ಧರ್ಮಸ್ಥಳ ದೇವಸ್ಥಾನ ವಿರುದ್ಧದ ಅಪಪ್ರಚಾರದಿಂದ ಯಾರಿಗೆ ಲಾಭ? ಇಲ್ಲಿದೆ ಕಟ್ಟುಕತೆಗಳ ಹಿಂದಿನ ಮರ್ಮ
ಕರ್ನಾಟಕ ರಾಜ್ಯದಲ್ಲಿ ಸುಮಾರು ಎಂಟು ಶತಮಾನಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ದೇವಸ್ಥಾನವು ಪೂಜಾ ಸ್ಥಳ ಮಾತ್ರವಾಗಿಲ್ಲ. ಬದಲಾಗಿ ಹಸಿದ ಕುಟುಂಬಗಳಿಗೆ ಆಹಾರ ನೀಡಿದೆ. ಬಡವರನ್ನು ಸದ್ದಿಲ್ಲದೇ ಮೇಲೆತ್ತಿದೆ. ಮದ್ಯದ ವ್ಯಸನದಿಂದ ಮುಕ್ತಗೊಳಿಸಿದೆ. ಗ್ರಾಮೀಣ ಯುವಕರಿಗೆ ಶಿಕ್ಷಣ ನೀಡಿದೆ. ಹೀಗೆ ಲಕ್ಷಾಂತರ ಜನರಿಗೆ ವಿವಿಧ ಕಾರಣಗಳಿಂದ ಆಸರೆಯಾಗಿದೆ. ಇಂತಹ ಧರ್ಮಸ್ಥಳವು ಇಂದು ಸುಳ್ಳು ಆರೋಪಗಳಿಂದಾಗಿ ಸುದ್ದಿಯಾಗಿದೆ.
ಲಕ್ಷಾಂತರ ಭಕ್ತರ ಧಾರ್ಮಿಕ ನಂಬಿಕೆಯ ಸ್ಥಳ ಶ್ರೀ ಧರ್ಮಸ್ಥಳ ದೇವಾಲಯದ ಮೇಲೆ ಸಾಬೀತಾಗದ, ಪರೀಕ್ಷಿಸದ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಹುರುಳಿಲ್ಲದ ಆರೋಪಗಳ ಕರಿ ನೆರಳು ಬಿದ್ದಿದೆ. ಆನ್‌ಲೈನ್‌ನಲ್ಲಿನ ವಿಡಿಯೋ, ತಪ್ಪು ಮಾಹಿತಿಗಳು ದಶಕಗಳ ಕಾಲ ಸೇವೆಗೈದ ಧಾರ್ಮಿಕ ಕ್ಷೇತ್ರದ ಸೇವೆಯನ್ನು ಮರೆಮಾಚುತ್ತಿವೆ. ಜನರ ಭಾವನೆಗೆ ಧಕ್ಕೆ ಉಂಟು ಮಾಡುತ್ತಿವೆ. ಸದ್ಯದ ಬೆಳವಣಿಗೆಗಳು ರಾಜ್ಯದ ಸಾಮಾಜಿಕ ಮತ್ತು ಆಧ್ಯಾತ್ಮಿಕ ರಚನೆಯ ಹೃದಯಕ್ಕೆ ಪೆಟ್ಟು ಕೊಡುತ್ತಿವೆ.

ಧರ್ಮಸ್ಥಳ ದೇಗುಲ ಸುತ್ತಲಿನ ಈ ಆರೋಪದ ಬಿರುಗಾಳಿಯು ನಂಬಿಕೆ ಮೇಲಿನ ಯುದ್ಧಕ್ಕಿಂತ ದೊಡ್ಡದು. ಅಧಿಕಾರ ಮತ್ತು ಸಂಪನ್ಮೂಲಗಳಿಗಾಗಿ ನಡೆಯುತ್ತಿರುವ ಹೋರಾಟವಿದು. ನೈತಿಕ ಧರ್ಮಯುದ್ಧದಂತೆ ಜಾಣತನದ ವೇಷ ಧರಿಸಿರುವುದು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯು ರಾಜ್ಯದ ಲಕ್ಷಾಂತರ ಜನರಿಗೆ ಜೀವನಾಡಿಯಾಗಿದೆ. ಕರಾವಳಿ ಮತ್ತು ಗ್ರಾಮೀಣ ಭಾಗಗಳಲ್ಲಿ ಪರಭಕ್ಷಕ ಬಡ್ಡಿದಾರರು ಬಡ ಕುಟುಂಬಗಳ ಮೇಲೆ ಶೇ 60 ಮತ್ತು ಅದಕ್ಕಿಂತ ಹೆಚ್ಚಿನ ಬಡ್ಡಿ ವಿಧಿಸುತ್ತಿದ್ದರು. ಆದರೆ ಧರ್ಮಸ್ಥಳ ಯೋಜನೆಯುಡಿ ವಾರ್ಷಿಕ ಕೇವಲ ಶೇ 12 ಬಡ್ಡಿದರದಲ್ಲಿ ಮೈಕ್ರೋಫೈನಾನ್ಸ್ ರೀತಿಯಲ್ಲಿ ಸಾಲ ನೀಡುತ್ತಿದೆ. ಬಡ್ಡಿದಾರರ ಶೋಷಣೆ ತಪ್ಪಿಸಿದೆ. ಬಡ ಕುಟುಂಬಗಳಿಗೆ ಆರ್ಥಿಕವಾಗಿ ಆಸರೆಯಾಗಿದೆ.
