Get Updates
Get notified of breaking news, exclusive insights, and must-see stories!

ಬಿಜೆಪಿ ಅಭ್ಯರ್ಥಿಗಳ ಪರ ಪವರ್ ಸ್ಟಾರ್ ಪ್ರಚಾರ

ಬೆಂಗಳೂರು, ಏ.14: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರಿಗೆ ಸಂಪೂರ್ಣ ಬೆಂಬಲ ಘೋಷಿಸಿದ್ದ ಆಂಧ್ರಪ್ರದೇಶದ ಹೊಸ ಪಕ್ಷ ಜನಸೇನಾದ ಮುಖ್ಯಸ್ಥ, ನಟ ಪವನ್ ಕಲ್ಯಾಣ್ ಈಗ ಮೊದಲ ಬಾರಿಗೆ ಬಿಜೆಪಿ ಪರ ಪ್ರಚಾರಕ್ಕೆ ಇಳಿಯುತ್ತಿದ್ದಾರೆ. ಕರ್ನಾಟಕದಲ್ಲಿ ಮಂಗಳವಾರ ತೆಲುಗಿನ ಪವರ್ ಸ್ಟಾರ್ ಮೂರು ಕಡೆ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.

ಪವನ್ ಕಲ್ಯಾಣ್ ಅವರ ಅಣ್ಣ, ಕೇಂದ್ರ ಸಚಿವ ಚಿರಂಜೀವಿ ಅವರು ಸೋಮವಾರ ಕರ್ನಾಟಕದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದರು. ಇದಾದ ಬಳಿಕವೇ ಪವನ್ ಅವರು ಅಖಾಡಕ್ಕೆ ಇಳಿಯುತ್ತಿರುವುದು ಕುತೂಹಲಕಾರಿಯಾಗಿದೆ. ಹೈದರಾಬಾದಿನ ಬೇಗಂಪೇಟ್ ವಿಮಾನ ನಿಲ್ದಾಣದಿಂದ ನಾಳೆ ಬೆಳಗ್ಗೆ 7.30ಕ್ಕೆ ಹೊರಡಲಿರುವ ಪವನ್ ಅವರು ಮೊದಲಿಗೆ ರಾಯಚೂರಿಗೆ ಬರಲಿದ್ದಾರೆ.

ನಂತರ ಕೋಲಾರಕ್ಕೆ 12.30ಕ್ಕೆ ಹಾಗೂ ಗುರುಮಿಠಕಲ್ ಕ್ಷೇತ್ರಕ್ಕೆ 3.30ರ ಸುಮಾರಿಗೆ ಪವನ್ ಆಗಮನದ ನಿರೀಕ್ಷೆಯಿದೆ. ಪವನ್ ಅವರ ಸಂಚಾರದ ವ್ಯವಸ್ಥೆಯನ್ನು ಬಿಜೆಪಿ ವಹಿಸಿಕೊಂಡಿದ್ದು ಎಲ್ಲೆಡೆ ಹೆಲಿಕಾಪ್ಟರ್ ನಲ್ಲಿ ಸುತ್ತಾಡಲಿದ್ದಾರೆ.

ಮೋದಿ ಅವರನ್ನು ಭೇಟಿ ಮಾಡಿ ಬಂದ ಮೇಲೆ ಇಸಂ ಎಂಬ ಪುಸ್ತಕ ಬಿಡುಗಡೆ ಮಾಡಿದ್ದ ಪವನ್ ಮತ್ತೆ ಸುದ್ದಿಯಲ್ಲಿದ್ದಾರೆ. ಪವನ್ ಅವರು ಇತ್ತೀಚೆಗೆ ಬಿಜೆಪಿ ತೆಲಂಗಾಣ ಘಟಕದ ಮುಖ್ಯಸ್ಥ ಕೃಷ್ಣನ್ ರೆಡ್ಡಿ ಅವರನ್ನು ಭೇಟಿ ಮಾಡಿದರು. ವಿಜಯವಾಡಡಲ್ಲಿ ಪ್ರಚಾರ ಕಾರ್ಯಕ್ಕೆ ಬರುವ ಭರವಸೆ ನೀಡಿದ್ದರು. ಎನ್ ಡಿಎ ಭಾಗವಾಗಿರುವ ತೆಲುಗುದೇಶಂ ಪಾರ್ಟಿ ಪರ ಕೂಡಾ ಪ್ರಚಾರ ನಡೆಸುವ ಸಾಧ್ಯತೆಯೂ ಕಂಡು ಬಂದಿದೆ. ಪವನ್ ನಡೆಗೆ ಚಿರು ಕುಟುಂಬದ ಪ್ರತಿಕ್ರಿಯೆ ಹೇಗಿದೆ ಮುಂದೆ ಓದಿ...

ಮೋದಿ ಪ್ರಧಾನಿಯಾಗುವುದು ನನ್ನ ಗುರಿ: ಪವನ್

ಮೋದಿ ಪ್ರಧಾನಿಯಾಗುವುದು ನನ್ನ ಗುರಿ: ಪವನ್

ಮೋದಿ ಪ್ರಧಾನಿಯಾಗುವುದು ನನ್ನ ಗುರಿ. ಮೋದಿ ಅವರು ಪ್ರಧಾನಿಯಾಗಿದ್ದರೆ ಆಂಧ್ರಪ್ರದೇಶ ಒಡೆಯುವ ಮಾತೇ ಇರುತ್ತಿರಲಿಲ್ಲ. ನಮ್ಮ ದೇಶಕ್ಕೆ ಮೋದಿಯಂಥ ಸಮರ್ಥ ನಾಯಕರು ಬೇಕು ಎಂದು ಪವನ್ ಹೇಳಿದ್ದಾರೆ. ಮಾ.21 ರಂದು ಅಹಮದಾಬಾದಿನಲ್ಲಿ ಪವನ್ ಅವರು ಮೋದಿ ಅವರನ್ನು ಭೇಟಿ ಮಾಡಿ ಸಂಪೂರ್ಣ ಬೆಂಬಲ ಘೋಷಿಸಿದ್ದರು.

ಚಿರು ಜತೆ ಚೆರಿ, ಅಲ್ಲು ಅರ್ಜುನ್ ಸಾಥ್ ಇಲ್ಲ

ಚಿರು ಜತೆ ಚೆರಿ, ಅಲ್ಲು ಅರ್ಜುನ್ ಸಾಥ್ ಇಲ್ಲ

ಪವನ್ ಅವರ ಅಣ್ಣ ನಾಗಾಬಾಬು ಅವರು ಪತ್ರಿಕಾ ಹೇಳಿಕೆ ನೀಡಿ 'ನಾನು, ರಾಮ್ ಚರಣ್, ಅಲ್ಲು ಅರ್ಜುನ್ ಹಾಗೂ ಅಲ್ಲು ಅರವಿಂದ್ ಅವರು ಚಿರಂಜೀವಿ ಹಾಕಿಕೊಟ್ಟ ಮಾರ್ಗದಲ್ಲೇ ಸಾಗುತ್ತೇವೆ. ಪವನ್ ಯೋಜನೆಗಳು ಏನೇ ಇದ್ದರೂ ನಮ್ಮ ಕುಟುಂಬದ ಒಗ್ಗಟ್ಟಿಗೆ ಏನು ತೊಂದರೆ ಇಲ್ಲ. ಚಿರಂಜೀವಿ ಜತೆ ಎಲ್ಲರೂ ಇದ್ದೇವೆ. ನಾನಂತೂ ರಾಜಕೀಯಕ್ಕೆ ಸೇರುವುದಿಲ್ಲ ಎಂದಿದ್ದರು. ಜನಸೇನಾಗೆ ನಮ್ಮ ಕುಟುಂಬ ಬೆಂಬಲ ವಿಲ್ಲ ಎಂದಿದ್ದರು.

ಮೆಗಾ ಸ್ಟಾರ್ ಫ್ಯಾನ್ ಗಳ ಕಥೆ ಏನು?

ಮೆಗಾ ಸ್ಟಾರ್ ಫ್ಯಾನ್ ಗಳ ಕಥೆ ಏನು?

ಕರ್ನಾಟಕ ಸೇರಿದಂತೆ ದೇಶದೆಲ್ಲೆಡೆ ಇರುವ ಮೆಗಾ ಸ್ಟಾರ್ ಫ್ಯಾನ್ ಕ್ಲಬ್ ಗಳಿಗೆ ಕರೆ ನೀಡಿರುವ ನಾಗಬಾಬು, ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಅಭಿಮಾನಿಗಳ ಮನಸಿನಲ್ಲಿ ಗೊಂದಲ ಉಂಟಾಗಿದೆ. ಗೊಂದಲ ಪರಿಹಾರಕ್ಕಾಗಿ ಪತ್ರಿಕಾ ಹೇಳಿಕೆ ನೀಡಬೇಕಾಗಿ ಬಂತು. ಚಿರಂಜೀವಿ ಅಣ್ಣ ಹಾಕಿಕೊಟ್ಟಿರುವ ರಾಜಮಾರ್ಗದಲ್ಲೇ ನಾವೆಲ್ಲ ಸಾಗೋಣ. ಚಿರಂಜೀವಿ ಅವರಿಗೆ ನೀವೆಲ್ಲ ಎಂದಿನಂತೆ ಬೆಂಬಲ ನೀಡುತ್ತೀರಾ ಎಂಬ ವಿಶ್ವಾಸ ನಮಗಿದೆ ಎಂದಿದ್ದಾರೆ.

ಕರ್ನಾಟಕದಲ್ಲಿ ಚಿರಂಜೀವಿ ಪ್ರಚಾರ

ಕರ್ನಾಟಕದಲ್ಲಿ ಚಿರಂಜೀವಿ ಪ್ರಚಾರ

ದೊಡ್ಡಬಳ್ಳಾಪುರ, ಯಲಹಂಕ, ಚಿಕ್ಕಬಳ್ಳಾಪುರ ನಗರ ಸೇರಿದಂತೆ ವಿವಿಧೆಡೆ ಸೋಮವಾರ ಚಿರಂಜೀವಿ ಅವರು ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯ ನಡೆಸಿದರು.

