• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಬ್ಬರನ್ನು ಹೊರತು ಪಡಿಸಿ ಇಡೀ ಜಾರಕಿಹೊಳಿ ಕುಟುಂಬ ರಾಜಕೀಯ ಗುಳೆ?

|
Google Oneindia Kannada News

ಸಾಮಾನ್ಯವಾಗಿ ಚುನಾವಣೆಯ ಸಮಯದಲ್ಲಿ ರಾಜಕೀಯ ಮುಖಂಡರ ನಿಯತ್ತು ಬದಲಾಗುತ್ತದೆ, ಇದ್ದ ಪಕ್ಷದಲ್ಲಿ ಉಸಿರುಗಟ್ಟಿಸುವ ವಾತಾವರಣ ಅವರಿಗೆ ನಿರ್ಮಾಣವಾಗುತ್ತದೆ. ಹಾಗಾಗಿ, ಬೇರೆ ಪಕ್ಷಕ್ಕೆ ಸ್ಥಿತ್ಯಂತರಗೊಳ್ಳುತ್ತಾರೆ. ಇದಕ್ಕೆ ಕಾರಣ ಚುನಾವಣೆಗೆ ಟಿಕೆಟ್ ಸಿಗಬೇಕು ಎನ್ನುವುದಷ್ಟೇ ಸತ್ಯ.

ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಪತನಗೊಂಡ ಹಿಂದೆ, ಮುಂದಿನ ವಿದ್ಯಮಾನಗಳನ್ನೊಮ್ಮೆ ಕಣ್ಣುಮುಂದೆ ತಂದುಕೊಳ್ಳೋಣ. ಇಡೀ ಆ ವಿದ್ಯಮಾನಕ್ಕೆ ಪ್ರತ್ಯಕ್ಷವಾಗಿ ಕ್ಯಾಪ್ಟನ್ ಆಗಿದ್ದವರು ಗೋಕಾಕ ಸಾಹುಕಾರ ರಮೇಶ್ ಜಾರಕಿಹೊಳಿ.

ಮೌನಕ್ಕೆ ಜಾರಿದ ರಮೇಶ್‌ ಜಾರಕಿಹೊಳಿ: ಯಡಿಯೂರಪ್ಪ ಹೇಳಿದ್ದೇನು?ಮೌನಕ್ಕೆ ಜಾರಿದ ರಮೇಶ್‌ ಜಾರಕಿಹೊಳಿ: ಯಡಿಯೂರಪ್ಪ ಹೇಳಿದ್ದೇನು?

ಯಡಿಯೂರಪ್ಪನವರ ಸರಕಾರದಲ್ಲಿ ಬಯಸಿದ ಹುದ್ದೆಯನ್ನು ಪಡೆದುಕೊಂಡು ಕ್ಯಾಬಿನೆಟ್‌ನಲ್ಲಿ ಸಾಹುಕಾರನಂತಿದ್ದ ಜಾರಕಿಹೊಳಿಯವರ ರಾಜಕೀಯಕ್ಕೆ ತಾತ್ಕಾಲಿಕ ಬ್ರೇಕ್ ಹಾಕಿದ್ದು ಸಿಡಿ ಪ್ರಕರಣ. ಅಲ್ಲಿಂದ, ರಾಜ್ಯ ಬಿಜೆಪಿಯಲ್ಲಿ ಅವರನ್ನು ಸೈಡಿಗೆ ತಳ್ಳುವ ಕೆಲಸ ನಡೆಯುತ್ತಲೇ ಬಂತು. ಆದರೆ..

ಯಾವುದೇ ಪಕ್ಷ ಅಧಿಕಾರದಲ್ಲಿರಲಿ ರಾಜ್ಯ ರಾಜಕೀಯದಲ್ಲಿ ಜಾರಕಿಹೊಳಿ ಕುಟುಂಬದ ಪ್ರಭಾವ ಕಮ್ಮಿಯಾಗುವುದಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ. ಪರಿಸ್ಥಿತಿ ಹೀಗಿರುವಾಗ, ಚುನಾವಣಾ ವರ್ಷದಲ್ಲಿ ಜಾರಕಿಹೊಳಿ ಬ್ರದರ್ಸ್ ಕಡೆಯಿಂದ ಬಿಗ್ ಬ್ರೇಕಿಂಗ್ ಸದ್ಯದಲ್ಲೇ ಹೊರಬೀಳಲಿದೆ ಎನ್ನುವ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.

