Get Updates
Get notified of breaking news, exclusive insights, and must-see stories!

ತಿಮ್ಮಕ್ಕ ಪ್ರಕೃತಿ ಮೇಲೆ ನಿಷ್ಕಪಟ ಪ್ರೀತಿಯ ಜೀವಂತ ರೂಪ: ಪವನ್ ಕಲ್ಯಾಣ್‌ ಸಂತಾಪ

ವೃಕ್ಷಮಾತೆ ಖ್ಯಾತಿಯ ಪದ್ಮಶ್ರೀ ಪುರಸ್ಕೃತ ಸಾಲುಮರದ ತಿಮ್ಮಕ್ಕ ಅವರು ನಿಧನರಾಗಿದ್ದಾರೆ. ಆಂಧ್ರಪ್ರದೇಶದ ಉಪಮುಖ್ಯಮಂತ್ರಿ, ನಟ ಪವನ್‌ ಕಲ್ಯಾಣ್‌ ಅವರು ತಿಮ್ಮಕ್ಕ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ತಮ್ಮ ಸೋಷಿಯಲ್‌ ಮೀಡಿಯಾ ಪೋಸ್ಟ್‌ ಮೂಲಕ ಸಂತಾಪ ಸೂಚಿಸಿದ್ದಾರೆ. ಆಂಧ್ರಪ್ರದೇಶದಲ್ಲಿ ಪರಿಸರವನ್ನು ರಕ್ಷಿಸುವೆವು ಎಂದು ಪ್ರತಿಜ್ಞೆ ಮಾಡಿದ ಕೆಲವರು ಮರಗಳನ್ನು ನಿರ್ದಯವಾಗಿ ಕಡಿದು, ಅರಣ್ಯಗಳನ್ನು ನಾಶ ಮಾಡಿ, ನಮ್ಮ ಅಮೂಲ್ಯ ಪರಿಸರ ಸಂಪನ್ಮೂಲಗಳನ್ನು ಸ್ವಾರ್ಥಕ್ಕಾಗಿ ಅಕ್ರಮ ಸಾಗಣೆಗೆ ಅವಕಾಶ ನೀಡಿರುವುದನ್ನು ನಾವು ನೋಡಿದ್ದೇವೆ. ಮತ್ತೊಂದೆಡೆ ಇದಕ್ಕೆ ವಿರುದ್ಧವಾಗಿ, ಸಂಪೂರ್ಣ ಜೀವನವನ್ನೇ ಪ್ರಕೃತಿಗೆ ಸಮರ್ಪಿಸಿದ ಒಬ್ಬ ಸರಳ ಮಹಿಳೆ ಇದ್ದಾರೆ. ಅವರೇ 'ವೃಕ್ಷಮಾತೆ' ಎಂದು ಪ್ರೀತಿಯಿಂದ ಕರೆಯಲ್ಪಡುವ ಸಾಲುಮರದ ತಿಮ್ಮಕ್ಕ ಎಂದು ಪವನ್‌ ಕಲ್ಯಾಣ್‌ ಸ್ಮರಿಸಿದ್ದಾರೆ.

ಕರ್ನಾಟಕದ ಒಂದು ಸಣ್ಣ ಹಳ್ಳಿಯಿಂದ ಬಂದ ತಿಮ್ಮಕ್ಕ ಮತ್ತು ಅವರ ಪತಿ, ಅವರಿಗೆ ಮಕ್ಕಳಾಗದ ಸಂದರ್ಭದಲ್ಲಿ ತಮ್ಮ ಜೀವನದ ನಿಜವಾದ ಗುರಿಯನ್ನು ಕಂಡುಕೊಂಡರು. ಅವರು ಹಸಿರು ಸಂತಾನವನ್ನು ಬೆಳೆಸುವುದನ್ನು ಆಯ್ಕೆ ಮಾಡಿದರು. ಶುದ್ಧ ಪ್ರೀತಿ ಮತ್ತು ದಿನನಿತ್ಯದ ಶ್ರಮದಿಂದ, ಅವರು ಜಗತ್ತಿಗೆ ಆಕರ್ಷಕವಾದ ಹಸಿರು ಛಾಯೆಯನ್ನು ಉಡುಗೊರೆಯಾಗಿ ನೀಡಿದರು. 375 ಆಲದ ಮರಗಳನ್ನು ಸೇರಿಸಿ, ಒಟ್ಟು 8,000ಕ್ಕೂ ಹೆಚ್ಚು ಮರಗಳನ್ನು ನೆಟ್ಟು, ಪಾಲಿಸಿ ಬೆಳೆಸಿದರು. ಅವರ ಜೀವನವು ಸಾಮರ್ಥ್ಯ ಅಥವಾ ಸಂಪತ್ತು ಹುಡುಕುವುದರ ಬಗ್ಗೆ ಇರಲಿಲ್ಲ. ಅದು ಭೂಮಾತೆಗೆ ಮಾಡಿದ ನಿಷ್ಕಪಟ ಪ್ರೀತಿಯ ವ್ರತವಾಗಿತ್ತು ಎಂದು ನೆನೆದಿದ್ದಾರೆ.

