Bengaluru Power Cut: ನವೆಂಬರ್ 2, 4 & 6 ರಂದು ಈ ಭಾಗಗಳಲ್ಲಿ ವಿದ್ಯುತ್ ಕಡಿತ, ಗಮನಿಸಿ
ಬೆಂಗಳೂರು, ನವೆಂಬರ್ 02: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಲಿಮಿಟೆಡ್ (KPTCL) ಆಗಾಗ ತುರ್ತು ಕಾಮಗಾರಿ ಕೈಗೊಳ್ಳಲಿರುವ ಪ್ರಯುಕ್ತ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಇದೀಗ ಬೆಂಗಳೂರು ವಿದ್ಯುತ್ ಸರಬರಾಜು ನಿಗಮ ನಿಯಮಿತ (ಬೆಸ್ಕಾಂ) ವ್ಯಾಪ್ತಿಯಲ್ಲಿ ಇಂದು ನವೆಂಬರ್ 2, 4 ಮತ್ತು 6ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ವಿದ್ಯುತ್ ವ್ಯತ್ಯಯ ನಾಳೆ ಚಿಕ್ಕಬಳ್ಳಾಪುರ ಎಂ.ಜಿ. ರಸ್ತೆ ವಿಸ್ತರಣೆ ಪ್ರಯುಕ್ತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ರಸ್ತೆ ಪಕ್ಕದಲ್ಲಿರುವ ವಿದ್ಯುತ್ ಕಂಬದ ಮಾರ್ಗಗಳನ್ನು ಸ್ಥಳಾಂತರಿಸಲು ನಿರ್ಧರಿಸಿದ್ದಾರೆ. ಜೊತೆಗೆ ಕೆಲವು ಮರಗಳನ್ನು ಕಟಾವು ಮಾಡುತ್ತಿದ್ದಾರೆ. ಆದ್ದರಿಂದ ನವೆಂಬರ್ 2ರಂದು ನಗರದ 66/11 ಕೆ.ಪಿ. ಉಪ ಕೇಂದ್ರದಿಂದ ಸರಬರಾಜಾಗುವ ಎಫ್-2 ಎಪಿಎಂಸಿ ಯಾರ್ಡ್, ಎಫ್-7 ಲೋಕಲ್ ಹಾಗೂ ಎಫ್-14 ರಂಗಸ್ಥಳ 11 ಕೆ.ವಿ. ವಿದ್ಯುತ್ ಮಾರ್ಗಗಳು ಸ್ಥಗಿತಗೊಳ್ಳಲಿದೆ. ನಗರದ ವೇಣುಗೋಪಾಲಸ್ವಾಮಿ ದೇವಸ್ಥಾನದ ರಸ್ತೆ, ಸರ್ಕಾರಿ ಜಿಲ್ಲಾ ಆಸ್ಪತ್ರೆ ಪ್ರದೇಶ, ಎಪಿಎಂಸಿ ಮಾರುಕಟ್ಟೆ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ಅಡಚಣೆ ಉಂಟಾಗಲಿದೆ.

ಸಾಧುಮಠ, ಗಂಗನಮಿದ್ದೆ, ಶೆಟ್ಟಿಹಳ್ಳಿ ಬಡಾವಣೆ, ಸಿಎಸ್‌ಐ ಆಸ್ಪತ್ರೆ ರಸ್ತೆ, ಐಡಿಎಸ್‌ಎಂಟಿ ಬಡಾವಣೆ, ನಿಮ್ಮಾಕಲಕುಂಟೆ, ಡಿವೈನ್ ಸಿಟಿ, ದರ್ಗಾಮೊಹಲ್ಲ, ವಾಪಸಂಸ್ರ, ದಿನ್ನೆಹೊಸಹಳ್ಳಿ ರಸ್ತೆ, ಮುನ್ನೂರು, ಪ್ರಶಾಂತ್ ನಗರ, ದೇವಪ್ಪ ಬಡಾವಣೆ, ಮತ್ತು ಟೌನ್‌ಹಾಲ್ ಪ್ರದೇಶಗಳಲ್ಲಿ ಕರೆಂಟ್ ಕಟ್ ಆಗಲಿದೆ. ಅಂಕಣಗೊಂದಿ, ಕಣಜೇನಹಳ್ಳಿ, ತಿಪ್ಪೇನಹಳ್ಳಿ, ಬೋದಗಾನಹಳ್ಳಿ, ರಂಗಸ್ಥಳ, ಮೈಲಪ್ಪನಹಳ್ಳಿ ಗ್ರಾಮಗಳಲ್ಲಿ ನವೆಂಬರ್ 2ರಂದು ಬೆಳಗ್ಗೆ 11.30ರಿಂದ ಸಂಜೆ 4.30 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸಬೇಕೆಂದು ಬೆಸ್ಕಾಂ ಅಧಿಕಾರಿಗಳು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಇನ್ನೂ ತುಮಕೂರು ವ್ಯಾಪ್ತಿಯಲ್ಲಿ ಉಪವಿಭಾಗ-1ರ ವ್ಯಾಪ್ತಿಯಲ್ಲಿ ಕಂಬಗಳ ಸ್ಥಳಾಂತರ ಕಾಮಗಾರಿ ಕೈಗೊಳ್ಳಲಾಗಿದೆ. ನವೆಂಬರ್ 2, 4 ಮತ್ತು 6ರಂದು ವಿದ್ಯುತ್ ಸರಬರಾಜಿನಲ್ಲಿ ಮಧ್ಯಂತರವಾಗಿ ವ್ಯತ್ಯಯ ಉಂಟಾಗಲಿದೆ. ಸ್ಥಳಗಳ ಮಾಹಿತಿ ನೋಡುವುದಾದರೆ ಬೆಳಗುಂಬ, ಬೆಳಗುಂಬ ಗ್ರಾಮ, ಲಂಭಾಣಿ ತಾಂಡ್ಯ, ಜ್ಯೋತಿಪುರ, ಎಸ್.ಎಸ್. ಲೇಔಟ್. ಕುಂದೂರು, ಕುಂದೂರು ಗ್ರಾಮ, ವೆಂಕಟಾದ್ರಿ ಬಡಾವಣೆಗಳಲ್ಲಿ ನಿಗದಿತ ದಿನ ವಿದ್ಯುತ್ ಇರಲ್ಲ. ಹೆಚ್ಚಿನ ಮಾಹಿತಿಗೆ ಸಹಾಯವಾಣಿ 1912ಗೆ ಕರೆ ಮಾಡಬಹುದು. ನಿಮ್ಮ ವಿದ್ಯುತ್ ಸಂಬಂಧಿತ ಸಮಸ್ಯೆಗಳ ಫೋಟೋ ಅಥವಾ ವಿಡಿಯೋಗಳನ್ನು ನಿಮ್ಮ ಜಿಲ್ಲೆಗೆ ಸಂಬಂಧಪಟ್ಟ ವಾಟ್ಸ್‌ಆ್ಯಪ್ ಸಹಾಯವಾಣಿ ಸಂಖ್ಯೆಗೆ ಕಳುಹಿಸಬಹುದು.












Click it and Unblock the Notifications