ಮಧು ಮತ್ತು ಹರೀಶ್ ಬಾಬು ಪೊಲೀಸರಿಗೆ ಸಿಕ್ಕಿದ್ದು ಹೇಗೆ?
ಬೆಂಗಳೂರು, ಅಕ್ಟೋಬರ್ 20 : ಪಿಎಸ್‌ಐ ಜಗದೀಶ್ ಅವರನ್ನು ಹತ್ಯೆ ಮಾಡಿದ ಆರೋಪಿಗಳು ನಾಗ್ಪುರದಲ್ಲಿ ಸಿಕ್ಕಿಬಿದ್ದಿದ್ದಾರೆ. ಹರೀಶ್ ಬಾಬು ಮತ್ತು ಮಧು ಪೊಲೀಸರ ಕೈಗೆ ಸಿಕ್ಕಿಬಿದ್ದದ್ದು ಹೇಗೆ ಎಂಬುದು ಪ್ರಶ್ನೆ. ಕೈಯಲ್ಲಿ ಹಣವಿಲ್ಲದೇ ಪರದಾಡಿದ ಇಬ್ಬರು ಸಹಾಯಮಾಡುವಂತೆ ಸ್ನೇಹಿತನಿಗೆ 87ಕ್ಕೂ ಅಧಿಕ ಕರೆಗಳನ್ನು ಮಾಡಿದ್ದರು.
ಶುಕ್ರವಾರ ಮಧ್ಯಾಹ್ನ ನೆಲಮಂಗಳ ಬಳಿ ಪಿಎಸ್ಐ ಜಗದೀಶ್ ಹತ್ಯೆ ಮಾಡಿ, ಪೇದೆ ವೆಂಕಟೇಶಮೂರ್ತಿ ಅವರ ಮೇಲೆ ಹಲ್ಲೆ ಮಾಡಿ ಬೈಕ್ ಕಸಿದುಕೊಂಡು ಪರಾರಿಯಾದ ಮಧು ಮತ್ತು ಹರೀಶ್ ಬಾಬು. ಅದೇ ಬೈಕ್‌ನಲ್ಲಿ ತುಮಕೂರಿಗೆ ಹೋಗಿ ಅದಲ್ಲಿಂದ ಆಂಧ್ರಪ್ರದೇಶಕ್ಕೆ ಹೋಗಿದ್ದರು. [ಜಗದೀಶ್ ಕೊಂದ ಮಧು ಬಗ್ಗೆ ಓದಿ]

ಕೈಯಲ್ಲಿದ್ದ ಹಣ ಖಾಲಿಯಾಗುತ್ತಾ ಬಂದಾಗ ಕರ್ನೂಲ್‌ನಲ್ಲಿನ ಸ್ನೇಹಿತನಿಗೆ ಮಧು ಹಲವು ಬಾರಿ ಕರೆ ಮಾಡಿ ಸಹಾಯ ಮಾಡುವಂತೆ ಕೇಳಿಕೊಂಡಿದ್ದಾನೆ. ಇಬ್ಬರು ಆರೋಪಿಗಳು ದೆಹಲಿಗೆ ಹೋಗಲು ತಯಾರಿ ನಡೆಸಿದ್ದರು. ಆದರೆ, ಕೈಯಲ್ಲಿ ಹಣ ಇರದ ಕಾರಣ ಸಹಾಯ ಮಾಡುವಂತೆ ಸ್ನೇಹಿತನಿಗೆ ಕರೆ ಮಾಡಿದ್ದರು. [ಹಂತಕರನ್ನು ಹಿಡಿದ ಪೊಲೀಸರಿಗೆ 10 ಲಕ್ಷ ಬಹುಮಾನ]
ಮಧು 87ಕ್ಕೂ ಅಧಿಕ ಬಾರಿ ಸ್ನೇಹಿತನಿಗೆ ಹಣದ ಸಹಾಯ ಮಾಡುವಂತೆ ಕರೆ ಮಾಡಿದ್ದ. ಕರ್ನಾಟಕದ ಪೊಲೀಸರು ಆತನ ಕರೆಗಳ ಮಾಹಿತಿಯನ್ನು ಸಂಗ್ರಹಣೆ ಮಾಡುತ್ತಿದ್ದರು. ಹಣ ಬೇಕಾದರೆ ಕರ್ನೂಲ್‌ಗೆ ಬರುವಂತೆ ಆತ ಹೇಳಿದ್ದ. ಆದ್ದರಿಂದ ಅವರು ಕರ್ನೂಲ್‌ಗೆ ಬರಲು ತೀರ್ಮಾನಿಸಿದ್ದರು. ಅಷ್ಟರಲ್ಲೇ ನಾಗ್ಪುರದಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. [ನಾಗ್ಪುರದಲ್ಲಿ ಸಿಕ್ಕಿಬಿದ್ದ ಮಧು, ಹರೀಶ್]
ಕುಟುಂಬದಲ್ಲಿ ಎಲ್ಲರೂ ಕಳ್ಳರೇ : ಮಧು ಮತ್ತು ಹರೀಶ್ ಬಾಬು ಒಬ್ಬರು ನಟೋರಿಯಸ್ ಕಳ್ಳರು. ವಾಹನ ಕಳ್ಳತನ, ಸರಗಳ್ಳತನ ಸೇರಿದಂತೆ ಹಲವು ಪ್ರಕರಣಗಳಲ್ಲಿ ಮಧು ಮತ್ತು ಹರೀಶ್ ಭಾಗಿಯಾಗಿದ್ದರು. ಮಧು ತಾಯಿ ಈ ಗ್ಯಾಂಗ್ ಮುನ್ನಡೆಸುತ್ತಿದ್ದಳು. ವಧು ನಾಪತ್ತೆಯಾದ ತಕ್ಷಣ ಪೊಲೀಸರ ಮೊದಲು ಆಕೆಯನ್ನು ಬಂಧಿಸಿದ್ದರು. ವಧು ಸಹೋದರ ರಘು ಸಹ ಕಳ್ಳತನದ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದ.
ಈ ಗುಂಪಿನಲ್ಲಿ ಸುಮಾರು 12 ಸದಸ್ಯರಿದ್ದಾರೆ ಎಂದು ಪೊಲೀಸರು ಅಂದಾಜಿಸಿದ್ದು ಮಧು ಮತ್ತು ಹರೀಶ್ ಬಾಬು ಸಂಬಂಧಿಕರು ಈ ಗುಂಪಿನ ಸದಸ್ಯರು. ಈ ಆರೋಪಿಗಳ ಬಂಧನದಿಂದಾಗಿ ಇನ್ನೂ ಹಲವಾರು ಪ್ರಕರಣಗಳ ಬಗ್ಗೆ ಮಾಹಿತಿ ಬಯಗಬೇಕಾಗಿದೆ.












Click it and Unblock the Notifications