥಿ,

35) ನಾಗರಾಜ ಎಂ.ಸಿ. ಅಭ್ಯರ್ಥಿ,

36) ಜಾಗೃತ್ ಎಸ್. ಅಭ್ಯರ್ಥಿ,

37) ಗಜೇಂದ್ರ ಬಿ, ಅಭ್ಯರ್ಥಿ,

38) ಸೋಮನಾಥ್ ಮಲಿಕಾರ್ಜುನಯ್ಯ ಅಭ್ಯರ್ಥಿ,

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+