ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Exclusive : ಆಂಡ್ರಾಯ್ಡ್ ಮಾರುಕಟ್ಟೆಗೆ 'ಪದ' ಎಂಟ್ರಿ

By ಮಲೆನಾಡಿಗ
|
Google Oneindia Kannada News

ಕನ್ನಡ ಸೇರಿದಂತೆ ಹಲವು ಭಾರತೀಯ ಭಾಷೆಗಳಲ್ಲಿ ಬರೆಯಲು ಸಾಧ್ಯವಿರುವ 'ಪದ' ತಂತ್ರಾಂಶದಲ್ಲಿ ಮುಖ್ಯವಾಗಿ ಕನ್ನಡಕ್ಕೆ ಹಲವು ರೀತಿಯ ವಿಶೇಷ ಸೌಲಭ್ಯಗಳನ್ನು ಒದಗಿಸಿದೆ. ವಿಂಡೋಸ್ ಅಥವಾ ಲಿನಕ್ಸ್ ಆವೃತ್ತಿಯಲ್ಲಿ ಪದ ತಂತ್ರಾಂಶ ಉಚಿತವಾಗಿ ಡೌನ್ ಲೋಡ್ ಗೆ ಲಭ್ಯವಿದೆ. ಈಗ ಆಂಡ್ರಾಯ್ಡ್ ಮಾರುಕಟ್ಟೆಗೂ ಪದ ಲಗ್ಗೆ ಇಟ್ಟಿದೆ.

'ನನಗೆ ಟೈಪಿಸಲು ಬರುವುದಿಲ್ಲ, ಏನೋ ಟೈಪ್ ಮಾಡಿದರೆ ಏನೋ ಅಕ್ಷರ ಮೂಡುತ್ತದೆ ಎಂಬ ಸರಳ ಸಮಸ್ಯೆಗಳನ್ನು ದೊಡ್ಡದಾಗಿ ಹೇಳಿಕೊಳ್ಳುತ್ತದೆ. ಅನಿವಾರ್ಯವಾಗಿ kanglish ಬಳಸಿ ಅನೇಕರಿಗೆ ಕಿರಿಕಿರಿ ಮಾಡುತ್ತಾರೆ. ಈ ಸಮಸ್ಯೆಗೆ ಪರಿಹಾರ ರೂಪದಲ್ಲಿ ಕೆಲ ವರ್ಷಗಳ ಹಿಂದೆ ಬಂದ 'ಪದ' ತಂತ್ರಾಂಶ ನಂತರ ಲಿನಾಕ್ಸ್ ಆವೃತ್ತಿಯಲ್ಲೂ ತರಲಾಯಿತು ಈಗ ಆಂಡ್ರಾಯ್ಡ್ ಮೊಬೈಲ್ ಅಪ್ಲಿಕೇಷನ್ ವಿನ್ಯಾಸಗೊಳಿಸಿ ಮಾರುಕಟ್ಟೆಗೆ ಬಿಡಲು ಸಿದ್ದತೆ ಮಾಡಿದ್ದೇನೆ.'

'ಆದರೆ, ಕನ್ನಡಕ್ಕೆ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ ಎಂಬ ಮಾತನ್ನು ನಂಬಿರುವ ಉತ್ಸಾಹಿ ತಂತ್ರಜ್ಞರಂತೆ ಲೋಹಿತ್ ಡಿ.ಎಸ್ ಕೂಡಾ ಉಚಿತವಾಗಿ ಎಲ್ಲವನ್ನು ಹಂಚಿ ಈಗ ಕೈ ಬರಿದು ಮಾಡಿಕೊಂಡಿದ್ದಾರೆ. ತಂತ್ರಾಂಶ ಅಭಿವೃದ್ಧಿ ವೆಚ್ಚ, ಪದ ವೆಬ್ ತಾಣ ನಿರ್ವಹಣೆ, ಆಂಡ್ರಾಯ್ಡ್, ಐಫೋನ್ ಮಾರುಕಟ್ಟೆ ಪ್ರವೇಶ ಶುಲ್ಕಕ್ಕೆ ಸ್ವಂತ ಜೇಬಿನಿಂದ ಖರ್ಚು ಮಾಡಿ ಪ್ರತಿಫಲವಿಲ್ಲದೆ ಏನು ಮಾಡಲಿ' ಎಂದು ಪ್ರಶ್ನಿಸುತ್ತಿದ್ದಾರೆ. ಸದ್ಯಕ್ಕೆ ಪದ ಆಂಡ್ರಾಯ್ಡ್ ಅಪ್ಲಿಕೇಷನ್ ಬಗ್ಗೆ ಸ್ಥೂಲ ಮಾಹಿತಿ ಇಲ್ಲಿ ನೀಡಲಾಗಿದೆ.

