ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಗ್ನಿವೇಶ್ ಹಲ್ಲೆ ಖಂಡಿಸಿ ಟ್ವೀಟ್: ರೈ ಮೇಲೆ ಮುಗಿಬಿದ್ದ ಟ್ವಿಟ್ಟಿಗರು

|
Google Oneindia Kannada News

ಬೆಂಗಳೂರು, ಜುಲೈ 20: ಸ್ವಾಮಿ ಅಗ್ನಿವೇಶ್ ಅವರ ಮೇಲೆ ಬಿಜೆಪಿ ಕಾರ್ಯಕರ್ತರು ನಡೆಸಿರುವ ಖಂಡಿಸಿ ನಟ ಪ್ರಕಾಶ್ ರೈ ಟ್ವೀಟ್ ಮಾಡಿದ್ದಾರೆ.

#ಜಸ್ಟ್ಆಸ್ಕಿಂಗ್ ಎಂಬ ಹ್ಯಾಷ್‌ಟ್ಯಾಗ್ ಬಳಸಿರುವ ರೈ, ಸಾಲು ಸಾಲು ಹಲ್ಲೆಗಳು, ಹತ್ಯೆಗಳ ಕುರಿತು ದನಿ ಎತ್ತಿದ್ದಾರೆ. ನೆಲದ ಕಾನೂನಿಗೆ ವಿರುದ್ಧವಾಗಿ ನಡೆಸುವ ಹೀನ ಕೃತ್ಯಗಳಿಗೆ ಅವಕಾಶ ನೀಡಬಾರದು ಎಂದು ಸುಪ್ರೀಂಕೋರ್ಟ್, ಅವುಗಳ ತಡೆಗೆ ಕಾನೂನು ರೂಪಿಸುವಂತೆ ಸೂಚಿಸಿದೆ.

ಪ್ರಕಾಶ್ ರಾಜ್ 'ಪಪ್ಪಿ ಶೇಮ್' ಟ್ವೀಟ್ ಗೆ ಟ್ವಿಟ್ಟಿಗರು ಲೆಫ್ಟ್-ರೈಟ್ಪ್ರಕಾಶ್ ರಾಜ್ 'ಪಪ್ಪಿ ಶೇಮ್' ಟ್ವೀಟ್ ಗೆ ಟ್ವಿಟ್ಟಿಗರು ಲೆಫ್ಟ್-ರೈಟ್

ಭಿನ್ನಾಭಿಪ್ರಾಯ ಹೊಂದಿರುವ ಧ್ವನಿಗಳನ್ನು ಬೆದರಿಸಲಾಗುತ್ತಿದೆ, ಕೊಲ್ಲಲಾಗುತ್ತಿದೆ. ನೀವು ಉತ್ತರ ಕೊಡುವಿರಾ ಸರ್ ಎಂದು ಪ್ರಕಾಶ್ ರೈ ವ್ಯಂಗ್ಯದ ಪದಗಳಲ್ಲಿ ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿದ್ದಾರೆ.

ಅದಕ್ಕೆ ಕೆಲವರು ಬೆಂಬಲ ನೀಡಿದ್ದರೆ, ಇನ್ನು ಕೆಲವರು ಟೀಕಾಪ್ರಹಾರ ನಡೆಸಿದ್ದಾರೆ. ಪ್ರತಿಯೊಂದಕ್ಕೂ ಮೋದಿಯನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತಿದೆ ಎಂದು ರೈ ವಿರುದ್ಧ ಹರಿಹಾಯ್ದಿದ್ದಾರೆ.

