Get Updates
Get notified of breaking news, exclusive insights, and must-see stories!

Property: ರಾಜ್ಯದಲ್ಲಿ ಆಸ್ತಿ ನೋಂದಣಿ ಕುರಿತು ಮಹತ್ವದ ಮಾಹಿತಿ

Property: ರಾಜ್ಯದಲ್ಲಿ ಆಸ್ತಿ ನೋಂದಣಿ ಕುರಿತು ಆಗಾಗ ಅಪ್ಡೇಟ್‌ ಮಾಹಿತಿಗಳು ಲಭ್ಯ ಆಗುತ್ತಲಿರುತ್ತವೆ. ಹಾಗೆಯೇ ಇದೀಗ ಮಾಲೀಕರು ತಮ್ಮ ಪ್ರಾಪರ್ಟಿ ನೋಂದಣಿಗೆ ಪಾಲನೆ ಮಾಡಬೇಕಾದ ಪ್ರಮುಖ ನಿಯಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಆಸ್ತಿ ಮಾಡಬೇಕೆನ್ನುವ ಆಸೆ ಯಾರಿಗಿರಲ್ಲ ಹೇಳಿ.. ಪ್ರತಿಯೊಬ್ನರಿಗೂ ಇದ್ದೇ ಇರುತ್ತದೆ. ಆದರೆ, ಕೆಲವರು ಈ ಕನಸನ್ನು ನೆರವೇರಿಸಿಕೊಂಡರೂ ಅದನ್ನು ತಮ್ಮ ಪಾಲಿಗೆ ಹೇಗೆ ಪಡೆಯುವುದು ಎನ್ನುವುದನ್ನು ಮರೆತು ಕೊನೆಗೆ ತುಂಬಾ ಕಚೇರಿಗಳಿಗೆ ಅಲೆದಾಡಿರುವ ಘಟನೆಗಳು ನಡೆದಿವೆ. ಆದರೆ, ಈಗಿನ ಕಾಲದಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ತುಂಬಾ ಬೆಳವಣಿಗೆಗಳು ಆಗಿದ್ದು, ಆಸ್ತಿ ನೋಂದಣಿ ಕೆಲಸ ತುಂಬಾ ಸುಲಭವಾಗಿಬಿಟ್ಟಿದೆ. ಆದರೂ, ಈ ಪ್ರಕ್ರಿಯೆ ಪೂರ್ಣಗೊಳಿಸಲು ಕೆಲಸ ನಿಯಮಗಳನ್ನು ಪಾಲನೆ ಮಾಡಲೇಬೇಕಾಗುತ್ತದೆ.

Property Important Information on Registration in Karnataka

ಆಸ್ತಿ ನೋಂದಣಿಗೆ ಜನರಲ್ ಪವರ್ ಆಟಾರ್ನಿ ಕಡ್ಡಾಯಗೊಳಿಸುವ ನೋಂದಣಿ ಕರ್ನಾಟಕ ಅಧಿನಿಯಮ 2025ಕ್ಕೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ. ಈ ಸಂಬಂಧ ರಾಜ್ಯ ಸರ್ಕಾರ ಸೋಮವಾರವಷ್ಟೇ ಅಧಿಕೃತ ರಾಜ್ಯ ಪತ್ರ ಹೊರಡಿಸಿದ್ದು, ಆ ದಿನದಿಂದಲೇ ಈ ಮಸೂದೆ ಜಾರಿಗೆ ಬರಲಿದೆ ಎಂದು ವರದಿ ಆಗಿದೆ.

ಇದು ನೋಂದಣಿ ಅಧಿನಿಯಮ 1908ರ ಕೇಂದ್ರ ಅಧಿನಿಯಮ 16 ಅನ್ನು ಮತ್ತಷ್ಟು ತಿದ್ದುಪಡಿ ಮಾಡಿ ಕೆಲವು ಬದಲಾವಣೆ ಒಳಗೊಂಡ ಮಸೂದೆ ಆಗಿದೆ. ಆಸ್ತಿ ನೋಂದಣಿಯನ್ನು ಸಂಪೂರ್ಣ ಡಿಜಟಲೀಕರಿಸುವ, ಪಾರದರ್ಶಕತೆ ಹೆಚ್ಚಿಸುವ ಬಗ್ಗೆ ಈ ತಿದ್ದುಪಡಿಯನ್ನು ಜಾರಿಗೊಳಿಸಲಾಗಿದೆ.