ಕನ್ನಡ ಸಾಫ್ಟ್ ವೇರ್ ಗಳ ಸ್ಥಿತಿ ಗತಿ ಕಷ್ಟ ನಷ್ಟ

ಕನ್ನಡ ಸಾಫ್ಟ್ ವೇರ್ ಗಳ ಸ್ಥಿತಿ ಗತಿ ಕಷ್ಟ ನಷ್ಟ

ಈ ಮೊದಲು ವ್ಯಾಪಕವಾಗಿ ಬಳಕೆಯಲ್ಲಿದ್ದ 'ಬರಹ' ತಂತ್ರಾಂಶ ಆವೃತ್ತಿ ಹತ್ತರ ಬಳಿಕ ಉಚಿತವಾಗಿ ಲಭ್ಯವಿಲ್ಲ. ಅದರಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳಿಗಾಗಿ ಸಂಪನ್ಮೂಲ ಒಟ್ಟು ಮಾಡಲು ಸದ್ಯಕ್ಕೆ ಬರಹ ತಂತ್ರಾಂಶಕ್ಕೆ ಶುಲ್ಕವಿಡಲಾಗಿದೆ ಎಂದು ಹೇಳಲಾಗಿದೆ.

'ನುಡಿ' ತಂತ್ರಾಂಶದಲ್ಲಿ ಹೆಚ್ಚಿನ ಸೌಲಭ್ಯಗಳಿಲ್ಲ ಮತ್ತು ಡೌನ್ಲೋಡ್ ಮಾಡಲು ಬೇಕಾದ ತಾಣ ಸರಿಯಾಗಿ ಲಭ್ಯ ಇಲ್ಲ. ಗೂಗಲ್ ಟ್ರಾನ್ಸ್ ಲಿಟೇರೇಷನ್ ಬಳಕೆ ಎಲ್ಲರಿಗೂ ಒಗ್ಗುತ್ತಿಲ್ಲ. ಕುವೆಂಪು ತಂತ್ರಾಂಶ ಇತ್ತೀಚೆಗೆ ಬಿಡುಗಡೆಯಾದ ಸರ್ಕಾರಿ ತಂತ್ರಾಂಶ ಜನರಿಗೆ ತಲುಪುತ್ತಿಲ್ಲ

ಆಂಡ್ರಾಯ್ಡ್ ಆಪ್ ಬಳಕೆದಾರರು ಏನು ಮಾಡಬಹುದು?

ಆಂಡ್ರಾಯ್ಡ್ ಆಪ್ ಬಳಕೆದಾರರು ಏನು ಮಾಡಬಹುದು?

ಒಂದಿಷ್ಟು ಹಣ ಸಹಾಯ ಸಿಕ್ಕರೆ ಕನ್ನಡಕ್ಕೆ ಇನ್ನಷ್ಟು ವಿಶಿಷ್ಟ ಜನ ಉಪಯೋಗಿ ತಂತ್ರಾಂಶ ನೀಡುತ್ತೇನೆ ಎಂದು ಉತ್ಸಾಹದಿಂದ ಹೇಳುತ್ತಿದ್ದಾರೆ. ಆಸಕ್ತರು ಲೋಹಿತ್ ಗೆ ಇಮೇಲ್([email protected]) ಮಾಡಿ..ನೀವು ಬಯಸಿದರೆ ಈ ತಂತ್ರಾಂಶ ಕೂಡಾ ಉಚಿತವಾಗಿ ಸಾರ್ವಜನಿಕರಿಗೆ ಲಭ್ಯವಾಗಲಿದೆ. ಅಥವಾ ಕಡಿಮೆ ಬೆಲೆಗೆ ಆಪ್ ಲಭ್ಯವಾಗಲಿದೆ. ಆಯ್ಕೆ ನಿಮ್ಮ ಕೈಲಿದೆ. ಸದ್ಯದ ಬೆಲೆ 150 ರು

ಏನೆಲ್ಲ ಸೌಲಭ್ಯಗಳನ್ನು ನಿರೀಕ್ಷಿಸಬಹುದು

ಏನೆಲ್ಲ ಸೌಲಭ್ಯಗಳನ್ನು ನಿರೀಕ್ಷಿಸಬಹುದು

ಕನ್ನಡ ಸೇರಿದಂತೆ ಹಲವು ಭಾರತೀಯ ಭಾಷೆಗಳಲ್ಲಿ ಬರೆಯಲು ಸಾಧ್ಯವಿರುವ ಈ ತಂತ್ರಾಂಶ(ಡೆಸ್ಕ್ ಟಾಪ್ ವರ್ಷನ್) ದಲ್ಲಿ ಮುಖ್ಯವಾಗಿ ಕನ್ನಡಕ್ಕೆ ಹಲವು ರೀತಿಯ ವಿಶೇಷ ಸೌಲಭ್ಯಗಳಿವೆ. ಸ್ಪೆಲ್ ಚೆಕರ್, ಪದ ಅರ್ಥ, ಆಟೋ ಕಂಪ್ಲೀಟ್ ಸೌಲಭ್ಯಗಳಿವೆ.

