ರೈತರ ಹೆಸರಲ್ಲಿ ಸರ್ಕಾರ ನಂದಿನಿ ಹಾಲಿನ ದರ ಹೆಚ್ಚಿಸುತ್ತಿದ್ದಾರೆ, ಆದರೆ ಅವರಿಗೆ ಕೊಡುವುದೇ ಅನುಮಾನ: ಪ್ರಲ್ಹಾದ್ ಜೋಶಿ

ಹುಬ್ಬಳ್ಳಿ,ಸೆಪ್ಟೆಂಬರ್‌ 14: ಹಾಲಿನ ದರ ಏರಿಕೆ ಸುಳಿವು ಕೊಟ್ಟ ಸಿಎಂ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಕಾರಿದ್ದಾರೆ. ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ರೈತರಿಗೆ ಪ್ರೋತ್ಸಾಹ ಧನ ನೀಡಿಲ್ಲ. ಈಗ ರೈತರ ಕಾರಣ ಹೇಳಿ ದರ ಹೆಚ್ಚಿಸುತ್ತಿದ್ದಾರೆ. ಆದರೆ ಅವರಿಗೆ (ರೈತರಿಗೆ) ಕೊಡುತ್ತಾರೋ ಇಲ್ಲವೋ ಎಂಬುದು ಅನುಮಾನ ಎಂದು ಹೇಳಿದ್ದಾರೆ.

ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ರೈತರಿಗೆ ಸಹಾಯ ಮಾಡುವ ಹೆಸರಲ್ಲಿ ಹಾಲಿನ ದರವನ್ನು ರಾಜ್ಯ ಸರ್ಕಾರ ಏರಿಕೆ ಮಾಡಿದೆ. ಆದರೆ ಪ್ರೋತ್ಸಾಹ ದರವನ್ನು ಎರಡು ಮೂರು ತಿಂಗಳು ಕೊಟ್ಟು ಬಂದ್ ಮಾಡುತ್ತಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

Pralhad Joshi slams Congress govt for increasing the Nandini Milk price in name of the farmers

ಹಾಲಿನ ದರ ಏರಿಕೆ ಮಾಡಿರುವುದನ್ನು ನೋಡಿದರೇ ಸರ್ಕಾರ ದಿವಾಳಿ ಎಂಬುವುದಕ್ಕೆ ಇದೊಂದೆ ಸೂಕ್ತ ನಿದರ್ಶನವಾಗಿದೆ. ಮುಡಾ, ವಾಲ್ಮೀಕಿ ನಿತ್ಯವೂ ಒಂದು ಹಗರಣ. ಕಾಂಗ್ರೆಸ್ ಸರ್ಕಾರ ಹಗರಣದ ಸಾಮ್ರಾಜ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ರಾಜ್ಯ ಸರ್ಕಾರ ರಾಜ್ಯದ ಅಭಿವೃದ್ಧಿ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ. ಭ್ರಷ್ಟಾಚಾರ ಬಿಟ್ಟರೇ ಬೇರೆ ಏನನ್ನೂ ಮಾಡುತ್ತಿಲ್ಲ. ಸರ್ಕಾರದ ವ್ಯವಸ್ಥೆ ಕುಸಿದು ಬಿದ್ದಿದೆ. ಈ ನಿಟ್ಟಿನಲ್ಲಿ ಕೆಎಂಎಫ್ ಕೂಡ ಅದೇ ದಾರಿಯಲ್ಲಿ ಸಾಗುತ್ತಿದೆ ಎಂದು ಅವರು ಹೇಳಿದರು.

