ಕರ್ನಾಟಕ ಬಜೆಟ್: ಯಾವ ಯಾವ ಜಿಲ್ಲೆಗೆ ಏನೇನು ಸಿಕ್ತು?

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 15: ಈ ಬಾರಿಯ ಬಜೆಟ್ ಸಿದ್ದರಾಮಯ್ಯ ಪಾಲಿಗೆ ಬಹು ಮುಖ್ಯವಾದ ಬಜೆಟ್. ಕರ್ನಾಟಕದಲ್ಲಿ ದಾಖಲೆಯ 12ನೇ ಬಾರಿಗೆ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ ಅವರಿಗೆ ಈ ಬಾರಿ ಸವಾಲಿನ ಬಜೆಟ್ ಆಗಿತ್ತು.

ಹೆಚ್ಚುತ್ತಿರುವ ಬಿಜೆಪಿ ವರ್ಚಸ್ಸು, ಮೋದಿ ಅಲೆ ನಡುವೆ ಕಾಂಗ್ರೆಸ್ ಬಚಾವೊ ಮಾದರಿಯ ಬಜೆಟ್ ಇದಾಗಿತ್ತು. ಹಾಗಾಗಿಯೇ, ಈ ಬಾರಿಯ ಬಜೆಟ್ ನಲ್ಲಿ ಅವರು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಾಂಗ್ರೆಸ್ ಪಕ್ಷದ ಬಲವರ್ಧನೆಯನ್ನು ಮುಂದಿಟ್ಟುಕೊಂಡು ಈ ಬಾರಿಯ ಬಜೆಟ್ ಮಂಡಿಸಿದ್ದಾರೆ.[21 ಜಿಲ್ಲೆಗಳಲ್ಲಿ 43 ಹೊಸ ತಾಲೂಕುಗಳ ರಚನೆ]

Programes, projects announced for districts in budget 2017

ಹಾಗಾದರೆ, ಯಾವ ಯಾವ ಜಿಲ್ಲೆಗಳಿಗೆ ಸಿದ್ದರಾಮಯ್ಯನವರು ಯಾವ ಯಾವ ಭಾಗ್ಯ ನೀಡಿದ್ದಾರೆ ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.[LIVE: ಬೆಂಗಳೂರಿನಲ್ಲಿ ಬಾಡಿಗೆ ಸೈಕಲ್ ಯೋಜನೆ]

