ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Private Bus Fare : ದೀಪಾವಳಿ ಸುಲಿಗೆ: ಬೆಳಗಾವಿಗೆ 3,500ರೂ, ಹುಬ್ಬಳ್ಳಿ 1,800 ರೂ.ಟಿಕೆಟ್ ದರ!

|
Google Oneindia Kannada News

ಬೆಂಗಳೂರು, ಅಕ್ಟೋಬರ್ 18: ಪ್ರತಿ ಬಾರಿ ಹಬ್ಬದಂತೆ ಈ ದೀಪಾವಳಿಯ ಸಂದರ್ಭದಲ್ಲೂ ಸಹ ಬೆಂಗಳೂರಿನಿಂದ ರಾಜ್ಯದ ಇತರ ಪ್ರದೇಶಗಳಿಗೆ ತೆರಳುವ ಪ್ರಯಾಣಿಕರಿಗೆ ಖಾಸಗಿ ಬಸ್ ಸಂಸ್ಥೆಗಳು ದರ ಏರಿಕೆಯ ಶಾಕ್ ನೀಡಿವೆ. ಆದರೆ, ರಾಜ್ಯ ಸರ್ಕಾರ ಹಾಗೂ ಸಾರಿಗೆ ಸಚಿವರ ಸೂಕ್ತ ಕ್ರಮಗಳ ಘೋಷಣೆ ಮಾತ್ರ ಭರವಸೆಯಾಗೇ ಉಳಿದಿವೆ.

ನಮ್ಮ ಧಾರ್ಮಿಕ ಹಬ್ಬಗಳು ಖಾಸಗಿ ಬಸ್ ಸಂಸ್ಥೆಗಳಿಗೆ ಹೆಚ್ಚು ಹಣ ಸುಲಿಗೆಗೆ ವರದಾನವಾಗಿವೆ. ಪ್ರತಿ ಬಾರಿ ಹಬ್ಬಗಳಲ್ಲೂ ಎಚ್ಚರಿಕೆ ನೀಡುವ ಸಾರಿಗೆ ಸಚಿವ ಶ್ರೀರಾಮುಲು ಅವರು ಈವರೆಗೆ ಎಷ್ಟು ಖಾಸಗಿ ಬಸ್ ಸಂಸ್ಥೆಗಳ ವಿರುದ್ಧ ದಂಡ ಇಲ್ಲವೇ ಪ್ರಕರಣ ದಾಖಲಿಸಿದ್ದಾರೆ ಎಂಬುದನ್ನು ತಿಳಿಸಿ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ದೀಪಾವಳಿ ಹಬ್ಬಕ್ಕೆ KSRTCಯಿಂದ 1,500 ವಿಶೇಷ ಬಸ್‌ ವ್ಯವಸ್ಥೆದೀಪಾವಳಿ ಹಬ್ಬಕ್ಕೆ KSRTCಯಿಂದ 1,500 ವಿಶೇಷ ಬಸ್‌ ವ್ಯವಸ್ಥೆ

ಖಾಸಗಿ ಬಸ್ ಟಿಕೆಟ್ ದರ ಏರಿಕೆಯ ಬಿಸಿ ಬೆಂಗಳೂರಿನಿಂದ ಉತ್ತರ ಕರ್ನಾಟಕ ಭಾಗವಾದ ಹಾವೇರಿ, ಹುಬ್ಬಳ್ಳಿ, ಬೆಳಗಾವಿ ಹಾಗೂ ಇನ್ನಿತರ ದೂರದ ಊರುಗಳಿಗೆ ತೆರಳುವ ಪ್ರಯಾಣಿಕರಿಗೆ ತಟ್ಟುತ್ತಿದೆ.

