ಲವ್ ಜಿಹಾದ್: 10 ಮುಸ್ಲಿಂ ಹುಡುಗಿಯರನ್ನು ಬಲೆಗೆ ಬೀಳಿಸಿ: ಪ್ರಮೋದ್ ಮುತಾಲಿಕ್ ಕರೆ
ಪ್ರಮೋದ್ ಮುತಾಲಿಕ್ ಅವರು ರಾಜ್ಯದ ಹಿಂದೂ ಪುರುಷರು 'ಲವ್ ಜಿಹಾದ್' ಎದುರಿಸಲು ನೀವು ಮುಸ್ಲಿಂ ಹುಡುಗಿಯರನ್ನು ಬಲೆಗೆ ಬೀಳಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದ್ದಾರೆ.
ಬಾಗಲಕೋಟೆ, ಫೆಬ್ರವರಿ 20: ಕರ್ನಾಟಕದಲ್ಲಿರುವ ಶ್ರೀರಾಮ ಸೇನೆಯ ಅಧ್ಯಕ್ಷರಾದ ಪ್ರಮೋದ್ ಮುತಾಲಿಕ್ ಅವರು ಸಾರ್ವಜನಿಕ ವೇದಿಕೆಗಳಲ್ಲಿ ವಿವಾದಾತ್ಮಕ ಹೇಳಿಕೆ ನೀಡುವುದರಲ್ಲಿ ಹೆಚ್ಚು ಪ್ರಸಿದ್ಧಿ. ಭಾನುವಾರ ಸಹ ಬಾಗಲಕೋಟೆಯಲ್ಲಿ ಕಾರ್ಯಕ್ರಮವೊಂದರಲ್ಲಿ ಹಿಂದು ಯುವಕರಿಗೆ ಕರೆ ನೀಡುವ ಅವರ ಹೇಳಿಕೆ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಪ್ರಮೋದ್ ಮುತಾಲಿಕ್ ಅವರು ರಾಜ್ಯದ ಹಿಂದೂ ಪುರುಷರು 'ಲವ್ ಜಿಹಾದ್' ಎದುರಿಸಲು ನೀವು ಹತ್ತು ಮುಸ್ಲಿಂ ಹುಡುಗಿಯರನ್ನು ಬಲೆಗೆ ಬೀಳಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದ್ದಾರೆ. ಈ ಮೂಲಕ ವಿವಾದದ ಕಿಡಿ ಹೊತ್ತಿಸಿದ್ದು, ಕೆಲವರು ಇದನ್ನು ಆಕ್ಷೇಪಿಸಿದ್ದಾರೆ.
ಕರ್ನಾಟಕ ರಾಜದಲ್ಲಿ ಏನಾಗುತ್ತಿದೆ ಎಂಬುದು ನಮಗೆ ಸ್ಪಷ್ಟವಾಗಿ ಗೊತ್ತಿದೆ. ಅದಕ್ಕೆ ನಮ್ಮ ಬಳಿಕ ಪರಿಹಾರವು ಇದೆ. ನಾವು ಒಬ್ಬ ಹಿಂದೂ ಹುಡುಗಿಯನ್ನು 'ಲವ್ ಜಿಹಾದ್' ಮೂಲಕ ಕಳೆದುಕೊಂಡರೆ, ಅದಕ್ಕೆ ಪ್ರತೀಕಾರವಾಗಿ 10 ಮುಸ್ಲಿಂ ಮಹಿಳೆಯರನ್ನು ಬಲೆಗೆ ಬೀಳಿಸಿಕೊಳ್ಳಬೇಕು. ಆಮಿಷ ಒಡ್ಡಬೇಕು. ಇದು ಸಂಭವಿಸಿದಲ್ಲಿ ಅಂತಹ ಹಿಂದೂಗಳಿಗೆ ಶ್ರೀರಾಮ ಸೇನೆಯು ಬೆಂಬಲವಾಗಿ ಹಿಂದೆ ನಿಲ್ಲುತ್ತದೆ. ನಿಮಗೆ ಸಂಪೂರ್ಣ ರಕ್ಷಣೆ ಹಾಗೂ ಉದ್ಯೋಗ ಒದಗಿಸುತ್ತದೆ ಎಂದು ಕರೆ ನೀಡಿದ್ದಾರೆ.