1. ಬೆಂಗಳೂರು ನಗರ : ಬೆಂಗಳೂರು ನಗರ ಜಿಲ್ಲೆಯಲ್ಲಿ ನ್ಯಾಯಾಲಯ ನಿರ್ಮಾಣಕ್ಕಾಗಿ ನಾಲ್ಕು ಕೋಟಿ ನಿಗದಿ, ಚಿಕ್ಕಮಣ್ಣುಗುಡ್ಡ ಸಂಶೋಧನಾ ಕೇಂದ್ರದಲ್ಲಿ ಅರಣ್ಯ ಮಾಹಿತಿ ಕೇಂದ್ರದ ಅಭಿವೃದ್ಧಿ. ಬೈರಸಂದ್ರದಲ್ಲಿರುವ ಸಂಜಯ್ ಗಾಂಧಿ ಅಪಘಾತ ಹಾಗೂ ಅಸ್ಥಿ ಚಿಕಿತ್ಸಾ ಸಂಸ್ಥೆಯಲ್ಲಿ ಬೆನ್ನುಹುರಿಗಾಯ ಹಾಗೂ ಆಘಾತ ಚಿಕಿತ್ಸೆ ಒದಗಿಸಲು 10 ಹಾಸಿಗೆ ಸಾಮರ್ಥ್ಯದ ವೆಂಟಿಲೇಟರ್ ಸೌಲಭ್ಯವಿರುವ ಐಸಿಯು ಮತ್ತು 20 ಹಾಸಿಗೆಯ ಪಾಲಿ ಟ್ರಾಮಾ ಕೇಂದ್ರ ಸ್ಥಾಪನೆಗಾಗಿ 14.32 ಕೋಟಿ ರು. , ಇಂದಿರಾ ನಗರದಲ್ಲಿ 35 ಕೋಟಿ ರು. ವೆಚ್ಛದಲ್ಲಿ ಕರ್ನಾಟಕ ಇನ್ಸಿಟಿಟ್ಯೂಟ್ ಆಫ್ ಎಂಡೋಕ್ರೈನಾಲಜಿ ಹೊಸ ಆಸ್ಪತ್ರೆ ನಿರ್ಮಾಣ, ಮಿಂಟೋ ಆಸ್ಪತ್ರೆ ಅಭಿವೃದ್ಧಿಗೆ 10 ಕೋಟಿ ರು., ಬೆಂಗಳೂರಿನ ಕ್ಷಯ ರೋಗ ಆಸ್ಪತ್ರೆ ಆವರಣದಲ್ಲಿ ಚರ್ಮರೋಗ ಸಂಸ್ಥೆ ಪ್ರಾರಂಭ, ಇಂದಿರಾ ನಗರದ ಇಎಸ್ಐ ಆಸ್ಪತ್ರೆಯ ಉನ್ನತೀಕರಣ, ಕೋನದಾಸ ಪುರದಲ್ಲಿ 166 ಎಕರೆ ಭೂಮಿಯಲ್ಲಿ ನವೀನ ಮಾದರಿಯ ಟೌನ್ ಶಿಪ್. , ಕೆಂಪೇಗೌಡ ಬಡಾವಣೆಯ ಮೂಲಕ ಮೈಸೂರು ರಸ್ತೆಯಿಂದ ಮಾಗಡಿ ರಸ್ತೆವರೆಗೆ ಆರ್ಟೀರಿಯಲ್ ರಸ್ತೆ, ಐದು ಕಮರ್ಷಿಯಲ್ ಹಬ್ ಗಳ ಸ್ಥಾಪನೆ,[ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ವಿತರಣೆ]

2. ಮೈಸೂರು: ಔಷಧೀಯ ಸಸ್ಯಗಳ ಗಿಡಮೂಲಿಕೆ ಔಷಧ ಕೋಶ ಉಪಯೋಗಕ್ಕಾಗಿ ಹೆಗ್ಗಡೆದೇವನ ಕೋಟೆ ತಾಲೂಕಿನಲ್ಲಿ ಪ್ರಾಯೋಗಿಕ ಯೋಜನೆಯ ಪೈಲಟ್ ಯೋಜನೆ, 250 ಹಾಸಿಗೆಗಳ ಸಾಮರ್ಥ್ಯದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಮೈಸೂರು ಸುತ್ತಲಿನ ರಸ್ತೆಗಳ ಅಭಿವೃದ್ಧಿ, ಕಂದಾಯ ವಿಭಾಗದಲ್ಲಿ 250 ಹಾಸಿಗೆಗಳ ಸಾಮರ್ಥ್ಯದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಮುಸ್ಲಿಂ ಬಾಲಕ ಹಾಗೂ ಬಾಲಕಿಯರ ಅನಾಥಾಲಯ ಸಂಸ್ಥೆಯ ಶೈಕ್ಷಣಿಕ ಹಾಗೂ ಮೂಲಭೂತ ಸೌಕರ್ಯಕ್ಕೆ 2 ಕೋಟಿ ರು. ಅನುದಾನ., ಚಾಮರಾಜೇಂದ್ರ ಸರ್ಕಾರಿ ಆಡಿಯೋ, ವೀಡಿಯೋ ಕಾಲೇಜಿನಲ್ಲಿ ಸುಸಜ್ಜಿತ ಸ್ಟುಡಿಯೋಗಳ ನಿರ್ಮಾಣ,[ಬಜೆಟ್ 2017: ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಶೇ. 100ರಷ್ಟು ಮೀಸಲಾತಿ]