ಹಬ್ಬ: 3-4ಪಟ್ಟು ಖಾಸಗಿ ಬಸ್ ಟಿಕೆಟ್ ದರ ಏರಿಕೆ

ಹಬ್ಬ: 3-4ಪಟ್ಟು ಖಾಸಗಿ ಬಸ್ ಟಿಕೆಟ್ ದರ ಏರಿಕೆ

ದೀಪಾವಳಿ ಹಿನ್ನೆಲೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಾಮಾನ್ಯ ಬಸ್‌ಗಳ ಪ್ರಯಾಣದ ದರ ಯತಾಸ್ಥಿತಿಯಲ್ಲಿದ್ದರೆ, ಹಬ್ಬಕ್ಕೆಂದೆ ನಿಯೋಜನೆಗೊಳ್ಳುವ ವಿಶೇಷ (1500ಬಸ್) ಬಸ್‌ ಗಳ ಟಿಕೆಟ್ ದರ ಶೇ. 20ರಷ್ಟು ಹೆಚ್ಚಳವಾಗಿದೆ. ದುಬಾರಿ ಕಾಲದಲ್ಲಿ ಶೇ. 20ರಷ್ಟು ಟಿಕೆಟ್ ದರ ಏರಿಕೆ ಹೊರೆ ಎನ್ನುವಾಗ ಖಾಸಗಿ ಬಸ್ ಸಂಸ್ಥೆಗಳು ಪ್ರಯಾಣದ ದರವನ್ನು ಮೂರರಿಂದ ನಾಲ್ಕು ಪಟ್ಟು ವಸೂಲಿ ಮಾಡುತ್ತಿವೆ. ಹೀಗಿದ್ದರು ಸರ್ಕಾರ ಮೌನವಹಿಸಿದೆ.

ಬೆಂಗಳೂರು-ಬೆಳಗಾವಿಗೆ ಎಸ್‌ಆರ್‌ಎಸ್ ಟಿಕೆಟ್ 3,500ರೂ.

ಬೆಂಗಳೂರು-ಬೆಳಗಾವಿಗೆ ಎಸ್‌ಆರ್‌ಎಸ್ ಟಿಕೆಟ್ 3,500ರೂ.

ದೀಪಾವಳಿ ಹಿನ್ನೆಲೆ ಅಕ್ಟೋಬರ್ 22ರಂದು ಕೆಎಸ್‌ಆರ್‌ಟಿಸಿ ಬಸ್ ಟಿಕೆಟ್ ದರ ನೋಡುವುದಾದರೆ ಬೆಂಗಳೂರಿನಿಂದ ಬೆಳಗಾವಿಗೆ ಎಸಿ ಸ್ಲೀಪರ್ ರೂ.1139 ನಿಂದ 1348 ರೂ.ವರೆಗೆ ನಿಗದಿ ಮಾಡಲಾಗಿದೆ. ನಾನ್ ಎಸಿ ಸ್ಲೀಪರ್ 1061ರೂ. ಇದ್ದರೆ, ಎಸಿ ಅಲ್ಲದ ಆಸನಗಳ ಟಿಕೆಟ್ ದರ ರೂ.899ರೂ.ವರೆಗೆ ಇದೆ.

ಇದೇ ಬೆಂಗಳೂರು- ಬೆಳಗಾವಿಗೆ ಖಾಸಗೀ ಬಸ್‌ ಟಿಕೆಟ್ ದರ ಎಸಿ ಸ್ಲೀಪರ್ ಇಂಟರ್‌ಸಿಟಿ ಸ್ಮಾಟ್ ಬಸ್ 2,700ರೂ., ನಾನ್ ಎಸಿ ಸ್ಲೀಪರ್ ರಷ್ಮಾ ಟ್ರಾವೇಲ್ಸ್ 1,700ರೂ., ವಿಆರ್‌ಎಲ್‌ ಟ್ರಾವೆಲ್ಸ್ 1,900ರೂ. ದರವಿದೆ. ಆರೆಂಜ್ ಟೂರ್ಸ್‌ ಆಂಡ್‌ ಟ್ರಾವೆಲ್ಸ್ 2,310ರೂ. ಇದೆ. ಎಸ್‌ಆರ್‌ಎಸ್ ಮಲ್ಟಿ ಎಕ್ಸೆಲ್ ಸೆಮಿ ಸ್ಲೀಪರ್ 3,500ರೂ. ಟಿಕೆಟ್ ದರ ನಿಗದಿ ಮಾಡಲಾಗಿದೆ.

ಬೆಂಗಳೂರು-ಹುಬ್ಬಳ್ಳಿ-ಹಾವೇರಿಗೆ ಟಿಕೆಟ್ ದರ ಹೀಗಿದೆ

ಬೆಂಗಳೂರು-ಹುಬ್ಬಳ್ಳಿ-ಹಾವೇರಿಗೆ ಟಿಕೆಟ್ ದರ ಹೀಗಿದೆ

ಅದೇ ರೀತಿ ಬೆಂಗಳೂರಿನಿಂದ ಹುಬ್ಬಳ್ಳಿಗೆ ಕೆಎಸ್ಆರ್‌ಟಿಸಿ ಬಸ್‌ಗಳ ಪ್ರಯಾಣದ ದರ ಎಸಿ ಸ್ಲೀಪರ್ 960 ರಿಂದ 1,140ರೂ.ವರೆಗೆ ಇದೆ. ನಾನ್‌ ಎಸಿ ಸ್ಲೀಪರ್ 797ರೂ.ನಿಂದ 943ರೂ.ಇದೆ.

