ಜಂತಕಲ್ ಕೇಸ್ : ಎಸ್ಐಟಿ ವಶಕ್ಕೆ ಐಎಎಸ್ ಅಧಿಕಾರಿ ಗಂಗಾರಾಮ್

Posted By:
Subscribe to Oneindia Kannada

ಬೆಂಗಳೂರು, ಮೇ 15: ಜಂತಕಲ್ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು, ಕರ್ನಾಟಕದ ಐಎಎಸ್ ಅಧಿಕಾರಿ ಗಂಗಾರಾಮ್ ಬಡೇರಿಯಾ ಅವರನ್ನು ಬಂಧಿಸಿದ್ದಾರೆ. ಮುಜರಾಯಿ ಇಲಾಖೆಯ ಅಧಿಕಾರಿಯಾಗಿ ಗಂಗಾರಾಮ್ ಕಾರ್ಯನಿರ್ವಹಿಸುತ್ತಿದ್ದಾರೆ. ಎಸ್ಐಟಿ ವಶಕ್ಕೆ ನ್ಯಾಯಾಲಯದ ಮುಂದೆ ಅಧಿಕಾರಿಯನ್ನು ಹಾಜರುಪಡಿಸಲಾಗಿದ್ದು, ಮೇ 14ರ ತನಕ ಎಸ್ಐಟಿ ವಶಕ್ಕೆ ನೀಡಲಾಗಿದೆ.

ಎಚ್ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾಗಿದ್ದ ಕಾಲದಲ್ಲಿ ಗಣಿಗಾರಿಕೆ ಇಲಾಖೆಯಲ್ಲಿ ಕಾರ್ಯದರ್ಶಿಯಾಗಿದ್ದ ಗಂಗಾರಾಮ್ ಅವರು ಅಕ್ರಮ ಗಣಿಗಾರಿಕೆಗೆ ನೆರವು ನೀಡಿದ ಆರೋಪ ಹೊತ್ತುಕೊಂಡಿದ್ದಾರೆ.

Karnataka: Principal Secretary Gangaram arrested in connection with Janthakal mining case

ವಿಶೇಷ ತನಿಖಾ ತಂಡ (ಎಸ್ಐಟಿ) ವು ಈಗಾಗಲೇ ಗಂಗಾರಾಮ್ ಸೇರಿದಂತೆ ಎಂ ಬಸಪ್ಪ ರೆಡ್ಡಿ ವಿ ಉಮೇಶ್, ಐ ಪೆರುಮಾಳ್, ಕೆ ಎಸ್ ಮಂಜುನಾಥ್ ,ಡಿಎಸ್ ಅಶ್ವಥ್ ಜೀಜಾ ಹರಿಸಿಂಗ್, ಮಹೇಂದ್ರ ಜೈನ್, ಕೆ ಶ್ರೀನಿವಾಸ್, ಎಂ ರಾಮಪ್ಪ ಹಾಗೂ ಶಂಕರಲಿಂಗಯ್ಯ ಮುಂತಾದ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka: Principal Secretary Gangaram arrested in connection with Janthakal mining case. The Lokayukta Special Investigating team probing the Janthakal mining case arrested a senior IAS officer in Karnataka on Monday. Gangaram Bhaderia serving as Principal Secretary of Mujurai and stamping
Please Wait while comments are loading...