3. ಬೆಂಗಳೂರು ಗ್ರಾಮಾಂತರ: ಬೆಳ್ಳಂದೂರು, ವರ್ತೂರು ಕೆರೆಗಳ ಅಭಿವೃದ್ಧಿ, ಸಿಲ್ಕ್ ಬೋರ್ಡ್ ಜಂಕ್ಷನ್ ನಿಂದ ಕೆ.ಆರ್. ಪುರದವರೆಗಿನ ಜಂಕ್ಷನ್ ಗಳ ಅಭಿವೃದ್ಧಿ

4. ರಾಮನಗರ: ಹೈಟೆಕ್ ಆಸ್ಪತ್ರೆ,[ಬಜೆಟ್ 2017: ನಮ್ಮ ಬೆಂಗಳೂರಿಗೆ ಸಿಕ್ಕಿದ್ದೇನು?]

5.ಮಂಡ್ಯ: ಮಳವಳ್ಳಿ ತಾಲೂಕು ಹೆಬ್ಬಳ್ಳ ಚೆನ್ನಯ್ಯ ನಾಲೆಯ ಬಾಧಿತ ಅಚ್ಚುಕಟ್ಟು ಪ್ರದೇಶಕ್ಕೆ ಹೆಬ್ಬಳ್ಳದಿಂದ ಏತ ನೀರಾವರಿ ಕಾಮಗಾರಿ.

6. ಚಾಮರಾಜನಗರ: ಕೊಳ್ಳೇಗಾಲ ತಾಲೂಕಿನ ಸರ್. ಕಾಟನ್ ನಾಲೆಗಳು, ಹಂಪಾಪುರ ಮತ್ತು ಗುಪ್ಪಮ್ಮ ನಾಲೆಗಳ ಅಭಿವೃದ್ಧಿ, ಚೆಕ್ ಡ್ಯಾಂ ನಿರ್ಮಾಣ, ವಿವಿಧ ರೋಗಗಳ ಸಂಶೋಧನೆಗಾಗಿ ರಕ್ತ ವಿದಳನಾ ಕೇಂದ್ರ ಸ್ಥಾಪನೆ,[ಬಜೆಟ್ 2017: ದ್ವಿಚಕ್ರವಾಹನ ಖರೀದಿ ದುಬಾರಿ, ಮದ್ಯ ಬೆಲೆ ಹೆಚ್ಚಳ]

7. ಕೊಡಗು: ----

8. ಹಾಸನ: ಶ್ರೀರಾಮಪುರ ಅಣೆಕಟ್ಟು ಪುನರ್ ನಿರ್ಮಾಣ, ಚೆಕ್ ಡ್ಯಾಂ ನಿರ್ಮಾಣ, ಮಹಾ ಮಸ್ತಕಾಭಿಷೇಕಕ್ಕೆ 175 ಕೋಟಿ ರು.,

9. ದಕ್ಷಿಣ ಕನ್ನಡ: ಮತ್ಸ್ಯಾಶ್ರಯ ಯೋಜನೆಯಡಿ 3000 ಫಲಾನುಭವಿಗಳ ಆಯ್ಕೆ. ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ಅನುಷ್ಠಾನ. ಕಡಲ ತೀರದ ಮೂರು ಜಿಲ್ಲೆಗಳಲ್ಲಿ 200 ಮಂಜುಗಡ್ಡೆ ಸ್ಥಾವರಗಳ ನಿರ್ಮಾಣ; 35 ಶೈತ್ಯಾಗಾರಗಳಿಗೆ ವಿದ್ಯುಚ್ಛಕ್ತಿ ಮೇಲೆ ನೀಡುವ ಸಹಾಯಧನ ಪ್ರತಿ ಯೂನಿಟ್ ಗೆ 1.75 ರು.ಗಳಿಗೆ ಏರಿಕೆ. ಮಂಗಳೂರಿನಲ್ಲಿ ಬ್ಯಾರಿ ಅಧ್ಯಯನ ಪೀಠ,

10. ಉಡುಪಿ: ಮಲ್ಪೆ ಹಾಗೂ ಮಂಗಳೂರಿನ ಮೀನುಗಾರಿಕೆ ಬಂದರಿನಲ್ಲಿ 5 ಕೋಟಿ ರು. ವೆಚ್ಛದಲ್ಲಿ ದೋಣಿಗಳ ಸುರಕ್ಷಿತ ಇಳಿದಾಣಕ್ಕಾಗಿ 75 ಮೀ. ಉದ್ದವರೆಗೆ ಜಟ್ಟಿ ವಿಸ್ತರಣೆ.

