ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಸಿಗಳ ಜೊತೆ ಪ್ರಧಾನಿ ಮೋದಿ ನೇರ ಸಂವಾದ: ಇದನ್ನೇ ಹಿಂದೆ ಮಾಡಿದ್ದರೆ?

|
Google Oneindia Kannada News

ಸಾಮಾನ್ಯವಾಗಿ ರಾಜ್ಯಗಳ ಮುಖ್ಯಮಂತ್ರಿಗಳು, ಸಚಿವರುಗಳ ಜೊತೆ ಪ್ರಧಾನಮಂತ್ರಿಯಾದವರು ನೇರ ಸಂವಾದ ನಡೆಸಿದ ಉದಾಹರಣೆಗಳು ಬೇಕಾದಷ್ಟು ಸಿಗಬಹುದು. ಆದರೆ, ನೇರವಾಗಿ ಆಯಾಯ ಇಲಾಖೆಯ ಸಚಿವರುಗಳಿಗೆ ರಿಪೋರ್ಟ್ ಮಾಡುವ ಜಿಲ್ಲಾಧಿಕಾರಿಗಳ ಜೊತೆ ಪಿಎಂ ಸಂವಾದ ನಡೆಸುತ್ತಾರೆಂದರೆ?

ಇಂತಹ ಬೆಳವಣಿಗೆ ತೀರಾ ಅಪರೂಪ. ಒಂದೆರಡು ವಾರಗಳ ಹಿಂದೆ ಕರ್ನಾಟಕದ ರಾಜ್ಯಪಾಲರು, ಕೋವಿಡ್ ವಿಚಾರದಲ್ಲಿ ಸರ್ವಪಕ್ಷಗಳ ಸಭೆಯನ್ನು ಕರೆದಿದ್ದರು. ಸಭೆಯಲ್ಲಿ ವಿರೋಧ ಪಕ್ಷಗಳ ನಾಯಕರು ಭಾಗವಹಿಸಿದ್ದರೂ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇದೊಂದು ಅಸಂವಿಧಾನಿಕ ನಡೆ ಎಂದು ಅಸಮಾಧಾನ ವ್ಯಕ್ತ ಪಡಿಸಿದ್ದರು.

ಕೊರೊನಾ ನಿರ್ವಹಣೆ; ಜಿಲ್ಲಾಧಿಕಾರಿಗಳಿಗೆ ಪ್ರಧಾನಿ ಮೋದಿ ಸಲಹೆಗಳಿವು...ಕೊರೊನಾ ನಿರ್ವಹಣೆ; ಜಿಲ್ಲಾಧಿಕಾರಿಗಳಿಗೆ ಪ್ರಧಾನಿ ಮೋದಿ ಸಲಹೆಗಳಿವು...

ಮಂಗಳವಾರ (ಮೇ 18) ಪ್ರಧಾನಿ ಮೋದಿ ಒಂಬತ್ತು ರಾಜ್ಯಗಳ 46 ಜಿಲ್ಲಾಧಿಕಾರಿಗಳ ಜೊತೆ ನೇರ ಸಂವಾದ ನಡೆಸಿದರು. ಆಯಾಯ ರಾಜ್ಯ ಸರಕಾರದ ಸಿಎಂ/ಸಚಿವರುಗಳಾದಿ ಈ ಸಭೆಯಲ್ಲಿ ಭಾಗವಹಿಸಿದ್ದರೂ, ಮಾತನಾಡಲು ಅವಕಾಶವಿದ್ದದ್ದು ಡಿಸಿಗಳಿಗೆ ಮಾತ್ರ.

 ಹಾಸನ ಜಿಲ್ಲೆಯಲ್ಲಿ ವಾರದಲ್ಲಿ 4 ದಿನ ಸಂಪೂರ್ಣ ಲಾಕ್‌ಡೌನ್ ಹಾಸನ ಜಿಲ್ಲೆಯಲ್ಲಿ ವಾರದಲ್ಲಿ 4 ದಿನ ಸಂಪೂರ್ಣ ಲಾಕ್‌ಡೌನ್

ಒಟ್ಟು ಹತ್ತೊಂಬತ್ತು ರಾಜ್ಯದ ನೂರು ಜಿಲ್ಲಾಧಿಕಾರಿಗಳ ಜೊತೆ ಪ್ರಧಾನಿ ಸಂವಾದ ನಡೆಸಲಿದ್ದಾರೆ. ಅದರಲ್ಲಿ ಒಂದು ಸಭೆ ಮಂಗಳವಾರ ನಡೆದಿದ್ದರೆ, ಇನ್ನೊಂದು ಸಭೆ ಮೇ ಇಪ್ಪತ್ತಕ್ಕೆ ನಿಗದಿಯಾಗಿದೆ.

 ಕರ್ನಾಟಕದ ಹದಿನೇಳು ಜಿಲ್ಲಾಧಿಕಾರಿಗಳ ಜೊತೆಗೆ ಪ್ರಧಾನಿ ಮಂಗಳವಾರ ಸಂವಾದ

ಕರ್ನಾಟಕದ ಹದಿನೇಳು ಜಿಲ್ಲಾಧಿಕಾರಿಗಳ ಜೊತೆಗೆ ಪ್ರಧಾನಿ ಮಂಗಳವಾರ ಸಂವಾದ

ಕರ್ನಾಟಕದ ಹದಿನೇಳು ಜಿಲ್ಲಾಧಿಕಾರಿಗಳ ಜೊತೆಗೆ ಪ್ರಧಾನಿ ಮಂಗಳವಾರ ಸಂವಾದ ನಡೆಸಿದ್ದಾರೆ. ಅದರಲ್ಲಿ ಕೆಲವು ಡಿಸಿಗಳಿಗೆ ಮಾತನಾಡಲು ಸಿಕ್ಕರೆ, ಇನ್ನಷ್ಟು ಡಿಸಿಗಳಿಗೆ ಅವಕಾಶ ಸಿಗಲಿಲ್ಲ. ಇದು, ಬರೀ ಕರ್ನಾಟಕದ ಡಿಸಿಗಳ ಜೊತೆ ಮಾತ್ರ ಪ್ರಧಾನಿ ಮೋದಿ ಮಾತನಾಡಿದ್ದಾರೆ ಎಂದರೆ, ಅದಕ್ಕೆ ಬೇರೊಂದು ಆಯಾಮ ಹುಟ್ಟುವ ಸಾಧ್ಯತೆಯಿತ್ತು. ಆದರೆ, ದೆಹಲಿ, ತಮಿಳುನಾಡು ಸೇರಿದಂತೆ ಬಿಜೆಪಿಯೇತರ ಸರಕಾರದ ಡಿಸಿಗಳೂ ಸಭೆಯಲ್ಲಿ ಭಾಗವಹಿಸಿದ್ದರು. ಹಾಗಾಗಿ, ಇಲ್ಲಿ ರಾಜಕೀಯ ಇಲ್ಲ ಎಂದು ನಿಸ್ಸಂಸಯವಾಗಿ ಹೇಳಬಹುದು.

 ಜಿಲ್ಲೆಗಳಲ್ಲಿ ಎಂತಹ ಪರಿಸ್ಥಿತಿ ಇದೆ ಎನ್ನುವುದರ ಬಗ್ಗೆ ಕ್ಲಾರಿಟಿ ಇರುವುದು ಡಿಸಿಗಳಿಗೆ

ಜಿಲ್ಲೆಗಳಲ್ಲಿ ಎಂತಹ ಪರಿಸ್ಥಿತಿ ಇದೆ ಎನ್ನುವುದರ ಬಗ್ಗೆ ಕ್ಲಾರಿಟಿ ಇರುವುದು ಡಿಸಿಗಳಿಗೆ

ಪ್ರಧಾನಿಯವರು ಸಂವಾದದಲ್ಲಿ ಉಲ್ಲೇಖಿಸಿದಂತೆ, ಆಯಾಯ ರಾಜ್ಯ ಸರಕಾರದ ಮುಖ್ಯಸ್ಥರಿಗೆ/ಸಚಿವರುಗಳಿಗಿಂತ ಹೆಚ್ಚಾಗಿ, ತಮ್ಮತಮ್ಮ ಜಿಲ್ಲೆಗಳಲ್ಲಿ ಎಂತಹ ಪರಿಸ್ಥಿತಿ ಇದೆ ಎನ್ನುವುದು ಇವರಿಗೆಲ್ಲರಿಂತ ಹೆಚ್ಚು ಕ್ಲಾರಿಟಿ ಇರುವುದು ಡಿಸಿಗಳಿಗೆ. ಹಾಗಾಗಿ, ಪ್ರಧಾನಿಯವರ ಈ ಸಂವಾದದ ಪ್ರಯತ್ನದ ಹಿಂದೆ ಹುಳುಕು ಕಂಡು ಹಿಡಿಯುವುದು ತಪ್ಪಾಗುತ್ತದೆ. ಆದರೂ..

 ದೀದೀ..ಓ ದೀದೀ.. ಅನ್ನದೇ, ಚುನಾವಣೆಯನ್ನೂ ಮುಂದಿನ ಬಾರಿಯೂ ಗೆಲ್ಲಬಹುದು

ದೀದೀ..ಓ ದೀದೀ.. ಅನ್ನದೇ, ಚುನಾವಣೆಯನ್ನೂ ಮುಂದಿನ ಬಾರಿಯೂ ಗೆಲ್ಲಬಹುದು

ಕುಂಭಮೇಳವನ್ನು ಮುಂದಿನ ವರ್ಷವೂ ಮಾಡಬಹುದು ಎಂದು ಅದಕ್ಕೆ ಅನುಮತಿ ನೀಡದೇ, ದೀದೀ..ಓ ದೀದೀ.. ಅನ್ನದೇ, ಚುನಾವಣೆಯನ್ನೂ ಮುಂದಿನ ಬಾರಿಯೂ ಗೆಲ್ಲಬಹುದು ಎಂದು ವರ್ಚುಯುಲ್ ಸಭೆ ನಡೆಸಿದ್ದರೆ, ಪ್ರಧಾನಿ ಹುದ್ದೆಯ ಅದಕ್ಕಿಂತ ಹೆಚ್ಚಾಗಿ ನರೇಂದ್ರ ಮೋದಿಯವರ ತೂಕವೇ ಇನ್ನೊಂದು ಲೆವೆಲಿಗೆ ಹೋಗುತ್ತಿತ್ತು ಎನ್ನುವುದು ಜನಸಾಮಾನ್ಯರು ಆಡುವ ಮಾತು. ಇರಲಿ..

