ಕರ್ನಾಟಕದ ಸಿಎಂ #24: ಜನನಾಯಕ ಯಡಿಯೂರಪ್ಪ ವ್ಯಕ್ತಿ ಚಿತ್ರ
Recommended Video

ಕಾವೇರಿ ಹೋರಾಟದಿಂದ ರಾಮಜನ್ಮಭೂಮಿ ಹೋರಾಟದವರೆಗೆ, ಜೀತಮುಕ್ತರ ಸಮಸ್ಯೆಯಿಂದ ಬಗರ್ ಹುಕಂ ಸಮಸ್ಯೆವರೆಗೆ ನಿರಂತರ ಹೋರಾಟ ಮಾಡುತ್ತಾ, ರೈತಪರ, ಜನಪರ ಕಾಳಜಿ ಹೊಂದಿರುವ ನಾಯಕರಾಗಿ ಇಂದಿಗೂ ಗುರುತಿಸಿಕೊಳ್ಳುವ ಬೂಕನಕರೆ ಸಿದ್ದಪ್ಪಲಿಂಗಪ್ಪ ಯಡಿಯೂರಪ್ಪ ಅವರು ಮೂರನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದಾರೆ.
ಬಿಜೆಪಿ ಕರ್ನಾಟಕ ರಾಜ್ಯಾಧ್ಯಕ್ಷ, ಶಿವಮೊಗ್ಗದ ಸಂಸದ, ಶಿಕಾರಿಪುರದ ಸಂಸದ ಯಡಿಯೂರಪ್ಪ ಅವರು ಗುರುವಾರ(ಮೇ 17) ಬೆಳಗ್ಗೆ 9.05 ನಿಮಿಷದ ಸುಮಾರಿಗೆ ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ದೇವರು ಹಾಗೂ ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಮೂರನೇ ಬಾರಿಗೆ ಮುಖ್ಯಮಂತ್ರಿಯಾದ ಬಿಎಸ್ವೈ
2007 ರ ನವೆಂಬರ್ 12 ರಂದು ಮೊದಲ ಬಾರಿಗೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಯಡಿಯೂರಪ್ಪ ಅವರು ನವೆಂಬರ್ 19(7ದಿನ)ರ ತನಕ ಪಟ್ಟದಲ್ಲಿದ್ದರು.
2008 ರ ಮೇ 30 ರಂದು ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ 2011 ರ ಜುಲೈ 31 ರವರೆಗೆ 3 ವರ್ಷ 62 ದಿನಗಳ ಕಾಲ(39 ತಿಂಗಳು) ಅವರು ಮುಖ್ಯಮಂತ್ರಿಯಾಗಿದ್ದರು. ಈಗ 3 ನೇ ಬಾರಿಗೆ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ರೈತ ಪರ ಹೋರಾಟದ ಮೂಲಕ ರಾಜಕೀಯಕ್ಕೆ ಧುಮುಕಿದ ಯಡಿಯೂರಪ್ಪ ಅವರು ಹುಟ್ಟು ಹೋರಾಟಗಾರ, ಶಿಸ್ತಿನ ಸಿಪಾಯಿ ಎಂದೇ ಕರೆಸಿಕೊಂಡವರು. ಮಂಡ್ಯ ಜಿಲ್ಲೆಯಲ್ಲಿ ಜನಿಸಿ, ಶಿವಮೊಗ್ಗದ ಶಿಕಾರಿಪುರದಿಂದ ರಾಷ್ಟ್ರ ರಾಜಕೀಯಕ್ಕೆ ಜಿಗಿದು ನಂತರ ಕರುನಾಡಿಗೆ ಮರಳಿ ಮತ್ತೊಮ್ಮೆ ಕರ್ನಾಟಕದಲ್ಲಿ ಕಮಲ ಅರಳುವಂತೆ ಮಾಡಿದವರು.

ಕರ್ನಾಟಕದ ಧೀಮಂತ ನಾಯಕ
ಬೂಕನಕೆರೆ ಎಂಬ ಕುಗ್ರಾಮದ ಬಡ ರೈತ ಕುಟುಂಬದ ಯಡಿಯೂರಪ್ಪ ದಿಢೀರ್ ನಾಯಕರಾದವರಲ್ಲ. ಯಾವುದೇ ಗಾಡ್ ಫಾದರ್ ಇಲ್ಲದೇ ಸ್ವಂತ ಪರಿಶ್ರಮ ಮೇಲೆ ಹಂತಹಂತವಾಗಿ ಬೆಳೆದು ಬಂದ ಧೀಮಂತ ನಾಯಕ. ಹಳ್ಳಿಯಿಂದಲೇ ಹೋರಾಟ ಆರಂಭಿಸಿ ರಾಜಕೀಯ ನೆಲೆಗಟ್ಟನ್ನು ಕಂಡುಕೊಂಡವರು. ಯಡಿಯೂರಪ್ಪ ಧೃತಿಗೆಡದೆ 80ರ ದಶಕದಲ್ಲಿ ಎರಡು ಶಾಸಕರಿದ್ದ ಪಕ್ಷವನ್ನು ಹಂತಹಂತವಾಗಿ ಬೆಳೆಸುತ್ತಾ ಇಂದು 110 ಶಾಸಕರ ಪಕ್ಷವಾಗಿ ಮಾಡಿದ್ದು ಕಡಿಮೆ ಸಾಧನೆ ಏನಲ್ಲ. ಹೀಗಾಗಿ ವಿರೋಧ ಪಕ್ಷದ ದ್ವೇಷಿಗಳಿಗೂ ಸಕಾರಣವಾಗಿ ಬೆದರಿಕೆ ಹುಟ್ಟಿಸಬಲ್ಲ ಛಾತಿಯುಳ್ಳವರು.