ಈ ಮಾರ್ಗಕ್ಕೆ ಖಾಸಗೀ ಬಸ್‌ಗಳ ದರ ನೋಡುವುದಾದರೆ ನಾನ್ ಎಸಿ ಸ್ಲೀಪರ್ ವಿಆರ್ ಎಲ್ 1,800 ರೂ., ಸುಗಮ ಟೂರಿಸ್ಟ್ 1,300 ರೂ. ನಿಂದ 1,450 ಇದೆ. ಎಸ್‌ಆರ್‌ಇ 1,615ರೂ. ಇದ್ದರೆ, ರಷ್ಮಾ ಟ್ರಾವೆಲ್ಸ 1,600 ರೂ. ಹಣ ನಿಗದಿಗೊಳಿಸಿದೆ.

ಬೆಂಗಳೂರಿನಿಂದ ಹಾವೇರಿಗೆ ಕೆಎಸ್ಆರ್‌ಟಿಸಿ ಬಸ್‌ಗಳ ಪ್ರಯಾಣದ ದರ ಎಸಿ ಸೆಮಿ ಸ್ಲೀಪರ್ 788 (ಐರಾವತ) ಇದೆ. ನಾನ್ ಎಸಿ ಸ್ಲೀಪರ್ ರೂ.700 ರಿಂದ 824 ರೂ. ಇದೆ. ಇದೇ ಬೆಂಗಳೂರಿನಿಂದ ಹಾವೇರಿಗೆ ಖಾಸಗೀ ಬಸ್‌ಗಳು ಪ್ರಯಾಣದ ದರ ಸುಗಮ ಟೂರಿಸ್ಟ್ ಎಸಿ ಸ್ಲೀಪರ್ 1,400 ರೂ., ನಾನ್ ಎಸಿ ಸ್ಲೀಪರ್ ರೂಬಿ ಟೂರ್ಸ್‌ ಆಂಡ್‌ ಟ್ರಾವೆಲ್ಸ್ 999ರೂ., ಎಸ್‌ಆರ್‌ಎಸ್‌ 1,450ರೂ., ಸುಗಮ ಟೂರಿಸ್ಟ್ 1,300 ರೂ. ಗೆ ಏರಿಕೆ ಆಗಿದೆ.

ಸರ್ಕಾರದ ಎಚ್ಚರಿಕೆ, ಕ್ರಮ ಒಮ್ಮೆ ಆದರೂ ಜಾರಿ ಆಗಲಿ

ಸರ್ಕಾರದ ಎಚ್ಚರಿಕೆ, ಕ್ರಮ ಒಮ್ಮೆ ಆದರೂ ಜಾರಿ ಆಗಲಿ

"ಹಬ್ಬದಲ್ಲಿ ವಿಶೇಷ ಬಸ್‌ಗಳು ನಿಯೋಜನೆಗೊಳ್ಳುತ್ತಿದ್ದಂತೆ ಬೇಗನೇ ಎಲ್ಲ ಆಸನಗಳು ಬುಕ್ ಆಗಿಬಿಡುತ್ತವೆ. ನಂತರ ಪ್ರಯಾಣಿಕರು ಅನಿವಾರ್ಯವಾಗಿ ಖಾಸಗಿ ಬಸ್‌ಗಳನ್ನು ಅವಲಂಬಿಸಬೇಕಾಗುತ್ತದೆ. ಆದ್ದರಿಂದ ಸಾರಿಗೆ ಇಲಾಖೆ ಇನ್ನಷ್ಟು ಹೆಚ್ಚುವರಿ ಬಸ್ ಬಿಡಬೇಕು. ಜೊತೆಗೆ ಮನಬಂದಂತೆ ಪ್ರಯಾಣದ ದರ ಹೆಚ್ಚಿಸುವ ಖಾಸಗಿ ಬಸ್ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸರ್ಕಾರದ ಎಚ್ಚರಿಕೆ ಕ್ರಮಗಳು ಒಮ್ಮೆಯಾದರೂ ಹಬ್ಬದ ವೇಳೆ ಜಾರಿಯಾಗಬೇಕು," ಎಂದು ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಹುಬ್ಬಳ್ಳಿಯ ತೆರಳಲಿರುವ ಪ್ರಯಾಣಿಕರ ವಿಜಯ್ ಲಕ್ಷ್ಮೇಶ್ವರ್ ಬೇಸರ ವ್ಯಕ್ತಪಡಿಸಿದರು.

English summary
Private buses ready for Diwali extortion Belagavi Rs 3,500, Hubli Rs 1,800 ticket price. Karnataka government was silent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X