ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂಚೆ ಕಚೇರಿಯಲ್ಲಿಯೂ ಶೀಘ್ರದಲ್ಲೇ ಎಟಿಎಂ ಸೌಲಭ್ಯ

|
Google Oneindia Kannada News

ಬೆಂಗಳೂರು, ಮಾ.6 : ಅಂಚೆ ಇಲಾಖೆಯಲ್ಲಿನ ಉಳಿತಾಯ ಖಾತೆಯಿಂದ ಹಣವನ್ನು ಪಡೆದುಕೊಳ್ಳಲು ಇನ್ನು ಮುಂದೆ ಎಟಿಎಂ ಕೇಂದ್ರಗಳಿಗೆ ಹೋಗಬಹುದು. ಕರ್ನಾಟಕದ 16 ಅಂಚೆ ಕಚೇರಿಗಳಲ್ಲಿ ಪ್ರಾಯೋಗಿಕವಾಗಿ ಈ ಸೌಲಭ್ಯ ಲಭ್ಯವಾಗಲಿದೆ.

ಅಂಚೆ ಇಲಾಖೆಯ ಕರ್ನಾಟಕ ವಲಯ ಏಪ್ರಿಲ್‌ ತಿಂಗಳಿನಲ್ಲಿ ರಾಜ್ಯದ 16 ಅಂಚೆ ಕಚೇರಿಗಳಲ್ಲಿ ಎಟಿಎಂ ಕೇಂದ್ರಗಳನ್ನು ತೆರೆಯಲು ಸಿದ್ಧತೆ ನಡೆಸುತ್ತಿದೆ. ಇದಕ್ಕಾಗಿ ಕೋರ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಆರಂಭಿಸಲಿದೆ. [ಮೊಬೈಲ್ ಮೂಲಕ ಮನಿಯಾರ್ಡರ್ ಕಳಿಸಿ]

Post Office

ಅಂಚೆ ಕಚೇರಿಗಳಲ್ಲಿ ಉಳಿತಾಯ ಖಾತೆ ಹೊಂದಿರುವವರು ಹಣವನ್ನು ಪಡೆಯಲು ಬಹಳ ಹೊತ್ತು ಕಾಯಬೇಕಾಗಿತ್ತು. ಇದನ್ನು ತಪ್ಪಿಸಲು ಇಲಾಖೆ ಎಟಿಎಂ ಕೇಂದ್ರಗಳನ್ನು ತೆರೆಯಲಿದ್ದು, ಅಂಚೆ ಕಚೇರಿ ಆವರಣದಲ್ಲಿಯೇ ಇವುಗಳು ಕಾರ್ಯನಿರ್ವಹಿಸಲಿವೆ. [ಅಂಚೆ ಇಲಾಖೆ ಖಾತೆದಾರರಿಗೆ ಎಟಿಎಂ ಸೌಲಭ್ಯ]

ಬೆಂಗಳೂರು ಸೇರಿದಂತೆ ರಾಜ್ಯದ ಇತರ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಈ ಎಟಿಎಂ ಕೇಂದ್ರಗಳು ಆರಂಭವಾಗಲಿವೆ. ಬೆಂಗಳೂರಿನ ಎಚ್‌ಎಎಲ್ 2ನೇ ಹಂತ, ಆರ್.ಟಿ. ನಗರ, ಬಸವನಗುಡಿ, ರಾಜಾಜಿನಗರ, ಜಯನಗರದಲ್ಲಿ ಎಟಿಎಂ ಕೇಂದ್ರ ಆರಂಭವಾಗಲಿದೆ.[ಮಿತಿ ಮೀರಿದ ಎಟಿಎಂ ಬಳಕೆ ಕೈ ಕಚ್ಚಲಿದೆ]

ಉಳಿದಂತೆ ಚನ್ನಪಟ್ಟಣ, ಬೆಳಗಾವಿ, ಬಳ್ಳಾರಿ, ಧಾರವಾಡ, ಹುಬ್ಬಳ್ಳಿ, ಗುಲ್ಬರ್ಗ, ಮಂಗಳೂರು, ಮೈಸೂರು, ಪುತ್ತೂರು, ಶಿವಮೊಗ್ಗ, ಕೋಲಾರದ ಮುಖ್ಯ ಅಂಚೆ ಕಚೇರಿಗಳಲ್ಲಿ ಎಟಿಎಂ ಕೇಂದ್ರಗಳನ್ನು ಪ್ರಾರಂಭಿಸಲಾಗುತ್ತದೆ.

25 ಸಾವಿರ ಡ್ರಾ ಮಾಡಿ : ಅಂಚೆ ಕಚೇರಿಯ ಎಟಿಎಂನಲ್ಲಿ ದಿನಕ್ಕೆ ಸುಮಾರು 25 ಸಾವಿರ ರೂ.ವರೆಗೆ ಹಣವನ್ನು ಡ್ರಾ ಮಾಡುವ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಖಾತೆ ಹೊಂದಿರುವವರಿಗೆ ಅಂಚೆ ಇಲಾಖೆ ಲಾಂಛನವುಳ್ಳ ಕೆಂಪು ಬಣ್ಣದ ಎಟಿಎಂ ಕಾರ್ಡ್‌ ವಿತರಣೆ ಮಾಡಲಾಗುತ್ತದೆ.

ಕರ್ನಾಟಕದಲ್ಲಿನ 76 ಮುಖ್ಯ ಅಂಚೆ ಕಚೇರಿಗಳಲ್ಲಿ ಎಟಿಎಂ ಯಂತ್ರಗಳನ್ನು ಅಳವಡಿಸಲು ಕೇಂದ್ರ ಸಮ್ಮತಿ ಸೂಚಿಸಿದೆ. ಈಗಾಗಲೇ ಬೆಂಗಳೂರಿನ ರಾಜಭವನ ರಸ್ತೆಯಲ್ಲಿರುವ ಜಿಪಿಒದಲ್ಲಿ ಪ್ರಾಯೋಗಿಕವಾಗಿ ಎಟಿಎಂ ಯಂತ್ರ ಅಳವಡಿಸಲಾಗಿದ್ದು, ಜನರು ಇದನ್ನು ಬಳಕೆ ಮಾಡುತ್ತಿದ್ದಾರೆ.

English summary
Karnataka Postal Circle, Department Of Posts will issue ATM Debit Cards to its saving account holders, and allow them to have bank statements from ATM machines. In 18 post office of state this facility will available soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X