Prajwal Revanna Case : ಎಂಥ ಸ್ಥಿತಿ ಬಂತಪ್ಪ ಎಂದು ಎಸ್‌ಐಟಿ ಸೆಲ್‌ನಲ್ಲಿ ಗಳಗಳನೆ ಅತ್ತ ಎಚ್‌.ಡಿ.ರೇವಣ್ಣ

ಬೆಂಗಳೂರು, ಮೇ 05: ಲೋಕಸಭಾ ಚುನಾವಣಾ ಕಾವಿಗಿಂತ ಹಾಸನ ಲೋಕಸಭಾ ಕ್ಷೇತ್ರದ ಸಂಸದರಾದ ಪ್ರಜ್ವಲ್‌ ರೇವಣ್ಣ ಅವರ ಪೆನ್‌ ಡ್ರೈನ್‌ ಪ್ರಕರಣ ರಾಜ್ಯದಲ್ಲಿ ಹೆಚ್ಚು ಚರ್ಚೆಯಲ್ಲಿದೆ. ಇತ್ತ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆಯನ್ನು ಅಪಹರಿಸಿದ ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ಆಗಿರುವ ಮಾಜಿ ಪ್ರಧಾನಿ ಹೆಚ್‌ ಡಿ ದೇವೇಗೌಡರ ಪುತ್ರ ಹಾಗೂ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರನ್ನು ಎಸ್‌ ಐಟಿ ವಶಕ್ಕೆ ಪಡೆದಿದ್ದಾರೆ.

ಹೌದು, ಮಾಜಿ ಸಚಿವ ಎಚ್‌ ಡಿ ರೇವಣ್ಣ ಅವರನ್ನ ಶನಿವಾರ ಎಸ್‌ ಐ ಟಿ ಅಧಿಕಾರಿಗಳು ಬಂಧಿಸಿದ್ದು, ರೇವಣ್ಣ ಅವರನ್ನ ಎಸ್‌ಐಟಿ ಅಧಿಕಾರಿಗಳು ಬೆಂಗಳೂರಿನ ಬೌರಿಂಗ್‌ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ಮಾಡಿಸಿದ್ದಾರೆ. ಬಳಿಕ ಎಚ್‌.ಡಿ.ರೇವಣ್ಣ ಅವರನ್ನು ಅಧಿಕಾರಿಗಳು ಸಿಐಡಿ ಕಚೇರಿಗೆ ಕರೆದುಕೊಂಡು ಹೋಗಿದ್ದು, ಇಡೀ ರಾತ್ರಿ ಎಸ್‌ಐಟಿ ಸೆಲ್‌ನಲ್ಲಿಯೇ ಮಾಜಿ ಸಚಿವ ಎಚ್ ಡಿ ರೇವಣ್ಣ ಅವರು ಕಳೆಯಲಿದ್ದಾರೆ. ಮಗ ವಿದೇಶಕ್ಕೆ ಪರಾರಿಯಾಗಿದ್ದು, ಎಂಥ ಸ್ಥಿತಿ ಬಂತಪ್ಪ ಎಂದು ಎಸ್‌ಐಟಿ ಸೆಲ್‌ನಲ್ಲಿ ಎಚ್‌.ಡಿ.ರೇವಣ್ಣ ಅವರು ಗಳಗಳನೆ ಅತ್ತಿದ್ದಾರೆ ಎಂದು ತಿಳಿದುಬಂದಿದೆ.

Prajwal Case Former Minister HD Revanna Cries In SIT Cell

ಇನ್ನೂ ಶನಿವಾರ ಬಂಧನಕ್ಕೊಳಗಾದ ಎಚ್‌.ಡಿ.ರೇವಣ್ಣ ಅವರು ಮಲಗಲು ಹಾಸಿಗೆ ಹಾಗೂ ಬೆಡ್‌ಶೀಟ್‌ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ತಿಳಿದುಬಂದಿದೆ. ಎಚ್‌.ಡಿ.ರೇವಣ್ಣ ಅವರನ್ನು ವಿಚಾರಣೆ ಮಾಡಲಿರುವ ಅಧಿಕಾರಿಗಳು, ಬಳಿಕ ವಿಶ್ರಾಂತಿಗೆ ಅವಕಾಶ ನೀಡಲಿದ್ದಾರೆ. ಸೆಲ್‌ನಲ್ಲಿ ರೇವಣ್ಣ ಅವರಿಗೆ ಒಂದು ಸಾಮಾನ್ಯ ಬೆಡ್‌ ಹಾಗೂ ಕುರ್ಚಿ ನೀಡಲಾಗಿದ್ದು, ಇದೆಲ್ಲವನ್ನೂ ಕಂಡ ಮಾಜಿ ಸಚಿವ ಹೆಚ್‌ ಡಿ ರೇವಣ್ಣ ಅವರು ಕಣ್ಣೀರು ಹಾಕಿದ್ದಾರೆ.

ನಮ್ಮನ್ನೆಲ್ಲ ಸಾಯಿಸ್ತಾರೆ ಎಂದ ನೊಂದ ಮಹಿಳೆ

ರಾಜ್ಯಾದ್ಯಂತ ಪೆನ್‌ ಡ್ರೈವ್‌ ಪ್ರಕರಣ ಹೆಚ್ಚು ಸದ್ದು ಮಾಡುತ್ತಿದ್ದು. ಇತ್ತ ಪ್ರಜ್ವಲ್‌ ಪರಾರಿಯಾಗಿದ್ರೆ, ಇತ್ತ ಮಾಜಿ ಸಚಿವ ಹೆಚ್‌ ಡಿ ರೇವಣ್ಣ ಅವರನ್ನ ಎಸ್‌ ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಇತ್ತ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ತೋಟದ ಮನೆಯಿಂದ ರಕ್ಷಿಸಲ್ಪಟ್ಟ ಸಂತ್ರಸ್ತ ಮಹಿಳೆಯು ಎಸ್‌ಐಟಿ ಅಧಿಕಾರಿಗಳ ಕಸ್ಟಡಿಯಲ್ಲಿದ್ದರೂ ರೇವಣ್ಣ ಕುಟುಂಬದ ಭಯದಲ್ಲಿದ್ದಾರೆ. ಸಂತ್ರಸ್ತ ಮಹಿಳೆ ನಮ್ಮನ್ನೆಲ್ಲ ಅವರು ಸಾಯಿಸಿಬಿಡ್ತಾರೆ. ನನಗೆ ಭಯವಾಗುತ್ತಿದೆ ಎಂದು ಹೇಳುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+