Price Hikes in Karnataka: ಏನೆಲ್ಲಾ ಬೆಲೆ ಜಾಸ್ತಿ ಆಗಿದೆ ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್!
Price Hikes in Karnataka: ಕರ್ನಾಟಕದಲ್ಲಿ ಬೆಲೆ ಏರಿಕೆಯ ಬಿಸಿ ಜೋರಾಗಿದೆ. ರಾಜ್ಯ ಸರ್ಕಾರವು ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಹಲವು ಜನರಿಗೆ ನೆರವಾಗಿದೆ. ಆದರೆ, ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿವಿಧ ಬೆಲೆ ಏರಿಕೆಯಿಂದ ಜನ ಹೈರಾಣಾಗಿದ್ದಾರೆ. ಈ ಬೆಲೆ ಏರಿಕೆಯನ್ನು ನೋಡಿ ಗ್ಯಾರಂಟಿ ಯೋಜನೆಗಳ ಪರವಾಗಿ ಇದ್ದವರೂ ಈಗ ಗ್ಯಾರಂಟಿ ಯೋಜನೆಗಳ ಬಗ್ಗೆ ತಮ್ಮ ಬೇಸರವನ್ನು ಹೊರ ಹಾಕುತ್ತಿದ್ದಾರೆ. ರಾಜ್ಯ ಸರ್ಕಾರದ ಬೆಲೆ ಏರಿಕೆಯ ನಡುವೆ ಕೇಂದ್ರ ಸರ್ಕಾರ ಸಹ ಕೆಲವೊಂದು ಸೇವೆಗಳ ಹಾಗೂ ಪರೋಕ್ಷ ತೆರಿಗೆಯನ್ನು ಮುಂದುವರಿಸಿದೆ. ಬೆಲೆ ಏರಿಕೆಯ ವಿಚಾರದಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ನಡುವೆ ಆರೋಪ ಹಾಗೂ ಪ್ರತ್ಯಾರೋಪ ಮುಂದುವರಿದಿದೆ. ಅದರ ಸಂಪೂರ್ಣ ಮಾಹಿತಿ ಇಲ್ಲಿದೆ. ಯಾವೆಲ್ಲದರ ಬೆಲೆ ಏರಿಕೆಯಾಗಿದೆ ಎನ್ನುವ ಮಾಹಿತಿ ನೋಡೋಣ..
ರಾಜ್ಯದ ಜನ ಬೆಲೆ ಏರಿಕೆಯಿಂದ ಹೈರಾಣಾಗಿದ್ದಾರೆ. ಪ್ರತಿ ಸಣ್ಣ ಉತ್ಪನ್ನದಿಂದ ಸಂಚಾರ ಸೇವೆಯ ವರೆಗೆ ಹಲವು ಸೇವೆಯಲ್ಲಿ ಬೆಲೆ ಏರಿಕೆಯಾಗಿದೆ. ಇದೀಗ ಈ ರೀತಿ ವಿವಿಧ ಸೇವೆ ಹಾಗೂ ವಸ್ತುಗಳ ಬೆಲೆ ಏರಿಕೆಯನ್ನು ಗ್ಯಾರಂಟಿ ಯೋಜನೆಗಳಿಗೆ ಅನುದಾನ ಸರಿದೂಗಿಸುವ ಉದ್ದೇಶದಿಂದಲೇ ಮಾಡಲಾಗುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪ ಮಾಡುತ್ತಿದ್ದರೆ. ನಿರಂತರ ಬೆಲೆ ಏರಿಕೆ ಸಾರ್ವಜನಿಕರ ಮನಸ್ಸಿನಲ್ಲೂ ಇದೇ ಪ್ರಶ್ನೆ ಮೂಡುವುದಕ್ಕೆ ಕಾರಣವಾಗಿದೆ.

ನಂದಿನಿ ಹಾಲು ಹಾಗೂ ಮೊಸರು ಸೇರಿದಂತೆ ವಿವಿಧ ಉತ್ಪನ್ನಗಳ ಬೆಲೆ ಏರಿಕೆಯಾದ ಸಂದರ್ಭದಲ್ಲಿ ಜನ ಸಹ ಅಷ್ಟೊಂದು ಆಕ್ರೋಶಿತರಾಗಿರಲಿಲ್ಲ. ಆದರೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸೇರಿದಂತೆ ಒಂದೊಂದೇ ವಸ್ತು ಹಾಗೂ ಸೇವೆಗಳ ಬೆಲೆ ಏರಿಕೆಯಾಗುತ್ತಿದ್ದಂತೆಯೇ ಜನ ಸಹ ಗರಂ ಆಗುತ್ತಿದ್ದಾರೆ. ನಿರಂತರ ಬೆಲೆ ಏರಿಕೆಯ ಬಗ್ಗೆ ಜನರಲ್ಲೂ ಇದೀಗ ಅಸಮಾಧಾನ ಹೆಚ್ಚಳವಾಗುತ್ತಿದೆ. ಏಕಾಏಕಿ ಬೆಂಗಳೂರು ಮೆಟ್ರೋ ಬೆಲೆಯನ್ನು ಶೇ 47ಕ್ಕೂ ಹೆಚ್ಚು ಪ್ರಮಾಣ ಹೆಚ್ಚಳ ಮಾಡಿರುವುದು ಜನರಲ್ಲಿ ಆಕ್ರೋಶ ಮೂಡುವುದಕ್ಕೆ ಕಾರಣವಾಗಿದೆ.
