• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಮೇಶ್ ಕುಮಾರ್ 'ಅತ್ಯಾಚಾರ ಸಂತ್ರಸ್ತೆ' ಹೋಲಿಕೆಗೆ ತೀವ್ರ ಖಂಡನೆ

|

ಬೆಂಗಳೂರು, ಫೆಬ್ರವರಿ 13: ತಮ್ಮ ಪರಿಸ್ಥಿತಿಯನ್ನು ಅತ್ಯಾಚಾರ ಸಂತ್ರಸ್ತೆಗೆ ಹೋಲಿಸಿಕೊಳ್ಳುವ ಮೂಲಕ ವಿಧಾಸಭೆ ಸಭಾಧ್ಯಕ್ಷ ರಮೇಶ್ ಕುಮಾರ್ ಸಂವೇದನಾಶೀಲತೆ ಇಲ್ಲದವರಂತೆ ಮಾತನಾಡಿದಾರೆ ಎಂದು ವ್ಯಾಪಕ ಆಕ್ಷೇಪ ವ್ಯಕ್ತವಾಗಿದೆ.

ರಮೇಶ್ ಕುಮಾರ್ ಅವರ ಮಾತುಗಳು ಮತ್ತು ಅದಕ್ಕೆ ಸಂಬಂಧಿಸಿದಂತೆ ಪಕ್ಷಗಳ ನಾಯಕರ ಪ್ರತಿಕ್ರಿಯೆಗಳು ಅತ್ಯಾಚಾರ ಸಂತ್ರಸ್ತೆಯ ನೋವನ್ನು ಲೇವಡಿ ಮಾಡಿದಂತೆ ಇದೆ. ಹಿರಿಯ ರಾಜಕಾರಣಿಯಾಗಿರುವ ರಮೇಶ್ ಕುಮಾರ್ ಸದನದಲ್ಲಿ ತಮ್ಮನ್ನು 'ರೇಪ್ ವಿಕ್ಟಿಮ್' ಎಂದು ಕರೆದುಕೊಳ್ಳುವಾಗ ನಕ್ಕಿದ್ದು, ಅತ್ಯಾಚಾರ ಸಂತ್ರಸ್ತೆಯರ ನೋವನ್ನು ಅಪಹಾಸ್ಯ ಮಾಡಿದ ಭಾವ ಮೂಡಿಸುತ್ತದೆ ಎಂದು ಖಂಡಿಸಲಾಗಿದೆ.

ನನ್ನ ಸ್ಥಿತಿ ಅತ್ಯಾಚಾರ ಸಂತ್ರಸ್ತೆಯಂತಾಗಿದೆ ಎಂದ ಸ್ಪೀಕರ್ ರಮೇಶ್ ಕುಮಾರ್

ಸದನದ ಕಲಾಪ ಮಾಧ್ಯಮಗಳಲ್ಲಿ ನೇರ ಪ್ರಸಾರ ಆಗುತ್ತದೆ. ಅಲ್ಲದೆ ಸದನದ ಮಾತುಗಳು ಅಧಿಕೃತವಾಗಿ ಕಡತಗಳಲ್ಲಿ ದಾಖಲಾಗುತ್ತವೆ. ವಿಧಾನಸಭೆಗೆ ಅದರದ್ದೇ ಗೌರವವಿದೆ. ಖಾಸಗಿಯಾಗಿಯೂ ಈ ರೀತಿ ಹೇಳಿಕೆಗಳನ್ನು ನೀಡುವುದು ತಪ್ಪು. ಹೀಗಿರುವಾಗ ತಮ್ಮ ಮೇಲೆ ಆಡಳಿತ ಮತ್ತು ವಿರೋಧಪಕ್ಷಗಳೆರಡೂ ಕಡೆಗಳಿಂದ ಪದೇ ಪದೇ ಅತ್ಯಾಚಾರ ನಡೆಯುತ್ತಿದೆ ಎಂಬ ರೀತಿಯಲ್ಲಿ ಅವರು ಹೇಳಿರುವುದು ಅಸಂವೇದನೆಯ ನಡೆ ಎಂದು ಫೇಸ್‌ಬುಕ್, ಟ್ವಿಟ್ಟರ್ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ವಿರೋಧ ವ್ಯಕ್ತವಾಗಿದೆ.