11. ಉತ್ತರ ಕನ್ನಡ: 1,500 ರು. ಕೋಟಿ ವೆಚ್ಛದಲ್ಲಿ ಅತ್ಯಾಧುನಿಕ ಅಂತಾರಾಷ್ಟ್ರೀಯ ಮಟ್ಟದ ಬಂದರು ನಿರ್ಮಾಣಕ್ಕೆ ಅಸ್ತು, ವಿವಿಧ ರೋಗಗಳ ಸಂಶೋಧನೆಗಾಗಿ ರಕ್ತ ವಿದಳನಾ ಕೇಂದ್ರ ಸ್ಥಾಪನೆ,

12. ಕೋಲಾರ: 6 ಲಕ್ಷ ಶ್ರೀಗಂಧ ಮರ ಬೆಳೆಸಲು ನಿರ್ಧಾರ, 700 ಹೆಕ್ಟೇರ್ ಪ್ರಾಂತ್ಯದಲ್ಲಿ ಶ್ರೀಗಂಧ ನೆಡುತೋಪುಗಳ ಅಭಿವೃದ್ಧಿ, ಹೈಟೆಕ್ ಆಸ್ಪತ್ರೆ,

13. ಚಿಕ್ಕಬಳ್ಳಾಪುರ: 700 ಹೆಕ್ಟೇರ್ ಪ್ರಾಂತ್ಯದಲ್ಲಿ ಶ್ರೀಗಂಧ ನೆಡುತೋಪುಗಳ ಅಭಿವೃದ್ಧಿ, ವೈದ್ಯಕೀಯ ಕಾಲೇಜು ಮಂಜೂರು, ಮುರುಗಮಲ್ಲದಲ್ಲಿರುವ ಧಾರ್ಮಿಕ ಯಾತ್ರಾ ಸ್ಥಳದ ಮೂಲಭೂತ ಸೌಕರ್ಯಕ್ಕಾಗಿ ಹಾಗೂ ಪುನರ್ವಸತಿ ಕೇಂದ್ರಕ್ಕಾಗಿ 2 ಕೋಟಿ ರು.

14. ದಾವಣಗೆರೆ: ಹೈಟೆಕ್ ಆಸ್ಪತ್ರೆ ನಿರ್ಮಾಣ, ಹರಪನ ಹಳ್ಳಿ ತಾಲೂಕಿನ 60 ಕೆರೆಗಳನ್ನು ತುಂಗಭದ್ರಾ ನದಿಯಿಂದ ನೀರು ತುಂಬಿಸುವ ಯೋಜನೆ, ಇಎಸ್ಐ ಆಸ್ಪತ್ರೆಯ ಸಾಮರ್ಥ್ಯ 150 ಹಾಸಿಗೆಗಳಿಗೆ ಹೆಚ್ಚಳ,

15. ಶಿವಮೊಗ್ಗ: ಬಸ್ ಸ್ಟಾಂಡ್ ಗಳು ಮೇಲ್ದರ್ಜೆಗೆ

16. ತುಮಕೂರು: ಹೈಟೆಕ್ ಆಸ್ಪತ್ರೆ, ವಿವಿಧ ರೋಗಗಳ ಸಂಶೋಧನೆಗಾಗಿ ರಕ್ತ ವಿದಳನಾ ಕೇಂದ್ರ ಸ್ಥಾಪನೆ,

17. ವಿಜಯಪುರ: ಮುದ್ದೇ ಬಿಹಾಳ ತಾಲೂಕಿನ ನಾಗರ ಬೆಟ್ಟ ಏತ ನೀರಾವರಿ ಯೋಜನೆ, ಹೈಟೆಕ್ ಆಸ್ಪತ್ರೆ, ವಿವಿಧ ರೋಗಗಳ ಸಂಶೋಧನೆಗಾಗಿ ರಕ್ತ ವಿದಳನಾ ಕೇಂದ್ರ ಸ್ಥಾಪನೆ,

