ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂಡರ್ ಗ್ರೌಂಡ್ ಮಾಫಿಯಾ ನಡೆಸ್ತಾ ಇದ್ದೀರಾ? ಪ್ರಕಾಶ್ ರೈ #JustAsking

By Prasad
|
Google Oneindia Kannada News

ಬೆಂಗಳೂರು, ಏಪ್ರಿಲ್ 30 : "ಯಡಿಯೂರಪ್ಪನವರು ರೆಡ್ಡಿಗಳನ್ನು ಕ್ಷಮಿಸ್ತಾರಂತೆ. ರೆಡ್ಡಿಗಳನ್ನು ಕ್ಷಮಿಸೋದಕ್ಕೆ ನೀವ್ಯಾರು? ಕೊಳ್ಳೆ ಹೊಡೆದದ್ದು ನಮ್ಮನ್ನ, ನಮ್ಮ ಪ್ರಕೃತಿಯನ್ನ, ನಮ್ಮ ದುಡ್ಡನ್ನ. ಹಂಚ್ಕೊಂಡಾಯ್ತು, ನೀವು ಕ್ಷಮಿಸ್ತೀರಂತೆ, 135 ಸೀಟು ಬರುತ್ತಂತೆ!"

ತಮಿಳು ಮತ್ತು ತೆಲುಗಿನಲ್ಲಿ ಖ್ಯಾತರಾಗಿರುವ ಕನ್ನಡ ಚಿತ್ರನಟ ಪ್ರಕಾಶ್ ರೈ ಅವರ ಒಂದೊಂದು ಮಾತುಗಳಲ್ಲೂ ಆಕ್ರೋಶದ ಜ್ವಾಲಾಮುಖಿ. ಕಣ್ಣುಗಳಲ್ಲಿ ತಮ್ಮ ವಿರೋಧಿಗಳನ್ನು ನಿಂತಲ್ಲೇ ಸುಟ್ಟು ಬಿಸಾಡುವ ಪ್ರಖರತೆ. ಸೋಮವಾರ ಅವರು ಟ್ವಿಟ್ಟರಿನಲ್ಲಿ ಹಾಕಿರುವ ವಿಡಿಯೋದಲ್ಲಿ ಮತ್ತೆ ಬಿಜೆಪಿ, ನರೇಂದ್ರ ಮೋದಿ, ಯಡಿಯೂರಪ್ಪ, ಅಮಿತ್ ಶಾ ವಿರುದ್ಧ ಕೆಂಡ ಕಾರಿದ್ದಾರೆ ರೈ.

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮತಿಭ್ರಮಣೆಯಾಗಿದೆ: ಪ್ರಕಾಶ್ ರೈಪ್ರಧಾನಿ ನರೇಂದ್ರ ಮೋದಿ ಅವರಿಗೆ ಮತಿಭ್ರಮಣೆಯಾಗಿದೆ: ಪ್ರಕಾಶ್ ರೈ

ಮುಂದುವರಿದು, "ಅಮಿತ್ ಶಾ ಅವರು ಬೇಡ ಬೇಡ, ನೀವೆಲ್ಲೂ (ರೆಡ್ಡಿಗಳಿಗೆ) ಕಾಣಿಸಿಕೊಳ್ಳಬೇಡಿ. ಕಾಣಿಸಿಕೊಳ್ಳದೆ ಕೆಲಸ ಮಾಡಿ, ಬಚ್ಚಿಟ್ಕೊಂಡ್ ಕೆಲಸ ಮಾಡಿ. ಇದೇನು ಅಂಡರ್ ಗ್ರೌಂಡ್ ಮಾಫಿಯಾ ನಡೆಸ್ತಾ ಇದ್ದೀರಾ ಅಮಿತ್ ಶಾ? ಎಚ್ಚರದಿಂದಿರಿ ಕರ್ನಾಟಕ ನೋಡ್ತಾ ಇದೆ. ಸೊಲ್ಲೆತ್ತೋಕ್ ಬಿಡೋದಿಲ್ಲ" ಎಂದು ರೈ ಹೂಂಕರಿಸಿದ್ದಾರೆ.