ಕಲ್ಯಾಣ ಕಾರ್ಯಕ್ರಮಗಳಿಂದ ಶತ್ರುಗಳು ಸೃಷ್ಟಿ
ಮದ್ಯ ವ್ಯಸನದ ವಿರುದ್ಧ ಜನ ಜಾಗೃತಿ ವೇದಿಕೆ ಮೂಲಕ ಮದ್ಯ ವಿರೋಧಿ ಅಭಿಯಾನ ಮಾಡಲಾಗಿದೆ. ನಿರಂತರ ಹೋರಾಟದ ಮೂಲಕ 1.3 ಲಕ್ಷಕ್ಕೂ ಹೆಚ್ಚು ವ್ಯಕ್ತಿಗಳಿಗೆ ಮದ್ಯ ವ್ಯಸನ ಬಿಡಿಸಲಾಗಿದೆ. ಅದಕ್ಕಾಗಿ ಮದ್ಯ ಮುಕ್ತ ಶಿಬಿರಗಳನ್ನು ನಡೆಸುತ್ತಿದೆ. ನವಜೀವಿ ಸಮಿತಿಗಳನ್ನು ಧರ್ಮಸ್ಥಳ ದೇವಸ್ಥಾನ ರಚಿಸಿದೆ. ಈ ಎಲ್ಲ ಪ್ರಯತ್ನಗಳು ಈ ಭಾಗದ ಅನೇಕ ಹಳ್ಳಿಗಳಲ್ಲಿ ಮದ್ಯ ಮಾರಾಟ ತಗ್ಗಿಸಿದೆ. ಮದ್ಯದ ಸಿಂಡಿಕೇಟ್‌ಗಳ ಲಾಭ ಕಡಿಮೆ ಮಾಡಿದೆ. ಇದರಿಂದಾಗಿ ಶತ್ರುಗಳು ಹುಟ್ಟಿಕೊಳ್ಳುವಂತಾಗಿದೆ.
ಧರ್ಮಸ್ಥಳ ದೇವಾಲಯದಿಂದ ವ್ಯಾಪಕ ಕಲ್ಯಾಣ ಕಾರ್ಯಕ್ರಮಗಳು ಆಗಿವೆ. ಉಚಿತ ಆರೋಗ್ಯ ರಕ್ಷಣೆ, ಸಾಮೂಹಿಕ ವಿವಾಹಗಳು, ಗ್ರಾಮೀಣ ಯುವಕರಿಗೆ ಶಿಕ್ಷಣ, ಸಮುದಾಯಗಳನ್ನು ಹೆಚ್ಚು ಸ್ವಾವಲಂಬಿಗಳನ್ನಾಗಿ ಮಾಡಿದೆ. ಮತಾಂತರ ಕಡಿಮೆಗೊಳಿಸಿದೆ. ಆರ್ಥಿಕ ಮತ್ತು ಸಾಮಾಜಿಕ ದುರ್ಬಲತೆ ತೆಗೆದು ಹಾಕಿದೆ. ಈ ಮೂಲಕ ದೇವಾಲಯವು ಆಕ್ರಮಣಕಾರಿ ಮತಾಂತರ ಜಾಲಗಳಿಗೆ ತಡೆಗೋಡೆಯಂತೆ ಕೆಲಸ ಮಾಡಿದೆ.
