ಜು. 14ರಿಂದ ಬೆಂಗಳೂರಿನಲ್ಲಿ ಅಂಚೆ ಚೀಟಿ ಪ್ರದರ್ಶನ

Posted By:
Subscribe to Oneindia Kannada

ಬೆಂಗಳೂರು, ಜೂನ್ 15: ಅಂಚೆ ಚೀಟಿ ಸಂಗ್ರಹ ಹವ್ಯಾಸವನ್ನು ಉತ್ತೇಜಿಸುವ ಸಲುವಾಗಿ ಕರ್ನಾಟಕ ಅಂಚೆ ಕಚೇರಿಯು ಜುಲೈ 14ರಿಂದ 16ರವರೆಗೆ ಬೆಂಗಳೂರಿನಲ್ಲಿ ಅಂಚೆ ಚೀಟಿಗಳ ಪ್ರದರ್ಶನವನ್ನು ಏರ್ಪಡಿಸಿದೆ.

ರಾಜಾಜಿ ನಗರದ ಡಾ. ರಾಜ್ ಕುಮಾರ್ ರಸ್ತೆಯಲ್ಲಿರುವ ನವರಂಗ್ ಚಿತ್ರ ಮಂದಿರದ ಬಳಿಯಿರುವ ಶ್ರೀ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ಈ ಪ್ರದರ್ಶನವನ್ನು ಆಯೋಜಿಸಲಾಗಿದೆ. ಹೀಗೊಂದು ಅಂಚೆ ಚೀಟಿ ಪ್ರದರ್ಶನ ಬೆಂಗಳೂರಿನಲ್ಲಿ ನಡೆಯುತ್ತಿರುವುದು ಕಳೆದೊಂದು ದಶಕದಲ್ಲಿ ಇದೇ ಮೊದಲು.

Philately Exhibition 2017 in Begaluru form July 13

ಪ್ರದರ್ಶನದಲ್ಲಿ ಸ್ಪರ್ಧಾತ್ಮಕ, ಸ್ಪರ್ಧಾತ್ಮಕವಲ್ಲ ದ ಹಾಗೂ ಆಹ್ವಾನಿತ ಎಂಬ ಮೂರು ವಿಭಾಗಗಳಲ್ಲಿ ಪ್ರದರ್ಶನಗಳು ನಡೆಯುತ್ತವೆ. 18 ವರ್ಷದೊಳಗಿನ ಯುವಕರು ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ ಅಥವಾ ಗುಂಪಾಗಿ ಪ್ರವೇಶ ಕಲ್ಪಿಸಲಾಗಿದೆ.

ಆಸಕ್ತರು, ಹೆಚ್ಚಿನ ವಿವರಗಳನ್ನು ಪ್ರಧಾನ ಕಾರ್ಯದರ್ಶಿ, ಕೆಪಿಎಸ್., ಅಂಚೆ ಪೆಟ್ಟಿಗೆ ಸಂಖ್ಯೆ 5482, ಜಿಪಿಒ, ಬೆಂಗಳೂರು - 560001 ಇಲ್ಲಿಗೆ ಕಳುಹಿಸಬಹುದು.

ಪ್ರದರ್ಶನದೊಂದಿಗೆ ವಿಚಾರ ಸಂಕಿರಣ, ಕ್ವಿಜ್ ಸೇರಿದಂತೆ ಅನೇಕ ಸ್ಪರ್ಧೆಗಳನ್ನು ಅಳವಡಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The postal department, Karnataka region has organized State level Philately Exhibition 2017 in Bengaluru from July 13 to 16.
Please Wait while comments are loading...