'ಈ ಕಳ್ಳರು ನಮ್ಮನ್ನಾಳಬೇಕಾ'? ಮೋದಿ, ಬಿಜೆಪಿ ಮೇಲೆ ಪ್ರಕಾಶ್ ರೈ ಟ್ವೀಟಾಸ್ತ್ರ'ಈ ಕಳ್ಳರು ನಮ್ಮನ್ನಾಳಬೇಕಾ'? ಮೋದಿ, ಬಿಜೆಪಿ ಮೇಲೆ ಪ್ರಕಾಶ್ ರೈ ಟ್ವೀಟಾಸ್ತ್ರ

ರೈ ಅವರ ಟ್ವೀಟ್‌ಗೆ ಬಂದಿರುವ ತಮಾಷೆಯ ಕೆಲವು ಪ್ರತಿಕ್ರಿಯೆಗಳು ಇಲ್ಲಿವೆ...

ಮೋದಿಜೀ ಹೊಣೆ

ನಿನ್ನೆ ನಾನು ಕೊಠಡಿಯೊಂದರಲ್ಲಿ ಸಿಲುಕಿಬಿದ್ದೆ. ಅದಕ್ಕೆ ಮೋದಿ ಅವರೇ ಹೊಣೆಗಾರರು ಎನಿಸುತ್ತಿದೆ. ಎಲ್ಲದಕ್ಕೂ ಅವರೇ ನಿಜಕ್ಕೂ ಅವರೇ ಹೊಣೆಗಾರರೇ ಎಂದು ಅನ್ಷುಲ್ ಅವ್ತಾನ್ಸ್ ಹೇಳಿದ್ದಾರೆ.

ಸೊಳ್ಳೆ ಕಡಿತಕ್ಕೆ ಮೋದಿ ಕಾರಣ

ನನಗೆ ನಿನ್ನೆ ಮಲಬದ್ಧತೆಯಾಗಿತ್ತು. ಅದಕ್ಕೆ ಮೋದಿ ಅವರೇ ಕಾರಣ ಎಂದು ಒಬ್ಬರು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.

ನನಗೆ ಒಂದು ಸೊಳ್ಳೆ ಕಚ್ಚಿದೆ. ಮೋದಿ ರಾಜೀನಾಮೆ ನೀಡಬೇಕು ಎಂದು ರಾಕಿ ಇಂಡಿಯನ್ ಎಂಬ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

ನಾನೂ ನನ್ನ ಹಾಸಿಗೆಯಿಂದ ಕೆಳಕ್ಕೆ ಉರುಳಿಬಿದ್ದೆ. ಮೋದಿ ಸರ್, ನೀವೇಕೆ ನನ್ನನ್ನು ಕೆಳಕ್ಕೆ ತಳ್ಳಿದಿರಿ? #ಜಸ್ಟ್ಆಸ್ಕಿಂಗ್ ಎಂದು ಧೀನಮಮ್ ರವಿ ಎಂಬುವವರು ತಮಾಷೆ ಮಾಡಿದ್ದಾರೆ.

ರಾಜ್ಯದಲ್ಲಿ ಆದಾಗ ಏಕೆ ಮಾತಾಡಲಿಲ್ಲ?

ಕೆಲವು ದಿನಗಳ ಹಿಂದೆ ಕರ್ನಾಟಕದಲ್ಲಿಯೂ ಜನರ ಗುಂಪು ವ್ಯಕ್ತಿಯನ್ನು ಥಳಿಸಿ ಕೊಂದ ಘಟನೆ ವರದಿಯಾಗಿತ್ತು. ಆಗ ನೀವೆಲ್ಲಿ ಮಲಗಿದ್ದೀರಿ?

ಸಂಸತ್ ಕಲಾಪವನ್ನು ಹಾಳುಗೆಡವುದಕ್ಕೆ ತಮ್ಮ ಮೇಲೆಯೇ ದಾಳಿ ಮಾಡಿಸುವ ಉದ್ದೇಶಿತ ದಾಳಿ ಇದು. ವರದಿ ಹೊರಬರುವವರೆಗೂ ಕಾಯೋಣ ಎಂದು ರಾಮ್‌ವಿಲಾಸ್ ನಾಗ್ ಎಂಬುವವರು ಟ್ವೀಟ್ ಮಾಡಿದ್ದಾರೆ.

