ರಾಜ್ಯದ ಜನ ಶೀಘ್ರದಲ್ಲಿಯೇ 'CD ಶಿವು ಎಲ್ಲಿದ್ದಿಯಪ್ಪ?' ಎಂದು ಕೇಳುವ ದಿನವೂ ದೂರವಿಲ್ಲ!

ಬೆಂಗಳೂರು, ಮೇ 23: ರಾಜ್ಯದ ಜನ ಶೀಘ್ರದಲ್ಲಿಯೇ 'CD ಶಿವು ಎಲ್ಲಿದ್ದಿಯಪ್ಪ?' ಎಂದು ಕೇಳುವ ದಿನವೂ ದೂರವಿಲ್ಲ. ಪ್ರಜ್ವಲ್ ಎಲ್ಲಿರಬಹುದು ಎನ್ನುವ ವಿಷಯ ನಿಮ್ಮ CD ಶಿವುಗೆ ಬಹಳ ಚೆನ್ನಾಗಿಯೇ ಗೊತ್ತಿದೆ. ಅವರನ್ನೇ ಕೇಳಿದರೆ ಉತ್ತಮವಲ್ಲವೇ? ಸಖ್ಯ ಮತ್ತು ಸೌಖ್ಯದ ಬಗ್ಗೆ ಅವರಿಗಿಂತ ಬಲ್ಲವರು ಉಂಟೇ ಕಪಟ ಕಾಂಗಿಗಳೇ? ಎಂದು ಪ್ರಶ್ನಿಸಿದರು.

SIT ಅಧಿಕಾರಿಗಳು CD ಶಿವುನ ಹಿಡಿದು ಡ್ರಿಲ್ ಮಾಡಿದರೆ ಸತ್ಯ ತಾನಾಗಿಯೇ ಆಚೆ ಬರುತ್ತದೆ. #Shivakumar_Investigation_Team ಗೇ ಗೊತ್ತಿಲ್ಲವೆಂದರೆ ಅದು ಶತಮಾನದ ಜೋಕಷ್ಟೇ ಅಲ್ಲ, CDಶಿವು ಪೂರ್ವಾಶ್ರಮಕ್ಕೆ ಮಾಡಿದ ಘೋರ ಅಪಚಾರ! ಈ ಶತಮಾನ ಕಂಡು ಕೇಳರಿಯದ ಸೋಜಿಗ ಎಂದು ಹೇಳಿದರು.

Prajwal Case JDS Lashed Out At DCM DK Shivakumar

ಪೆನ್ ಡ್ರೈವ್ ಫ್ಯಾಕ್ಟರಿ ಒರಿಜಿನಲ್ ಓನರ್, CD ಸಂಚುಕೋರ CDಶಿವು ಕಣ್ಸನ್ನೆಯಂತೆ ಅವರ ಚೇಲಾಗಳು ನಡೆಸಿದ ಪೆನ್ ಡ್ರೈವ್ ಸಮಾರಾಧನೆ ಯಾರಿಗೆ ಗೊತ್ತಿಲ್ಲ ಹೇಳಿ? FIR ಆದ ಮೇಲೆ ಕಾಲ್ಕಿತ್ತ ಪೆನ್ ಡ್ರೈವ್ ಪಿಶಾಚಿಗಳು, ಕೋರ್ಟ್ ಜಾಮೀನು ನಿರಾಕರಿಸಿದ ಮೇಲೆಯೂ SITಗೆ ಚಳ್ಳೆಹಣ್ಣು ತಿನ್ನಿಸುತ್ತಾ CD ಶಿವು ಆಸ್ಥಾನದಲ್ಲಿ ಓಲಾಡುತ್ತಿರುವುದು ಯಾರಿಗೆ ಗೊತ್ತಿಲ್ಲ, ಹೇಳಿ? ಎಂದು ಪ್ರಶ್ನಿಸಿದರು.