ಕರ್ನಾಟಕದಲ್ಲಿ ಏನೆಲ್ಲ ಬೆಲೆ ಏರಿಕೆಯಾಗಿದೆ ಎನ್ನುವ ವಿವರ ಇಲ್ಲಿದೆ
ಕರ್ನಾಟಕದಲ್ಲಿ ವಿವಿಧ ಸೇವೆಗಳ ಬೆಲೆ ಏರಿಕೆ ಮಾಡಲಾಗಿದೆ ಎಂದು ಸಂಸದ ಪಿ.ಸಿ ಮೋಹನ್ ಅವರು ಟ್ವೀಟ್ ಮಾಡಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರವು ಭಾರೀ ಬೆಲೆ ಏರಿಕೆ ಮಾಡಿದೆ. ಇದರಿಂದ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಿದ್ದು ಯಾವ ಸೇವೆಯ ಬೆಲೆ ಎಷ್ಟು ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎನ್ನುವ ವಿವರ ಕೊಟ್ಟಿದ್ದಾರೆ.
ಸೇವೆ - ಬೆಲೆ ಏರಿಕೆ ಪ್ರಮಾಣ
- ಆಸ್ತಿ ನೋಂದಣಿ ಶುಲ್ಕ: 600%
- ಆಸ್ತಿ ಮಾರ್ಗದರ್ಶನ ಮೌಲ್ಯ / ಗೈಡ್ ವ್ಯಾಲ್ಯೂವ್: 30%
- ವಾಹನ ನೋಂದಣಿ ಶುಲ್ಕ: 10%
- ಆಸ್ಪತ್ರೆ ಸೇವಾ ಶುಲ್ಕ: 5%
- ಸರ್ಕಾರಿ ಕಾಲೇಜು ಶುಲ್ಕ : 10%
- ಬೆಂಗಳೂರು ಮೆಟ್ರೋ ಪ್ರಯಾಣ ದರ: 50%
- ವಿದ್ಯುತ್ ವಾಹನ ತೆರಿಗೆ: 10%
- ವಿದ್ಯುತ್ ಶುಲ್ಕ: 14.5%
- ನೀರಿನ ಶುಲ್ಕ : 30%
- ಆಸ್ತಿ ತೆರಿಗೆ: 25%
- ಬೀಜ / ರಸಗೊಬ್ಬರ ಬೆಲೆಗಳು: 60%
- ಬಿಯರ್ ಬೆಲೆ: 45%
- ಹಾಲಿನ ಬೆಲೆ: 15%
- ಬಸ್ ದರ: 15%
ಕೊಟ್ಟಂತೆ ಕೊಟ್ಟು ಕಸಿದುಕೊಳ್ಳುವ ಪ್ರವೃತ್ತಿ: ಕರ್ನಾಟಕ ಕಾಂಗ್ರೆಸ್ ಸರ್ಕಾರವು ಉಚಿತ ಸೌಲಭ್ಯಗಳ ಭರವಸೆಯನ್ನು ಕೊಡುತ್ತಲ್ಲೇ ವಿವಿಧ ವಸ್ತು ಹಾಗೂ ಸೇವೆಗಳ ಬೆಲೆ ಏರಿಕೆ ಮಾಡುತ್ತಿರುವುದು ಹಾಸ್ಯಾಸ್ಪದವಾಗಿದೆ. ಆದರೆ ಇಲ್ಲಿ ಯಾವುದೂ ಉಚಿತವಲ್ಲ. ಒಂದು ಕೈಯಿಂದ ಕೊಟ್ಟು ಇನ್ನೊಂದು ಕೈಯಿಂದ ಅದಕ್ಕಿಂತ ಹೆಚ್ಚಿನದನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಅವರು ದೂರಿದ್ದಾರೆ.












Click it and Unblock the Notifications