ಕೇರಳದಲ್ಲಿ ಆದಿವಾಸಿ ಯುವಕನನ್ನು ಕಟ್ಟಿಹಾಕಿ ಹೊಡೆದು ಕೊಂದ ಘಟನೆ ಬಗ್ಗೆ ಇದುವರೆಗೂ ಏಕೆ ಮಾತನಾಡಲಿಲ್ಲ ಎಂದು ರೈ ಅವರನ್ನು ಪ್ರಶ್ನಿಸಿದ್ದಾರೆ.

ವಿಪರೀತ ಮಳೆ ಸುರಿಯುತ್ತಿದೆ

ನನ್ನ ಊರಲ್ಲಿ ವಿಪರೀತ ಮಳೆ ಸುರಿಯುತ್ತಿದೆ. ಏಕೆ ಮೋದಿಜೀ? ಏಕೆ ನೀವು ಹೀಗೆ ಮಾಡಿದ್ದೀರಿ? ಎಂದು ಒಬ್ಬರು ಟ್ವೀಟ್ ಮಾಡಿದ್ದರೆ, ಮಂಗಳೂರಿನಲ್ಲಿ ಮೀನು ಸಿಗುತ್ತಿಲ್ಲ. ಇದಕ್ಕೆ ಮೋದಿಯೇ ಕಾರಣ ಎಂದು ಒಬ್ಬರು ಸ್ಮೈಲಿಗಳನ್ನು ಬಳಸಿ ತಮಾಷೆ ಮಾಡಿದ್ದಾರೆ.

ಮತ್ತೊಬ್ಬ ತರೂರ್

ದೊಡ್ಡ ದೊಡ್ಡ ಮಾತುಗಳನ್ನು ಆಡುವ ಮತ್ತೊಬ್ಬ ಶಶಿ ತರೂರ್ ಈಗ ಬಂದಿದ್ದಾರೆ ಎಂದು 'ದಿ ಜೆಂಟಲ್ ಜಿಯಾಂಟ್' ಎಂಬ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

ನನ್ನ ಪರ್ಸ್ ಕಳೆದು ಹೋಯಿತು. ಅದು ಮೋದಿ ಅವರಿಂದಲೇ ಆಗಿರುವುದು ಎಂದು ಮತ್ತೊಬ್ಬ ಟ್ವಿಟ್ಟಿಗರು ಮೋದಿ ಮೇಲೆ ಆರೋಪ ಹೊರಿಸುವುದನ್ನು ವ್ಯಂಗ್ಯವಾಡಿದ್ದಾರೆ.

ನನ್ನ ಬೈಕ್ ಪಂಕ್ಚರ್ ಆಗಲು ಮೋದಿ ಹಾಗೂ ಅಮಿತ್ ಶಾ ಕಾರಣ ಎಂದು ಅಣಕಿಸಲಾಗಿದೆ.

ಉತ್ತರ ನೀಡುತ್ತಾರೆಯೇ?

ನಾವು ಕೇಳುವ ಯಾವ ಪ್ರಶ್ನೆಗಾದರೂ ಟೀ ಮಾರುವಾತ ಉತ್ತರ ನೀಡುವುದನ್ನು ನೀವು ನೋಡಿದ್ದೀರಾ? ಅವರನ್ನು ಏಕೆ ಪ್ರಶ್ನಿಸುತ್ತೀರಿ ಸರ್? ಅವರು ಸುಳ್ಳು ಮಾತ್ರ ಹೇಳಬಲ್ಲರು. ಉಗ್ರರ ವಿರುದ್ಧ ಅವರು ಮಾತನಾಡುವುದಿಲ್ಲ. ಏಕೆಂದರೆ ಅವರೇ ಆ ತಂಡದ ಮುಖಂಡ ಎಂದು ಹಸಿ ಇಂಡಿಯಾ ಎಂಬ ಖಾತೆಯಿಂದ ರೈ ಅವರನ್ನು ಬೆಂಬಲಿಸಿ ಟ್ವೀಟ್ ಮಾಡಲಾಗಿದೆ.