ರಮೇಶ್ ಕುಮಾರ್ ಅವರ ಮೇಲೆ ಗೌರವವಿತ್ತು. ಆದರೆ, ತಮ್ಮನ್ನು ಅವರು ಹೋಲಿಸಿಕೊಂಡ ಪರಿ ಕೀಳುಮಟ್ಟದ್ದು ಎಂದು ಟೀಕಿಸಲಾಗಿದೆ. ಫೇಸ್‌ಬುಕ್‌ನಲ್ಲಿ #ShameShameSpeaker #stepdownSpeaker #MisogynistSpeakerಎಂಬ ಹ್ಯಾಷ್ ಟ್ಯಾಗ್‌ಗಳನ್ನು ಬಳಸಿ, 'ಕ್ಷಮೆ ಕೋರಿ ಇಲ್ಲವೇ, ರಾಜೀನಾಮೆ ನೀಡಿ' ಎಂಬ ಅಭಿಯಾನ ಆರಂಭಿಸಲಾಗಿದೆ.

ಮಹಿಳೆಯನ್ನ ಹೀಯಾಳಿಸಿದ್ದು ಎಷ್ಟರ ಮಟ್ಟಿಗೆ ಸರಿ?

ಸಾರ್ವಜನಿಕರು ನೇರಪ್ರಸಾರದಲ್ಲಿ ನೋಡುತ್ತಿರುವ (ಮಹಿಳೆಯರು ಸೇರಿದಂತೆ) ಸದನದಲ್ಲಿ ಸ್ಪೀಕರ್ ರಮೇಶ್ ಕುಮಾರ್ ನೆನ್ನೆ ರೇಪ್ ಸಂಬಂಧ ಮಾಡಿದ ಒಂದು ವ್ಯಾಖ್ಯಾನ ಸರಿಯೇ? ಮಹಿಳೆಯನ್ನ ಹೀಯಾಳಿಸಿದ್ದು ಎಷ್ಟರ ಮಟ್ಟಿಗೆ ಸರಿ? ಇದು ಸದನದ ಮತ್ತು ಸ್ಪೀಕರ್ ಘನತೆಗೆ ತಕ್ಕುದಾಗಿತ್ತೆ? ಎಂದು ಸಂಜಯ ಗೌಡರ್ ಎಂಬುವವರು ಪ್ರಶ್ನಿಸಿದ್ದಾರೆ.

ನಟಿ ತಾರಾ ಖಂಡನೆ

ನಟಿ ತಾರಾ ಖಂಡನೆ

ರಮೇಶ್ ಕುಮಾರ್ ಅವರ ಬಗ್ಗೆ ತುಂಬಾ ಗೌರವ ಇದೆ. ಸದನದಲ್ಲಿ ತಾಯಿಯನ್ನು ನೆನೆಸಿಕೊಂಡು ಅನೇಕಕ ಬಾರಿ ಕಣ್ಣೀರು ಹಾಕಿದ್ದಾರೆ. ಹೆಣ್ಣುಮಕ್ಕಳನ್ನು ಗೌರವಯುತವಾಗಿ ನಡೆಸಿಕೊಳ್ಳುತ್ತಾರೆ. ಆದರೆ, ಅವರ ಬಾಯಲ್ಲಿ ಹೆಣ್ಣುಮಕ್ಕಳ ಮೇಲೆ ನಡೆಯುವ ಅತ್ಯಾಚಾರದ ಉದಾಹರಣೆ ತೆಗೆದುಕೊಂಡಿರುವುದು ಖಂಡನೀಯ. ರಮೇಶ್ ಕುಮಾರ್ ಅಣ್ಣ ಅವರಿಂದ ಈ ಮಾತು ಬರಬಾರದಿತ್ತು. ಒಬ್ಬ ಮಹಿಳೆಯಾಗಿ ನನಗೆ ಬೇಸರವಾಗಿದೆ, ಖೇದವೆನಿಸಿದೆ. ಇಡೀ ಸದನ ಸುಮ್ಮನೆ ಕೇಳುತ್ತಿದ್ದರೇನೋ? ಅವರೇಕೆ ಧ್ವನಿ ಎತ್ತಲಿಲ್ಲ ಎಂಬ ಆಕ್ಷೇಪ ನನ್ನಲಿದೆ ಎಂದು ನಟಿ ತಾರಾ ಅನೂರಾಧಾ ವಿಡಿಯೋದಲ್ಲಿ ಹೇಳಿದ್ದಾರೆ.

