Puneeth Rajkumar: ಮೆಟ್ರೋ ಸ್ಟೇಷನ್ ಗೆ ಪುನೀತ್ ರಾಜ್‍ಕುಮಾರ್ ಹೆಸರು: ಪಿಎಂ ಕಚೇರಿಯಿಂದ ಬಂದ ಉತ್ತರವೇನು?

ಬೆಂಗಳೂರು, ಜೂನ್ 10: ಕರ್ನಾಟಕ ರತ್ನ ಡಾ. ಪುನೀತ್‌ ರಾಜಕುಮಾರ್‌ ಅಭಿಮಾನಿಗಳಿಗೆ ಸದ್ಯದಲ್ಲೇ ಖುಷಿ ಸುದ್ದಿ ಸಿಗಲಿದೆ. ಗೊಟ್ಟಿಗೆರೆ ಹಾಗೂ ನಾಗವಾರ ನಡುವಣ ನಮ್ಮ ಮೆಟ್ರೋ ಪಿಂಕ್ ಮಾರ್ಗದ ಪಾಟರಿ ಟೌನ್ ಸ್ಟೇಷನ್​ಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೆಸರಿಡಲು ಒತ್ತಡ ಹೆಚ್ಚಾಗಿದೆ.

ಹೌದು, ಪಾಟರಿ ಟೌನ್ ಮೆಟ್ರೋ ಸ್ಟೇಷನ್​​ಗೆ ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಹೆಸರಿಡುವಂತೆ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ರಾಜ್ಯಪಾಲರು ಹಾಗೂ ಮೆಟ್ರೋ ಎಂಡಿಗೆ ಕರ್ನಾಟಕ ಬಹುಜನ ಫೆಡರೇಶನ್ ಪತ್ರ ಬರೆದಿದೆ. ಈ ಪತ್ರಕ್ಕೆ ಪ್ರಧಾನಿ ಕಾರ್ಯಾಲಯದಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದ್ದು, ಈ ಬಗ್ಗೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಮೆಟ್ರೋ ಎಂಡಿಗೆ ಮನವಿ ಪರಿಶೀಲಿಸಲು ಪತ್ರ ಬರೆದಿದ್ದಾರೆ.

Petition To Name Pottery Town Metro Station After Puneeth Rajkumar

ನಮ್ಮ ಮೆಟ್ರೋ ಪಿಂಕ್ ಮಾರ್ಗದ ಪಾಟರಿ ಟೌನ್ ಸ್ಟೇಷನ್​ಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೆಸರಿಡುವ ಸಾಧ್ಯತೆ ದಟ್ಟವಾಗಿದೆ. ಈ ವಿಚಾರವಾಗಿ ಸಲ್ಲಕೆಯಾಗಿರುವ ಮನವಿಗೆ ಪಿಎಂ ಮೋದಿ ಕಚೇರಿಯಿಂದ ಸಕಾರಾತ್ಮಕ ಸ್ಪಂದನೆ ದೊರೆತಿದೆ. ಇನ್ನೂ ಮೆಟ್ರೋ ಸ್ಟೇಷನ್‌ ಗೆ ಹೆಸರಿಡುವ ಕುರಿತು ಈಗಾಗಲೇ ನಿಯಮಾನುಸಾರು ಅಪ್ಪು ಹೆಸರು ಇಡುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಹೋರಾಟಗಾರರಿಗೆ ಬಿಎಂಆರ್​ಸಿಎಲ್ ತಿಳಿಸಿದೆ. ಹೀಗಾಗಿ ಅಪ್ಪು ಅಭಿಮಾನಿಗಳಿಗೆ ಸದ್ಯದಲ್ಲೇ ಗುಡ್‌ ನ್ಯೂಸ್‌ ಸಿಗಲಿದೆ.

ಪಾಟರಿ ಟೌನ್ ಮೆಟ್ರೋ ಸ್ಟೇಷನ್ ಮಾರ್ಗದ ಕಾಮಗಾರಿ ಈಗಾಗಲೇ ಶೇ 50 ರಷ್ಟು ಮುಗಿದಿದ್ದು ಕಾಮಗಾರಿ ಪೂರ್ಣವಾಗುವಷ್ಟರಲ್ಲಿ ಕರ್ನಾಟಕ ರತ್ನ ಪುನೀತ್ ಕುಮಾರ್‌ ಅವರ ಹೆಸರಿಡುವ ಬಗ್ಗೆ ತೀರ್ಮಾನ ಕೈಗೊಳ್ಳಬೇಕು ಎಂದು ಸ್ಥಳೀಯ ನಿವಾಸಿಗಳು ಕೂಡ ಮನವಿ ಮಾಡಿದ್ದಾರೆ. ಇತ್ತ ಪಿಂಕ್‌ ಮಾರ್ಗದ ಪಾಟರಿ ಟೌನ್ ಮೆಟ್ರೋ ಸ್ಟೇಷನ್​​ಗೆ ಪುನೀತ್ ರಾಜ್​​ಕುಮಾರ್ ಹೆಸರಿಡುವಂತೆ ಪ್ರಧಾನಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ರಾಜ್ಯಪಾಲರಿಗೂ ಪತ್ರ ಬರೆದು ಮನವಿ ಮಾಡಲಾಗಿದೆ. ಕೆಲ ದಿನಗಳಲ್ಲಿ ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+