 ನಿಮ್ಮನಿಮ್ಮ ಜಿಲ್ಲೆಗಳ ಜವಾಬ್ದಾರಿ ನಿಮಗೇ ಎನ್ನುವ ಹೊಣೆಗಾರಿಕೆ

ನಿಮ್ಮನಿಮ್ಮ ಜಿಲ್ಲೆಗಳ ಜವಾಬ್ದಾರಿ ನಿಮಗೇ ಎನ್ನುವ ಹೊಣೆಗಾರಿಕೆ

ಡಿಸಿಗಳ ಜೊತೆ ಸಂವಾದದ ನಂತರ, ಅವರಿಗೇ ಹೆಚ್ಚಿನ ಜವಾಬ್ದಾರಿಯನ್ನು ಕೊಟ್ಟ ರೀತಿಯಲ್ಲಿ ಕಾಣಿಸುತ್ತದೆ. ಉದಾಹರಣೆಗೆ, ಸಭೆಯ ನಂತರ ಹಾಸನ ಜಿಲ್ಲಾಧಿಕಾರಿಗಳು ವಾರದಲ್ಲಿ ನಾಲ್ಕು ದಿನ ಲಾಕ್ಡೌನ್ ಎನ್ನುವ ತೆಗೆದುಕೊಂಡ ನಿರ್ಧಾರ. ಹಾಗಾದರೆ, ನಿಮ್ಮನಿಮ್ಮ ಜಿಲ್ಲೆಗಳ ಜವಾಬ್ದಾರಿ ನಿಮಗೇ ಎನ್ನುವ ಹೊಣೆಗಾರಿಕೆಯನ್ನು ಕೇಂದ್ರ ಮತ್ತು ರಾಜ್ಯ ಸರಕಾರ ನೀಡಲು ಹೊರಟಿದೆಯಾ ಎನ್ನುವುದಿಲ್ಲಿ ಪ್ರಶ್ನೆ.

Recommended Video

ಬಡವರ ಕಷ್ಟಕ್ಕೆ ಸ್ಪಂದಿಸಿದ BSY!! | Oneindia Kannada
 ಪ್ರಧಾನಿಗಳಿಗೆ ಒಂದು ಶಹಬ್ಬಾಸ್ ಹೇಳೋಣ.. ಎಲ್ಲದರಲ್ಲೂ ನೋ ಪಾಲಿಟಿಕ್ಸ್ ಪ್ಲೀಸ್

ಪ್ರಧಾನಿಗಳಿಗೆ ಒಂದು ಶಹಬ್ಬಾಸ್ ಹೇಳೋಣ.. ಎಲ್ಲದರಲ್ಲೂ ನೋ ಪಾಲಿಟಿಕ್ಸ್ ಪ್ಲೀಸ್

ಮೇಲ್ನೋಟಕ್ಕೆ ಇದು ಡಿಸಿಗಳ ಜೊತೆ ಮಾತನಾಡಿ ವಸ್ತುಸ್ಥಿತಿ ಅರಿಯುವ ಪ್ರಧಾನಿಯವರ ಪ್ರಯತ್ನ ಇದು ಎಂದು ಹೇಳಬಹುದು. ಮನೆಮನೆಗೆ ಹೋಗಿ ಟೆಸ್ಟಿಂಗ್ ಮಾಡಿಸಿ ಎನ್ನುವ ಮಾತನ್ನೂ ಪ್ರಧಾನಿ ಹೇಳಿದ್ದಾರೆ. ತಡವಾಗಿಯಾದರೂ, ಕೊರೊನಾವನ್ನು ಆಮೂಲಾಗ್ರವಾಗಿ ಜಗತ್ತಿನಿಂದ ಬಡಿದಟ್ಟಬೇಕು ಎನ್ನುವ ಪ್ರಯತ್ನದ ಒಂದು ಭಾಗ ಈ ಸಂವಾದ ಎನ್ನುವುದಾದರೆ, ಅದಕ್ಕೆ ಪ್ರಧಾನಿಗಳಿಗೆ ಒಂದು ಶಹಬ್ಬಾಸ್ ಹೇಳೋಣ.. ಎಲ್ಲದರಲ್ಲೂ ನೋ ಪಾಲಿಟಿಕ್ಸ್ ಪ್ಲೀಸ್..

English summary
PM Narendra Modi held discussion with DCs of districts with high Covid-19 caseloads. Good move by PM Modi to tackle Covid-19 pandemic in India. Know More
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X