ಎಸ್‌ಐಟಿ ತನಿಖೆಯೇ ಸರಿ, ನ್ಯಾಯಾಂಗ ತನಿಖೆ ಸಾಧ್ಯವಿಲ್ಲ: ರಮೇಶ್ ಕುಮಾರ್ ಸ್ಪಷ್ಟನೆ

ಕ್ಷಮೆ ಕೇಳಿ, ಇಲ್ಲವೇ ರಾಜೀನಾಮೆ ನೀಡಿ

ಇಂದು ಸದನದಲ್ಲಿ ಅತ್ಯಾಚಾರ ಸಂತ್ರಸ್ತರನ್ನು ಅತ್ಯಂತ ಹಗುರವಾಗಿ ಪರಿಗಣಿಸಿ, ಅತ್ಯಾಚಾರದ ವಿಚಾರಣೆಯನ್ನು ಹಾಸ್ಯ ಪ್ರಸಂಗವೆಂಬಂತೆ ಆಡಿರುವ ನಿಮ್ಮ ಮಾತುಗಳನ್ನು ಬಲವಾಗಿ ಖಂಡಿಸುತ್ತೇವೆ.
ವಿಧಾನಸಭೆಯ ಅಧ್ಯಕ್ಷ ಸ್ಥಾನದಲ್ಲಿ ಕುಳಿತು, ಸದನದ ಸದಸ್ಯರ ಮಾತು, ನಡಾವಳಿಗಳನ್ನು ಘನತೆಯಿಂದ ಕೂಡಿರುವಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿಯನ್ನು ಮರೆತು ನೀವು ಹೀಗೆ ಮಾತನಾಡಿರುವುದು ಬಹಳ ಖೇದಕರ.

ಆ ಮಾತುಗಳನ್ನು ತಮಾಷೆಯೆಂಬಂತೆ ನಗುತ್ತಾ ಆಸ್ವಾದಿಸಿದ ಸದನದ ಘನ ಸದಸ್ಯರ ಹೀನ ಮನಸ್ಥಿತಿ ಮತ್ತು ಇಂತಹದ್ದನ್ನು ಕಂಡೂ ಖಂಡಿಸದೆ ಉಳಿದ ಮಹಿಳಾ ಸದಸ್ಯರ ನಿಷ್ಕ್ರಿಯತೆ ಸಹಾ ಅಷ್ಟೇ ಖಂಡನೀಯ.
ನೀವು ಆಡಿರುವ ಮಾತುಗಳಿಗೆ ಸದನದಲ್ಲಿ ಕ್ಷಮೆ ಕೇಳಬೇಕು. ಇಲ್ಲವೇ ರಾಜಿನಾಮೆ ನೀಡಬೇಕು. ನಿಮ್ಮಂತಹ ಅಸೂಕ್ಷ್ಮ ಮನಸ್ಸಿನ ಸಭಾಧ್ಯಕ್ಷರು ನಮ್ಮ ರಾಜ್ಯಕ್ಕೆ ಖಂಡಿತ ಬೇಡ.

ಕೊನೆಗೊಂದು ಮಾತು.‌ "ನನಗೆ ಹೆಂಗಸರ ಬಗ್ಗೆ ಬಹಳ ಗೌರವ ಇದೆ. ಅವರನ್ನು ಎಂದೂ ಅಗೌರವದಿಂದ ನಡೆಸಿಕೊಂಡಿಲ್ಲ" ಇತ್ಯಾದಿ ಮಾತುಗಳನ್ನು ದಯವಿಟ್ಟು ಆಡಬೇಡಿ. ಅಂತಹ ಯಾವ ಸಮರ್ಥನೆಗಳೂ ಬೇಡ.
ನೀವು ಆಡಿರುವ ಮಾತು ಹೊಣೆಗೇಡಿತನದ ಮಾತು ಎನ್ನುವುದನ್ನು ಒಪ್ಪಿಕೊಂಡು ಕ್ಷಮೆ ಕೇಳಿ. ಇಲ್ಲವೆ ರಾಜಿನಾಮೆ ನೀಡಿ ಎಂದು #ShameShameSpeaker #stepdownSpeaker #MisogynistSpeaker ಎಂಬ ಹ್ಯಾಷ್ ಟ್ಯಾಗ್‌ಗಳನ್ನು ಬಳಸಿ ಫೇಸ್‌ಬುಕ್‌ನಲ್ಲಿ ಅನೇಕರು ಅಭಿಯಾನ ಆರಂಭಿಸಿದ್ದಾರೆ.

