ಸರಕಾರದ ನಿರ್ಧಾರದ ವಿರುದ್ದ ಹೈಕೋರ್ಟಿನಲ್ಲಿ ತೊಡೆತಟ್ಟಿದ ರೇವಣ್ಣ
Recommended Video
ಬೆಂಗಳೂರು, ಜುಲೈ 31: ಸೋಲುತ್ತೇವೆ ಎನ್ನುವ ಭೀತಿಯಿಂದ ಕೆಎಂಎಫ್ ಅಧ್ಯಕ್ಷೀಯ ಚುನಾವಣೆಯನ್ನು ಮುಂದೂಡಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ್ದ ಎಚ್ ಡಿ ರೇವಣ್ಣ, ಸರಕಾರದ ವಿರುದ್ದ ತೊಡೆತಟ್ಟಿದ್ದಾರೆ.
ಈ ಸಂಬಂಧ ಹೈಕೋರ್ಟ್ ಮೆಟ್ಟಲೇರಿರುವ ರೇವಣ್ಣ, ಸರಕಾರದ ಆದೇಶವನ್ನು ಈ ಕೂಡಲೇ ರದ್ದು ಪಡಿಸಬೇಕೆಂದು ಅರ್ಜಿ ಸಲ್ಲಿಸಿದ್ದಾರೆ. ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಹೊರಡಿಸಿದ್ದ ಆದೇಶವನ್ನು ವಾಪಸ್ ಪಡೆಯಲು ಸೂಚಿಸಬೇಕೆಂದು ರೇವಣ್ಣ, ಕೋರ್ಟ್ ಮೊರೆ ಹೋಗಿದ್ದಾರೆ.
ಯಾವ ಹಂತದಲ್ಲಿ ಚುನಾವಣಾ ಪ್ರಕ್ರಿಯೆ ನಿಂತಿತ್ತೋ, ಅಲ್ಲಿಂದಲೇ ಮತ್ತೆ ಪ್ರಕ್ರಿಯೆ ಮುಂದುವರಿಸಲು, ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಬೇಕೆಂದು ರೇವಣ್ಣ, ಕೋರ್ಟಿಗೆ ಸಲ್ಲಿಸಿದ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

ಇನ್ನೋರ್ವ ಮೈತ್ರಿ ಪಕ್ಷದ ಶಾಸಕ ಭೀಮಾ ನಾಯಕ್ ಜೊತೆ ತೀವ್ರ ಪೈಪೋಟಿಯಿದ್ದರೂ, ರೇವಣ್ಣ ಅಧ್ಯಕ್ಷ ಹುದ್ದೆಗೇರುವುದು ಬಹುತೇಕ ಖಚಿತವಾಗಿತ್ತು ಎನ್ನುವ ಸಮಯದಲ್ಲಿ, ಸರಕಾರ ಚುನಾವಣೆಯನ್ನು ಮುಂಡೂಡಿತ್ತು.
ಮುಖ್ಯಮಂತ್ರಿ ಯಡಿಯೂರಪ್ಪನವರು ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದಿದ್ದರು. ಆದರೆ, ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಎರಡು ಗಂಟೆಯಲ್ಲಿಯೇ ಚುನಾವಣೆ ಮುಂದೂಡಿದ್ದಾರೆ ಎಂದು ರೇವಣ್ಣ ಆರೋಪಿಸಿದ್ದರು.
ಕೆಎಂಎಫ್‌ನ ಹಾಲಿ ಅಧ್ಯಕ್ಷ ನಾಗರಾಜ್ ಸಿಎಂ ಯಡಿಯೂರಪ್ಪ ಬಳಿ ಚುನಾವಣೆ ಮುಂದೂಡುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಅಧ್ಯಕ್ಷ ಚುನಾವಣೆಯನ್ನು ಮುಂದೂಡಲಾಗಿದೆ ಎಂದು ಸರಕಾರ ಸಮರ್ಥನೆ ನೀಡಿತ್ತು.












Click it and Unblock the Notifications