ಬಾಹ್ಯ ಶಕ್ತಿಗಳಿಂದಲೇ ನಾವು ಹಿಂದೂ ಧರ್ಮ ರಕ್ಷಿಸಬೇಕಿದೆ. ಹಿಂದೂ ಹೆಣ್ಣು ಮಕ್ಕಳಿಗೆ ಲವ್ ಜಿಹಾದ್ ಬಗ್ಗೆ ಕುರಿತು ತಿಳುವಳಿಕೆ ಎಚ್ಚರಿಕೆ ನೀಡುವುದು ಶ್ರೀರಾಮ ಸೇನೆಯ ಕರ್ತವ್ಯವು ಆಗಿದೆ ಎಂದರು. ಲವ್ ಜಿಹಾದ್ ನಿಂದ ಶೋಷಣೆಗೆ ಒಳಗಾಗಿ ದೇಶಾದ್ಯಂತ ನೂರಾರು ಹೆಣ್ಣು ಮಕ್ಕಳನ್ನು ನಾವೆಲ್ಲ ಕಳೆದುಕೊಳ್ಳುತ್ತಿದ್ದೇವೆ. ಈ ಬಗ್ಗೆ ಹಿಂದೂ ಯುವತಿಯರು/ಮಹಿಳೆಯರಲ್ಲಿ ಎಚ್ಚರಿಸುವ ಜವಾಬ್ದಾರಿ ನಾವು ತೆಗೆದುಕೊಳ್ಳಬೇಕು ಎಂದು ತಿಳಿಸಿದರು.
ಬಿಜೆಪಿಯದ್ದು ನಕಲಿ-ದ್ವಿಮುಖ ಹಿಂದುತ್ವ
ಪ್ರಮೋದ್ ಮುತಾಲಿಕ್ ಅವರು ಸಾರ್ವಜನಿಕ ಸಭೆಗಳಲ್ಲಿ ವಿವಾದಾತ್ಮಕ ಮತ್ತು ಕೋಮುವಾದಿ ಹೇಳಿಕೆಗಳಿಗೆ ಹೆಸರುವಾಸಿ ಆಗಿದ್ದಾರೆ. ಕೆಲವು ದಿನಗಳ ಹಿಂದೆ ಹಿಂದುತ್ವ ಸಿದ್ಧಾಂತಗಗಳ ಜೊತೆ ನಿಂತು ಅದನ್ನು ರಕ್ಷಿಸಲು ತನ್ನದೇ ಸದಸ್ಯರಿಂದ ಅಡೆತಡೆಗಳನ್ನು ಎದುರಿಸಿದ್ದೇನೆ ಎಂದಿದ್ದರು. ಬಿಜೆಪಿಯ ನಕಲಿ ಮತ್ತು ದ್ವಿಮುಖ ಹಿಂದುತ್ವವು ಪಕ್ಷಕ್ಕೆ ಮತ್ತಷ್ಟು ಹಾನಿ ಉಂಟಾಗುತ್ತದೆ ಎಂದು ಅವರು ಎಚ್ಚರಿಕೆ ಸಹ ನೀಡಿದ್ದರು.

ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಕರಾವಳಿ ಕರ್ನಾಟಕದ ಕಾರ್ಕಳ ಕ್ಷೇತ್ರದಿಂದ ಪ್ರಮೋದ್ ಮುತಾಲಿಕ್ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಗುರಿ ಇಟ್ಟುಕೊಂಡಿದ್ದಾರೆ. ಆದರೆ ಈ ಬಗ್ಗೆ ಮಾಹಿತಿ ಬಹಿರಂಗವಾಗಬೇಕಿದೆ.












Click it and Unblock the Notifications