ಮೊತ್ತಮೊದಲ ಬಾರಿಗೆ ಎರಡು ಲಕ್ಷಕ್ಕೂ ಹೆಚ್ಚು ಪದಗಳನ್ನುಳ್ಳ ನಿಘಂಟು ಕೂಡ ಇದರಲ್ಲಿದೆ. ಟೈಪಿಸಿದ ಕಡತಗಳನ್ನು ಹಲವು ರೀತಿಯಲ್ಲಿ ಉಳಿಸಲು(save as) ಅವಕಾಶವಿದೆ. ಇದೆಲ್ಲ ಹಾಗೂ ಇನ್ನಷ್ಟು ಮೊಬೈಲ್ ಆಪ್ ನಲ್ಲೂ ಲಭ್ಯವಾಗಲಿದೆ.

ವಿಂಡೋಸ್ ಅಥವಾ ಲಿನಕ್ಸ್ ಆವೃತ್ತಿಯಲ್ಲಿ ಪದ ತಂತ್ರಾಂಶ ಡೌನ್ ಲೋಡ್ ಮಾಡಿಕೊಳ್ಳುವ ತಾಣ: http://www.pada.pro/download ಇಲ್ಲಿದೆ

ಹೊಸ ಅಪ್ಲಿಕೇಷನ್ ನಲ್ಲಿ ಏನಿದೆ ಹೊಸತು?

ಹೊಸ ಅಪ್ಲಿಕೇಷನ್ ನಲ್ಲಿ ಏನಿದೆ ಹೊಸತು?

* ಕಡತಗಳು ಯೂನಿಕೋಡ್ ಶಿಷ್ಟತೆ ಬಳಸಿ ಸೇವ್ ಆಗಲಿದೆ.
* txt ಹಾಗೂ html ಡಾಕ್ಯುಮೆಂಟ್ ರಚಿಸಲು ಸಾಧ್ಯ
* ಫೋನೆಟಿಕ್, ನುಡಿ(ಕೆಪಿ ರಾವ್) ಫೋನೆಟಿಕ್ ಯೂನಿಕೋಡ್ ಶಿಷ್ಟತೆಯುಳ್ಳ ಕೀ ಬೋರ್ಡ್
* txt ಹುಡುಕು ಹಾಗೂ ಬದಲಾಯಿಸು
* ವಿಕ್ಷನರಿ ಸಪೋರ್ಟ್ ಕೂಡ ಇದೆ.ಇಂಟರ್ನೆಟ್ ಕನೆಕ್ಷನ್ ಇದ್ದರೆ, ಆನ್‌ಲೈನಲ್ಲಿ ನಿಮ್ಮ ಪದದ ಅರ್ಥವನ್ನು ಪದ ಸಾಪ್ಟ್ವೇರ್‌ನಿಂದಲೇ

ನಿಮ್ಮ ಕಡತ ತಕ್ಷಣವೇ share ಮಾಡಿ

ನಿಮ್ಮ ಕಡತ ತಕ್ಷಣವೇ share ಮಾಡಿ

* ಬರೆದ ಅಕ್ಷರಗಳನ್ನು ಕಾಪಿ ಎಡಿಟ್ ಪೇಸ್ಟ್ ಮಾಡುವ ಜತೆಗೆ txt ಹುಡುಕಿ ಬದಲಾಯಿಸಬಹುದು.

* ಕಡತಗಳನ್ನು ಸಾಮಾಜಿಕ ಜಾಲ ತಾಣಗಳಿಗೆ ತಕ್ಷಣವೇ ರವಾನಿಸಬಹುದು.* ಟ್ವಿಟ್ಟರ್, ಫೇಸ್ ಬುಕ್, ವಾಟ್ಸ್ ಆಪ್, ಸ್ಕೈಪ್, ಗೂಗಲ್ ಪ್ಲಸ್, ಜೀಮೇಲ್, ನೋಟ್ ಪ್ಯಾಡ್, ಎಸ್ ಎಂಎಸ್ ..ಇತ್ಯಾದಿಗೆ ಕಳಿಸಬಹುದು
ಆಪ್ ಬಳಸಲು ಬೇಕಾದ ಅವಶ್ಯ ಸೌಲಭ್ಯ