18. ಬಾಗಲಕೋಟೆ: ಬೀಳಗಿ ತಾಲೂಕಿನ ಯಳ್ಳಿಗುತ್ತಿ ಗ್ರಾಮಕ್ಕೆ ನೀರು ಒದಗಿಸುವ ಯೋಜನೆ, ಆಲಮಟ್ಟಿ ಎಡದಂಡೆ ಕಾಲುವೆ ಆಧುನೀಕರಣ, ವಿವಿಧ ರೋಗಗಳ ಸಂಶೋಧನೆಗಾಗಿ ರಕ್ತ ವಿದಳನಾ ಕೇಂದ್ರ ಸ್ಥಾಪನೆ, ವೈದ್ಯಕೀಯ ಕಾಲೇಜು ಮಂಜೂರು,

19. ಬೆಳಗಾವಿ: ರಾಯಭಾಗ ತಾಲೂಕಿನ 10 ಗ್ರಾಮಗಳ 17 ಕೆರೆಗಳಿಗೆ ಕೃಷ್ಣಾ ನದಿಯಿಂದ ನೀರು ತುಂಬಿಸುವ ಯೋಜನೆ, ಕಿತ್ತೂರು ಮತಕ್ಷೇತ್ರದ ಕೆರೆಗಳಿಗೆ ಮಲಪ್ರಭಾ ನದಿಯಿಂದ ನೀರು ತುಂಬಿಸುವ ಯೋಜನೆ, ಕುಡಚಿ ಕ್ಷೇತ್ರದ 10 ಕೆರೆಗಳಿಗೆ ಕೃಷ್ಣಾ ನದಿಯಿಂದ ನೀರು ತುಂಬಿಸುವ ಯೋಜನೆ, ಬೆಳಗಾವಿ ನಗರ ಲಸಿಕಾ ತಯಾರಿಕಾ ಕೇಂದ್ರದ ಆವರಣದಲ್ಲಿ ಔಷಧ ತಯಾರಿಕಾ ಕೇಂದ್ರ ಸ್ಥಾಪನೆಗೆ 5 ಕೋಟಿ ರು., ಕಂದಾಯ ವಿಭಾಗದಲ್ಲಿ 250 ಹಾಸಿಗೆಗಳ ಸಾಮರ್ಥ್ಯದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಇಎಸ್ಐ ಆಸ್ಪತ್ರೆಯ ಸಾಮರ್ಥ್ಯ 150 ಹಾಸಿಗೆಗಳಿಗೆ ಹೆಚ್ಚಳ,

20. ಹುಬ್ಬಳ್ಳಿ/ ಧಾರವಾಡ: ಬರಪೀಡಿತ ತಡಕೋಡ, ಬೋಕಾಪುರ, ಗರಗ, ಹಳೇಟೆಗೂರ, ಬೊಗೂರ ಮತ್ತು ನೀರಲಕಟ್ಟಿ ಗ್ರಾಮಗಳ ಕೆರೆಗಳನ್ನು ತುಪರಿ ಹಳ್ಳದಿಂದ ತುಂಬಿಸುವ ಯೋಜನೆ, ಮೀಸಲಾತಿ ಜಾರಿಗೆ ತಂದ ಕ್ರಾಂತಿಕಾರಿ ಸಾಹುಮಹರಾಜ್ ಹೆಸರಿನಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಡಿ ಅಧ್ಯಯನ ಪೀಠ, ಕಿಮ್ಸ್ ಆವರಣದಲ್ಲಿ ಜಯದೇವ ಹೃದ್ರೋಗ ವಿಜ್ಞಾನಗಳ ಮತ್ತು ಸಂಶೋಧನಾ ವಿಭಾಗ (5 ಕೋಟಿ ರು. ವೆಚ್ಛದಲ್ಲಿ), ಇಎಸ್ಐ ಆಸ್ಪತ್ರೆಯ ಸಾಮರ್ಥ್ಯ 150 ಹಾಸಿಗೆಗಳಿಗೆ ಹೆಚ್ಚಳ,

