ಚಿಕ್ಕಮಗಳೂರು: ವಿದ್ಯಾರ್ಥಿಗಳಿಗೆ ಗಾಂಜಾ ಮಾರುತ್ತಿದ್ದವರ ಬಂಧನ
ಚಿಕ್ಕಮಗಳೂರು, ಸೆಪ್ಟೆಂಬರ್ 9: ಬಾಳೆಹೊನ್ನೂರಿನ ಕಾಲೇಜುಗಳ ಸಮೀಪ ನಿಂತು ಗುಪ್ತವಾಗಿ ವಿದ್ಯಾರ್ಥಿಗಳಿಗೆ ಗಾಂಜಾ ಮಾರುತ್ತಿದ್ದ ವ್ಯಕ್ತಿಯೊಬ್ಬನನ್ನು ಇಲ್ಲಿನ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಬಂಧಿತರನ್ನು ಅಬ್ದುಲ್, ಇಮ್ರಾನ್, ಲಿಯಾಕತ್ ಹಾಗೂ ಜಾನ್ಸನ್ ಎಂದು ಹೇಳಲಾಗಿದೆ. ಬಂಧಿತನಿಂದ 1 ಕೆ.ಜಿಯಷ್ಟು ಗಾಂಜಾ ಹಾಗೂ ನಾಲ್ಕು ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರೆಲ್ಲರೂ ಶಿವಮೊಗ್ಗದವರು ಎಂದು ಹೇಳಲಾಗಿದೆ.

ಗಾಂಜಾ ಮಾರಾಟದ ಬಗ್ಗೆ ಖಚಿತವಾದ ಸುಳಿವು ಪಡೆದು ಕಾರ್ನೋನ್ಮುಖರಾದ ಅಪರಾಧ ಪತ್ತೆ ದಳದ ಸರ್ಕಲ್ ಇನ್ಸ್ ಪೆಕ್ಟರ್ ಮಂಜುನಾಥ್ ಹಾಗೂ ಸಿಬ್ಬಂದಿ ಲಿಂಗಮೂರ್ತಿ, ಠಾಣಾಧಿಕಾರಿ ಮಂಜೇಶ್ವರ್, ಅಶೋಕ್ ಅವರು ಸೇರಿ ಷಡ್ಯಂತ್ರ ರೂಪಿಸಿ, ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ನಗರದಲ್ಲಿ ಇವರು ಸುಮಾರು ವರ್ಷಗಳಿಂದ ಈ ದಂಧೆ ನಡೆಸುತ್ತಿದ್ದರೆಂಬುದು ಪೊಲೀಸರ ವಿಚಾರಣೆಯಿಂದ ಬೆಳಕಿಗೆ ಬಂದಿದೆ.












Click it and Unblock the Notifications