ಹಗರಣಗಳ ನಡುವೆ ಫೀನಿಕ್ಸ್ ನಂತೆ ಎದ್ದ ಬಿಎಸ್ವೈ
ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಯಡಿಯೂರಪ್ಪ ಅವರ ಅಧಿಕಾರ ಅವಧಿಯಲ್ಲಿ ಗೋಲಿಬಾರ್ ನಲ್ಲಿ ರೈತನೊಬ್ಬ ಮೃತಪಟ್ಟ ಘಟನೆ ಮರೆಯುವಂತಿಲ್ಲ. ಅಮಾಯಕ ರೈತ ಬಲಿಯಾದ ಹಾವೇರಿಯಲ್ಲೇ ಉದಯವಾದ ಹೊಸ ಪ್ರಾದೇಶಿಕ ಪಕ್ಷದ ಚುಕ್ಕಾಣಿ ಹಿಡಿದ ಯಡಿಯೂರಪ್ಪ ಅವರ ಸುತ್ತ ಇನ್ನೂ ಅನೇಕ ಹಗರಣಗಳ ಬಲೆ ಇದ್ದೇ ಇದೆ.
ಡಿ ನೋಟಿಫಿಕೇಷನ್, ಸ್ವಜನಪಕ್ಷಪಾತ, ಭೂ ಹಗರಣಗಳ ಜೊತೆ ಯಡಿಯೂರಪ್ಪ ಅವರ ಸಿಡುಕು ಕಂಡರೆ ಜನ ಮುಖ ಬೇರೆಡೆ ತಿರುಗಿಸುತ್ತಾರೆ ಎಂಬ ದೂರಿದೆ. ಕೆಜೆಪಿ ಅಳಿವು ಉಳಿವಿನೊಂದಿಗೆ ಯಡಿಯೂರಪ್ಪ ಅವರ ರಾಜಕೀಯ ಭವಿಷ್ಯ ನಿರ್ಧಾರ ಎನ್ನಲಾಗಿತ್ತು. ಆದರೆ, ಮತ್ತೊಮ್ಮೆ ಬಿಜೆಪಿ ಸೇರ್ಪಡೆಯೊಂದಿಗೆ ಅಂತ್ಯ ಕಂಡಿತು. ಬಿಜೆಪಿ ಹಿರಿಯ ನಾಯಕರು, ವಿಪಕ್ಷಗಳ ವಿರೋಧದ ನಡುವೆ ಬಿಎಸ್ ವೈ ಮತ್ತೊಮ್ಮೆ ಏಳಿಗೆ ಕಾಣುವ ಉತ್ಸಾಹದಲ್ಲಿದ್ದಾರೆ.

ಶಿಕಾರಿಪುರ ಕ್ಷೇತ್ರದಿಂದ ವಿಧಾನಸೌಧಕ್ಕೆ
ಕೆಜೆಪಿಯಿಂದ ಬಿಜೆಪಿಗೆ ಮರಳಿದ ಬಳಿಕ ಬಿಎಸ್ ಯಡಿಯೂರಪ್ಪ ಲೋಕಸಭೆ ಚುನಾವಣೆಗೆ ಶಿವಮೊಗ್ಗ ಕ್ಷೇತ್ರದಿಂದ ಕಣಕ್ಕೆ ಇಳಿದು ಜಯಗಳಿಸಿದರು. ರಾಷ್ಟ್ರರಾಜಕಾರಣದಲ್ಲಿ ಮಿಂಚುವ ಅವಕಾಶ ಸಿಕ್ಕರೂ, ರಾಜ್ಯಕ್ಕೆ ಮರಳಿದರು.ಆದರೆ, ಈಗಲೂ ಶಿವಮೊಗ್ಗದ ಸಂಸದರಾಗಿದ್ದಾರೆ. ನಂತರ ಬಿಜೆಪಿಯ ರಾಜ್ಯಾಧ್ಯಕ್ಷರಾದರು. ಚುನಾವಣೆಗೆ ಕಾರ್ಯಕರ್ತರನ್ನು ಹುರಿದುಂಬಿಸಿದರು. ಮಾಸ್ ಲೀಡರ್ ಎಂದೆನಿಸಿಕೊಂಡಿರುವ ಯಡಿಯೂರಪ್ಪ ಅವರು ಪಕ್ಷದ ಇತರೆ ನಾಯಕರ ಜತೆ ಮನಸ್ತಾಪಗಳಿದ್ದರೂ ಪಕ್ಷಕ್ಕಾಗಿ ಅವಡುಗಚ್ಚಿಕೊಂಡು ಕಣಕ್ಕಿಳಿದರು. 'ಮತ್ತೊಮ್ಮೆ ಸಿಎಂ ಆಗುವ ಕನಸಿಗಿಂತ ಬಿಜೆಪಿಯನ್ನು ಅಧಿಕಾರಕ್ಕೆ ತರುವುದು ನನಗೆ ಮುಖ್ಯ' ಎಂದರು. ಪ್ರತಿಷ್ಠೆಯ ಸಮರದಲ್ಲಿ ಬಿಎಸ್ವೈ, ಅಂದುಕೊಂಡಿದ್ದನ್ನು ಸಾಧಿಸಿದ್ದಾರೆ.