 ಸಿಡಿ ಪ್ರಕರಣದ ನಂತರ ರಮೇಶ್ ಜಾರಕಿಹೊಳಿಯವರ ದಿವ್ಯ ಮೌನ

ಸಿಡಿ ಪ್ರಕರಣದ ನಂತರ ರಮೇಶ್ ಜಾರಕಿಹೊಳಿಯವರ ದಿವ್ಯ ಮೌನ

ಸಿಡಿ ಪ್ರಕರಣದ ನಂತರ ರಮೇಶ್ ಜಾರಕಿಹೊಳಿಯವರ ದಿವ್ಯ ಮೌನ ಮುಂದುವರಿಯುತ್ತಲೇ ಬಂದಿದೆ. ಅದರಲ್ಲೂ, ಯಡಿಯೂರಪ್ಪನವರು ರಾಜೀನಾಮೆ ನೀಡಬೇಕಾಗಿ ಬಂದಿದ್ದರಿಂದ, ಇನ್ನಷ್ಟು ಅಂತರವನ್ನು ಜಾರಕಿಹೊಳಿ, ರಾಜ್ಯ ಬಿಜೆಪಿ ನಾಯಕರ ಜೊತೆ ಮುಂದುವರಿಸಿಕೊಂಡು ಬರುತ್ತಿದ್ದಾರೆ. ಇದರ ಜೊತೆಗೆ, ಪ್ರಾದೇಶಿಕ ಪಕ್ಷದ ನಾಯಕರ ಜೊತೆಗಿನ ರಾಜಕೀಯ ಸಂಬಂಧ ಹೊಸ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ ಎನ್ನುವ ಮಾತು ಎಲ್ಲಾ ಮೂರು ಪಕ್ಷಗಳ ಪಡಶಾಲೆಯಲ್ಲಿ ಕೇಳಿ ಬರುತ್ತಿದೆ.

 ರಮೇಶ್ ಜಾರಕಿಹೊಳಿ ಮತ್ತು ಅವರ ಇಬ್ಬರು ಸಹೋದರರು

ರಮೇಶ್ ಜಾರಕಿಹೊಳಿ ಮತ್ತು ಅವರ ಇಬ್ಬರು ಸಹೋದರರು

ರಾಜಕೀಯದಲ್ಲಿ ಯಾರೂ ಶತ್ರುಗಳಿಲ್ಲ ಎನ್ನುವ ಮಾತಿನಂತೆ, ತನ್ನದೇ ಪಕ್ಷದ ಸರಕಾರವನ್ನು ಉರುಳಿಸಲು ಕಾರಣರಾಗಿದ್ದ ರಮೇಶ್ ಜಾರಕಿಹೊಳಿ ಮತ್ತು ಅವರ ಇಬ್ಬರು ಸಹೋದರರನ್ನು ಅಪ್ಪಿಕೊಳ್ಳಲು ಎಚ್.ಡಿ.ಕುಮಾರಸ್ವಾಮಿ ಮುಂದಾಗಿದ್ದಾರೆ ಎನ್ನುವ ಅಂತೆಕಂತೆ ಮಾತುಗಳು ಸಖತ್ತಾಗಿ ಸೌಂಡ್ ಮಾಡುತ್ತಿದೆ. ಬಿಜೆಪಿಯ ಸಂಕಲ್ಪ ಯಾತ್ರೆ ಬೆಳಗಾವಿ ಭಾಗದಲ್ಲಿ ಭರ್ಜರಿಯಾಗಿ ನಡೆದರೂ, ಜಾರಕಿಹೊಳಿ ಬ್ರದರ್ಸ್ ಸಮಾವೇಶದ ಕಡೆ ತಲೆ ಹಾಕಿರಲಿಲ್ಲ.