ಆಪ್ ಬಳಸಲು ಬೇಕಾದ ಅವಶ್ಯ ಸೌಲಭ್ಯ

ಯಾವುದೇ ಕಂಪನಿ ಸ್ಮಾರ್ಟ್ ಫೋನ್, ಮೊಬೈಲ್ ಫೋನ್ ನಲ್ಲಿ ಇದು ಲಭ್ಯವಾಗಲಿದೆ, ಗೂಗಲ್ ಸ್ಟೋರ್ http://play.google.com/) ನಲ್ಲಿ ಪದ ಆಂಡ್ರಾಯ್ಡ್ ಆಪ್ ಲಭ್ಯವಿರಲಿದೆ ಅಲ್ಲಿಂದ ಡೌನ್ ಲೋಡ್ ಮಾಡಿಕೊಳ್ಳಬಹುದು.
* ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ 4.0 ಅಥವಾ ಹೆಚ್ಚಿನ OS ನಿಮ್ಮ ಮೊಬೈಲ್ ನಲ್ಲಿರಬೇಕು.
* ಆಂಡ್ರಾಯ್ಡ್ 2.0 OS ಹೊಂದಿರುವ ಕೆಲ ಸ್ಯಾಮ್ಸಂಗ್ ಫೋನ್ ಗಳಲ್ಲೂ ಪದ app ಕಾರ್ಯನಿರ್ವಹಿಸುತ್ತದೆ
* ಸ್ಕ್ರೀನ್ ಸೈಜ್ 4 ಇಂಚು ಅಥವಾ ಹೆಚ್ಚಿದ್ದರೆ ಚೆನ್ನಾಗಿ ಕಾಣಿಸುತ್ತದೆ.
* ಆಂಡ್ರಾಯ್ಡ್ OS ಜತೆಗೆ ನಿಮ್ಮ ಫೋನ್ ಹಾರ್ಡ್ ವೇರ್ ಕೂಡಾ ಕನ್ನಡ ಅಕ್ಷರಗಳನ್ನು ತೋರಿಸುವ ಸಾಮರ್ಥ್ಯ ಹೊಂದಿರಬೇಕು.

ಪದ ವರ್ಡ್ ಪ್ರೊಸೆಸರ್ ಏನು ವಿಶೇಷ, ಏನು ಕಮ್ಮಿ

ಪದ ವರ್ಡ್ ಪ್ರೊಸೆಸರ್ ಏನು ವಿಶೇಷ, ಏನು ಕಮ್ಮಿ

* ಕೆಪಿ ರಾವ್, ಫೋನೆಟಿಕ್ ಹಾಗೂ ಫೋನೆಟಿಕ್ ಮಾದರಿ(ಎಲ್ಲವೂ ಪದ ಡೆಸ್ಕ್ ಟಾಪ್ ವರ್ಷನ್ ನಲ್ಲಿದೆ) ಮೂರು ಕೀ ಬೋರ್ಡ್ ಮಾದರಿ ಬಳಸಿ ಮಾತ್ರ ಟೈಪಿಸಬಹುದು. ಇನ್ ಸ್ಕ್ರಿಪ್ ಸೇರಿದಂತೆ ಇನ್ನಷ್ಟು ಕೀ ಬೋರ್ಡ್ ಮಾದರಿ ಅಳವಡಿಕೆ ಅಗತ್ಯ
* ಹೆಚ್ಚಿನ ಫಾಂಟ್ ಗಳು ಲಭ್ಯವಿಲ್ಲ. ಫಾಂಟ್ ಸೇರಿಸಲು ಅಥವಾ ಆಯ್ಕೆ ಮಾಡುವ ಸ್ವಾತಂತ್ರ್ಯ ಸದ್ಯಕ್ಕಿಲ್ಲ
* ಕೀ ಮ್ಯಾಪ್ ನಲ್ಲಿ ಸದ್ಯಕ್ಕೆ ಸಾಕು. ಆದರೆ, ಜತೆಗೆ ಕೀ ಬೋರ್ಡ್ ಉದಾಹರಣೆಗಳು ಅಗತ್ಯವಿದೆ.

ಪದ ವರ್ಡ್ ಪ್ರೊಸೆಸರ್ ಆಂಡ್ರಾಯ್ಡ್ ಆಪ್ಲಿಕೇಷನ್ ಡೌನ್ ಲೋಡ್ ಇಲ್ಲಿ ಮಾಡಿ

English summary
‘Pada Software’ is a Word processor for Indic Scripts, especially for Kannada script is now updated with Linux version is ready to enter Android Market. The software application for Android mobile phones developed by Lohith D Shivamurthy is a collection of many tools. Android 4.0 and above is essential to run the app
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X