ಇದು ಕರ್ನಾಟಕ ರಾಜಕೀಯದ ಕರಾಳ ಮುಖ; ಅತಿ ಹೆಚ್ಚು ಸುದ್ದಿಯಾದ “ಸಪ್ತ” ಲೈಂಗಿಕ ಹಗರಣಗಳು? ಇಲ್ಲಿದೆ ಸಂಪೂರ್ಣ ವಿವರ

ಬೆಂಗಳೂರು, ಮೇ 04: ಕರ್ನಾಟಕದಲ್ಲಿ ಸದ್ಯ ಹಾಸನ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಹಾಗೂ ಹಾಲಿ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ರಾಜ್ಯ ರಾಜಕೀಯದಲ್ಲಿ ಮಾತ್ರವಲ್ಲದೇ ರಾಷ್ಟ್ರಮಟ್ಟದಲ್ಲೂ ಭಾರೀ ಸುದ್ದಿ ಮಾಡುತ್ತಿದೆ.

ಹೌದು, ಪ್ರಜ್ವಲ್‌ ರೇವಣ್ಣ ಅವರ ಅಶ್ಲೀಲ ಪ್ರಕರಣದ ಮೂಲಕ ಕರ್ನಾಟಕ ರಾಜಕೀಯದ ಕರಾಳ ಮುಖ ಮತ್ತೊಂದು ಸಲ ಬಯಲಾಗಿದೆ. ರಾಜ್ಯದಲ್ಲಿ ಲೈಂಗಿಕ ಹಗರಣಗಳೇನು ಹೊಸದಲ್ಲ, ಈ ಹಿಂದೆಯೂ ಸಹ ಸಾಕಷ್ಟು ಪ್ರಕರಣಗಳು ಕೇಳಿ ಬಂದಿವೆ. ಈ ಲೈಂಗಿಕ ಪ್ರಕರಣಗಳಿಂದಾಗಿ ಕರ್ನಾಟಕ ರಾಜಕೀಯ ಕರಾಳ ಮುಖ ಬಯಲಾಗಿದೆ. ಕಳೆದ ಎರಡು ದಶಕಗಳಲ್ಲಿ ರಾಜ್ಯದ ಒಂದು ಡಜನ್‌ಗೂ ಹೆಚ್ಚು ರಾಜಕಾರಣಿಗಳು ಕೆಲವು ರೀತಿಯ ಲೈಂಗಿಕ ಹಗರಣದಲ್ಲಿ ಸಿಲುಕಿದ್ದಾರೆ. ವಿಧಾನಸಭೆಯಲ್ಲಿ ಅಶ್ಲೀಲ ವಿಡಿಯೋ ವೀಕ್ಷಣೆಯಿಂದ ಹಿಡಿದು, ಸಿಡಿ, ಪೆನ್‌ಡ್ರೈವ್‌ ಪ್ರಕರಣದವರೆಗೂ ಹಲವು ಲೈಂಗಿಕ ಹಗರಣಗಳು ರಾಜ್ಯದಲ್ಲಿ ಕಂಡು ಬಂದಿವೆ. ಆ ಲೈಂಗಿಕ ಹಗರಣಗಳು ಯಾವುವು? ಅಂತಿರಾ ಇಲ್ಲಿವೆ ನೋಡಿ.

Prajwal Revanna Case Many More Sex Scandals Of Politicians Of Karnataka In Last Two Decades

ರಾಜ್ಯದಲ್ಲಿ ಸದ್ದು ಮಾಡಿದ ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಪ್ರಕರಣ