ಆಸ್ತಿ ವರ್ಗಾವಣೆಗೆ ಮೊದಲು ನಡೆಸುವ ಜನರಲ್ ಪವರ್ ಆಟಾರ್ನಿ ಸಹ ಕಡ್ಡಾಯವಾಗಿ ನೋಂದಣಿ ಮಾಡಬೇಕು. ಆಸ್ತಿ ವರ್ಗಾವಣೆ ವೇಳೆ ಪವರ್ ಆಫ್ ಅಟಾರ್ನಿ ಬರೆದು ಕೊಡುವವರು ಬದುಕಿರುವುದನ್ನು ಖಚಿತಪಡಿಸಲು ಸೂಕ್ತ ಪುರಾವೆ ನೀಡಬೇಕಾಗುತ್ತದೆ. ಇದು ಅಕ್ರಮ ಆಸ್ತಿ ವರ್ಗಾವಣೆ, ನೋಂದಣಿ, ಭೂಕಬಳಿಗೆ ಮತ್ತು ಒತ್ತುವರಿಯಂತ ಪ್ರಕರಣಗಳನ್ನು ತಪ್ಪಿಸಲಿದೆ.

ಇನ್ಮುಂದೆ ಕಂಡುಬರುವ ಉದ್ದೇಶಗಳಿಗಾಗಿ ಕರ್ನಾಟಕ ರಾಜ್ಯಕ್ಕೆ ಅನ್ವಯ ಆಗುವಂತೆ ನೋಂದಣಿ ಅಧಿನಿಯಮ, 1908 16 ಅನ್ನು ಮತ್ತಷ್ಟು ತಿದ್ದುಪಡಿ ಮಾಡುವುದು ಯುಕ್ತವಾಗಿದೆ. ಇದು ರಾಜ್ಯ ಸರ್ಕಾರವು ಸರ್ಕಾರಿ ರಾಜ್ಯಪತ್ರದಲ್ಲಿ ಅಧಿಸೂಚನೆಯ ಮೂಲಕ ಗೊತ್ತುಪಡಿಸಬಹುದಾದಂತಹ ದಿನಾಂಕದಂದು ಜಾರಿಗೆ ಬರಲಿದೆ.

ಸರ್ಕಾರಿ ಅಧಿಕಾರಿಗಳು ಅಥವಾ ಕೆಲವು ಸಾರ್ವಜನಿಕ ಕಾರ್ಯಕರ್ತರು ಬರೆದುಕೊಡುವ ದಸ್ತಾವೇಜುಗಳು, ಯಾರ ಸ್ಥಳೀಯ ಪರಿಮಿತಿಗಳೊಳಗೆ ದಸ್ತಾವೇಜಿನಲ್ಲಿ ಒಳಗೊಂಡಿರುವ ಸ್ಥಿರ ಸ್ಮೃತ್ತಿನ ಸಂಪೂರ್ಣ ಅಥವಾ ಯಾವುದೇ ಭಾಗವು ಇರುವುದೋ ಆ ಅಧಿಕಾರ ವ್ಯಾಪ್ತಿಯ ನೋಂದಣಿ ಅಧಿಕಾರಿಗೆ ದಸ್ತಾವೇಜುಗಳನ್ನು ವಿದ್ಯುನ್ಮಾನವಾಗಿ ಕಳುಹಿಸಬೇಕಾಗುತ್ತದೆ. ಮತ್ತು ಅಂತಹ ಅಧಿಕಾರಿಯು ಆತನ ಯುಕ್ತ ಪುಸ್ತಕ ಸಂಖ್ಯೆಯಲ್ಲಿ ಸದರಿ ವಿದ್ಯುನ್ಮಾನ ದಸ್ತಾವೇಜನ್ನು ದಾಖಲಿಸುತ್ತಾರೆ ಮತ್ತು ವಿದ್ಯುನ್ಮಾನವಾಗಿ ಅದನ್ನು ಸಂರಕ್ಷಿಸಬೇಕಾಗುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+