ಪ್ರಧಾನಿ ನರೇಂದ್ರ ಮೋದಿ ಚುನಾವಣಾ ತಂತ್ರಗಳು ಕರ್ನಾಟಕದಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ ಏಕೆ?

ಬೆಂಗಳೂರು, ಏಪ್ರಿಲ್. 30: ಚುನಾವಣೆಗೆ ಸಿದ್ಧವಾಗುತ್ತಿರುವ ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಶನಿವಾರದಿಂದ ಎಡನೇ ಬಾರಿ ಪ್ರಚಾರ ಪ್ರಾರಂಭಿಸಿದ್ದಾರೆ. ಈ ಬಾರಿ ಅವರಿಗೆ ಸಿಕ್ಕಿರುವ ಅಸ್ತ್ರವೆಂದರೆ, ಮಲ್ಲಿಕಾರ್ಜುನ ಖರ್ಗೆಯವರ ವೈಯಕ್ತಿಕ ದಾಳಿ. ಕಾಂಗ್ರೆಸ್‌ನ ವೈಯಕ್ತಿಕ ದಾಳಿಗೆ ಮೋದಿ ಪ್ರತಿಕ್ರಿಯೆಯು ಪಕ್ಷದ ಚುನಾವಣಾ ಪ್ರಚಾರವನ್ನು ಹೆಚ್ಚಿಸಬಹುದು ಎಂದು ಭಾರತೀಯ ಜನತಾ ಪಕ್ಷ (ಬಿಜೆಪಿ) ಆಶಿಸುತ್ತಿದೆ.

ನಿರೀಕ್ಷೆಯಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮೇಲೆ 'ವಿಷಪೂರಿತ ಹಾವು' ಹೇಳಿಕೆಯನ್ನು ಇಡೀ ಬಿಜೆಪಿ ನಾಯಕರು ತರಾಟುಎಗೆ ತೆಗೆದುಕೊಂಡಿದ್ದಾರೆ. ಇದನ್ನು ಪ್ರಧಾನಿ ಮೋದಿ ಕೂಡ ಹೆಚ್ಚಿನ ಪ್ರಚಾರಗಳಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್‌ ಅನ್ನು ತರಾಟೆಗೆ ತೆಗೆದುಕೊಂಡಿರುವ ಮೋದಿ, ಇಲ್ಲಿಯವರೆಗೆ ಪಕ್ಷ ಮತ್ತು ಅದರ ನಾಯಕರು ತಮ್ಮ ಮೇಲೆ 91 ಬಾರಿ ವಿವಿಧ ರೀತಿಯ ನಿಂದನೆಗಳನ್ನು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

PM Modi’s tactics unlikely to work in Karnataka Polls: experts

ಪ್ರಧಾನಮಂತ್ರಿಯವರ ಪ್ರಯಾಣದ ಪ್ರಕಾರ, ಅವರು ಮೇ 7 ರವರೆಗೆ ನಾಲ್ಕು ರೋಡ್‌ಶೋಗಳಲ್ಲಿ ಭಾಗವಹಿಸುವುದರ ಜೊತೆಗೆ ವಿವಿಧ ಜಿಲ್ಲೆಗಳಲ್ಲಿ 19 ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಆದರೂ, ಸ್ಥಳೀಯ ಸಮಸ್ಯೆಗಳ ಪ್ರಾಬಲ್ಯವಿರುವ ಚುನಾವಣೆಯಲ್ಲಿ ಪ್ರಧಾನಿಯವರ ಪ್ರಚಾರದ ಪ್ರಭಾವ ಸೀಮಿತವಾಗಿರುತ್ತದೆ ಎಂದು ರಾಜಕೀಯ ತಜ್ಞರು ವಿಶ್ಲೇಷಿಸುತ್ತಾರೆ.

"ರಾಜಕೀಯ ಪ್ರಚಾರವು ವೈಯಕ್ತಿಕ ದಾಳಿಯ ಮೇಲೆ ನಡೆದರೂ, ಅದು ದೊಡ್ಡ ಪರಿಣಾಮ ಬೀರದಿರಬಹುದು. ಏಕೆಂದರೆ ಕರ್ನಾಟಕದ ಮತದಾರರು ಸೂಕ್ಷ್ಮಗ್ರಾಹಿಗಳಾಗಿರುತ್ತಾರೆ. ಜೊತೆಗೆ ಈ ವೈಯಕ್ತಿಕ ದಾಳಿಗಳಿಗಿಂತ ಹೆಚ್ಚಾಗಿ ಪಕ್ಷಗಳ ಕೆಲಸಗಳತ್ತ ನೋಡುತ್ತಾರೆ. ಕರ್ನಾಟಕದ ರಾಜಕೀಯ, ಸಾಂಸ್ಕೃತಿಕ ಪರಿಸರವು ಪಕ್ಷಗಳು ತಾವು ಮಾಡಿರುವ ಕೆಲಸ ಮತ್ತು ಅವರ ಭರವಸೆಗಳನ್ನು ಪ್ರಸ್ತುತಪಡಿಸಬೇಕೆಂದು ನಿರೀಕ್ಷಿಸುತ್ತದೆ" ಎಂದು ರಾಜಕೀಯ ತಜ್ಞ ಸಂದೀಪ್ ಶಾಸ್ತ್ರಿ ಹೇಳಿದ್ದಾರೆ.

PM Modi’s tactics unlikely to work in Karnataka Polls: experts

ಮೋದಿಯವರ ಹೇಳಿಕೆಯ ಪರಿಣಾಮದ ಬಗ್ಗೆ ಮಾತನಾಡಿರುವ ಸಂದೀಪ್ ಶಾಸ್ತ್ರಿ, "ಅಂತಹ ಪ್ರಚಾರವು ಗುಜರಾತ್‌ನಲ್ಲಿ ಕೆಲಸ ಮಾಡಬಹುದು. ಆದರೆ ಕರ್ನಾಟಕದಲ್ಲಿ ಅಲ್ಲ . "ಮೌತ್ ಕಾ ಸೌದಾಗರ್" (ಸಾವಿನ ವ್ಯಾಪಾರಿ) ಎಂಬ ಮಾತು, ಗುಜರಾತ್ ಚುನಾವಣೆಯ ಮೇಲೆ ಅದರ ಪ್ರಭಾವ ಮತ್ತು ಖರ್ಗೆಯವರ "ವಿಷಪೂರಿತ ಹಾವು" ಹೇಳಿಕೆಯ ನಡುವಿನ ಟೀಕೆಗಳನ್ನು ಭೌಗೋಳಿಕ ಹಿನ್ನೆಲೆಯಲ್ಲಿ ನೋಡಬೇಕಾಗಿದೆ" ಎಂದು ತಿಳಿಸಿದ್ದಾರೆ.

"ಮೋದಿಯವರು ಗುಜರಾತಿನವರಾಗಿದ್ದು, ಆ ರಾಜ್ಯದಲ್ಲಿ ನಡೆದ ಘಟನೆಯ ಹಿನ್ನೆಲೆಯಲ್ಲಿ ಹೇಳಿಕೆ ನೀಡಲಾಗಿದೆ. ಆದರೆ ಕರ್ನಾಟಕವನ್ನು ನೋಡಿದರೆ ಅಂತಹ ಪರಿಣಾಮ ಬೀರುವುದಿಲ್ಲ ಎಂದು ರಾಜಕೀಯ ತಜ್ಞ ಸಂದೀಪ್ ಶಾಸ್ತ್ರಿ ಅಭಿಪ್ರಾಯಪಡುತ್ತಾರೆ.