ಹೌದು, ರಾಜ್ಯದಲ್ಲಿ ಲೋಕಸಭಾ ಚುನಾವಣಾ ಕಾವು ಜೋರಾದ ಹೊತ್ತಲಿ ಹಾಸನ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಹಾಗೂ ಹಾಸನ ಸಂಸದರಾದ ಪ್ರಜ್ವಲ್‌ ರೇವಣ್ಣ ಅವರದ್ದಯ ಎನ್ನಲಾದ ಅಶ್ಲೀಲ ವಿಡಿಯೋಗಳ ಪೆನ್‌ಡ್ರೈವ್‌ ರಿಲೀಸ್‌ ಆಗಿದೆ. ಈ ಪೆನ್‌ ಡ್ರೈವ್‌ ಪ್ರಕರಣ ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿದ್ದು, ಈ ಪೆನ್‌ಡ್ರೈವ್‌ನಲ್ಲಿ ಸುಮಾರು 2976 ವಿಡಿಯೋಗಳು ಇದೆ ಎಂದು ಹೇಳಲಾಗಿವೆ. ಈಗಾಗಲೇ ಪ್ರಜ್ವಲ್‌ ರೇವಣ್ಣ ಅವರ ಪ್ರಕರಣವನ್ನ ರಾಜ್ಯ ಸರ್ಕಾರ ಎಸ್‌ ಐಟಿಗೆ ವಹಿಸಿದ್ದು, ಸದ್ಯ ಪ್ರಜ್ವಲ್‌ ರೇವಣ್ಣ ಅವರು ಜರ್ಮನಿಯಲ್ಲಿದ್ದಾರೆ.

ಈಗಾಗಲೇ ಎಸ್‌ ಐ ಟಿ ವಿಚಾರಣೆ ಹಾಜರಾಗುವಂತೆ ನೋಟಿಸ್‌ ನೀಡಿದ್ದು, ಕಾಲಾವಕಾಶವನ್ನ ಪ್ರಜ್ವಲ್‌ ರೇವಣ್ಣ ಅವರು ಕೇಳಿದ್ದಾರೆ. ಇನ್ನೂ ಪ್ರಜ್ವಲ್‌ ರೇವಣ್ಣ ಅವರ ವಿರುದ್ಧ ಎಸ್‌ ಐಟಿಯೂ ಲುಕ್‌ ಔಟ್‌ ನೋಟಿಸ್‌ ಜಾರಿಗೊಳಿಸಿದ್ದು, ದೇಶ ಕಂಡ ಅತ್ಯಂತ ದೊಡ್ಡ ಲೈಂಗಿಕ ಹರಗಣ ಎಂಬ ಕುಖ್ಯಾತಿಯನ್ನ ಪ್ರಜ್ವಲ್‌ ರೇವಣ್ಣ ಅವರ ಪ್ರಕರಣ ಪಡೆದಿದೆ. ಇನ್ನೂ ಈ ಪ್ರಕರಣದಲ್ಲಿ ಪ್ರಜ್ವಲ್‌ ರೇವಣ್ಣ ಅವರ ತಂದೆ ಎಚ್‌ಡಿ ರೇವಣ್ಣ ಅವರ ಹೆಸರು ಕೂಡ ಕೇಳಿಬಂದಿದೆ. ಅಲ್ಲದೇ ಬಂಧನದ ಭೀತಿಯನ್ನ ಎದರಿಸುತ್ತಿದ್ದಾರೆ.

ಗೋಕಾಕ್‌ ಸಾಹುಕಾರ್‌ ರಮೇಶ್‌ ಜಾರಕಿಹೊಳಿ ಸಿಡಿ ಪ್ರಕರಣ - 2020

2020 ಮಾರ್ಚ್‌ ನಲ್ಲಿ ಗೋಕಾಕ್‌ ಸಾಹುಕಾರ್‌ ರಮೇಶ್‌ ಜಾರಕಿಹೊಳಿ ಸಿಡಿ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಹೆಚ್ಚು ಸದ್ದು ಮಾಡಿದೆ. ಅಂದು ಬಿಜೆಪಿ ಸರ್ಕಾರದಲ್ಲಿ ಸಚಿವರಾದ ರಮೇಶ್‌ ಜಾರಕಿಹೊಳಿ ಅವರು ಈ ಆರೋಪ ಕೇಳಿ ಬಂದ ಹಿನ್ನೆಲೆ ಸಚಿವ ಸ್ಥಾನವನ್ನ ಕಳೆದುಕೊಳ್ಳಬೇಕಾಯಿತು. ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ರಮೇಶ್‌ ಜಾರಕಿಹೊಳಿ ಅವರು ಕೆಪಿಟಿಸಿಎಲ್‌ನಲ್ಲಿ ಉದ್ಯೋಗ ಕೊಡಿಸುತ್ತೇನೆ ಎಂದು ಯುವತಿಯನ್ನು ದೈಹಿಕವಾಗಿ ಬಳಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಇನ್ನೂ ಈ ಪ್ರಕರಣದಲ್ಲಿ ಮಹಾನಾಯಕ ಕೈವಾಡವಿದೆ ಎಂದು ಡಿ ಕೆ ಶಿವಕುಮಾರ್‌ ವಿರುದ್ಧ ರಮೇಶ್‌ ಜಾರಕಿಹೊಳಿ ಅವರು ಆರೋಪ ಮಾಡಿದ್ದು, 2020 ರಲ್ಲಿ ಈ ಪ್ರಕರಣ ಸಾಕಷ್ಟು ಸದ್ದು ಮಾಡಿತ್ತು.

ಮಾಜಿ ಸಚಿವ ಎಚ್‌ವೈ ಮೇಟಿ ಲೈಂಗಿಕ ಹಗರಣ

2016 ರಲ್ಲಿ ಮಾಜಿ ಅಬಕಾರಿ ಸಚಿವ ಎಚ್‌ವೈ ಮೇಟಿ ಅವರ ಲೈಂಗಿಕ ಹಗರಣ ಕೂಡ ಭಾರೀ ಸದ್ದು ಮಾಡಿತ್ತು. ವರ್ಗಾವಣೆ ವಿಚಾರವಾಗಿ ಮಹಿಳೆಯನ್ನು ದೈಹಿಕವಾಗಿ ಬಳಸಿಕೊಂಡ ಆರೋಪ ಎಚ್‌ವೈ ಮೇಟಿ ವಿರುದ್ಧ ಕೇಳಿಬಂದಿತ್ತು. ಈ ಕುರಿತು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಚ್‌ವೈ ಮೇಟಿ ಅವರ ರಾಜೀನಾಮೆಯನ್ನು ಪಡೆದಿದ್ದರು. ಮಹಿಳೆಯನ್ನು ದೈಹಿಕವಾಗಿ ಬಳಸಿಕೊಂಡ ಆರೋಪ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಿದ್ದು, ಬಳಿಕೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಉಲ್ಟಾ ಹೊಡೆದಿದ್ದರಿಂದ ಎಚ್‌ವೈ ಮೇಟಿಗೆ ರಿಲೀಫ್‌ ಸಿಕ್ಕಿತ್ತು.

ಹಲವು ನಾಯಕರಿಂದ ವಿಧಾನಸಭೆಯಲ್ಲಿ ಅಶ್ಲೀಲ ವಿಡಿಯೋ ವೀಕ್ಷಣೆ

ಇನ್ನೂ 2012ರಲ್ಲಿ ವಿಧಾನಸಭೆ ಅಧಿವೇಶನ ನಡೆಯುವ ಸಂದರ್ಭದಲ್ಲಿ ಅಂದಿನ ಆಡಳಿತಾರೂಢ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿಜೆಪಿ ಶಾಸಕರಾದ ಲಕ್ಷ್ಮಣ್‌ ಸವದಿ, ಸಿಸಿ ಪಾಟೀಲ್‌ ಹಾಗೂ ಕೃಷ್ಣ ಪಾಲೇಮಾರ್‌ ಅವರು ಅಶ್ಲೀಲ ವಿಡಿಯೋಗಳನ್ನ ಸದನದಲ್ಲಿ ವೀಕ್ಷಿಸಿದ್ದು, ಭಾರೀ ಸುದ್ದಿಯಾಗಿತ್ತು. ಇನ್ನೂ ವಿಧಾನಸಭೆಯಲ್ಲಿ ಅಶ್ಲೀಲ ವಿಡಿಯೋ ವೀಕ್ಷಿಸಿದ್ದರಿಂದ ಜನಾಕ್ರೋಶವೂ ವ್ಯಕ್ತವಾಗಿತ್ತು. ಬಳಿಕ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಇಲಾಖೆ ತನಿಖೆ ನಡೆಸಿ ಶಾಸಕರಿಗೆ ಕ್ಲೀನ್‌ ಚಿಟ್‌ ನೀಡಿತ್ತು.

ಹರತಾಳು ಹಾಲಪ್ಪ ಅತ್ಯಾಚಾರ ಕೇಸ್‌

2009 ರಲ್ಲಿ ಮಾಜಿ ಆಹಾರ ಮತ್ತು ನಾಗರೀಕ ಇಲಾಖೆಯ ಸಚಿವ ಹರತಾಳು ಹಾಲಪ್ಪ ತಮ್ಮ ಸ್ನೇಹಿತನ ಪತ್ನಿ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಪ್ರಕರಣವೂ ಸಹ ಆ ಸಂದರ್ಭದಲ್ಲಿ ಬಾರೀ ಸದ್ದು ಮಾಡಿತ್ತು. ಇನ್ನೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹರತಾಳು ಹಾಲಪ್ಪ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಬೇಕಾಗಿ ಬಂತು. ಆದರೆ, 2017ರಲ್ಲಿ ಸಾಕ್ಷಾಧಾರದ ಕೊರತೆಯಿಂದ ನಿರ್ದೋಷಿ ಎಂಬ ತೀರ್ಪು ಬಂತು. ಇನ್ನೂ ಮತ್ತೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಶಾಸಕ ರಘುಪತಿ ಭಟ್‌ ಅವರ ಅಶ್ಲೀಲ ವಿಡಿಯೋ ಸೋರಿಕೆಯಿಂದ ರಘುಪತಿ ಭಟ್‌ ಅವರು ಕೂಡ ರಾಜೀನಾಮೆ ನೀಡಬೇಕಾಗಿ ಬಂದಿತ್ತು.

ಎಂ ಪಿ ರೇಣುಕಾಚಾರ್ಯ ಫೋಟೋ ವೈರಲ್‌

2007 ರಲ್ಲಿ ಹೊನ್ನಾಳಿಯ ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ನರ್ಸ್‌ ಜಯಲಕ್ಷ್ಮೀಗೆ ಮುತ್ತ ನೀಡಿದ ಫೋಟೋ ವೈರಲ್‌ ಆಗಿತ್ತು. ನರ್ಸ್‌ ಜಯಲಕ್ಷ್ಮೀ ಅವರು ಎಂಪಿ ರೇಣುಕಾಚಾರ್ಯ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಮಾಡಿ ಮುತ್ತು ಕೊಡುವ ಫೋಟೋಗಳನ್ನು ಬಿಡುಗಡೆ ಮಾಡಿದ್ದಾರೆ. ಅದಲ್ಲದೇ ಬಲವಂತವಾಗಿ ನನ್ನನ್ನು ಮದುವೆಯಾಗಿದ್ದಾರೆ, ಇದರಿಂದ ನಾನು ಆತ್ಮಹತ್ಯೆಗೆ ಯತ್ನಿಸಿದ್ದೇನೆ ಎಂದು ಆರೋಪ ಮಾಡಿದ್ದರು. ಹೀಗಾಗಿ ಬಿಜೆಪಿ - ಜೆಡಿಎಸ್‌ ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನಕ್ಕೆ ಎಂ ಪಿ ರೇಣುಕಾಚಾರ್ಯ ಅವರು ತಮ್ಮ ಮಂತ್ರಿ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+