ಕಾಂಗ್ರೆಸ್ ಸರ್ಕಾರ ಬಂದಾಗ ದ್ವೇಷ ದ್ರೋಹ ಕೃತ್ಯಗಳು ಸರ್ವೇ ಸಾಮಾನ್ಯವಾಗಿದೆ. ಗಣಪತಿ ಪ್ರತಿಷ್ಠಾಪನೆ ಮಾಡಿದವರನ್ನು ಎ-1 ಆರೋಪಿ ಮಾಡಿದ್ದು, ಎಸ್.ಪಿ ಗೆ ಹಾಗೂ ಗೃಹ ಸಚಿವರಿಗೆ ನಾಚಿಕೆ ಮಾನ ಮರ್ಯಾದೆಯೇ ಇಲ್ಲವಾಗಿದ್ದು, ರಾಜ್ಯವನ್ನು ಪಾಕಿಸ್ತಾನ ಮಾಡಿದ್ದೀರಾ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಕ್ರೋಶ ವ್ಯಕ್ತಪಡಿಸಿದರು.

ದೇಶದಲ್ಲಿ ಯುಪಿಎ ಕಾಲದಲ್ಲಿ ಯಾವ ರೀತಿ ಭ್ರಷ್ಟಾಚಾರ ಆಗಿತ್ತೋ ಅದೇ ರೀತಿ‌ಇಲ್ಲೂ ಸೀರಿಸ್ ಸ್ಕ್ಯಾಮ್ ನಡದಿವೆ. ಇದು ನಾಚಿಕೆ ಮಾನ ಮರ್ಯಾದೆ ಇರಲಾರದ ಸರ್ಕಾರ. ಗಣೇಶ ಕೂರಿಸಿದವರನ್ನು A1 ಆರೋಪಿ ಮಾಡಿದ್ದಾರೆ. ಅಲ್ಲಿನ SP ಗೆ ಮಾನ ಮರ್ಯಾದೆ ಇದೆಯಾ.? ಗೃಹ ಸಚಿವರಿಗೆ ಏನಾಗಿದೆ ಎಂದ ಜೋಶಿ ಕಿಡಿ ಕಾರಿದರು.

ನೀವೆನು ಪಾಕಿಸ್ತಾನ ಮಾಡಲು ಹೊರಟಿದ್ದೀರಾ..? ಪಾಕಿಸ್ತಾನ ಮಾದರಿ ಆಡಳಿತ ನಡೆಸ್ತೀದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಕಾಲದಲ್ಲಿ ಇಂತಹ ದೇಶದ್ರೋಹ ಕೃತ್ಯಗಳು ನಡೆಯುವುದು ಸರ್ವೇ ಸಾಮಾನ್ಯವಾಗಿದೆ ಎಂದು ಜೋಶಿ ವಾಗ್ದಾಳಿ.

ಕಾರ್ಮಿಕ ಇಲಾಖೆಯಲ್ಲಿ ಲ್ಯಾಪಟಾಪ್ ಕಳ್ಳತನ ಪ್ರಕರಣ ಇದೆಲ್ಲಾ ಮಿಲಾಪಿ ಕುಸ್ತಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಿಡಿಕಾರಿದರು. ಕಾರ್ಮಿಕ ಇಲಾಖೆಯ 101 ಲ್ಯಾಪ್‌ಟಾಪ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಮಕ್ಕಳಿಗೆ ಹಂಚಿಕೆ ಮಾಡೋ ಲ್ಯಾಪಟಾಪ್ ಎಲ್ಲಿ ಹೋಯ್ತು.? ಅವರೇ ಭಾಗಿಯಾಗಿರ್ತಾರೆ. ನಂತರ ದೂರು ಕೊಡ್ತಾರೆ ಇದೆಲ್ಲ ಮಿಲಾಪಿ ಕುಸ್ತಿ ಎಂದರು. ನಿನ್ನೆ ಈ ವಿಚಾರ ದಿಶಾಸಭೆಯಲ್ಲೂ ಚರ್ಚೆ ಆಗಿದೆ. ಕಾರ್ಮಿಕ ಸಚಿವರ ತವರಿನಲ್ಲಿಯೇ ಇಂತಹ ಕಳ್ಳತನ ಪ್ರಕರಣ ಆಗಿದ್ದು, ಈ ಬಗ್ಗೆ ತನಿಖೆ ನಡೆಸಿ ತಪ್ಪತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಿದೆ ಎಂದ ಜೋಶಿ ಆಗ್ರಹಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+