ವೈಯಕ್ತಿಕ ದಾಳಿಯ ಹೊರತಾಗಿ, ಮೋದಿ ಅವರು ಕಾಂಗ್ರೆಸ್ ನೀಡಿದ ಚುನಾವಣಾ ಭರವಸೆಗಳ ಮೇಲೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮೇ 10 ರ ವಿಧಾನಸಭಾ ಚುನಾವಣೆಗೆ ಮುನ್ನ ಐದನೇ ಚುನಾವಣಾ ಭರವಸೆಯಾಗಿ, ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಸಾರ್ವಜನಿಕ ಸಾರಿಗೆ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಭರವಸೆಯನ್ನು ಪಕ್ಷದ ನಾಯಕ ರಾಹುಲ್ ಗಾಂಧಿ ನೀಡಿದ್ದಾರೆ.

ಕಾಂಗ್ರೆಸ್ ಈ ಹಿಂದೆ ನಾಲ್ಕು ಗ್ಯಾರೆಂಟಿಗಳನ್ನು ಘೋಷಿಸಿದೆ. ಎಲ್ಲಾ ಮನೆಗಳಿಗೆ 200 ಯೂನಿಟ್ ಉಚಿತ ವಿದ್ಯುತ್, ಪ್ರತಿ ಕುಟುಂಬದ ಮಹಿಳೆಗೆ ಮಾಸಿಕ 2,000 ರೂಪಾಯಿ ಸಹಾಯ, ಬಿಪಿಎಲ್ ಕುಟುಂಬದ ಎಲ್ಲ ಸದಸ್ಯರಿಗೆ 10 ಕೆಜಿ ಅಕ್ಕಿ ಮತ್ತು ಎರಡು ವರ್ಷಗಳವರೆಗೆ ಪ್ರತಿ ತಿಂಗಳು 3,000 ರೂಪಾಯಿ ಪದವೀಧರ ಯುವಕರಿಗೆ ಮತ್ತು ಡಿಪ್ಲೊಮಾ ಪದವಿ ಹೊಂದಿರುವವರಿಗೆ 1,500 ರೂಪಾಯಿ ನೀಡುವುದಾಗಿ ಘೋಷಿಸಿದ್ದಾರೆ.

ಬೆಲೆ ಏರಿಕೆ ಮತ್ತಿತರ ವಿಚಾರಗಳಲ್ಲಿ ಬಿಜೆಪಿ ವಿರುದ್ಧ ರಾಜ್ಯದಲ್ಲಿ ಭಾಎಈ ಅಸಮಾಧಾನವಿದೆ ಎಂದು ರಾಜಕೀಯ ವೀಕ್ಷಕ ಎ ನಾರಾಯಣ ಹೇಳಿದ್ದಾರೆ. "80 ರ ದಶಕದ ಅಂತ್ಯದ ನಂತರ, ಕರ್ನಾಟಕವು ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷವನ್ನು ಹೊಂದುತ್ತಿರುವುದು ಇದೇ ಮೊದಲು. ಬಿಜೆಪಿ ವಿರುದ್ಧ ರಾಜ್ಯದಲ್ಲಿ ಅಸಮಾಧಾನವಿದೆ. ಆದ್ದರಿಂದ, ದೊಡ್ಡ ಸಮಸ್ಯೆಗಳಿಗೆ ಹೋಲಿಸಿದರೆ ಪ್ರಧಾನ ಮಂತ್ರಿಯ ಪ್ರಚಾರವು ಸೀಮಿತ ಪರಿಣಾಮವನ್ನು ಬೀರುತ್ತದೆ. ಕರ್ನಾಟಕದಲ್ಲಿ ಇದುವರೆಗೆ ರಾಷ್ಟ್ರೀಯ ಸಮಸ್ಯೆ ಅಥವಾ ಕೇಂದ್ರ ಸರ್ಕಾರದ ಭರವಸೆಗಳ ಮೇಲೆ ಚುನಾವಣೆ ನಡೆದಿಲ್ಲ" ಎಂದು ಹೇಳಿದ್ದಾರೆ.