ಮೊದಲು ಕ್ಷಮೆ ಕೇಳಲಿ

'ಸ್ಪೀಕರ್ ರಮೇಶಕುಮಾರ್, ಮಹಿಳೆಯರ ಬಗ್ಗೆ ಆಡಿದ ಮಾತಿಗೆ ಮೊದಲು ಕ್ಷಮೆ ಕೇಳಿ. ನಂತರ ಆಡಿಯೊ ಹಗರಣದ ಎಸ್ ಐ ಟಿ ತನಿಖೆಗೆ ತಕ್ಷಣ ಸರಕಾರಕ್ಕೆ ಸೂಚಿಸಿ' ಎಂದು ಹಿರಿಯ ಪತ್ರಕರ್ತ ಸನತ್ ಕುಮಾರ್ ಬೆಳಗಲಿ ಫೇಸ್‌ಬುಕ್‌ನಲ್ಲಿ ಆಗ್ರಹಿಸಿದ್ದಾರೆ.

ಬಿಜೆಪಿ ಶಾಸಕ ವಿ ಸೋಮಣ್ಣ ಈ ಸದನದ ಸರ್ವಜ್ಞ: ಕಾಲೆಳೆದ ಸ್ಪೀಕರ್ ರಮೇಶ್ ಕುಮಾರ್

ಬಿಜೆಪಿ ಶಾಸಕ ವಿ ಸೋಮಣ್ಣ ಈ ಸದನದ ಸರ್ವಜ್ಞ: ಕಾಲೆಳೆದ ಸ್ಪೀಕರ್ ರಮೇಶ್ ಕುಮಾರ್

ಅಸೂಕ್ಷ್ಮತೆಯನ್ನು ನಿರೀಕ್ಷಿಸಿರಲಿಲ್ಲ

ರೇಪ್‌ಊ ತಮಾಷೆಯ ವಿಷಯವಾಗುತ್ತೆ! ಮತ್ತದನ್ನು ಕೋರ್ಟಲ್ಲಿ ಕೇಳುವ ಬಗೆಯನ್ನು ಬಿಡಿಸಿ ಬಿಡಿಸಿ ವಿವರಿಸಿ ಹೇಳಿ ನಗ್ತಾರೆ!! ಸದನದಲ್ಲಿರೋರೆಲ್ಲ ಪಕ್ಷಭೇದ ಮರೆತು, ಹೆಣ್ಣು ಗಂಡೆಂಬ ತಾರತಮ್ಯ ಮರೆತು ಎಲ್ರೂ ಸೇರಿ ಬಾಯ್ತುಂಬಾ ನಗ್ತಾರೆ!! ರಮೇಶಕುಮಾರ್ ಅವರಿಂದ ಇಂಥಾ ಅಸೂಕ್ಷಮತೆಯನ್ನ ನಿರೀಕ್ಷಿಸಿಯೇ ಇರ್ಲಿಲ್ಲ ನಾನು... ಸದನದಲ್ಲಿದ್ದ ನಾಲ್ವರು ಮಹಿಳೆಯರೂ ಇದನ್ನು ವಿರೋಧಿಸದೆ ನಗುತ್ತಿದ್ದರು ಎಂದು ವರದಿ ಮಾಡುತ್ತಿದ್ದ ಟಿವಿ ನಿರೂಪಕಿಯ ಮುಖದಗಲಕ್ಕೂ ನಗು ಮೆತ್ತಿಕೊಂಡಿತ್ತು! ಎಂಥಾ ಭಾರಿ ಮಸ್ತ್ ಜೋಕ್ ಅಲ್ವಾ ರೇಪ್ ಅಂದ್ರೆ! ಎಂದು ನಟಿ ಜಯಲಕ್ಷ್ಮಿ ಪಾಟೀಲ್ ಅಸಮಾಧಾನ ಹಂಚಿಕೊಂಡಿದ್ದಾರೆ.

