ದೇವೇಗೌಡ್ರ ಸ್ಪರ್ಧೆ ಬಗ್ಗೆ ಚರ್ಚೆ ಮಾಡ್ತೇವೆ ಎಂದ ಹೆಚ್ಡಿಕೆ: ದೇವೇಗೌಡ್ರು ಹೇಳಿದ್ದೇನು?
ಹಾಸನ, ಡಿಸೆಂಬರ್ 12: ಕರ್ನಾಟಕ ಕಾಂಗ್ರೆಸ್ ಗೆ ಠಕ್ಕರ್ ಕೊಡುವ ನಿಟ್ಟಿನಲ್ಲಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಾಗಿದ್ದು, ಈ ಬಾರೀ 2024 ರ ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠರಾದ ಹೆಚ್ ಡಿ ದೇವೇಗೌಡರು ಹಾಸನದಿಂದ ಸ್ಪರ್ಧೆ ಮಾಡುತ್ತಾರಾ ಎಂಬ ಮಾತುಗಳು ಕೇಳಿ ಬಂದಿದ್ದು, ಈ ಬಗ್ಗೆ ಹೆಚ್ ಡಿ ದೇವೇಗೌಡರು ಪ್ರತಿಕ್ರಿಯಿಸಿದ್ದಾರೆ.
ಹೌದು, ಮುಂದಿನ ಚುನಾವಣೆಲ್ಲಿ ದೇವೇಗೌಡ್ರ ಸ್ಪರ್ಧೆ ಬಗ್ಗೆ ಚರ್ಚೆ ಮಾಡ್ತೇವೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆ ಕುರಿತು ಹಾಸನದಲ್ಲಿ ಹೆಚ್ ಡಿ ದೇವೇಗೌಡರು ಮಾತನಾಡಿ, ಪದೇ ಪದೇ ಈ ಬಗ್ಗೆ ಹೇಳೋದು ಬೇಡ ದಯಮಾಡಿ ನಿಮಗೆ ವಿನಂತಿ ಮಾಡುತ್ತೇನೆ. ಸಿಂಟಿಂಗ್ ಮೆಂಬರ್ ಸ್ಪರ್ಧೆ ಮಾಡುತ್ತಾರೆ. ಬಾಕಿ ಕಡೆ ಎಷ್ಟು ಸೀಟು ನಮಗೆ ಕೊಡ್ತಾರೆ.. ಏನು? ಎಂದು ಪ್ರಶ್ನಿಸಿದರು.

ಎಷ್ಟು ಸೀಟು ನಮಗೆ ಎಂಬ ಬಗ್ಗೆ ಅದೆಲ್ಲಾ ಆಮೇಲೆ ಚರ್ಚೆಯಾಗುತ್ತದೆ. ಅದು ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಕುಮಾರಸ್ವಾಮಿ ಆ ಲೆವೆಲ್ ನಲ್ಲಿ ಚರ್ಚೆ ಮಾಡುತ್ತಾರೆ. ನಮ್ಮಲ್ಲಿ ಸಿಟ್ಟಿಂಗ್ ಮೆಂಬರ್ ಒಬ್ಬರೇ ಇರೋದು ಹಿ ವಿಲ್ ಕಂಟಿನ್ಯೂ. ಹಾಸನದಿಂದ ಪ್ರಜ್ವಲ್ ರೇವಣ್ಣ ಸ್ಪರ್ಧೆ ಮಾಡುತ್ತಾರೆ ಎಂದು ಹೇಳಿದರು.
50 ಶಾಸಕರನ್ನ ಕಾಂಗ್ರೆಸ್ ನಾಯಕರೊಬ್ಬರು ಬಿಜೆಪಿಗೆ ಕರೆದುಕೊಂಡು ಬರ್ತಿನಿ ಅಂತಾ ಹೇಳಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ವಿಚಾರವಾಗಿ ಮಾತನಾಡಿ, ನಾನು ಅದಕ್ಕೆಲ್ಲ ಉತ್ತರ ಕೊಡೋದಿಲ್ಲ. ನನ್ನ ಲೆವೆಲ್ ಗೆ ಅಲ್ಲ ಅದು ಎಂದ ದೇವೇಗೌಡ್ರು ಹೇಳಿದರು.
ಆರ್ಟಿಕಲ್ 370 ರದ್ದುಗೊಳಿಸಿ ರಾಜ್ಯ ಸ್ಥಾನ ಮಾನಕ್ಕೆ ಸುಪ್ರೀಂ ಅಸ್ತು ವಿಚಾರವಾಗಿ ಮಾತನಾಡಿ, ಸುಪ್ರೀಂ ಆದೇಶವನ್ನು ಸ್ವಾಗತಿಸುತ್ತೇನೆ. ಆರ್ಟಿಕಲ್ 370 ಯಾವಾಗ ಕಾಶ್ಮೀರ ಕ್ಕೆ ಕೊಟ್ಟಿದ್ದಂತಹ ವಿಶೇಷ ಸವಲತ್ತು ಇದೆಯೋ ಅದನ್ನು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ತಿದ್ದುಪಡಿ ತರುವುದರ ಮುಖೇನ ಆ ಒಂದು ಸವಲತ್ತನ್ನು ರದ್ದು ಮಾಡಿದೆ. ಅದರಿಂದ ಬೇರೆ ರಾಜ್ಯಗಳಿಗೆ ಏನೂ ಅನುಕೂಲ ಆಗುತ್ತದೆಯೋ, ಅನ್ವಯ ಆಗುತ್ತದೆಯೋ ಅದೇ ಕಾಶ್ಮೀರಕ್ಕೂ ಜಮ್ಮುಗೂ ಅನ್ವಯವಾಗುತ್ತದೆ.












Click it and Unblock the Notifications