ಕಲ್ಯಾಣ ಕಾರ್ಯಕ್ರಮಗಳಿಂದ ಭಕ್ಷಕ ಸಾಲದಾತರು, ಮದ್ಯದ ಸಿಂಡಿಕೇಟ್‌ಗಳು ಮತ್ತು ಮತಾಂತರ ಲಾಬಿಗಳು ಕಹಿ ಅನುಭವಿಸಿದ್ದಾರೆ. ಹೀಗಾಗಿ ಇಂದು ಧರ್ಮಸ್ಥಳದ ಹೆಸರು, ಪ್ರತಿಷ್ಠೆ ಹಾಳುಮಾಡುವಲ್ಲಿ ಆಸಕ್ತಿ ತೋರಿದ್ದಾರೆ. ದೇವಾಲಯದ ವಿರುದ್ಧ ನಡೆಯುತ್ತಿರುವ ಹೋರಾಟವು ನಕಲಿಯಾಗಿದೆ. ಇದೊಂದು ಸಂಘಟಿತ ಅಪಪ್ರಚಾರವಾಗಿದೆ.
ಆಧ್ಯಾತ್ಮಿಕ ಸ್ಥಳವಾಗಿ ಧರ್ಮಸ್ಥಳ ಗುರುತಿಸಿಕೊಳ್ಳದೇ, ಸಾಮೂಹಿಕ ವಿವಾಹ ಸಮಾರಂಭ ಮಾಡಿದೆ. ವರದಕ್ಷಿಣೆ, ಜಾತಿ ಪದ್ಧತಿ ಅಡೆತಡೆಗಳ ನಿವಾರಣೆ, ಬಡ ದಂಪತಿಗಳಿಗೆ ಆರ್ಥಿಕ ಹೊರೆ ನಿವಾರಿಸಿದೆ. ಎಸ್‌ಡಿಎಂ ವೈದ್ಯಕೀಯ ಟ್ರಸ್ಟ್ ಅಡಿಯಲ್ಲಿ ಅದರ ಆಸ್ಪತ್ರೆಗಳು ಉಚಿತ ಅಥವಾ ಕೈಗೆಟುಕುವ ಆರೈಕೆಯನ್ನು ಒದಗಿಸುತ್ತಿದೆ. ಆರು ಮಿಲಿಯನ್‌ಗಿಂತಲೂ ಹೆಚ್ಚು ಸ್ವ-ಸಹಾಯ ಗುಂಪು ಸದಸ್ಯರಿದ್ದಾರೆ. ಅವರಲ್ಲಿ ಹಲವರು ಗ್ರಾಮೀಣ ಮಹಿಳೆಯರು, ಈಗ ಕೃಷಿ, ಸಣ್ಣ ವ್ಯವಹಾರಗಳು ಮತ್ತು ಶಿಕ್ಷಣಕ್ಕಾಗಿ ಸಾಲ ಪಡೆಯುತ್ತಾರೆ. ಪಿಂಚಣಿ ಯೋಜನೆಗಳು ವೃದ್ಧರು ಮತ್ತು ದುರ್ಬಲರಿಗೆ ₹110 ಕೋಟಿ ವಿತರಿಸಲಾಗಿದೆ. ಡೈರಿ ಸಹಕಾರ ಸಂಘಗಳು ₹37.85 ಕೋಟಿ ರೈತರಿಗೆ ಹೆಚ್ಚಿನ ಆದಾಯ ಗಳಿಕೆಗೆ ನೆರವಾಗಿವೆ.
2.3 ಮಿಲಿಯನ್‌ಗೂ ಹೆಚ್ಚು ಜನರನ್ನು ಬಡತನದಿಂದ ಮೇಲೆತ್ತಿದೆ. ಇದೆಲ್ಲ ಸಹಿಸದವರು ಮತ್ತು ಶೋಷಣೆ ಕಿತ್ತು ಹಾಕಿದಾಗ ಹುಟ್ಟಿದ ಶತ್ರುಗಳು ಅಪಪ್ರಚಾರಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ. ಇವರ ಕೂಗು ನ್ಯಾಯದ ಪರವಾ? ಇಲ್ಲ ಧರ್ಮಸ್ಥಳದ ಪಾವಿತ್ರ್ಯತೆಗೆ ಕುಂದು ತರುವುದಕ್ಕಾ? ಎಂಬುದನ್ನು ನಾವೆಲ್ಲರೂ ಯೋಚಿಸಬೇಕಿದೆ.












Click it and Unblock the Notifications