Pawan Kalyan Pays Tribute to Saalumarada Thimmakka A True Symbol of Love for Nature

ನಮ್ಮೆಲ್ಲರಿಗೂ ತಿಮ್ಮಕ್ಕ ಸ್ಫೂರ್ತಿ

ಇಂದು 114ನೇ ವಯಸ್ಸಿನಲ್ಲಿದ್ದ ಈ ಪಾರಂಪರಿಕ ಪ್ರಕೃತಿ ರಕ್ಷಕಿ ನಮ್ಮನ್ನು ಅಗಲಿದ್ದಾರೆ. ಅವರ ಬದುಕು ನಿಜವಾದ ಸಾರ್ವಜನಿಕ ಸೇವೆಯ ಶಕ್ತಿಯುತ ಪಾಠವಾಗಿದೆ. ಜನಸೇನಾ ಪಕ್ಷದ ಪರವಾಗಿ ಮಹಾನ್ ಸಾಲುಮರದ ತಿಮ್ಮಕ್ಕ ಅವರಿಗೆ ನನ್ನ ಹೃತ್ಪೂರ್ವಕ ಶ್ರದ್ಧಾಂಜಲಿಗಳನ್ನು ಸಲ್ಲಿಸುತ್ತೇನೆ. ನಾವು ನಮ್ಮ ವೃಕ್ಷಗಳ ತಾಯಿಯನ್ನು ಕಳೆದುಕೊಂಡಿದ್ದೇವೆ, ಆದರೆ ಅವರ ಆತ್ಮವು ನಮ್ಮೊಂದಿಗೆ ಉಳಿದಿದೆ. ಪರಿಸರ ಸಂರಕ್ಷಣೆಯ ಕಡೆಗೆ ಕೆಲಸ ಮಾಡಲು, ನಮ್ಮ ಸಮುದಾಯಗಳಲ್ಲಿ ಮರಗಳನ್ನು ನೆಡಲು ಮತ್ತು ನಮ್ಮ ಭೂಮಿಗೆ ತೀರಾ ಅಗತ್ಯವಿರುವ ಜವಾಬ್ದಾರಿಯುತ ನಾಗರಿಕರಾಗಲು ಅವರು ನಮ್ಮೆಲ್ಲರಿಗೂ ಸ್ಫೂರ್ತಿ ನೀಡುತ್ತಲೇ ಇದ್ದಾರೆ ಎಂದಿದ್ದಾರೆ.

ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಅವರ ನಿಧನದ ಸುದ್ದಿ ಮನಸ್ಸಿಗೆ ದುಃಖ ತಂದಿದೆ. 'ಮರಗಳ ತಾಯಿ' ಎಂದೇ ಪ್ರೀತಿಯಿಂದ ಕರೆಯಲ್ಪಟ್ಟ ಅವರು ಪ್ರಕೃತಿ ಮೇಲೆ ನಿಷ್ಕಪಟವಾದ ಪ್ರೀತಿಯ ಜೀವಂತ ರೂಪವಾಗಿದ್ದರು. ಒಬ್ಬ ತಾಯಿಯ ಮಮತೆಯೊಂದಿಗೆ ಅವರು ನೂರಾರು ಮರಗಳನ್ನು ಪೋಷಿಸಿ, ಬತ್ತಿದ ಭೂಮಿಯನ್ನು ಜೀವಂತ ಅರಣ್ಯಗಳಾಗಿ ಪರಿವರ್ತಿಸಿದರು. ಸರಳತೆ ಮತ್ತು ಅಚಲವಾದ ಸಮರ್ಪಣೆ ಜಗತ್ತನ್ನು ಹೇಗೆ ಬದಲಾಯಿಸಬಹುದು ಎಂಬುದಕ್ಕೆ ಅವರ ಜೀವನವೇ ಉದಾಹರಣೆಯಾಗಿತ್ತು ನೆನೆದಿದ್ದಾರೆ.

ನಾನು ಪ್ರತೀ ಬಾರಿ ಕರ್ನಾಟಕಕ್ಕೆ ಭೇಟಿ ನೀಡಿದಾಗ, ಪರಿಸರ ಮತ್ತು ಅರಣ್ಯ ಇಲಾಖೆಯ ಸಚಿವ ಈಶ್ವರ್‌ ಖಂಡ್ರೆ ಅವರೊಂದಿಗೆ ತಿಮ್ಮಕ್ಕಮ್ಮ ಅವರ ಅದ್ಭುತ ಜೀವನಯಾನದ ಬಗ್ಗೆ ನಾವು ಹಲವು ಬಾರಿ ಮಾತುಕತೆ ನಡೆಸುತ್ತಿದ್ದೆವು. ಅವರ ಅದಮ್ಯ ಮನೋಬಲ, ಪರಿಸರ ಸಂರಕ್ಷಣೆಯ ಮೇಲಿನ ಅಪಾರ ಭಕ್ತಿ, ಮತ್ತು ಮುಂದಿನ ಪೀಳಿಗೆಗಳಿಗೆ ಅವರು ನೀಡಿದ ಮಹಾನ್ ಪ್ರೇರಣೆ. ತಿಮ್ಮಕ್ಕ ಒಂದು ವ್ಯಕ್ತಿಯ ಸಮರ್ಪಣೆ ಸ್ಮಾರಕಗಳಿಗಿಂತಲೂ ದೊಡ್ಡ ಪರಂಪರೆಯನ್ನು ನಿರ್ಮಿಸಬಹುದು ಎಂಬುದನ್ನು ತಮ್ಮ ಬದುಕಿನಿಂದಲೇ ಸಾಬೀತುಪಡಿಸಿದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ. ನಮ್ಮ ಅರಣ್ಯಗಳನ್ನು ಕಾಪಾಡಲು, ಪೋಷಿಸಲು ಅವರ ಜೀವನ ಮತ್ತು ಮೌಲ್ಯಗಳು ಸದಾ ನಮ್ಮನ್ನು ದಾರಿ ತೋರಿಸಲಿ ಎಂದು ಪವನ್‌ ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+