ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋಲಾರ: ಕಾಂಗ್ರೆಸ್ ವಿರುದ್ಧ ಗುಡುಗಿದ ಪವನ್ ಕಲ್ಯಾಣ್

By Mahesh
|
Google Oneindia Kannada News

ಬೆಂಗಳೂರು, ಏ.14: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರಿಗೆ ಸಂಪೂರ್ಣ ಬೆಂಬಲ ಘೋಷಿಸಿದ್ದ ಆಂಧ್ರಪ್ರದೇಶದ ಹೊಸ ಪಕ್ಷ ಜನಸೇನಾದ ಮುಖ್ಯಸ್ಥ, ನಟ ಪವನ್ ಕಲ್ಯಾಣ್ ಈಗ ಮೊದಲ ಬಾರಿಗೆ ಬಿಜೆಪಿ ಪರ ಪ್ರಚಾರ ನಡೆಸಿದ್ದಾರೆ. ಮಂಗಳವಾರ ಮೊದಲ ಬಾರಿಗೆ ಕರ್ನಾಟಕದಲ್ಲಿ ತೆಲುಗಿನ ಪವರ್ ಸ್ಟಾರ್ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಪಾಲ್ಗೊಂಡಿದ್ದಾರೆ.

ಕೋಲಾರದ ಸರ್ ಎಂವಿ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ತೆಲುಗು ನಟ, ಜನಸೇನ ಮುಖ್ಯಸ್ಥ ಪವನ್ ಕಲ್ಯಾಣ್ ಅವರು ಭಾಷಣ ಆರಂಭ ಮಾಡಿದ್ದು .. ಎಲ್ಲರಿಗೂ ನಮಸ್ಕಾರ.. ನನಗೆ ಸ್ವಲ್ಪ ಸ್ವಲ್ಪ ಕನ್ನಡ ಬರುತ್ತೆ... ದಯವಿಟ್ಟು ಕ್ಷಮಿಸಿ ಭಾಷೆಗಿಂತ ಭಾವ ಮುಖ್ಯ. ನಿಮ್ಮನ್ನು ಈ ರೀತಿ ತಲುಪುತ್ತೇನೆ ಎಂದು ತೆಲುಗಿನಲ್ಲಿ ನಿರರ್ಗಳವಾಗಿ ಭಾಷಣ ಮುಂದುವರೆಸಿದರು.. ಭಾಷಣದ ಮುಖ್ಯಾಂಶ ಹೀಗಿದೆ:

Pawan Kalyan campaigning for BJP in Kolar on Apr 15

* ನಾನು ಇಲ್ಲಿ ಸಿನಿಮಾ ಡೈಲಾಗ್ ಹೇಳಲು ಬಂದಿಲ್ಲ. ಕರ್ನಾಟಕದಲ್ಲಿ ವಿವಿಧ ಭಾಷೆ ಇದ್ದರೂ ಐಕ್ಯತೆಯಿದೆ. ನಿಮ್ಮ ಐಕ್ಯತೆಗೆ ನನ್ನ ನಮನ, ಆಂಧ್ರದಲ್ಲಿ ಭಾಷೆಗಾಗಿ, ಪ್ರಾಂತ್ಯಕ್ಕಾಗಿ ಜನ ಕಿತ್ತಾಡುವುದನ್ನು ತಪ್ಪಿಸಲಾಗುತ್ತಿಲ್ಲ.
* ವಿಜಯನಗರ ಅರಸರ ಕಾಲದಲ್ಲಿ ಕರ್ನಾಟಕ ಆಂಧ್ರಪ್ರದೇಶದ ಜನ ಒಟ್ಟಿಗೆ ಸಮೃದ್ಧವಾಗಿ ಬಾಳಿ ಬದುಕಿದ ಕಥೆ ಕೇಳಿದ್ದೀರಿ. ಈಗ ಮತ್ತೆ ಅದೇ ಸುವರ್ಣ ಯುಗವನ್ನು ಕಾಣಲು ಮೋದಿ ಅವರನ್ನು ಗೆಲ್ಲಿಸಬೇಕಿದೆ.
* ಈ ಪ್ರಾಂತ್ಯದ ಎಂ ನಾರಾಯಣಸ್ವಾಮಿ, ಬಿ.ಎನ್ ಬಚ್ಚೇಗೌಡ ಅವರಿಗೆ ತಪ್ಪದೇ ಮತ ನೀಡಿ
* ಕಾಂಗ್ರೆಸ್ ದೇಶ ವಿಭಜನೆ ಕಾರ್ಯದಲ್ಲಿ ನಿರತವಾಗಿದೆ. ಇದಕ್ಕೆ ಆಂಧ್ರಪ್ರದೇಶ ಒಡೆದಿದ್ದೇ ಸಾಕ್ಷಿ.
* ಅಣ್ಣ ತಮ್ಮಂದಿರ ಮಧ್ಯೆ ದ್ವೇಷ ಹುಟ್ಟುವಂತೆ ಮಾಡಿದೆ. ಕೇಂದ್ರದಲ್ಲಿ ಸಮರ್ಥ ನಾಯಕರ ಅವಶ್ಯಕತೆ ಇದೆ. ಮೋದಿ ಪ್ರಧಾನಿಯಾಗಬೇಕು.
* ಈ ಭಾಗದ ಜನತೆ ಫ್ಲೂರೈಡ್ ನೀರು ಕುಡಿಯುವಂತೆ ಮಾಡುತ್ತಿರುವ ಸರ್ಕಾರವನ್ನು ಉಳಿಸಿಕೊಳ್ಳುವುದರಲ್ಲಿ ಅರ್ಥವಿಲ್ಲ.
* 25 ವರ್ಷದಿಂದ ಮುನಿಯಪ್ಪ ಅವರು ಏನು ಮಾಡಿದ್ದಾರೆ. ನೀವ್ಯಾಕೆ ಸುಮ್ಮನಿದ್ದೀರಾ? ನಿಮಗೆ ಒಳ್ಳೆ ನೀರು, ನೆಲೆ ಬೇಡವೆ?
* ರೈತರು ಸೂಕ್ತ ಬೆಲೆ ಸಿಗದೆ ಇಲ್ಲಿ ಬೆಳೆದ ಟೊಮ್ಯಾಟೋ, ಇನ್ನಿತರ ತರಕಾರಿಗಳನ್ನು ರಸ್ತೆಗೆ ಎಸೆಯುವಂತಾಗಿರುವುದು ದುರಂತ.
* ಇಲ್ಲಿನ ಯುವಕರಿಗೆ ಸರಿಯಾದ ಉದ್ಯೋಗ ಸಿಗುತ್ತಿಲ್ಲ. ನಗರಕ್ಕೆ ತೆರಳಿ ಸಿಗುವ ಅಲ್ಪ ಸಂಬಳದಲ್ಲಿ ಸಂಸಾರ ಸಾಕಬೇಕಿದೆ. ಇದು ಚಿನ್ನದ ಬೀಡು ಆದರೆ, ಕಾಂಗ್ರೆಸ್ ಇದನ್ನು ಬೆಂಗಾಡು ಮಾಡಿ ಬಿಟ್ಟಿದೆ. [ಮೋದಿ ಪ್ರಧಾನಿಯಾಗುವುದು ನನ್ನ ಗುರಿ: ಪವನ್]

