ವಿಡಿಯೋ: "ಪಾಕಿಸ್ತಾನ್ ಜಿಂದಾಬಾದ್ ಎಂದವಳ ಕೈ-ಕಾಲು ಮುರಿಯಿರಿ"
Recommended Video
ಚಿಕ್ಕಮಗಳೂರು, ಫೆಬ್ರವರಿ.20: ಪಾಕಿಸ್ತಾನ್ ಜಿಂದಾಬಾದ್.. ಪಾಕಿಸ್ತಾನ್ ಜಿಂದಾಬಾದ್.. ಭಾರತದಲ್ಲೇ ಇದ್ದುಕೊಂಡು ಶತ್ರುರಾಷ್ಟ್ರಕ್ಕೆ ಜೈಕಾರ ಹಾಕಿದ ಅಮೂಲ್ಯ ಲಿಯೋನಾಳ ಕೈ ಕಾಲು ಮುರಿಯಿರಿ ಎಂದು ಸ್ವತಃ ತಂದೆ ವಾಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಶಿವಪುರದಲ್ಲಿ ಇರುವ ಅಮೂಯ್ಯ ಲಿಯೋನಾ ಮನೆಗೆ ಬಜರಂಗದಳದ ಕಾರ್ಯಕರ್ತರು ಮುತ್ತಿಗೆ ಹಾಕಿದರು. ಪಾಕಿಸ್ತಾನ್ ಜಿಂದಾಬಾದ್ ಕೂಗಿದವಳ ತಂದೆಯಿಂದ ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗಿಸಿದರು.
ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ವಿರುದ್ಧ ಪ್ರತಿಭಟನೆ ನಡೆಸಲಾಯಿತು. ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಎದುರಿನಲ್ಲೇ ಎಡಪಂಥೀಯ ಚಿಂತನೆಗಳನ್ನು ಪ್ರತಿಪಾದಿಸುವ ಅಮೂಲ್ಯ ಲಿಯೋನಾ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾಳೆ.

ಅಮೂಲ್ಯ ಲಿಯೋನಾ ನಿವಾಸಕ್ಕೆ ಭಜರಂಗ ದಳ ಮುತ್ತಿಗೆ
ಅಮೂಲ್ಯ ಲಿಯೋನಾ ಕೂಗಿದ ಘೋಷಣೆಗೆ ಬಜರಂಗದಳ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಶಿವಪುರ ಗ್ರಾಮದಲ್ಲಿ ಇರುವ ಅಮೂಲ್ಯ ಲಿಯೋನಾ ತಂದೆ ವಾಜಿ ನಿವಾಸಕ್ಕೆ ಮುತ್ತಿಗೆ ಹಾಕಿದರು. ದೇಶದ್ರೋಹಿ ಮಗಳನ್ನು ಮನೆಗೆ ಸೇರಿಸಿಕೊಳ್ಳದಂತೆ ತಂದೆ ವಾಜಿ ಅವರಿಗೆ ಎಚ್ಚರಿಕೆಯನ್ನು ನೀಡಿದರು.

ತಂದೆಯ ಆರೋಗ್ಯದ ಬಗ್ಗೆ ಗಮನ ಹರಿಸಲು ಪುರುಸೊತ್ತಿಲ್ಲವಂತೆ!
ನಾನು ಹಾರ್ಟ್ ಪೇಶೆಂಟ್. ನನ್ನ ಆರೋಗ್ಯ ಚೆನ್ನಾಗಿಲ್ಲ ಮಗಳೇ, ಆಸ್ಪತ್ರೆಗೆ ಕರೆದುಕೊಂಡು ಹೋಗು ಬಾ.. ಬೆಂಗಳೂರಿನಿಂದ ಆದಷ್ಟು ಬೇಗ ಮನೆಗೆ ಬಾರಮ್ಮ ಎಂದರೆ, ನಿನ್ನ ಆರೋಗ್ಯ ನಿನಗೆ ಬಿಟ್ಟಿದ್ದು. ನನಗೂ ಅದಕ್ಕೂ ಯಾವ ಸಂಬಂಧವೂ ಇಲ್ಲ. ಬೇಕಿದ್ದರೆ ನೀನೇ ಹೋಗಿ ಆಸ್ಪತ್ರೆಗೆ ತೋರಿಸಿಕೋ ಎಂದು ತಂದೆಗೆ ಸ್ವತಃ ಅಮೂಲ್ಯ ಲಿಯೋನಾ ಫೋನ್ ನಲ್ಲೇ ಆವಾಜ್ ಹಾಕಿದ್ದಳಂತೆ. ಹೀಗೆಂದು ಸ್ವತಃ ಅಮೂಲ್ಯ ಲಿಯೋನಾ ತಂದೆ ಆರೋಪಿಸಿದ್ದಾರೆ.

ಮಗಳನ್ನು ಮನೆಗೆ ಸೇರಿಸಿಕೊಳ್ಳುವುದಿಲ್ಲ ಎಂದ ತಂದೆ
ದೇಶದ್ರೋಹಿ ಘೋಷಣೆ ಕೂಗಿದ ಮಗಳು ಸದ್ಯಕ್ಕೆ ಮನೆಗೆ ಬರುವುದೇ ಬೇಡ. ಅವಳನ್ನು ಜೈಲಿನಲ್ಲಿ ಇಟ್ಟಿರಲಿ. ಪೊಲೀಸರು ಆಕೆಯ ವಿರುದ್ಧ ಎಂಥಾ ಕಠಿಣ ಕ್ರಮವನ್ನಾದರೂ ಜರುಗಿಸಲಿ. ನಾನಂತೂ ಆಕೆಗೆ ಯಾವುದೇ ಕಾರಣಕ್ಕೂ ಜಾಮೀನು ನೀಡುವುದಿಲ್ಲ ಎಂದು ಅಮೂಲ್ಯ ಲಿಯೋನಾ ತಂದೆ ವಾಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಂದೆಯ ಮಾತನ್ನೂ ಕೇಳಲಿಲ್ಲವಂತೆ ಲಿಯೋನಾ
ದೇಶ ವಿರೋಧಿ ಘೋಷಣೆ ಕೂಗಿದ ಅಮೂಲ್ಯ ಲಿಯೋನಾ ಮನೆಯಲ್ಲೂ ಕೂಡಾ ತಂದೆ ತಾಯಿಯರಿಗೆ ಪ್ರಿಯವಾಗುವಂತೆ ನಡೆದುಕೊಳ್ಳುತ್ತಿರಲಿಲ್ಲ. ಕೆಲವು ಮುಸ್ಲಿಂ ಜನರ ಜೊತೆಗೆ ಸೇರಿಕೊಂಡು ತನ್ನ ಮಾತನ್ನೂ ಕೂಡಾ ಧಿಕ್ಕರಿಸಿ ನಡೆದುಕೊಳ್ಳುತ್ತಿದ್ದಳು. ವೇದಿಕೆಗಳ ಮೇಲೆ ಆಕೆ ಆಡುತ್ತಿದ್ದ ಅಪ್ರಚೋದಿತ ಮಾತುಗಳನ್ನು ನಾನು ಎಂದಿಗೂ ಸಹಿಸುತ್ತಿರಲಿಲ್ಲ ಎಂದು ಸ್ವತಃ ಅಮೂಲ್ಯ ಲಿಯೋನಾ ತಂದೆ ವಾಜಿ ಕಿಡಿ ಕಾರಿದ್ದಾರೆ.












Click it and Unblock the Notifications