ಈ ಚುನಾವಣೆಯ ಯಶಸ್ಸು, ಅಧಿಕಾರ ಸ್ಥಾಪನೆ
ಜನ ಪರಿವರ್ತನಾ ಸಮಾವೇಶಕ್ಕೆ ಮಿಶ್ರಪ್ರತಿಕ್ರಿಯೆ, ಬಿಜೆಪಿಯ ಆಂತರಿಕ ಜಗಳಗಳನ್ನು ಹತ್ತಿಕ್ಕದಿರುವುದು,ಹೈಕಮಾಂಡ್ ಆದೇಶದ ನಡುವೆಯೂ ತಮ್ಮ ಆಪ್ತರನ್ನು ಕಣಕ್ಕಿಳಿದು ಯಶಸ್ಸು ಕಂಡರು. ಬಿಜೆಪಿ ಅಧಿಕಾರಕ್ಕೆ ಬಂದರೂ ಸಿಎಂ ಆಗಿ ಯಡಿಯೂರಪ್ಪ 2 ವರ್ಷಗಳಿಗೂ ಅಧಿಕ ಕಾಲ ಸ್ಥಾನದಲ್ಲಿ ಉಳಿಯುವುದಿಲ್ಲ ಎಂಬ ಅಘೋಷಿತ ಸತ್ಯದೊಂದಿಗೆ ವಿಧಾನಸೌಧದ ಮೂರನೇ ಮಹಡಿಯತ್ತ ಪ್ರಯಾಣ ಬೆಳೆಸಿದ್ದಾರೆ.

ಹೆಚ್ಚು ಯೋಜನೆ ಅನುಷ್ಠಾನಗೊಳಿಸಿದ ಹೆಗ್ಗಳಿಕೆ
ಈ ಹಿಂದೆ 39 ತಿಂಗಳು ಅಧಿಕಾರ ಕಂಡಿದ್ದ ಬಿಎಸ್ ಯಡಿಯೂರಪ್ಪ ಅವರು, ರೈತರ ಸಾಲ ಮನ್ನಾ, ಸಾರಾಯಿ ನಿಷೇಧ. ಲಾಟರಿ ನಿಷೇಧ, ರೈತರಿಗೆ ಶೇ.4 ಬಡ್ಡಿದರದಲ್ಲಿ ಸಾಲ, ಬಿಪಿಎಲ್ ಕುಟುಂಬಗಳ ಹೆಣ್ಣುಮಕ್ಕಳ ಸಬಲೀಕರಣಕ್ಕೆ ಭಾಗ್ಯಲಕ್ಷ್ಮಿ ಯೋಜನೆ, ಉಚಿತ ಬೈಸಿಕಲ್ ವಿತರಣೆ ಯೋಜನೆ, ನಿರುದ್ಯೋಗ ನಿವಾರಣೆಗೆ ಸುವರ್ಣ ಕಾಯಕ ಉದ್ಯೋಗ ತರಬೇತಿಯೋಜನೆ, ಹಿರಿಯ ನಾಗರಿಕರ ಸಾಮಾಜಿಕ ಭದ್ರೆತೆಗೆ ಸಂಧ್ಯಾ ಸುರಕ್ಷಾ ಯೋಜನೆ, ಮೊದಲಾದ ಕ್ರಾಂತಿಕಾರಿ ಕಾರ್ಯಕ್ರಮಗಳನ್ನು ಬಜೆಟ್ ನಲ್ಲಿ ಅಳವಡಿಸಿ ಅನುಷ್ಠಾನಗೊಳಿಸಿದ ಹೆಗ್ಗಳಿಕೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications