Prajwal Revanna Case: ದೇಶದಿಂದ ದೇಶಕ್ಕೆ ಹಾರುತ್ತಿರುವ ಪ್ರಜ್ವಲ್​ ಇಂದು ಮಂಗಳೂರಿಗೆ? ಅಲ್ಲಿಯೇ ಅರೆಸ್ಟ್?‌

ಬೆಂಗಳೂರು, ಮೇ 05: ಹಾಸನ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಹಾಗೂ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ನೂರಾರು ಮಹಿಳೆಯರ ಜೊತೆ ರಾಸಲೀಲೆ ನಡೆಸಿದ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಸ್‌ ಐಟಿ ತನಿಖೆಯನ್ನ ಚುರುಕುಗೊಳಿಸಿದೆ. ಅಲ್ಲದೇ ಪ್ರಜ್ವಲ್‌ ರೇವಣ್ಣ ಅವರ ಬಂಧನಕ್ಕೆ ಸದ್ಯ ಎಸ್‌ ಐ ಟಿ ಲುಕ್‌ ಔಟ್‌ ನೋಟಿಸ್‌ ಜಾರಿಗೊಳಿಸಿದೆ.

ಹೌದು, ಎಸ್‌ ಐಟಿ ಅಧಿಕಾರಿಗಳು ಈಗಾಗಲೇ ಹಲವು ಹಂತಗಳಲ್ಲಿ ತನಿಖೆಯನ್ನ ಚುರುಕುಗೊಳಿಸಿದ್ದು, ಮಾಜಿ ಸಚಿವ ಹಾಗೂ ಮಾಜಿ ಪ್ರಧಾನಿ ಹೆಚ್‌ ಡಿ ದೇವೇಗೌಡ ಪುತ್ರ ಹೆಚ್‌ ಡಿ ರೇವಣ್ಣ ಅವರನ್ನ ಬಂಧನದ ಬಳಿಕ ಪ್ರಜ್ವಲ್‌ ರೇವಣ್ಣ ಅವರ ಬೇಟೆಯೂ ಕೂಡ ಜೋರಾಗಿದ್ದು, ದೇಶದಿಂದ ದೇಶಕ್ಕೆ ಹಾರುತ್ತಿರುವ ಪ್ರಜ್ವಲ್​ ರೇವಣ್ಣ ಹೆಡೆಮುರಿ ಕಟ್ಟಲು ಎಸ್​ಐಟಿ ಬಲೆ ಸಿದ್ಧವಾಗಿದೆ. ಪ್ರಜ್ವಲ್ ಬಂಧನಕ್ಕೆ ಸದ್ಯ ಲುಕ್​ಔಟ್​ ನೋಟಿಸ್ ಜಾರಿ ಮಾಡಲಾಗಿದ್ದು, ಇಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಜ್ವಲ್ ಆಗಮಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Prajwal Case Prajwal Revanna Likely To Arrive At Mangalore Airport Today

ಹಾಸನ ಹಾಲಿ ಸಂಸದರಾದ ಪ್ರಜ್ವಲ್‌ ರೇವಣ್ಣ ಅವರು ಯಾವುದೇ ಏರ್​ಪೋರ್ಟ್​ಗೆ ಬಂದರೂ ಅಲ್ಲೇ ಬಂಧನ ಪ್ರಕ್ರಿಯೆ ನಡೆಯಲಿದೆ. ಮಂಗಳೂರು, ಕೊಚ್ಚಿ, ಗೋವಾ, ಬೆಂಗಳೂರು ವಿಮಾನ ನಿಲ್ದಾಣಕ್ಕೆ ಪ್ರಜ್ವಲ್ ಆಗಮಿಸಿದರು ಬಂಧಿಸಿ ಸ್ಥಳೀಯ ಠಾಣೆಗೆ ಪೊಲೀಸರು ಕರೆದೊಯ್ಯಲ್ಲಿದ್ದಾರೆ ಎಂದು ಹೇಳಲಾಗಿದೆ.

ಪ್ರಜ್ವಲ್‌ ರೇವಣ್ಣ ಅವರು ಯಾವುದೇ ಏರ್‌ ಪೋರ್ಟ್‌ ನಲ್ಲೂ ಬಂದರೂ ಅಲ್ಲೇ ಬಂಧಿಸಿ, ಬಳಿಕ ಸ್ಥಳೀಯ ಠಾಣೆಗೆ ಕರೆದೊಯ್ಯುವ ಪೊಲೀಸರು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಂತರ ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಹಾಗೂ ಹಾಸನ ಹಾಲಿ ಸಂಸದ ಪ್ರಜ್ವಲ್​ರನ್ನು ಎಸ್‌ ಐ ಟಿ ಅಧಿಕಾರಿಗಳು ಬೆಂಗಳೂರಿಗೆ ಕರೆತರಲಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ. ಸದ್ಯ ಮಂಗಳೂರು ಏರ್​ಪೋರ್ಟ್​ಗೆ ಒಟ್ಟು 4 ವಿಮಾನ ಆಗಮಿಸಿವೆ. ಅಬುದಾಬಿಯಿಂದ ಈಗಷ್ಟೇ ಒಂದು ವಿಮಾನ ಲ್ಯಾಂಡ್ ಆಗಿದೆ. ಬೆಳಗ್ಗೆ 7.55ಕ್ಕೆ ದುಬೈನಿಂದ ಎರಡನೇ ವಿಮಾನ, ಸಂಜೆ 4.35ಕ್ಕೆ ದುಬೈನಿಂದ ಮಂಗಳೂರಿಗೆ 3ನೇ ವಿಮಾನ ಮತ್ತು ಸಂಜೆ 6.15ಕ್ಕೆ ಮಂಗಳೂರಿಗೆ ನಾಲ್ಕನೇ ವಿಮಾನ ಆಗಮಿಸಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+