ಅಸಲಿ SIT, CD ಶಿವು ನೇತೃತ್ವದ SIT ತಂಟೆಗೇ ಹೋಗುತ್ತಿಲ್ಲ. ವಿಧಾನಸೌಧದ ಗಾಡ್ ಫಾದರ್ ಗಳ ಕಚೇರಿಗಳಲ್ಲಿಯೇ ಪೆನ್ ಡ್ರೈವ್ ಪಿಶಾಚಿಗಳು ಕಳ್ಳರಂತೆ ಆವಿತಿದ್ದರೂ ಕೂಗಳತೆ ದೂರಲ್ಲಿರುವ SITಗೆ ಸೊಳ್ಳೆ ಕಚ್ಚಿದ ಹಾಗೆಯೂ ಆಗುತ್ತಿಲ್ಲ. ಅವರು ಎಲ್ಲಿದ್ದಾರೆ? ಇವರು ಎಲ್ಲಿದ್ದಾರೆ? ಎನ್ನುವುದನ್ನು ನಿಮ್ಮ CD ಶಿವುಗೇ ಕೇಳ್ರಪ್ಪಾ!! ಎಂದು ಹೇಳಿದರು.

CD ಶಿವು ಸಾರಥ್ಯದ, ಪೆನ್ ಡ್ರೈವ್ ಪಟಾಲಂ ಪಟಿಂಗರ ಪಾರ್ಟಿ ಕಾಂಗ್ರೆಸ್ಸಿಗೆ ಜಾತ್ಯತೀತತೆ ಎನ್ನುವುದು ವೋಟಿಗಾಗಿ ಹಾಕುವ ಮುಖವಾಡವಷ್ಟೇ. ಅದನ್ನು ಕಾಶಿ ಗಂಗೆಯಲ್ಲಿ ವಿಸರ್ಜಿಸಿ, ಸಂಚುಕೋರ ಕಾಂಗ್ರೆಸ್ ಪಕ್ಷವಾಗಿ ಹೊರಹೊಮ್ಮಿ ಬಹಳ ದಿನವೇ ಕಳೆದಿದೆ. ಅದು ಗಾಂಧಿ ಕಾಂಗ್ರೆಸ್ ಅಲ್ಲ, ನೆಹರು ಕಾಂಗ್ರೆಸ್ ಅಲ್ಲ.. CD ವಿದ್ಯಾಪಾರಂಗತನ ಕಪಿಮುಷ್ಟಿಗೆ ಸಿಕ್ಕಿ ಪೆನ್ ಡ್ರೈವ್ ಹಂಚಿಕೊಂಡು ವಿಕೃತಾನಂದ ಅನುಭವಿಸುತ್ತಿರುವ ಅಶ್ಲೀಲ ವಿಡಿಯೋ ಬಿಸ್ನೆಸ್ ಪಾರ್ಟಿ!!

ಪೆನ್ ಡ್ರೈವ್ ಪಟಿಂಗರನ್ನು ಅಕ್ಕಪಕ್ಕ ಇರಿಸಿಕೊಂಡು SITಗೆ ಟೋಪಿ ಹಾಕುತ್ತಿರುವ CD ಶಿವು ನೇತೃತ್ವದ ಪಕ್ಷ, ಅವರ ಸರಕಾರ ಆ ಪಟಿಂಗರ ರಕ್ಷಣೆಗೆ ನಾಚಿಕೆ, ಲಜ್ಜೆ ಇಲ್ಲದೆ ನಿಂತಿದೆ! ಲಜ್ಜೆ ಇಲ್ಲದವನಿಗೆ ಲಫಂಗರೆಲ್ಲ ನೆಂಟರು ಎನ್ನುವಂತಿದೆ ಕಪಟಿ ಕಾಂಗ್ರೆಸ್ ಪರಿಸ್ಥಿತಿ. CD ಶಿವು ಸೀಡಿ ಸೃಷ್ಟಿಕರ್ತ, ಪ್ರದರ್ಶಕ. ಬಿಚ್ಚಿದರೆ ಬಣ್ಣಗೇಡು, ಸಿಎಂ ಆಗಬೇಕೆನ್ನುವ ಆ ವ್ಯಕ್ತಿಯ ಕನಸು ಮಣ್ಣುಗೇಡು.. ಕಪಟಿ ಕಾಂಗ್ರೆಸ್ ಎಚ್ಚೆತ್ತುಕೊಂಡರೆ ಕ್ಷೇಮ ಎಂದು ಜೆಡಿಎಸ್‌ ಹೇಳಿದೆ.