ಕಳೆದ 10 ವರ್ಷಗಳಿಂದ ಯುಪಿಎ ಜನಪರ ಯೋಜನೆಗಳನ್ನು ನೀಡಿದೆ. ಚಿಕ್ಕಬಳ್ಳಾಪುರದಲ್ಲಿ ಶಾಶ್ವತ ಕುಡಿಯುವ ನೀರು ನೀಡಲು ವೀರಪ್ಪ ಮೋಯ್ಲಿ ಸಂಕಲ್ಪ ಮಾಡಿದ್ದಾರೆ. ನಿಮ್ಮ ಕನಸು ಸಾಕಾರಗೊಳ್ಳಲಿದೆ ಎಂದು ಚಿರಂಜೀವಿ ಹೇಳಿದರು.

ಕರ್ನಾಟಕ ನಂತರ ಆಂಧ್ರದಲ್ಲಿ ಪವನ್ ಪ್ರಚಾರ

ಕರ್ನಾಟಕ ನಂತರ ಆಂಧ್ರದಲ್ಲಿ ಪವನ್ ಪ್ರಚಾರ

ಮೋದಿ ಅವರ ಆಪ್ತರ ಸೂಚನೆ ಮೇರೆಗೆ ಮೊದಲಿಗೆ ಕರ್ನಾಟಕದಲ್ಲಿ ಮೂರು ಕಡೆ ಪ್ರಚಾರ ಕಾರ್ಯ ನಡೆಸಲಿರುವ ಪವನ್ ಅವರು ನಂತರ ತೆಲಂಗಾಣ ಹಾಗೂ ಸೀಮಾಂಧ್ರ ಭಾಗದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚಿಸಲಿದ್ದಾರೆ.,

ತೆಲುಗುದೇಶಂ ಪಕ್ಷದ ಸಮಾವೇಶದಲ್ಲಿ ಚಂದ್ರಬಾಬು ನಾಯ್ಡು, ಬಾಲಕೃಷ್ಣ, ನರೇಂದ್ರ ಮೋದಿ ಅವರ ಜತೆ ಪವನ್ ಕಲ್ಯಾಣ್ ಭಾಗವಹಿಸುವ ಸಾಧ್ಯತೆಯಿದೆ.

ಕೂಸು ಹುಟ್ಟೋಕೂ ಮುಂಚೆ ಕುಲಾವಿ

ಕೂಸು ಹುಟ್ಟೋಕೂ ಮುಂಚೆ ಕುಲಾವಿ

ಪಕ್ಷ ಸ್ಥಾಪನೆಗೂ ಮುನ್ನವೇ ಪಕ್ಷದ ಚಿನ್ಹೆ, ಫ್ಯಾನ್ ಕ್ಲಬ್ ಸ್ಥಾಪಿಸಿ ಆಂಧ್ರದಲ್ಲಿ ಸಂಚಲನ ಮೂಡಿಸಿರುವ ಪವನ್ ಕಲ್ಯಾಣ್ ಅವರ ಜನಸೇನ ಪಾರ್ಟಿಗೆ ಚುನಾವಣಾ ಆಯೋಗದಿಂದ ಮಾನ್ಯತೆ ಸಿಗುವುದು ಅನುಮಾನವಾಗಿದೆ. ಮಾ.10 ರಂದು ಜನಸೇನ ಪಾರ್ಟಿ ಹೆಸರಿನಲ್ಲಿ ಹೊಸ ಪಕ್ಷದ ಸ್ಥಾಪನೆಗಾಗಿ ಅರ್ಜಿ ಹಾಕಲಾಗಿದೆ.

ಆದರೆ, ಆಯೋಗದ ನಿಯಮದ ಪ್ರಕಾರ ಕನಿಷ್ಠ ಮೂರು-ನಾಲ್ಕು ತಿಂಗಳುಗಳ ಮುಂಚಿತವಾಗಿ ಅರ್ಜಿ ಹಾಕಿದ್ದಾರೆ ಈ ವೇಳೆಗೆ ಮಾನ್ಯತೆ ಸಿಗುತ್ತಿತ್ತು. ಆದರೆ, ಈಗ ಸದ್ಯಕ್ಕಂತೂ ಹೊಸ ಪಕ್ಷ, ಹೆಸರು, ಲಾಂಛನಕ್ಕೆ ಮಾನ್ಯತೆ ಸಿಗಲು ಇನ್ನೂ ಕೆಲ ಕಾಲ ಕಾಯಬೇಕಾಗುತ್ತದೆ.

ಇಷ್ಟಕ್ಕೂ ಜನಸೇನಾದಿಂದ ಯಾರೊಬ್ಬರೂ ಈ ಬಾರಿ ಸ್ಪರ್ಧೆಗಿಳಿದಿಲ್ಲ. ಬಿಜೆಪಿ, ಟಿಡಿಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸುವುದೇ ಸದ್ಯದ ಕೆಲಸವಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+