21. ಬಳ್ಳಾರಿ: ಕುರಿಕುಪ್ಪೆಯಲ್ಲಿ ಕುರಿ ಸಂವರ್ಧನಾ ಕೇಂದ್ರ ಸ್ಥಾಪನೆ. ಹಂಪಿ ಕನ್ನಡ ವಿಶ್ವವಿದ್ಯಾಲಯದ ಬೆಳ್ಳಿ ಹಬ್ಬದ ಅಂಗವಾಗಿ ವಿಶ್ವವಿದ್ಯಾಲಯದ ಮೂಲ ಸೌಕರ್ಯ ಅಭಿವೃದ್ಧಿಗೆ 25 ಕೋಟಿ ರು. ನಿಗದಿ, 25 ಕೋಟಿ ರು. ವೆಚ್ಛದಲ್ಲಿ ವಿಮ್ಸ್ ಆಸ್ಪತ್ರೆ ನವೀಕರಣ,

22. ಯಾದಗಿರಿ: ವೈದ್ಯಕೀಯ ಕಾಲೇಜು ಮಂಜೂರು, ಗ್ರಾಮೀಣ ಪ್ರಾಂತ್ಯದಲ್ಲಿ ಡಿಪ್ಲೊಮಾ ಕಾಲೇಜು ಸ್ಥಾಪನೆ, ಯಾದಗಿರ, ಚೋಳದಹೆಡಗಿ- ಗೂಡೂರ, ಘತ್ತರಗಾ ಹಾಗೂ ಕಲ್ಲೂರ-ಬಿ ಬ್ಯಾರೇಜುಗಳಿಗೆ ಆಧುನಿಕ ಗೇಟ್ ಗಳ ಅಳವಡಿಕೆ ಮತ್ತು ಪುನಃಶ್ಚೇತನ ಕಾಮಗಾರಿ; ಯಾದಗಿರಿ ತಾಲೂಕಿನ 35 ಕೆರೆಗಳಿಗೆ ನೀರು ತುಂಬಿಸುವ ಯೋಜನೆ, ಕೊಲ್ಲೂರು ಮಲ್ಲಪ್ಪ ಸ್ಮಾರಕ ನಿರ್ಮಾಣಕ್ಕೆ 2 ಕೋಟಿ ರು.,

23. ಕಲಬುರಗಿ: ಗಂಡೋರಿ ನಾಲಾ ಮತ್ತು ಮುಲ್ಲಾಮಾರಿ ಮೇಲ್ದಂಡೆ ಯೋಜನೆಗಳ ಆಧುನೀಕರಣ, ಆಳಂದ ತಾಲೂಕಿನಲ್ಲಿ ಅಂತರ್ಜಲ ಮಟ್ಟ ಅಭಿವೃದ್ಧಿಗೆ ವಿಶೇಷ ಕಾರ್ಯಕ್ರಮ, ಕಂದಾಯ ವಿಭಾಗದಲ್ಲಿ 250 ಹಾಸಿಗೆಗಳ ಸಾಮರ್ಥ್ಯದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ,

24. ಗದಗ: 5 ಕೋಟಿ ರು. ವೆಚ್ಛದಲ್ಲಿ ಗದಗದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಈರುಳ್ಳಿ ಗೋದಾಮು ಸ್ಥಾಪನೆ. ಶಿರಹಟ್ಟಿ ತಾಲೂಕಿನ ಇಟಗಿ ಗ್ರಾಮದ ಬಳಿ ತುಂಗಭದ್ರಾ ನದಿಯಿಂದ ಕೆರೆಗಳನ್ನು ತುಂಬಿಸುವ ಯೋಜನೆ,