Prakash Rai says Amit Shah is running underground mafia

ಕುವೆಂಪು ಕರ್ನಾಟಕ ಇದು, ತೇಜಸ್ವಿ ಕರ್ನಾಟಕ ಇದು, ಶಿವರಾಮ ಕಾರಂತರ ಕರ್ನಾಟಕ ಇದು, ಸಾಹಿತ್ಯದ ಕರ್ನಾಟಕ ಇದು, ನವೋದಯ ಸಾಹಿತ್ಯದ ಕರ್ನಾಟಕ ಇದು, ಬಸವಣ್ಣನ ಕರ್ನಾಟಕ ಇದು, ಭಾಷೆ ಮೇಲೆ ಹಿಡಿತ ಇರ್ಲಿ. ನಿಮಗೆ ಮಾನ ಮರ್ಯಾದೆ ಇಲ್ಲದಿದ್ದರೆ, ನಮಗಿದೆ ಕರ್ನಾಟಕದಲ್ಲಿ ಮಾನ ಮರ್ಯಾದೆ. ಯೋಚ್ನೆ ಮಾಡಿ ಜನರೆ, ಇವರಿದ್ದರೆ ಹೀಗೇ ಆಗೋದು ಅಂತ. ಇಂಥವರಿದ್ರೆ, ಯಾವ ಸಂಸ್ಕೃತಿನೂ ಬೆಳೆಯಲ್ಲ. ಕರ್ಕೊಂಡು ಬಂದಿದ್ದಾರೆ ಗಣಿ ಧಣಿಗಳನ್ನ ಅಂತ ವಾಚಾಮಗೋಚರವಾಗಿ ತೆಗಳಿದ್ದಾರೆ.

ಬಿಜೆಪಿ ಕ್ಯಾನ್ಸರ್, ಜೆಡಿಎಸ್ ಮತ್ತು ಕಾಂಗ್ರೆಸ್ ಕೆಮ್ಮು ನೆಗಡಿಬಿಜೆಪಿ ಕ್ಯಾನ್ಸರ್, ಜೆಡಿಎಸ್ ಮತ್ತು ಕಾಂಗ್ರೆಸ್ ಕೆಮ್ಮು ನೆಗಡಿ

ಸರಕಾರಕ್ಕೂ ಧರ್ಮಕ್ಕೂ ಸಂಬಂಧ ಇಲ್ಲ. ಕರ್ನಾಟಕದ ಜನತೆಯನ್ನು ಪ್ರತಿನಿಧಿಸುವ ಅರ್ಹತೆ ಯಾರಿಗಿದೆ ಎಂದು ನಾವು ಯೊಚಿಸಬೇಕಾಗಿದೆ. ನಾವು ಜನಸಾಮನ್ಯರು...... ಈ ಕೋಮುವಾದಿ ರಾಜಕಾರಣಿಗಳಿಂದ ನಮ್ಮ ಯುವಕರ ಭವಿಷ್ಯ ಹೇಗೆ ಹಾಳಾಗುತ್ತಿದೆಯೆಂದು ಅರಿಯಬೇಕಾಗಿದೆ. ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುತ್ತ.. ಪ್ರಶ್ನಿಸುವವರ ಬಗ್ಗೆ ಅಪಪ್ರಚಾರ ಹಬ್ಬಿಸಿ.. ಅಭಿವೃದ್ಧಿಯನ್ನು ಮರೆಯುತ್ತಿರುವ ಸಮಯಸಾಧಕರೆ.... ಕರ್ನಾಟಕದ ಜನ ಮೂರ್ಖರಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

English summary
Kannada actor Prakash Rai (Raj) has lambasted BJP national president Amit Shah, BJP CM candidate Yeddyurappa, Ballari Reddy brothers and others again in twitter. He says, Amit Shah is running underground mafia by asking Reddy brother not appear in the public.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X