 ಕೆಎಂಎಫ್ ಅಧ್ಯಕ್ಷರ ಜೊತೆಗೆ (ಬಾಲಚಂದ್ರ) ಕುಮಾರಸ್ವಾಮಿ ಹಲವು ಸುತ್ತಿನ ಮಾತುಕತೆ

ಕೆಎಂಎಫ್ ಅಧ್ಯಕ್ಷರ ಜೊತೆಗೆ (ಬಾಲಚಂದ್ರ) ಕುಮಾರಸ್ವಾಮಿ ಹಲವು ಸುತ್ತಿನ ಮಾತುಕತೆ

ಕಳೆದ ಕೆಲವು ದಿನಗಳಿಂದ ಜಾರಕಿಹೊಳಿ ಸಹೋದರರು ಜೆಡಿಎಸ್ ಸೇರಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಲೇ ಇದೆ. ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಮತ್ತು ಲಖನ್ ಈ ಮೂವರು ಪ್ರಾದೇಶಿಕ ಪಕ್ಷ ಸೇರಲಿದ್ದಾರೆ ಎನ್ನುವ ಮಾತಿಗೆ ಇನ್ನಷ್ಟು ಪುಷ್ಟಿ ನೀಡುವಂತೆ, ಕರ್ನಾಟಕ ಹಾಲು ಮಹಾಮಂಡಳಿಯವರ ಅಧ್ಯಕ್ಷರ ಜೊತೆಗೆ (ಬಾಲಚಂದ್ರ) ಕುಮಾರಸ್ವಾಮಿಯವರ ಹಲವು ಸುತ್ತಿನ ಮಾತುಕತೆ ನಡೆದಿದೆ ಎನ್ನುವ ಮಾತೂ ಚರ್ಚೆಯಲ್ಲಿದೆ.

 ನಾನೇ ಮುಂದಿನ ಸಿಎಂ ಎನ್ನುವ ಕುಮಾರಸ್ವಾಮಿ ವಿಶ್ವಾಸದ ಮಾತು

ನಾನೇ ಮುಂದಿನ ಸಿಎಂ ಎನ್ನುವ ಕುಮಾರಸ್ವಾಮಿ ವಿಶ್ವಾಸದ ಮಾತು

ರಾಜಕೀಯದಲ್ಲಿ ಮಹತ್ವಾಕಾಂಕ್ಷೆಯನ್ನು ಇಟ್ಟುಕೊಂಡಿರುವ ಜಾರಕಿಹೊಳಿ ಬ್ರದರ್ಸ್ ಒಂದೇ ಪಕ್ಷಕ್ಕೆ ಅಂಟಿಕೊಂಡು ಕೂತವರಲ್ಲ ಎನ್ನುವುದು ಇತಿಹಾಸ. ಒಂದು ಕಡೆ, ಬಿಜೆಪಿ ಅಥವಾ ಕಾಂಗ್ರೆಸ್ಸಿಗೆ ಪೂರ್ಣ ಬಹುಮತ ಸಿಗುವುದು ಕಷ್ಟ ಎನ್ನುವ ಮಾತನ್ನು ರಾಜಕೀಯ ಪಂಡಿತರು ವಿಶ್ಲೇಷಿಸುತ್ತಿದ್ದಾರೆ. ಇನ್ನೊಂದು ಕಡೆ, ನಾನೇ ಮುಂದಿನ ಸಿಎಂ ಎನ್ನುವ ವಿಶ್ವಾಸದ ಮಾತನ್ನು ಕುಮಾರಸ್ವಾಮಿ ಆಡುತ್ತಿದ್ದಾರೆ. ಜೆಡಿಎಸ್ ಮತ್ತೆ ಕಿಂಗ್ ಮೇಕರ್ ಆದರೆ, ಅದನ್ನೇ ಆಧರಿಸಿಕೊಂಡು ಲೆಕ್ಕಾಚಾರ ಹಾಕುವುದಾದರೆ, ಜಾರಕಿಹೊಳಿಯವರ ಪಕ್ಷಾಂತರದ ಸುದ್ದಿಗೆ ಇನ್ನಷ್ಟು ಪುಷ್ಟಿ ಸಿಗುವುದಂತೂ ಹೌದು.

ರಮೇಶ್‌ ಜಾರಕಿಹೊಳಿ
Know all about
ರಮೇಶ್‌ ಜಾರಕಿಹೊಳಿ
English summary
Political Buzz: Ramesh Jarkiholi And His Two Brothers May Quit BJP. Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X