Trend: ಓದುಗರ ಕ್ಷಮೆಯಾಚಿಸಿದ ಅತ್ಯಂತ ವಿಶ್ವಾಸಾರ್ಹ ಕನ್ನಡ ದಿನ ಪತ್ರಿಕೆ ಪ್ರಜಾವಾಣಿ, ಕಾರಣವೇನು ?
ಕನ್ನಡದ ಪ್ರಮುಖ ಹಾಗೂ ಅತ್ಯಂತ ವಿಶ್ವಾಸಾರ್ಹ ಕನ್ನಡ ದಿನ ಪತ್ರಿಕೆ ಎನ್ನುವ ಖ್ಯಾತಿ ಗಳಿಸಿರುವ ಪ್ರಜಾವಾಣಿ ಹಾಗೂ ಸಹೋದರ ಇಂಗ್ಲಿಷ್ ಪತ್ರಿಕೆ Deccan Herald ಟ್ರೆಂಡ್ ಫಾಲೋ ಮಾಡಿ ತನ್ನ ಓದುಗರಿಗೆ ವಿಭಿನ್ನವಾದ ಕ್ಷಮಾಪಣಾ ಪತ್ರ ಬರೆದಿದೆ. ಈ ಪತ್ರವನ್ನು ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಇದೀಗ ಈ ಪೋಸ್ಟ್ ಭಾರೀ ವೈರಲ್ ಆಗುತ್ತಿದೆ. ಈಚೆಗೆ ಜೀ ಕನ್ನಡ ಚಾನೆಲ್ ಸಹ ಇದೇ ಮಾದರಿಯ ಟ್ರೆಂಡ್ ಫಾಲೋ ಮಾಡಿತ್ತು. ಇಷ್ಟಕ್ಕೂ ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್ ಕ್ಷಮಾಪಣಾ ಪತ್ರದಲ್ಲಿ ಏನಿದೆ ಎನ್ನುವ ವಿವರ ನೋಡೋಣ.
ಕರ್ನಾಟಕದ ಜನರಿಗೆ, ನಮ್ಮಿಂದ ಕ್ಷಮೆಯಾಚನೆ. ಇತ್ತೀಚೆಗೆ ಒಂದು ಆಲೋಚನೆ ನಮ್ಮ ಹೃದಯವನ್ನು ಕಾಡುತ್ತಿದೆ. ತಲೆಮಾರುಗಳಿಂದ ನಿಖರವಾದ ಹಾಗೂ ನಂಬಿಕೆಯ ಸುದ್ದಿಗಳಿಗಾಗಿ ನೀವು ಮೊದಲು ನಮ್ಮ ಕಡೆಗೆ ತಿರುಗಿದ್ದೀರಿ ಎಂದು ಹೇಳಿದ್ದೀರಿ. ಬಿಕ್ಕಟ್ಟು, ಆಚರಣೆ ಮತ್ತು ಸಂಭ್ರಮಗಳೆಲ್ಲದರ ನಡುವೆ ನೀವು ಡೆಕ್ಕನ್ ಹೆರಾಲ್ಡ್ ಮತ್ತು ಪ್ರಜಾವಾಣಿಯನ್ನು ನಿಮ್ಮ ಒಡನಾಡಿಗಳನ್ನಾಗಿ ಮಾಡಿಕೊಂಡಿದ್ದೀರಿ.

ದಶಕಗಳ ಪರಿಶೀಲನೆಗೆ ಕ್ಷಮಿಸಿ. ಸತ್ಯ ನಾವು ಬದಲಾಯಿಸಲಾಗದ ನಮ್ಮ ಮಾನದಂಡ. ಜಗತ್ತನ್ನು ಸ್ಪಷ್ಟವಾಗಿ ನೋಡಲು ನೀವು ಬಳಸುವ ಮಸೂರವಾಗಿ (ಸಾಧನ ಅಥವಾ ಉಬ್ಬುಗನ್ನಡಿ) ಆಗಿರುವುದಕ್ಕಾಗಿ. ನೀವು ನಮ್ಮ ಜಗತ್ತಿನಲ್ಲಿ ಕಳೆದುಹೋಗಿರುವಾಗ ನಿಮ್ಮ ಬೆಳಗಿನ ಫಿಲ್ಟರ್ ಕಾಫಿ ತಣ್ಣಗಾಗಿದ್ದರೆ ನಾವು ಕ್ಷಮೆಯಾಚಿಸುತ್ತೇವೆ.
ಕರ್ನಾಟಕ.. ನಿಮ್ಮ ಅತ್ಯಂತ ವಿಶ್ವಾಸಾರ್ಹ ಸುದ್ದಿಗಳಿಗಾಗಿ ನಮ್ಮ ಮೇಲೆ ನಂಬಿಕೆ ಇರುವಂತೆ ವಾತಾವರಣ ಸೃಷ್ಟಿಸಿದ್ದಕ್ಕಾಗಿ ನಾವು ಕ್ಷಮೆಯಾಚಿಸುತ್ತೇವೆ.
ಕೃತಜ್ಞತೆ ಮತ್ತು ಜವಾಬ್ದಾರಿಯೊಂದಿಗೆ ನಿಮ್ಮ...
ಡೆಕ್ಕನ್ ಹೆರಾಲ್ಡ್ | ಪ್ರಜಾವಾಣಿಯಿಂದ ಈ ಪೋಸ್ಟ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್ ಹಂಚಿಕೊಂಡಿರುವ ಈ ಪೋಸ್ಟ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಈ ವಿನೂತನ ಪ್ರಯತ್ನವನ್ನು ಹಲವರು ಮೆಚ್ಚಿಕೊಂಡಿದ್ದು, ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ ಪತ್ರಿಕೆ ಹಾಗೂ ದಕ್ಷಿಣದ ಅತ್ಯುತ್ತಮ ಪತ್ರಿಕೆ ❤️ ಎಂದು ಕಮೆಂಟ್ ಮಾಡಿದ್ದಾರೆ. ನನ್ನ ಅಜ್ಜ ಅಜ್ಜಿಯಿಂದ ಹಿಡಿದು ನನ್ನ ಮಕ್ಕಳ ಪೀಳಿಗೆಯ ವರೆಗೆ... DH ನಮ್ಮ ದಿನವನ್ನು ಪ್ರತಿದಿನವೂ ಪ್ರಾರಂಭಿಸುತ್ತದೆ❤️❤️, ಹಾಸ್ಯಮಯ ಮತ್ತು ಆಸಕ್ತಿದಾಯಕ. ಡೆಕ್ಕನ್ ಹೆರಾಲ್ಡ್ ಈ ಟ್ರೆಂಡ್ಅನ್ನು ಫಾಲೋ ಮಾಡಿರುವುದನ್ನು ನೋಡಲು ಸಂತೋಷವಾಯಿತು.. ನನ್ನ ನೆಚ್ಚಿನ ಪತ್ರಿಕೆ ಎಂದು ನೆಟ್ಟಿಗರು ರಿಯಾಕ್ಟ್ ಮಾಡಿದ್ದಾರೆ.
-
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ












Click it and Unblock the Notifications