ಹೆಣ್ಣಿನ ವಿಷಯ ಲಘುವಾದದ್ದೇ?

ಅಷ್ಟು ಜನರ ಮಧ್ಯೆ ಸಭೆಯಲ್ಲಿ ರೇಪ್ ವಿಷಯವನ್ನು ಹಿಡಿದು ಉದಾಹರಣೆ ಕೊಡುವಷ್ಟು ದಾರಿದ್ರ್ಯ, ನಿಚ, careless ಮನಸ್ಥಿತಿ!!! ಇಂಥಹವರಿಂದ, ಇಂಥಹವರ ನಡುವೆಯೇ ಅಂದು ದ್ರೌಪದಿಯ ವಸ್ತ್ರಾಪಹರಣವಾಗಿದ್ದು! ಇಂದಿಗೂ ಅವವೇ ನೀಚ ಪುರುಷಾರಂಕಾರ ದರಿದ್ರಗಳು. ಉಳಿದ ವಿಷಯಗಳಲ್ಲಿ ಅವರು ಎಷ್ಟೇ ಒಳ್ಳೆಯವರಾಗಿರಬಹುದು. ಆದರೆ ಹೆಣ್ಣು, ಹೆಣ್ಣಿನ ವಿಷಯ ಇವರಿಗೆ ಇಂದಿಗೂ ಇಷ್ಟೊಂದು ಲಘುವಾದದ್ದೇ...!!? ಮನೆಯಲ್ಲಿ ತಮ್ಮ ಮಗಳಿಗೇ ಅಂತಹ ಪರಿಸ್ಥಿತಿ ಬಂದಿದ್ದರೆ... ಈ ಹಾಸ್ಯ... ಈ ಉದಾಹರಣೆ ಇರುತ್ತಿತ್ತಾ? ಎಂದು ನಟಿ ಚೈತ್ರುಆ ಕೋಟೂರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸದನದಲ್ಲಿ ವೇಶ್ಯೆಯ ಬಗ್ಗೆ ಉಲ್ಲೇಖಿಸಿದ ಸ್ಪೀಕರ್ ರಮೇಶ್ ಕುಮಾರ್

ಶಾಸಕಿಯರು ಹೆಚ್ಚಿದ್ದರೆ ಹೀಗಾಗುತ್ತಿತ್ತೇ?

ಒಂದು ವೇಳೆ ಸದನದಲ್ಲಿ ಇಂದು 70-80 ಮಹಿಳಾ ಶಾಸಕರು ಇದ್ದಿದ್ದರೆ ರಮೇಶ್ ಕುಮಾರ್ ಇಂತಹ ಕೀಳಾದ ಹೋಲಿಕೆಯನ್ನು ಬಳಸುತ್ತಿದ್ದರೇ? ಬಹುಶಃ ಇಲ್ಲ! ಪುರುಷರೇ ಹೆಚ್ಚಿರುವಲ್ಲಿ ಇಂತಹ ನಾಚಿಕೆಗೇಡಿನ ಘಟನೆಗಳು ನಡೆಯುತ್ತವೆ. ನಮ್ಮ ಆಡಳಿತ ಯಂತ್ರದಲ್ಲಿ ಹೆಚ್ಚಿನ ಮಹಿಳೆಯರು ಇರಬೇಕು ಎನ್ನುವುದಕ್ಕೆ ಮತ್ತೊಂದು ಕಾರಣ ಇದು ಎಂದು ರಕ್ಷಿತ್ ಪೊನ್ನತ್ಪುರ್ ಎಂಬುವವರು ಟ್ವೀಟ್ ಮಾಡಿದ್ದಾರೆ.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
People in Social Media slams Ramesh Kumar for comparing his situation to rape victims in assembly session on Tuesday. They demanded an apology from the speaker on his remarks.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more