ಕಪಟಿ ಕಾಂಗಿಗಳೇ, ಟೆಂಟ್ ಇಟ್ಟುಕೊಂಡು ನೀಲಿಚಿತ್ರ ಪ್ರದರ್ಶನ ಮಾಡಿದ್ದು ಯಾರು? ನೀಲಿಚಿತ್ರ ನೋಡುತ್ತಲೇ ಪೊಲೀಸ್ ಅಧಿಕಾರಿ ಕೈಗೆ ಸಿಕ್ಕಿಬಿದ್ದು ಇಕ್ಕಿಸಿಕೊಂಡ ಹಸ್ತನಾಧಿಪತಿ ಯಾರು? ವಕೀಲ ದೇವರಾಜೇಗೌಡ ಜತೆ Broker ಶಿವರಾಮೇಗೌಡನನ್ನು ಬಿಟ್ಟು ಡೀಲ್ ಕುದುರಿಸಲು ವಿಫಲಯತ್ನ ನಡೆಸಿದ್ದು ಯಾರು? ಮೊಬೈಲ್ ಸಂಭಾಷಣೆ ಮೂಲಕ ಉಡುದಾರವೇ ಉದುರಿ ಜಂಘಾಬಲವೇ ಉಡುಗಿ ಹೋಗಿ ರಾಜ್ಯದ ಜನತೆಯ ಮುಂದೆ ನಿರ್ಲಜ್ಜವಾಗಿ ನಿಂತಿದ್ದು ಯಾರು? ಪೂರ್ವಾಶ್ರಮದಲ್ಲಿ ಟೆಂಟ್ ನಲ್ಲಿ ಡರ್ಟಿ ಪಿಕ್ಚರ್ ಹಾಕಿಕೊಂಡು, ಕಂಡೋರ ಗಲಾಸಿಗೆ ಎಣ್ಣೆ ಬಿಟ್ಟುಕೊಂಡು ಉಬ್ಬಿ ಕೊಬ್ಬಿದ್ದು ಯಾರು? ಕುಮಾರಣ್ಣ ಪೆನ್ ಡ್ರೈವ್ ಬಿಟ್ಟರೆ ಉದುರುವುದೇ ನಿಮ್ಮ CD ಶಿವು ಕಚ್ಚೆ, ಗೊತ್ತಿರಲಿ ಕಾಂಗಿಗಳೇ..

ಮಾಡಿದವನ ಪಾಪ.. ಪೆನ್ ಡ್ರೈವ್ ಹಂಚಿದವನ ಕೈಯ್ಯಲ್ಲಿ...ಹೌದೋ ಅಲ್ಲವೋ ಕಾಂಗಿಗಳೇ..ನಾಲ್ಕು ಗೋಡೆ ನಡುವೆ ನಡೆದದ್ದನ್ನು ಮಕ್ಕಳು ಓದುವ ಶಾಲೆಯಲ್ಲಿ ಪೆನ್ ಡ್ರೈವುಗಳಿಗೆ ತುಂಬಿ ಹಂಚಿದಿರಲ್ಲಾ.. ಆ ಹೆಣ್ಮಕ್ಕಳು ಏನಾಗಬೇಕು? ಅವರು ಸತ್ತರೂ ನಿಮಗೆ ಅಧಿಕಾರ ಸಿಕ್ಕಬೇಕು.. ಅಲ್ಲವೇ? ಹಾಸನದಿಂದ ಹೊರಟ ಮೊದಲ ಪೆನ್ ಡ್ರೈವ್ ಯಾರ ಮನೆ ಬಾಗಿಲಿಗೆ ಬಂತು? ನಿಮ್ಮ ಸತ್ಯವಂತ CD ಶಿವು ಸತ್ಯ ಹೇಳುತ್ತಾರೆಯೇ? ಮನೆಯಲ್ಲಿ ಮುಸುಕು ಹಾಕಿಕೊಂಡು ಕೂರಬೇಕಾಗಿದ್ದು ಯಾರು? ಕಾಂಗ್ರೆಸ್ ಕೈಗೆ ಕೊಳಕು ಅಂಟಿಸಿದ್ದು ಯಾರು? CD ಶಿವು.. ಅಲ್ಲವೇ..?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+