"ಕಾಂಗ್ರೆಸ್ ಅಥವಾ ಬಿಜೆಪಿ ಇರಲಿ, ಅವರು ಚುನಾವಣಾ ಭರವಸೆಗಳನ್ನು ಉಳಿಸಿಕೊಳ್ಳುವಲ್ಲಿ ಉತ್ತಮ ದಾಖಲೆಯನ್ನು ಹೊಂದಿಲ್ಲ. ಒಂದು ಪಕ್ಷವು ಉಚಿತಗಳನ್ನು ನೀಡುವುದಾಗಿ ಹೇಳಿದಾಗ, ಇನ್ನೊಂದು ಪಕ್ಷವು ಅಭಿವೃದ್ಧಿಯನ್ನು ನೀಡುವುದಾಗಿ ಹೇಳುತ್ತದೆ. ಹಿಂದಿನ ಚುನಾವಣೆಗಳನ್ನು ಗಮನಿಸಿದರೆ, ಭರವಸೆಗಳು ಮತ್ತು ಅದರ ಜಾರಿ ನಡುವಿನ ಗೆರೆ ತುಂಬಾ ತೆಳುವಾಗಿದೆ" ಎಂದು ನಾರಾಯಣ ಹೇಳಿದ್ದಾರೆ.

ಪಾಶ್ಚಿಮಾತ್ಯ ರಾಜಕೀಯ ಪರಿಕಲ್ಪನೆಯ ಕ್ಲೈಂಟ್‌ಲಿಸಂ (ರಾಜಕೀಯ ಬೆಂಬಲಕ್ಕಾಗಿ ಸರಕು ಮತ್ತು ಸೇವೆಗಳ ವಿನಿಮಯದ ಪರಿಕಲ್ಪನೆ) ಆಧಾರದ ಮೇಲೆ ಟೀಕೆಗಳನ್ನು ಕಸಿ ಮಾಡುವುದು ಭಾರತದಲ್ಲಿ ಕೆಲಸ ಮಾಡುವುದಿಲ್ಲ. ಪಾಶ್ಚಿಮಾತ್ಯಕ್ಕಿಂತ ಭಿನ್ನವಾಗಿ, ಸರ್ಕಾರವು ಇನ್ನೂ ಭಾರತದಲ್ಲಿ ಕಲ್ಯಾಣ ಯೋಜನೆಗಳ ಪೂರೈಕೆದಾರರಾಗಿ ಉಳಿದಿದೆ. ಆದ್ದರಿಂದ ಪಕ್ಷವು ಘೋಷಿಸಿದ ಕಲ್ಯಾಣ ಯೋಜನೆಗಳ ಪರಿಣಾಮವನ್ನು ನೋಡಬೇಕಾಗಿದೆ ಎಂದು ಅಭಿಪ್ರಾಯಪಡುತ್ತಾರೆ.

ಪ್ರಧಾನಿಯವರ ಸಭೆಗಳ ಪಕ್ಷಕ್ಕೆ ಅಸ್ತಿತ್ವದಲ್ಲಿರುವ ಮತಬ್ಯಾಂಕ್ ಅನ್ನು ಕ್ರೋಢೀಕರಿಸಲು ಪ್ರಭಾವ ಬೀರಬಹುದು, ಆದರೆ ಎರಡನೆಯದಾಗಿ, ಸ್ಥಳೀಯ ಸಮಸ್ಯೆಗಳು ಮತ್ತು ಆಡಳಿತ ವಿರೋಧಿಗಳ ಮೇಲೆ ಹೋರಾಡಿದ ಚುನಾವಣೆಯಲ್ಲಿ ಮೋದಿ ಸೀಮಿತ ಪ್ರಭಾವವನ್ನು ಬೀರಬಹುದು" ಎಂದು ಎ ನಾರಾಯಣ ಹೇಳುತ್ತಾರೆ.

(ಮಾಹಿತಿ ಕೃಪೆ: ಹಿಂದೂಸ್ತಾನ್ ಟೈಮ್ಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+