ಹಿಂದೂಗಳೂ ಸುರಕ್ಷಿತರಲ್ಲ

ಮೋದಿ ಅವರ ಹೊಸ 'ಮೋದಿಫೈಡ್' ಭಾರತದಲ್ಲಿ ಈಗ ಹಿಂದುಗಳು ಕೂಡ ಸುರಕ್ಷಿತರಾಗಿಲ್ಲ ಎಂದು ಮನೋಜ್ ಎಂಬುವವರು ಟ್ವೀಟ್ ಮಾಡಿದ್ದಾರೆ.

ಮತ್ತೊಂದು ಚರ್ಚೆ ಬೇಕೆನಿಸುತ್ತದೆ

ಈ ಹಿಂದೆ ಟಿವಿ ವಾಹಿನಿಯೊಂದರಲ್ಲಿನ ಚರ್ಚೆ ವೇಳೆ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಅವರ ಮಾತುಗಳಿಗೆ ಪ್ರತಿಕ್ರಿಯೆ ನೀಡಲು ತಡವರಿಸಿದ್ದ ಪ್ರಕಾಶ್ ರೈ ಅವರಿಗೆ ಅನೇಕರು ಆ ಗಳಿಗೆಯನ್ನು ನೆನಪಿಸಿದ್ದಾರೆ.

ನಿಮಗೆ ಸ್ವಾಮಿ ಅವರಿಂದ ಮತ್ತೊಂದು ಚರ್ಚೆಯ ಡೋಸ್‌ನ ಅಗತ್ಯವಿದೆ ಎಂದು ಚಂದನ್ ಕುಮಾರ್ ಯಾದವ್ ಎಂಬುವವರು ಟ್ವೀಟ್ ಮಾಡಿದ್ದಾರೆ.

ಇದು ಭಾರತ, ಅಚ್ಚರಿಯಾಯಿತೇ?

ಇದು ಸಿರಿಯಾ ಅಲ್ಲ, ತಾಲಿಬಾನ್ ಅಲ್ಲ, ಪಾಕಿಸ್ತಾನವೂ ಅಲ್ಲ. ಇದು ಭಾರತ. ಅಚ್ಚರಿಯಾಯಿತೇ? ಎಂದು ಲಕ್ಕಿ ಪರಿಂದಾ ಎಂಬ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

ಹಾರ್ವರ್ಡ್‌ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದ ರಾಜ್ಯದ ಸಚಿವನೊಬ್ಬ ಕೊಲೆ ಆರೋಪಿಗಳಿಗೆ ಹಾರ ಹಾಕಿ ಸನ್ಮಾನಿಸುವ, ಬಳಿಕ ಕ್ಷಮೆ ಕೋರುವ ಊರಿನಲ್ಲಿ ಇಂತಹ ವಿದ್ಯಮಾನಗಳು ನಡೆಯುತ್ತದೆ ಎಂದು ವಿಜಯ್ ಸರ್ವೈವ ಎಂಬುವವರು ಟ್ವೀಟ್ ಮಾಡಿದ್ದಾರೆ.

ತಾಲಿಬಾನ್‌ಗೆ ಈಗ ಪ್ರೀತಿ ಹರಡುವ ನೆಲದಿಂದ ದೊಡ್ಡ ಮಟ್ಟದ ಸ್ಪರ್ಧೆ ಎದುರಾಗುತ್ತಿದೆ ಎಂದು ಭಾರತವು ತಾಲಿಬಾನ್‌ ಆಡಳಿತದಂತೆ ಆಗುತ್ತಿದೆ ಎಂದು ಟ್ವೀಟ್ ಮಾಡಲಾಗಿದೆ.

English summary
Actor Prakash Rai tweet condemning an attack on Swami Agnivesh was got trolled by many twitterians. Many people supoorted Prakash rai's view on this issue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X