25. ಹಾವೇರಿ: ರಾಣೇಬೆನ್ನೂರಿನ ದೊಡ್ಡಕೆರೆಗೆ ನೀರು ತುಂಬಿಸುವ ಯೋಜನೆ, ಬ್ಯಾಡಗಿ ತಾಲೂಕಿನ ಗುಡ್ಡದ ಮಲ್ಲಾಪುರ ಏತ ನೀರಾವರಿ ಯೋಜನೆಯಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆ, ಹಿರೇಕೆರೂರು ತಾಲೂಕಿನ ಮದಗ ಮಾಸೂರು ಕೆರೆಯಿಂದ ಹಿರೇಕೆರೂರು ಪಟ್ಟಣದ ದುರ್ಗಾದೇವಿ ಹಾಗೂ ಬಹುಗ್ರಾಮ ಕೆರೆಗಳಿಗೆ ನೀರು ಕುಮುದ್ವತಿ ನದಿಯಿಂದ ನೀರು ತುಂಬಿಸುವ ಯೋಜನೆ, ಚೆಕ್ ಡ್ಯಾಂ ನಿರ್ಮಾಣ, ವಿವಿಧ ರೋಗಗಳ ಸಂಶೋಧನೆಗಾಗಿ ರಕ್ತ ವಿದಳನಾ ಕೇಂದ್ರ ಸ್ಥಾಪನೆ, ವೈದ್ಯಕೀಯ ಕಾಲೇಜು ಮಂಜೂರು,

26. ಬೀದರ್: ಬಸವ ಕಲ್ಯಾಣ ತಾಲೂಕಿನ ಕೊಂಗಳಿ ಬ್ಯಾರೇಜಿನಿಂದ ನೀರನ್ನು ಎತ್ತಿ ಚುಲ್ಕಿನಾಲಾ ಜಲಾಶಯ ಹಾಗೂ ಕೆರೆಗಳಿಗೆ ತುಂಬಿಸುವ ಯೋಜನೆ, ಚೆಕ್ ಡ್ಯಾಂ ನಿರ್ಮಾಣ, 5 ಕೋಟಿ ರು. ವೆಚ್ಛದಲ್ಲಿ ಸಾಂಸ್ಕೃತಿಕ ಕೇಂದ್ರ ಸ್ಥಾಪನೆ,

27. ಕೊಪ್ಪಳ:ಕನಕಗಿರಿ ನಗರ ತಾಲೂಕು ಆಗಿ ಘೋಷಣೆ

28. ರಾಯಚೂರು: ನೂತನ ವಿಶ್ವವಿದ್ಯಾಲಯ ಸ್ಥಾಪನೆ,

29. ಚಿತ್ರದುರ್ಗ: ನೂತನ ವೈದ್ಯಕೀಯ ಸ್ಥಾಪನೆಗೆ ನಿರ್ಧಾರ; ವಿವಿಧ ರೋಗಗಳ ಸಂಶೋಧನೆಗಾಗಿ ರಕ್ತ ವಿದಳನಾ ಕೇಂದ್ರ ಸ್ಥಾಪನೆ, 6 ಕೋಟಿ ವೆಚ್ಛದಲ್ಲಿ ಜಿಲ್ಲಾಸ್ಪತ್ರೆಯಲ್ಲಿ 50 ಹಾಸಿಗೆಗಳ ಸಂಯೋಜಿತ ಆಯುಷ್ ಆಸ್ಪತ್ರೆಗಳ ಸ್ಥಾಪನೆ

30. ಚಿಕ್ಕಮಗಳೂರು: ಚೆಕ್ ಡ್ಯಾಂ ನಿರ್ಮಾಣ, ವೈದ್ಯಕೀಯ ಕಾಲೇಜು, ಏರ್ ಸ್ಟ್ರಿಪ್, 6 ಕೋಟಿ ವೆಚ್ಛದಲ್ಲಿ ಜಿಲ್ಲಾಸ್ಪತ್ರೆಯಲ್ಲಿ 50 ಹಾಸಿಗೆಗಳ ಸಂಯೋಜಿತ ಆಯುಷ್ ಆಸ್ಪತ್ರೆಗಳ ಸ್ಥಾಪನೆ,

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In order to strengthen the congres party and to get good impression from the people of Karnataka, Siddaramaiah announced various programs to all the districts of the the state. So, here is the list of those programes announced to the districts.
Please Wait while comments are loading...