ರಾಜ್ಯದಲ್ಲಿ ಅನ್‌ಲಾಕ್ 3.0 ಸಾಧ್ಯತೆ; ಯಾವುದಕ್ಕೆ ಅವಕಾಶ ಸಿಗಬಹುದು?

ಬೆಂಗಳೂರು, ಜೂನ್ 29: ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ನಿಯಂತ್ರಣಕ್ಕೆ ಬಂದಿದ್ದು, ಹಂತಹಂತವಾಗಿ ಅನ್‌ಲಾಕ್ ಪ್ರಕ್ರಿಯೆ ಆರಂಭವಾಗಿದೆ. ಹಲವು ಜಿಲ್ಲೆಗಳು ಅನ್‌ಲಾಕ್ ಆಗಿದ್ದು, ಜನಜೀವನ ಸಹಜ ಸ್ಥಿತಿಗೆ ಬರುತ್ತಿದೆ.

ಇದೀಗ ಜುಲೈ 5ರಿಂದ ಅನ್‌ಲಾಕ್ 0.3 ಜಾರಿಯಾಗುವ ನಿರೀಕ್ಷೆಯಿದೆ. ಇದರಲ್ಲಿ ಮಾಲ್‌, ಸಿನಿಮಾ ಮಂದಿರಗಳು, ಪಬ್, ಕ್ಲಬ್, ಬಾರ್‌ಗಳಿಗೆ ಅನುಮತಿ ನೀಡುವ ಸಾಧ್ಯತೆ ಇರುವುದಾಗಿ ತಿಳಿದುಬಂದಿದೆ.

ಕೊರೊನಾ ಸೋಂಕಿನ ಪಾಸಿಟಿವಿಟಿ ಪ್ರಮಾಣ ತಗ್ಗಿದರೆ ಅನ್‌ಲಾಕ್ 3.0 ಜಾರಿಗೆ ತರಬಹುದು ಎಂದು ತಜ್ಞರು ಸಲಹೆ ನೀಡಿದ್ದು, ಸದ್ಯಕ್ಕೆ ರಾಜ್ಯದಲ್ಲಿ ಸೋಂಕಿನ ಪಾಸಿಟಿವಿಟಿ ಪ್ರಮಾಣ 1.97ರಷ್ಟಿರುವ ಕಾರಣ ಅನ್‌ಲಾಕ್ ಮಾಡುವ ಸಾಧ್ಯತೆ ಇದೆ.

 Possibility Of Karnataka Unlock 3.0 From July 5: Here is Whats allowed to open and Whats remain closed

ಈಗ ಅಂಗಡಿ ಮಳಿಗೆಗಳಿಗೆ ಅವಕಾಶ ಕೊಟ್ಟಿರುವಂತೆಯೇ ಮಾಲ್‌ಗಳನ್ನು ಸಂಜೆವರೆಗೂ ತೆರೆಯಲು ಅನುಮತಿ ನೀಡಬಹುದಾಗಿದೆ. ಅತಿ ಕಡಿಮೆ ಜನರ ಪ್ರವೇಶಕ್ಕೆ ಅನುಮತಿ ನೀಡಲಿದ್ದು, ಮಕ್ಕಳಿಗೆ ಪ್ರವೇಶ ನಿರ್ಬಂಧ ಹೇರುವ ಸಂಭವವಿದೆ. ಬಾರ್‌ಗಳಲ್ಲಿಯೂ ಟೇಬಲ್ ಸರ್ವೀಸ್‌ಗೆ ಅವಕಾಶ ನೀಡುವುದಾಗಿ ತಿಳಿದುಬಂದಿದೆ.

ಆದರೆ ಸಿನಿಮಾ ಮಂದಿರಗಳಿಗೆ ಇಷ್ಟು ಬೇಗ ಅವಕಾಶ ನೀಡುವುದು ಅನುಮಾನವಿದ್ದು, ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಇನ್ನಷ್ಟು ದಿನ ಮುಂದುವರೆಯುವ ಸಾಧ್ಯತೆಯಿದೆ.

ಕಳೆದ ಏಪ್ರಿಲ್ 27ರಿಂದ ಕರ್ನಾಟಕದಲ್ಲಿ ಜಾರಿ ಮಾಡಲಾಗಿದ್ದ ಕೋವಿಡ್ -19 ಲಾಕ್‌ಡೌನ್‌ ಅನ್ನು ಜೂನ್ 14ರ ನಂತರ ಅಲ್ಪ ಸಡಿಲಿಕೆ ಮಾಡಲಾಗಿತ್ತು. ಜೂನ್ 21ರ ನಂತರ ಅನ್‌ಲಾಕ್ 2.0 ಘೋಷಣೆಯಾಗಿದ್ದು, ಕೆಲವು ನಿರ್ಬಂಧಗಳೊಂದಿಗೆ ಹಲವು ಚಟುವಟಿಕೆಗಳಿಗೆ ಅವಕಾಶ ನೀಡಲಾಗಿತ್ತು. ಮೊದಲು ಹದಿನಾರು ಜಿಲ್ಲೆಗಳಲ್ಲಿ ಅನ್‌ಲಾಕ್ ಘೋಷಣೆ ಮಾಡಿ ನಂತರ ಆ ಪಟ್ಟಿಗೆ 6 ಜಿಲ್ಲೆಗಳನ್ನು ಸೇರಿಸಲಾಗಿತ್ತು.

Recommended Video

      ರಾಷ್ಟ್ರಪತಿಗಳು ತಿಂಗಳಿಗೆ ಎಷ್ಟು ತೆರಿಗೆ ಕಟ್ಟುತ್ತಾರೆ | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+