* ಇದು ಕೇವಲ ಹಿಂದೂಗಳ ಪಕ್ಷವಲ್ಲ. ಮುಸ್ಲಿಮರು ಸೇರಿದಂತೆ ಎಲ್ಲಾ ಮತದವರ ರಕ್ಷಣೆಗೆ ಈ ಪಾರ್ಟಿ ಬದ್ಧವಾಗಿದೆ.
* ಗಬ್ಬರ್ ಸಿಂಗ್ ಶೂಟಿಂಗ್ ವೇಳೆ ಗುಜರಾತಿಗೆ ಹೋಗಿದ್ದೆ. ಮೋದಿ ಅವರ ರಾಜ್ಯ ಅಭಿವೃದ್ಧಿ ಬಗ್ಗೆ ಕಣ್ಣಾರೆ ನೋಡಿ ಬಂದೆ. ಆದರೂ ಅಲ್ಲಿದ್ದ ಸ್ಥಳೀಯ ಮುಸ್ಲಿಂ ಯುವಕರನ್ನು ಮಾತನಾಡಿಸಿದಾಗ ಮೋದಿ ಅವರು ನಿಜವಾದ ಅಭಿವೃದ್ಧಿ ಹರಿಕಾರ ಎಂಬುದು ತಿಳಿದು ಬಂದಿತು.

* ಕಾಂಗ್ರೆಸ್ ಹಠಾವೋ, ದೇಶ್ ಬಚಾವೋ.. ಅಬ್ ಕಿ ಬಾರ್ ಮೋದಿ ಸರ್ಕಾರ್ ಎಂದು ಘೋಷಣೆ ಮೊಳಗಿಸಿದ ಪವರ್ ಸ್ಟಾರ್.
* ಕಾಂಗ್ರೆಸ್ಸನ್ನು ಸೋಲಿಸಿ ದೇಶವನ್ನು ಉಳಿಸಿ ಎಂದು ಮತ್ತೊಮ್ಮೆ ಕನ್ನಡ ಭಾಷೆಯಲ್ಲಿ ಘರ್ಜಿಸಿದ ಗಬ್ಬರ್ ಸಿಂಗ್.

ಪವನ್ ಕಲ್ಯಾಣ್ ಅವರ ಅಣ್ಣ, ಕೇಂದ್ರ ಸಚಿವ ಚಿರಂಜೀವಿ ಅವರು ಸೋಮವಾರ ಕರ್ನಾಟಕದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದರು. ಇದಾದ ಬಳಿಕವೇ ಪವನ್ ಅವರು ಅಖಾಡಕ್ಕೆ ಇಳಿಯುತ್ತಿರುವುದು ಕುತೂಹಲಕಾರಿಯಾಗಿದೆ. ಹೈದರಾಬಾದಿನ ಬೇಗಂಪೇಟ್ ವಿಮಾನ ನಿಲ್ದಾಣದಿಂದ ನಾಳೆ ಹೊರಟ ಪವನ್ ಅವರು ಬಿಜೆಪಿ ಒದಗಿಸಿರುವ ವಿಶೇಷ ಹೆಲಿಕಾಪ್ಟರ್ ಮೂಲಕ ಸಂಚರಿಸಿ ಕರ್ನಾಟಕದ ಕೋಲಾರ, ರಾಯಚೂರು, ಗುರುಮಿಠಕಲ್ ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ನಡೆಸಲಿದ್ದಾರೆ.

English summary
Telugu cinema power star Pawan Kalyan campaigned for BJP candidate M Narayanaswamy in Kolar, Karnataka on April 15. Later He will campaign for BJP in Raichur and Gurumitkal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X